Anna Bhagya Scheme Money: BPL ಮತ್ತು ಅಂತ್ಯೋದಯ ರೇಷನ್ ಕಾರ್ಡ್ ಇದ್ದವರಿಗೆ ಕರ್ನಾಟಕ ಸರ್ಕಾರ ಈಗ ಭರ್ಜರಿ ಗುಡ್ ನ್ಯೂಸ್ ನೀಡಿದೆ ಎಂದು ಹೇಳಬಹುದು. ಹೌದು BPL ರೇಷನ್ ಕಾರ್ಡ್ ಇದ್ದವರಿಗೆ ರಾಜ್ಯ ಸರ್ಕಾರ ಈಗ ಯುಗಾದಿ ಹಬ್ಬಕ್ಕೂ (Ugadi Festival) ಮುನ್ನವೇ ಯುಗಾದಿ ಹಬ್ಬದ ದೊಡ್ಡ ಉಡುಗೊರೆ ನೀಡಲು ಮುಂದಾಗಿದೆ. ಹೌದು, ಅನ್ನಭಾಗ್ಯ ಯೋಜನೆಗೆ (Anna Bhagya Scheme) ಸಂಬಂಧಿಸಿದಂತೆ ರಾಜ್ಯ ಸರ್ಕಾರ ಬಹುದೊಡ್ಡ ಆದೇಶ ಹೊರಡಿಸುವುದರ ಮೂಲಕ ರಾಜ್ಯದಲ್ಲಿ BPL ಮತ್ತು ಅಂತ್ಯೋದಯ ರೇಷನ್ ಕಾರ್ಡ್ ಇದ್ದವರಿಗೆ ಸಿಹಿಸುದ್ದಿ ನೀಡಿದೆ. ಹಾಗಾದರೆ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ನೀಡುರುವ ಗುಡ್ ನ್ಯೂಸ್ ಏನು ಅನ್ನುವುದರ ಬಗ್ಗೆ ನಾವೀಗ ತಿಳಿಯೋಣ.
ರೇಷನ್ ಕಾರ್ಡ್ ಇದ್ದವರಿಗೆ ಯುಗಾದಿ ಹಬ್ಬದ ಉಡುಗೊರೆ
ಅನ್ನಭಾಗ್ಯ ಯೋಜನೆಯ ಕಳೆದ ಫೆಬ್ರವರಿ ತಿಂಗಳ ಹಣ ರಾಜ್ಯ ಯಾವುದೇ ಫಲಾನುಭವಿಯ ಖಾತೆಗೆ ಜಮಾ ಆಗಿಲ್ಲ. ಹೌದು ಕೆಲವು ತಾಂತ್ರಿಕ ದೋಷಗಳು ಮತ್ತು ಬಜೆಟ್ ಕಾರಣ ಅನ್ನಭಾಗ್ಯ ಯೋಜನೆಯ ಹಣ ಫಲಾನುಭವಿಗಳ ಖಾತೆಗೆ ಜಮಾ ಆಗಿರಲಿಲ್ಲ. ಸದ್ಯ ಅನ್ನಭಾಗ್ಯ ಯೋಜನೆಯ ಬಾಕಿ ಇರುವ ಹಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಈಗ ಹೊಸ ಆದೇಶ ಹೊರಡಿಸುವುದರ ಮೂಲಕ ರಾಜ್ಯದ ಎಲ್ಲಾ ಜನರಿಗೆ ಯುಗಾದಿ ಹಬ್ಬದ ಉಡುಗೊರೆ ನೀಡಿದೆ.
ಮಾರ್ಚ್ ತಿಂಗಳಲ್ಲಿ ಸಿಗಲಿದೆ 15 ಕೆಜಿ ಅಕ್ಕಿ
ಮಾರ್ಚ್ ತಿಂಗಳಲ್ಲಿ BPL ಮತ್ತು ಅಂತ್ಯೋದಯ ರೇಷನ್ ಕಾರ್ಡ್ ಇದ್ದವರಿಗೆ 15 ಕೆಜಿ ಅಕ್ಕಿ ಪಡೆದುಕೊಳ್ಳಲಿದ್ದಾರೆ. ಫೆಬ್ರವರಿ ತಿಂಗಳ 5 ಕೆಜಿ ಅಕ್ಕಿ ಬದಲು ಹಣ ಫಲಾನುಭವಿಗಳ ಖಾತೆಗೆ ಜಮಾ ಆಗಿರಲಿಲ್ಲ, ಈ ಕಾರಣಗಳಿಂದ ಮಾರ್ಚ್ ತಿಂಗಳಲ್ಲಿ ಫಲಾನುಭವಿಗಳ ಫೆಬ್ರವರಿ 5 ಕೆಜಿ ಅಕ್ಕಿ ಹಣದ ಬದಲು ಮಾರ್ಚ್ ತಿಂಗಳಲ್ಲಿ 5 ಕೆಜಿ ಅಕ್ಕಿ ಹೆಚ್ಚುವರಿಯಾಗಿ ನೀಡಲು ತೀರ್ಮಾನವನ್ನು ಮಾಡಿದೆ. ಅದೇ ರೀತಿಯಲ್ಲಿ ಮಾರ್ಚ್ ತಿಂಗಳ ಅನ್ನಭಾಗ್ಯ ಯೋಜನೆಯ ಹಣದ ಬದಲು ಅಕ್ಕಿಯನ್ನೇ ನೀಡಲು ಈಗ ರಾಜ್ಯ ಸರ್ಕಾರ ಮುಂದಾಗಿದೆ. ಈ ಕಾರಣಗಳಿಂದ ಮಾರ್ಚ್ ತಿಂಗಳಲ್ಲಿ ಫಲಾನುಭವಿಗಳು ನೇರವಾಗಿ 15 ಅಕ್ಕಿ ಪಡೆದುಕೊಳ್ಳಲಿದ್ದಾರೆ.
ಮಾರ್ಚ್ ತಿಂಗಳಲ್ಲಿ ಸಿಗಲಿದೆ ಹೆಚ್ಚುವರಿ ಅಕ್ಕಿ
ಮಾರ್ಚ್ ತಿಂಗಳಲ್ಲಿ ರಾಜ್ಯ ಸರ್ಕಾರ ಅನ್ನಭಾಗ್ಯ ಅಕ್ಕಿಯಾಗಿ BPL ಮತ್ತು ಅಂತ್ಯೋದಯ ಕಾರ್ಡ್ ಹೊಂದಿರುವ ಪ್ರತಿ ವ್ಯಕ್ತಿಗೆ 15 ಕೆಜಿ ಅಕ್ಕಿ ನೀಡಲಿದೆ. ಇನ್ನು ಮೂಲಗಳಿಂದ ತಿಳಿದುಬಂದಿರುವ ಮಾಹಿತಿಯ ಪ್ರಕಾರ ಮುಂದಿನ ದಿನಗಳಲ್ಲಿ ಯಾವುದೇ ಎಲ್ಲಾ ಫಲಾನುಭವಿಗಳಿಗೆ 10 ಕೆಜಿ ಅಕ್ಕಿ ನೀಡಲು ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಸಿದ್ದರಾಮಯ್ಯ ಸರ್ಕಾರ ರಾಜ್ಯದ ಎಲ್ಲಾ ಜನರಿಗೆ ಯುಗಾದಿ ಹಬ್ಬದ ಉಡುಗೊರೆ ನೀಡಿದೆ ಎಂದು ಹೇಳಬಹುದು.
BPL ಕಾರ್ಡ್ ರದ್ದು ಮಾಡಿದ ಸರ್ಕಾರ
ಹೌದು, ರಾಜ್ಯ ಸರ್ಕಾರ ಅನಧಿಕೃತ BPL ಕಾರ್ಡುಗಳನ್ನು ರದ್ದು ಮಾಡಲು ತೀರ್ಮಾನವನ್ನು ಮಾಡಿದೆ. ಹೌದು ಸರ್ಕಾರೀ ನೌಕರಿಯಲ್ಲಿ ಇರುವವರು, ತೆರುಗೆ ಪಾವತಿ ಮಾಡುವವರು, GST ಪಾವತಿ ಮಾಡುವವರು, ಸ್ವಂತ ವಾಹನ ಇದ್ದವರು, ಬಡತನ ರೇಖೆಗಿಂತ ಮೇಲೆ ಇರುವವರ ಸುಮಾರು 20 ಲಕ್ಷಕ್ಕೂ ಅಧಿಕ BPL ರೇಷನ್ ಕಾರ್ಡುಗಳನ್ನು ಈಗ ರಾಜ್ಯ ಸರ್ಕಾರ ರದ್ದು ಮಾಡಿದೆ. ಇನ್ನುಮುಂದೆ ರದ್ದಾದ ರೇಷನ್ ಕಾರ್ಡುದಾರರು ಅನ್ನಭಾಗ್ಯ ಯೋಜನೆಯ ಅಕ್ಕಿ ಮತ್ತು ಗೃಹಲಕ್ಷ್ಮಿ ಹಣ ಮಾತ್ರವಲ್ಲದೆ ಯಾವುದೇ ಸರ್ಕಾರೀ ಯೋಜನೆಯ ಲಾಭ ಪಡೆದುಕೊಳ್ಳಲು ಸಾಧ್ಯವಿಲ್ಲ.