RBI Latest Updates On Notes: RBI ಈಗಾಗಲೇ ನೋಟುಗಳಿಗೆ ಸಂಬಂಧಿಸಿದಂತೆ ಹಲವು ಹೊಸ ನಿಯಮಗಳನ್ನು ದೇಶದಲ್ಲಿ ಜಾರಿಗೆ ತಂದಿದೆ. ಹೌದು, ದೇಶದಲ್ಲಿ ನೋಟ್ ಬ್ಯಾನ್ ಆದನಂತರ ನೋಟುಗಳಿಗೆ ಸಂಬಂಧಿಸಿದಂತೆ ಹಲವು ಹೊಸ ನಿಯಮವನ್ನು ದೇಶದಲ್ಲಿ ಜಾರಿಗೆ ತರಲಾಗಿದೆ. ನಕಲಿ ನೋಟುಗಳ ತಡೆಗಟ್ಟುವಿಕೆ ಮತ್ತು ನೋಟುಗಳನ್ನು ಗುರುತಿಸುವುವಿಕೆಯನ್ನು ಹೆಚ್ಚಿಸುವ ಉದ್ದೇಶದಿಂದ ಭಾರತೀಯ ರಿಸರ್ವ್ ಬ್ಯಾಂಕ್ ಈಗಾಗಲೇ ನೋಟುಗಳಿಗೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ದೇಶದಲ್ಲಿ ಜಾರಿಗೆ ತಂದಿದೆ. ಇದರ ನಡುವೆ ಈಗ RBI ಗವರ್ನರ್ (RBI Governor) ಕೂಡ ಬದಲಾಗಿದ್ದಾರೆ, ಹೌದು ಈ ಹಿಂದೆ ಶಕ್ತಿಕಾಂತ ದಾಸ್ (shaktikanta Das) ಅವರು RBI ಗವರ್ನರ್ ಆಗಿದ್ದರೂ, ಆದರೆ RBI ನೂತನ ಗವರ್ನರ್ ಆಗಿ ಸಂಜಯ್ ಮಲ್ಹೋತ್ರ ಅವರು ಆಯ್ಕೆ ಆಗಿದ್ದಾರೆ.
100 ಮತ್ತು 200 ನೋಟುಗಳಿಗೆ ಸಂಬಂಧಿಸಿದಂತೆ ಹೊಸ ರೂಲ್ಸ್
ಹೌದು, RBI ಈಗ 100 ಮತ್ತು 200 ರೂ ನೋಟುಗಳಿಗೆ ಸಂಬಂಧಿಸಿದಂತೆ ಕೆಲವು ಹೊಸ ನಿಯವನ್ನು ಜಾರಿಗೆ ತಂದಿದೆ. ದೇಶದಲ್ಲಿ ಈಗ ಹೊಸ ಮಾದರಿಯ 100 ಮತ್ತು 200 ರೂ ನೋಟುಗಳು ಚಾಲ್ತಿಯಲ್ಲಿ ಇದೆ ಮತ್ತು ಆ ನೋಟುಗಳಲ್ಲಿ ಶಕ್ತಿಕಾಂತ ದಾಸ್ ಅವರ ಸಹಿ ಕೂಡ ಇದೆ. ಇದರ ನಡುವೆ ಈಗ RBI ಗವರ್ನರ್ ಚೇಂಜ್ ಆಗಿದ್ದು ಸಹಿ ಕೂಡ ಬದಲಾಗುತ್ತಿದೆ. ನೋಟುಗಳ ಮೇಲೆ ಸಹಿ ಬದಲಾಗುವ ಕಾರಣ ಜನರು ಗೊಂದಲಕ್ಕೆ ಒಳಗಾಗುವ ಅಗತ್ಯ ಇಲ್ಲ ಎಂದು RBI ತಿಳಿಸಿದೆ.
ಹಳೆಯ ನೋಟುಗಳಲ್ಲಿ ಮಾತ್ರ ಇರಲಿದೆ ಶಕ್ತಿಕಾಂತ ದಾಸ್ ಅವರ ಸಹಿ
RBI ನೀಡಿರುವ ಮಾಹಿತಿಯ ಪ್ರಕಾರ, ಇನ್ನುಮುಂದೆ ಹಳೆಯ 100, 200 ಮತ್ತು 500 ರೂ ನೋಟುಗಳಲ್ಲಿ ಮಾತ್ರ ಹಳೆಯ ಗವರ್ನರ್ ಸಹಿ ಇರಲಿದೆ. ಮುಂದಿನ ದಿನಗಳಲ್ಲಿ RBI ಪ್ರಿಂಟ್ ಮಾಡುವ ಎಲ್ಲಾ ನೋಟುಗಳಲ್ಲಿ ಹೊಸ ಗವರ್ನರ್ ಆದ ಸಂಜಯ್ ಮ್ಹಲೋತ್ರ ಅವರ ಸಹಿ ಇರಲಿದೆ ಎಂದು RBI ತಿಳಿಸಿದೆ. ಸಂಜಯ್ ಮಲ್ಹೋತ್ರ ಅವರು ಅಧಿಕಾರಕ್ಕೆ ಬಂದನಂತರ RBI ಯಾವ ಯಾವ ನೋಟುಗಳು ಪ್ರಿಂಟ್ ಆಗುತ್ತೋ ಆ ಎಲ್ಲಾ ನೋಟುಗಳಲ್ಲಿ ನೂತನ ಗವರ್ನರ್ ಆದ ಸಂಜಯ್ ಮಲ್ಹೋತ್ರ ಅವರ ಸಹಿ ಇರಲಿದೆ. ಹಳೆಯ ನೋಟುಗಳಲ್ಲಿ ಹಳೆಯ ಗವರ್ನರ್ ಸಹಿ ಇರಲಿದ್ದು ಜನರು ಗೊಂದಲಕ್ಕೆ ಒಳಗಾಗುವ ಅಗತ್ಯ ಇಲ್ಲ.