Indian Railways: ಇನ್ಮುಂದೆ ಈ ವಯಸ್ಸಿನ ಮಕ್ಕಳಿಗೆ ರೈಲಿನಲ್ಲಿ ಉಚಿತ ಪ್ರಯಾಣ, ರೈಲ್ವೆ ಇಲಾಖೆಯ ನಿರ್ಧಾರ

Indian Railway Ticket Rules: ರೈಲ್ವೆ ಪ್ರಯಾಣ ಸುಖಕರ ಮತ್ತು ಸುರಕ್ಷಿತ ಅನ್ನುವ ಕಾರಣಕ್ಕೆ ಸಾಕಷ್ಟು ಜನರು ರೈಲ್ವೆ ಪ್ರಯಾಣವನ್ನು ಬಹಳ ಇಷ್ಟಪಡುತ್ತಾರೆ. ಇದರ ನಡುವೆ ದೇಶದಲ್ಲಿ ರೈಲ್ವೆ ಪ್ರಯಾಣಿಕರ ಸಂಖ್ಯೆ ಬಹಳ ಹೆಚ್ಚಾಗಿದೆ ಎಂದು ಹೇಳಬಹುದು. ಹೌದು, ದೇಶದಲ್ಲಿ ಪ್ರತಿನಿತ್ಯ ಕೋಟ್ಯಾಂತರ ಸಂಖ್ಯೆಯ ಜನರು ರೈಲು ಪ್ರಯಾಣ ಮಾಡುತ್ತಾರೆ.

WhatsApp Group Join Now
Telegram Group Join Now

ಇದರ ನಡುವೆ ಈಗ ರೈಲ್ವೆ ಇಲಾಖೆ ರೈಲು ಪ್ರಯಾಣಕ್ಕೆ ಸಂಬಂಧಿಸಿದಂತೆ ಕೆಲವು ಹೊಸ ನಿಯಮ ಕೂಡ ಜಾರಿಗೆ ತಂದಿದೆ. ಹೌದು ರೈಲ್ವೆ ಇಲಾಖೆ ರೈಲು ಪ್ರಯಾಣಕ್ಕೆ ಸಂಬಂಧಿಸಿದಂತೆ ಕೆಲವು ನಿಯಮಗಳನ್ನು ಜಾರಿಗೆ ತಂದಿದೆ ಮತ್ತು ಈ ನಿಯಮ ಪಾಲನೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ ಕೂಡ ಆಗಿದೆ. ಇದರ ನಡುವೆ ರೈಲ್ವೆ ಈ ವಯಸ್ಸಿಗಿಂತ ಕೆಳಗಿನ ಮಕ್ಕಳು ರೈಲಿನಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದು ಎಂದು ಆದೇಶ ಹೊರಡಿಸಿದೆ.

ಈ ವಯಸ್ಸಿಗಿಂತ ಕೆಳಗಿನ ಮಕ್ಕಳು ರೈಲಿನಲ್ಲಿ ಉಚಿತ ಪ್ರಯಾಣ ಮಾಡಬಹುದು
ಹೌದು, ಭಾರತೀಯ ರೈಲ್ವೆ ಇಲಾಖೆಯ ನಿಯಮದ ಪ್ರಕಾರ, ಅಂಗವಿಕಲರು, ವಿಕಲ ಚೇತನರು ಮತ್ತು ಕೆಲವು ಹಿರಿಯ ನಾಗರಿಕರು ಸೇರಿದಂತೆ ಕೆಲವು ವಿಶೇಷ ವ್ಯಕ್ತಿಗಳಿಗೆ ಟಿಕೆಟ್ ದರದಲ್ಲಿ ರಿಯಾಯಿತಿ ಘೋಷಣೆ ಮಾಡಿದೆ. ಅದೇ ರೀತಿಯ್ಲಲಿ ರೈಲು ಇಲಾಖೆಯ ನಿಯಮದ ಪ್ರಕಾರ, ಈ ವಯಸ್ಸಿಗಿಂತ ಕೆಳಗಿನ ಮಕ್ಕಳು ರೈಲುಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ.

5 ರಿಂದ 12 ವಯಸ್ಸಿನ ಮಕ್ಕಳಿಗೆ ಅರ್ಧ ಟಿಕೆಟ್
ಭಾರತೀಯ ರೈಲ್ವೆ ನಿಯಮದ ಪ್ರಕಾರ, 5 ರಿಂದ 12 ರ ವಯಸ್ಸಿಗಿಂತ ಕೆಳಗಿನ ಮಕ್ಕಳು ರೈಲಿನಲ್ಲಿ ಅರ್ಧ ಟಿಕೆಟ್ ಕೊಟ್ಟು ಪ್ರಯಾಣ ಮಾಡಬಹುದು. ಇನ್ನುಮುಂದೆ ನಿಮ್ಮ ಜೊತೆಯಲ್ಲಿ ಈ ವಯಸ್ಸಿನ ಮಕ್ಕಳು ರೈಲು ಪ್ರಯಾಣ ಮಾಡಿದರೆ ಅವರಿಗೆ ಅರ್ಧ ಟಿಕೆಟ್ ಖರೀದಿ ಮಾಡಿದರೆ ಸಾಕು. ಇನ್ನು ಈ ನಿಯಮ ಎಲ್ಲಾ ರೈಲಿಗಳಿಗೆ ಅನ್ವಯ ಆಗುತ್ತದೆ, ಆದರೆ ರೈಲಿನ ಎಲ್ಲಾ ಭೋಗಿಗಳಿಗೆ ಅನ್ವಯ ಆಗುವುದಿಲ್ಲ. ಇನ್ನು ನೀವು ಒಂದು ನಿಯಮದ ಬಗ್ಗೆ ತಿಳಿದುಕೊಳ್ಳಬೇಕು, ನೀವು ನಿಮ್ಮ ಮಗುವಿಗೆ ಪ್ರತ್ಯೇಕ ಬರ್ತ್ ಬೇಕು ಅಂದರೆ ನೀವು ಪೂರ್ಣ ಟಿಕೆಟ್ ಖರೀದಿ ಮಾಡಬೇಕು, ಅರ್ಧ ಟಿಕೆಟ್ ಖರೀದಿ ಮಾಡಿ ನೀವು ನಿಮ್ಮ ಸೀಟ್ ನಲ್ಲಿಯೇ ಮಗುವಿನ ಜೊತೆ ಅಡ್ಜಸ್ಟ್ ಮಾಡಿಕೊಂಡು ಪ್ರಯಾಣ ಮಾಡಬೇಕು.

5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಟಿಕೆಟ್ ಅಗತ್ಯ ಇಲ್ಲ
ಭಾರತೀಯ ರೈಲ್ವೆ ನಿಯಮದ ಪ್ರಕಾರ, 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ರೈಲಿನಲ್ಲಿ ಪ್ರಯಾಣ ಮಾಡಿದರೆ ಅವರಿಗೆ ಟಿಕೆಟ್ ಖರೀದಿ ಮಾಡುವ ಅಗತ್ಯ ಇಲ್ಲ. ಪೋಷಕರು ಆ ಮಗುವನ್ನು ತಮ್ಮದೇ ಸೀಟ್ ನಲ್ಲಿ ಕುಳಿಸಿಕೊಳ್ಳುವ ಕಾರಣ ಪೋಷಕರು 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಟಿಕೆಟ್ ಖರೀದಿ ಮಾಡುವ ಅಗತ್ಯ ಇಲ್ಲ. ಸದ್ಯ ಮುಂದಿನ ದಿನಗಳಲ್ಲಿ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಟಿಕೆಟ್ ದರದಲ್ಲಿ ವಿನಾಯಿತಿ ನೀಡಲು ಭಾರತೀಯ ರೈಲ್ವೆ ಮುಂದಾಗಿದೆ ಮತ್ತು ಇದರ ಬಗ್ಗೆ ಅಧಿಕೃತ ಘೋಷಣೆ ಹೊರಬಂದಿಲ್ಲ.

13 ವರ್ಷಕ್ಕಿಂತ ಮೇಲಿನ ಮಕ್ಕಳಿಗೆ ಪೂರ್ಣ ಟಿಕೆಟ್
ಭಾರತೀಯ ರೈಲ್ವೆ ನಿಯಮದ ಪ್ರಕಾರ, 13 ವರ್ಷಕ್ಕಿಂತ ಮೇಲಿನ ಮಕ್ಕಳು ರೈಲಿನಲ್ಲಿ ಪ್ರಯಾಣ ಮಾಡಬೇಕು ಅಂದರೆ ಆ ಮಕ್ಕಳಿಗೆ ಪೂರ್ಣ ಟಿಕೆಟ್ ಖರೀದಿ ಮಾಡಬೇಕು. 13 ವರ್ಷಕ್ಕಿಂತ ಮೇಲಿನ ಮಕ್ಕಳಿಗೆ ಪೂರ್ಣ ಟಿಕೆಟ್ ಖರೀದಿ ಮಾಡಿ ಅವರಿಗೆ ಪ್ರತ್ಯೇಕ ಬರ್ತ್ ತಗೆದುಕೊಳ್ಳಬೇಕು. ಇನ್ನು 13 ವರ್ಷಕ್ಕಿಂತ ಮೇಲಿನ ಮಕ್ಕಳಿಗೆ ಪೂರ್ಣ ಟಿಕೆಟ್ ಖರೀದಿ ಮಾಡದೆ ಇದ್ದರೆ ದಂಡ ಪಾವತಿ ಮಾಡಬೇಕಾಗುತ್ತದೆ.

Leave a Comment