Shrirasthu Shubhamasthu Serial New Episode: ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಂಡಿರುವ ಧಾರಾವಾಹಿಗಳಲ್ಲಿ ನಟಿ ಸುಧಾರಾಣಿ (Actress Sudharani) ಅವರು ನಟನೆ ಮಾಡುತ್ತಿರುವ ಶ್ರೀರಸ್ತು ಶುಭಮಸ್ತು ಧಾರಾವಾಹಿ (Shrirashtu Shubhamasthu Serial) ಕೂಡ ಒಂದು ಎಂದು ಹೇಳಬಹುದು. ಹೌದು, ಶ್ರೀರಸ್ತು ಶುಭಮಸ್ತು ಧಾರವಾಹಿ ಈಗ ರೋಚಕ ಹಂತವನ್ನು ತಲುಪಿದೆ. ಶಾರ್ವರಿ ಆಟ ಹೆಚ್ಚಾಗಿದ್ದು ಇದರ ನಡುವೆ ತುಳಸಿ ಪ್ರಾಣಕ್ಕೆ ಕಂಟಕ ಬಂದಿದೆ ಎಂದು ಹೇಳಬಹುದು. ಹೌದು ತುಳಸಿ ಹೆಣ್ಣು ಮಗುವಿನ ಜನಿಸಿದೆ, ಆದರೆ ಆರೋಗ್ಯ ಸಮಸ್ಯೆ ಮತ್ತು ಶಾರ್ವರಿ ಮಾಡಿದ ಕುತಂತ್ರಕ್ಕೆ ತುಳಸಿ ಪ್ರಾಣ ಬಿಟ್ಟಿದ್ದಾರೆ. ಸದ್ಯ ಮನೆಯಲ್ಲಿ ಆಕ್ರಂದನ ಮುಗಿಲುಮುಟ್ಟಿರುವ ಸಮಯದಲ್ಲಿ ಧಾರಾವಾಹಿಯಲ್ಲಿ ಇನ್ನೊಂದು ಬಿಗ್ ಟ್ವಿಸ್ಟ್ ಬಂದಿದೆ.
ಮಗುವಿಗೆ ಜನ್ಮ ನೀಡಿ ಪ್ರಾಣಬಿಟ್ಟ ತುಳಸಿ
ಹೌದು, ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ 7 ತಿಂಗಳ ಗರ್ಭಿಣಿಯಾಗಿದ್ದ ತುಳಸಿಗೆ ದಿಡೀರನೆ ಹೊಟ್ಟೆ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆಸ್ಪತ್ರೆಗೆ ದಾಖಲಾಗಿದ್ದ ತುಳಸಿ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ, ಆದರೆ ಶಾರ್ವರಿ ಮಾಡಿದ ಕುತಂತ್ರಕ್ಕೆ ತುಳಸಿ ಪ್ರಾಣ ಹೋಗಿದ್ದು ಮನೆಯಲ್ಲಿ ಮಕ್ಕಳ ಮತ್ತು ಗಂಡನ ಆಕ್ರಂದನ ಮುಗಿಲುಮುಟ್ಟಿದೆ. ಇದರ ನಡುವೆ ಈಗ ಧಾರಾವಾಹಿಯಲ್ಲಿ ಇನ್ನೊಂದು ಬಿಗ್ ಟ್ವಿಸ್ಟ್ ಬಂದಿದ್ದು ಸದ್ಯ ಈ ಟ್ವಿಸ್ಟ್ ಅಭಿಮಾನಿಗಳ ಮೆಚ್ಚುಗೆಗೆ ಕಾರಣವಾಗಿದೆ ಎಂದು ಹೇಳಬಹುದು.
ಆಂಬುಲೆನ್ಸ್ ನಲ್ಲಿ ತುಳಸಿಗೆ ಬಂತು ಪ್ರಾಣ
ಹೆಣ್ಣು ಮಗುವಿಗೆ ಜನ್ಮ ನೀಡಿ ಪ್ರಾಣಬಿಟ್ಟ ತುಳಸಿಯನ್ನು ಆಂಬುಲೆನ್ಸ್ ನಲ್ಲಿ ಮನೆಗೆ ಕರೆದುಕೊಂಡು ಹೋಗುತ್ತಿದ್ದ ಸಮಯದಲ್ಲಿ ತುಳಸಿ ಪ್ರಾಣ ವಾಪಾಸ್ ಬಂದಿದೆ. ಸದ್ಯ ಅದರ ಪ್ರೊಮೊ ಬಿಡುಗಡೆ ಆಗಿದ್ದು ಈ ಪ್ರೊಮೊ ನೋಡಿದ ಜನರು ಮೆಚ್ಚುಗೆ ಕೂಡ ವ್ಯಕ್ತಪಡಿಸಿದ್ದಾರೆ. ಆಂಬುಲೆನ್ಸ್ ನಲ್ಲಿ ದೇವರ ಪವಾಡ ಆಗಿದೆ ಮತ್ತು ಹೋದ ತುಳಸಿಯ ಪ್ರಾಣ ಮರಳಿ ವಾಪಾಸ್ ಬಂದಿದೆ. ಸಮರ್ಥ ತುಳಸಿ ಕೈ ಲುಗಾಡಿಸಿದ್ದನ್ನು ನೋಡಿದ್ದಾನೆ ಮತ್ತು ಮಕ್ಕಳು ತುಳಸಿ ಪ್ರಾಣ ವಾಪಾಸ್ ಬಂದ ವಿಷಯವನ್ನು ಮಾದವನಿಗೂ ಹೇಳಿದ್ದಾರೆ. ಇನ್ನು ತುಳಸಿ ಪ್ರಾಣ ವಾಪಾಸ್ ಬಂದ ವಿಷಯ ಕೇಳಿ ಶಾರ್ವರಿ ಶಾಕ್ ಆಗಿದ್ದಾಳೆ.
ಶ್ರೀರಸ್ತು ಶುಭಮಸ್ತು ಧಾರವಾಹಿ ಅಂತ್ಯ
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಬಿಗ್ ಟ್ವಿಸ್ಟ್ ಬಂದಿದೆ ಮತ್ತು ಹೋದ ತುಳಸಿಯ ಪ್ರಾಣ ಮರಳಿ ವಾಪಾಸ್ ಬಂದಿದೆ. ಈ ನಡುವೆ ಧಾರವಾಹಿ ಮುಗಿಯುತ್ತದೆ ಅನ್ನುವ ಮಾತುಗಳು ಕೂಡ ಕೇಳಿಬರುತ್ತಿದೆ. ಹೌದು ತುಳಸಿ ಹೆಣ್ಣು ಮಗು ಆಗಿದೆ ಮತ್ತು ದತ್ತ ಶಾರ್ವರಿ ಮಾಡಿದ ಎಲ್ಲಾ ತಪ್ಪಿಗೆ ಸಾಕ್ಷಿ ಕೂಡ ಹುಡುಕಿದ್ದಾನೆ. ಸದ್ಯ ಧಾರವಾಹಿ ಅಂತಿಮ ಹಂತಕ್ಕೆ ಬಂದಿದ್ದು ಶಾರ್ವರಿ ಮಾಡಿದ ತಪ್ಪಿಗೆ ಶಿಕ್ಷೆಯಾದರೆ ಧಾರವಾಹಿ ಇಲ್ಲಿದೆ ಮುಗಿಯುತ್ತದೆ ಎಂದು ಸಾಕಷ್ಟು ಜನರು ಮಾತನಾಡಿಕೊಳ್ಳುತ್ತಿದ್ದಾರೆ.