SSLC Exam 2025: SSLC ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳಿಗೆ ರಾಜ್ಯ ಶಿಕ್ಷಣ ಇಲಾಖೆ ಈಗ ಮಹತ್ವದ ಅಪ್ಡೇಟ್ ಬಿಡುಗಡೆ ಮಾಡಿದೆ. ಹೌದು, ಮಾರ್ಚ್ 21 ನೇ ತಾರೀಕಿನಿಂದ ಪರೀಕ್ಷೆ ಆರಂಭ ಆಗಲಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಪ್ರಸ್ತುತ ವರ್ಷದಲ್ಲಿ ಹೆಚ್ಚಿನ ಮಕ್ಕಳು SSLC ಪರೀಕ್ಷೆ (SSLC Eaxm Karnataka) ಬರೆಯುತ್ತಿದ್ದಾರೆ. ಸದ್ಯ SSLC ಮಕ್ಕಳು ಪರೀಕ್ಷೆಯ ಸಿದ್ದತೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇನ್ನು SSLC ಪರೀಕ್ಷೆ ಆರಂಭ ಆಗಲಿದೆ, ಈ ನಡುವೆ ರಾಜ್ಯ ಶಿಕ್ಷಣ ಇಲಾಖೆ SSLC ಪರೀಕ್ಷೆ ಬರೆಯುವ ಎಲ್ಲಾ ಮಕ್ಕಳಿಗೆ ಇನ್ನೊಂದು ಸೂಚನೆ ನೀಡಿದೆ ಮತ್ತು SSLC ಪರೀಕ್ಷೆ ಬರೆಯುವ ಎಲ್ಲಾ ಮಕ್ಕಳಿಗೆ ನಿಯಮಗಳನ್ನು ಜಾರಿಗೊಳಿಸಿದೆ.
ರಾಜ್ಯದಲ್ಲಿ SSLC ಪರೀಕ್ಷೆಗೆ ಸಕಲ ಸಿದ್ಧತೆ
ಹೌದು, SSLC ಪರೀಕ್ಷೆ ಆರಂಭ ಮಾಡಲು ಕರ್ನಾಟಕ ಪರೀಕ್ಷಾ ಮಂಡಳಿ ಈಗ ಸಕಲ ಸಿದ್ಧತೆ ಮಾಡಿಕೊಂಡಿದೆ. ಮಾರ್ಚ್ 21 ನೇ ತಾರೀಕಿನಿಂದ ಏಪ್ರಿಲ್ 4 ನೇ ತಾರೀಕಿನ ತನಕ SSLC ಪರೀಕ್ಷೆಗಳು ನಡೆಯುತ್ತಿದೆ. ಇನ್ನು SSLC ಪರೀಕ್ಷೆ ನಡೆದ ಪರೀಕ್ಷಾ ಕೇಂದ್ರದ 200 ಮೀಟರ್ ದೊರದ ತನಕ ಸುರಕ್ಷತಾ ಕ್ರಮ ಕೂಡ ಕೈಕೊಳ್ಳಲಾಗಿದೆ ಮತ್ತು ಸಕಲ ಭದ್ರತೆಯಲ್ಲಿ ಪೋಲೀಸರ ಸುರಕ್ಷತೆಯಲ್ಲಿ SSLC ನಡೆಯಲು ಈಗ ರಾಜ್ಯ ಶಿಕ್ಷಣ ಇಲಾಖೆ ಮುಂದಾಗಿದೆ ಎಂದು ಹೇಳಬಹುದು.
SSLC ಬರೆಯುವ ಮಕ್ಕಳಿಗೆ ನಿಯಮ ಹೊರಡಿಸಿದ ಶಿಕ್ಷಣ ಇಲಾಖೆ
ಹೌದು, SSLC ಯಾವ ಆರಂಭ ಆಗುತ್ತದೆಯೋ ಅಂದಿನಿಂದ ಪರೀಕ್ಷಾ ಕೇಂದ್ರದ 200 ಮೀಟರ್ ದೂರದ ತನಕ ಯಾವುದೇ ಜೆರಾಕ್ಸ್ ಕೇಂದ್ರಗಳು ತೆರೆಯದಂತೆ ಆದೇಶ ಹೊರಡಿಸಲಾಗಿದೆ. ಇನ್ನು ಪರೀಕ್ಷೆ ನಡೆಯುವ ನಡೆಯುವ ಪ್ರದೇಶದಲ್ಲಿ ಅನಧಿಕೃತ ವ್ಯಕ್ತಿ ಅಥವಾ ಗುಂಪು ಬರದಂತೆ ಪೊಲೀಸರು ಎಚ್ಚರಿಕೆ ವಹಿಸಬೇಕು. ಇದು ಪರೀಕ್ಷಾ ಕೇಂದ್ರದ ಹೊರಗೆ ಪಾಲಿಸಬೇಕಾದ ನಿಯವಾದರೆ ಪರೀಕ್ಷಾ ಕೇಂದ್ರದ ಒಳಗೆ ಕೂಡ ಕೆಲವು ನಿಯಮ ಪಾಲಿಸಬೇಕು.
- SSLC ಪರೀಕ್ಷಾ ಕೇಂದ್ರಕ್ಕೆ ಬರುವ ಅಧ್ಯಾಪಕರು ಕ್ಯಾಮೆರಾ ಹೊಂದಿರದ ಮೊಬೈಲ್ ಮಾತ್ರ ಬಳಕೆ ಮಾಡಬೇಕು.
- SSLC ಪರೀಕ್ಷಾ ಕೇಂದ್ರ ಬರುವ ಮಕ್ಕಳು ಅಥವಾ ಅಧ್ಯಾಪಕರು ಯಾವುದೇ ಕಾರಣಕ್ಕೂ ಸ್ಮಾರ್ಟ್ ವಾಚ್ ಧರಿಸುವಂತೆ ಇಲ್ಲ.
- ಪರೀಕ್ಷಾ ಕೇಂದ್ರ ಯಾವುದೇ ಇಲೆಕ್ಟ್ರಾನಿಕ್ ವಸ್ತು ಬಳಸದಂತೆ ಆದೇಶ ಹೊರಡಿಸಲಾಗಿದೆ.
- ಪರೀಕ್ಷಾ ಕೇಂದ್ರದ ಒಳಗೆ ಯಾವುದೇ ಅನಧಿಕೃತ ವ್ಯಕ್ತಿ ಪ್ರವೇಶ ಆಗಬಾರದು ಮತ್ತು ಚಿತ್ರೀಕರಣ ಕೂಡ ನಿಷೇಧ ಮಾಡಲಾಗಿದೆ.
- SSLC ಪರೀಕ್ಷಾ ಕೇಂದ್ರದ 200 ಮೀಟರ್ ದೂರ ಒಳಗೆ ಮಾದಕ ವಸ್ತುಗಳ ಮಾರಾಟ ಮತ್ತು ಸ್ಪೋಟಕ ವಸ್ತುಗಳ ಮಾರಾಟ ನಿಷೇದ ಮಾಡಲಾಗಿದೆ.
- SSLC ಪರೀಕ್ಷಾ ಕೊಠಡಿಯ ಒಳಗೆ CCTV ಕ್ಯಾಮೆರಾ ಬಳಕೆ ಕಡ್ಡಾಯ.
- SSLC ಪರೀಕ್ಷಾ ಕೇಂದ್ರದ ಹತ್ತಿರ ಯಾವುದೇ ಧ್ವನಿವರ್ಧಕ ಬಳಸುವಂತಿಲ್ಲ. ಪರೀಕ್ಷೆ ಬರೆಯುವ ಮಕ್ಕಳು ಪರೀಕ್ಷೆ ಆರಂಭ ಆಗುವ ಅರ್ಧ
- ಘಂಟೆಗೂ ಮುನ್ನವೇ ಕೊಠಡಿ ಪ್ರವೇಶ ಮಾಡಬೇಕು.