Post Office Fixed Deposit Scheme; ಪೋಸ್ಟ್ ಆಫೀಸ್ (post Office) ಈಗಾಗಲೇ ಜನರಿಗಾಗಿ ಹಲವು ಯೋಜನೆಯನ್ನು ಜಾರಿಗೆ ತರುವಲ್ಲಿ ಯಶಸ್ವಿಯಾಗಿದೆ. ಹೌದು ಜನರು ಹೆಚ್ಚು ಹೆಚ್ಚು ಪೋಸ್ಟ್ ಆಫೀಸ್ ಯೋಜನೆಯಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡಿದರೆ ನಮ್ಮ ಹಣಕ್ಕೆ ಸುರಕ್ಷತೆ ಮಾತ್ರವಲ್ಲದೆ ಒಳ್ಳೆಯ ಬಡ್ಡಿ ಸಿಗುತ್ತದೆ ಅನ್ನುವ ಕಾರಣಕ್ಕೆ ಜನರು ಹೆಚ್ಚು ಹೆಚ್ಚು ಪೋಪಿಸ್ಟ್ ಆಫೀಸ್ ಯೋಜನೆಯಲ್ಲಿ ಹೂಡಿಕೆ ಮಾಡುವುದನ್ನು ನಾವು ಗಮನಿಸಬಹುದು.
ಇದರ ನಡುವೆ ಪೋಸ್ಟ್ ಆಫೀಸ್ ಇನ್ನೊಂದು ಯೋಜನೆ ಪರಿಚಯಿಸಿದೆ ಮತ್ತು ಈ ಯೋಜನೆಯ ಅಡಿಯಲ್ಲಿ 5 ಲಕ್ಷ ರೂ ಹೂಡಿಕೆ ಮಾಡುವುದರ ಮೂಲಕ ಬರೋಬ್ಬರಿ 15 ಲಕ್ಷ ರೂಪಾಯಿಯ ತನಕ ಲಾಭ ಗಳಿಸಬಹುದು. ಹಾಗಾದರೆ 15 ಲಕ್ಷ ಲಾಭ ತಂದುಕೊಡುವ ಪೋಸ್ಟ್ ಆಫೀಸ್ ಯೋಜನೆ ಯಾವುದು ಮತ್ತು ಈ ಯೋಜನೆಯ ಲಾಭ ಪಡೆದುಕೊಳ್ಳುವುದು ಹೇಗೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಪೋಸ್ಟ್ ಆಫೀಸ್ ನಲ್ಲಿ ಇಟ್ಟರೆ ನಿಮ್ಮ ಹಣ ಸೇಫ್
ಹೌದು, ಜನರು ತಮ್ಮ ಹಣ ಎಲ್ಲಿ ಸೇಫ್ ಇರುತ್ತೋ ಅಲ್ಲಿ ಹೂಡಿಕೆ ಮಾಡಲು ಇಷ್ಟಪಡುತ್ತಾರೆ. ತಮ್ಮ ಭವಿಷ್ಯದ ಉದ್ದೇಶದಿಂದ ಈಗಿನ ಕಾಲದ ಜನರು ಹೂಡಿಕೆಯತ್ತ ಹೆಚ್ಚು ಹೆಚ್ಚು ಗಮನ ಕೊಡುತ್ತಾರೆ. ಸದ್ಯ ಹೂಡಿಕೆ ಮಾಡುವವರಿಗೆ ಪೋಸ್ಟ್ ಆಫೀಸ್ ಒಂದು ಉತ್ತಮವಾದ ವೇದಿಕೆ ಕೂಡ ಆಗಿದೆ. ಇದರ ನಡುವೆ ಪೋಸ್ಟ್ ಆಫೀಸ್ ನಲ್ಲಿ ಈ ಮಾದರಿಯಲ್ಲಿ FD ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಬಹುದೊಡ್ಡ ಮೊತ್ತದ ಲಾಭ ಗಳಿಸಿಕೊಳ್ಳಬಹುದು. ಹೌದು ಪೋಸ್ಟ್ ಆಫೀಸ್ ನ FD ಯೋಜನೆಯಲ್ಲಿ (Post Office Fixed Deposit Scheme) ಹೂಡಿಕೆ ಮಾಡುವುದರ ಜನರು ದೊಡ್ಡ ಮೊತ್ತದ ಲಾಭ ಗಳಿಸಿಕೊಳ್ಳಬಹುದು.
ಪೋಸ್ಟ್ ಆಫೀಸ್ ನಲ್ಲಿ 5 ಲಕ್ಷಕ್ಕೆ ಸಿಗಲಿದೆ 15 ಲಕ್ಷ
ಹೌದು, ಬ್ಯಾಂಕುಗಳಿಗೆ ಹೂಡಿಕೆ ಮಾಡಿದರೆ ಪೋಸ್ಟ್ ಆಫೀಸ್ ನಲ್ಲಿ FD ಯೋಜನೆಯಲ್ಲಿ ಹಣ ಇಟ್ಟರೆ ಬ್ಯಾಂಕುಗಳಿಂದ ಅಧಿಕ ಬಡ್ಡಿ ಪಡೆದುಕೊಳ್ಳಬಹುದು. ಇನ್ನು ಪೋಸ್ಟ್ ಆಫೀಸ್ ನಲ್ಲಿ ಕೇವಲ 5 ಲಕ್ಷ ರೂ FD ಯೋಜನೆಯಲ್ಲಿ ಹೂಡಿಕೆ ಮಾಡುವುದರ ಮೂಲಕ 15 ಲಕ್ಷ ರೂ ಪಡೆದುಕೊಳ್ಳಬಹುದು. ಹೌದು ಪೋಸ್ಟ್ ಆಫೀಸ್ ನಲ್ಲಿ 5 ಲಕ್ಷ ರೂಪಾಯಿ ಹಣವನ್ನು 5 ವರ್ಷಗಳ ವರೆಗೆ ನೀವು FD ಯೋಜನೆಯಲ್ಲಿ ಹೂಡಿಕೆ ಮಾಡಬೇಕಾಗುತ್ತದೆ.
ಇನ್ನು ಪೋಸ್ಟ್ ಆಫೀಸ್ ನೀವು ಹೂಡಿಕೆ ಮಾಡಿದ ಹಣಕ್ಕೆ ಬರೋಬ್ಬರಿ 7.5% ಬಡ್ಡಿ ಕೂಡ ನೀಡುತ್ತದೆ. ಹೀಗೆ 5 ವರ್ಷಗಳ ಕಾಲ ನೀವು FD ಯಲ್ಲಿ ಹಣ ಇಟ್ಟರೆ ನೀವು ಅವಧಿ ಮುಗಿಯುವ ಸಮಯದಲ್ಲಿ 724974 ರೂ ಹಣವನ್ನು ಪಡೆದುಕೊಳ್ಳುತ್ತೀರಿ. ಇದಾದ ನಂತರ ನೀವು ಆ ಹಣವನ್ನು ತಗೆಯದೇ ಅಲ್ಲೇ ಇಡಬೇಕು, ಅಂದರೆ ಆ ಹಣವನ್ನು ಮುಂದಿನ 10 ವರ್ಷಗಳ ಅಲ್ಲೇ FD ಯೋಜನೆಯಲ್ಲಿ ಹೂಡಿಕೆ ಮಾಡಬೇಕಾಗುತ್ತದೆ. ಹೀಗೆ ಮುಂದಿನ 10 ವರ್ಷಗಳ ನೀವು FD ಹಣ ಇತ್ತಾರೆ ನೀವು ಹೂಡಿಕೆ ಮಾಡಿದ 5 ಲಕ್ಷ ರೂಪಾಯಿಗೆ ನೀವು ಬರೋಬ್ಬರಿ 551175 ರೂಪಾಯಿ ಬಡ್ಡಿ ಪಡೆಯುಕೊಳ್ಳುತ್ತೀರಿ.
ಹೂಡಿಕೆ ಮಾಡಿದ 15 ವರ್ಷಕ್ಕೆ ನಿಮ್ಮ ಹಣ ಡಬಲ್ ಆಗಿದೆ ಎಂದು ಹೇಳಬಹುದು. ಹೀಗೆ 15 ವರ್ಷಗಳ ಕಾಲ ಹೂಡಿಕೆ ಮಾಡಿದ್ದಾರೆ ನೀವು ಹೂಡಿಕೆ ಮಾಡಿದ ಹಣಕ್ಕೆ 10 ಲಕ್ಷ ರೂ ಬಡ್ಡಿ ಮತ್ತು ನೀವು ಹೂಡಿಕೆ ಮಾಡಿದ 5 ಲಕ್ಷ ರೂ ಸೇರಿಸಿ ನೀವು 15 ಲಕ್ಷ ರೂ ಹಣವನ್ನು ಪಡೆದುಕೊಳ್ಳಬಹುದು. ಇನ್ನು ನೀವು ಮಾಡುವ ಹೂಡಿಕೆಯ ಮೊತ್ತದ ಮೇಲೆ ನಿಮ್ಮ ಲಾಭ ಲೆಕ್ಕಾಚಾರ ಮಾಡಬಹುದು. ಪೋಸ್ಟ್ ಆಫೀಸ್ ನಲ್ಲಿ FD ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಬ್ಯಾಂಕುಗಳಿಗೆ ಹೂಡಿಕೆ ಮಾಡಿದರೆ ಅಧಿಕ ಬಡ್ಡಿ ಪಡೆದುಕೊಳ್ಳಬಹುದು ಅನ್ನುವ ಕಾರಣಕ್ಕೆ ಜನರು ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ.