Home Loan Details: ಸಾಮಾನ್ಯವಾಗಿ ಮನೆ ಕಟ್ಟುವ ಆಸೆ ಎಲ್ಲರಿಗೂ ಕೂಡ ಇದ್ದೆ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ಎಲ್ಲರೂ ಕೂಡ ತಮ್ಮ ಸ್ವಂತ ಮನೆಯಲ್ಲಿ ವಾಸಮಾಡಲು ಇಷ್ಟಪಡುತ್ತಾರೆ. ಇದರ ನಡುವೆ ಬ್ಯಾಂಕುಗಳು ಕೂಡ ಮನೆ ಕಟ್ಟುವವರಿಗೆ ದೊಡ್ಡ ಮೊತ್ತದ ಸಾಲ ನೀಡುತ್ತದೆ. ಈ ನಡುವೆ ಸಾಕಷ್ಟು ಜನರಿಗೆ ಬ್ಯಾಂಕ್ ಸಾಲ (Bank Loan) ಮಾಡುವುದು ಕೂಡ ಕಷ್ಟವಾಗಿದೆ, ಹೌದು ಬ್ಯಾಂಕುಗಳಲ್ಲಿ ಸಾಲ ಮಾಡಲು ಅದಕ್ಕೆ ಸರಿಯಾದ ದಾಖಲೆ ಮತ್ತು ಆದಾಯದ ಮೂಲ ಕೂಡ ತಿಳಿಸಬೇಕಾಗುತ್ತದೆ.
ನಿಮ್ಮ ತಿಂಗಳ ಆದಾಯ ಎಷ್ಟು ಮತ್ತು ನೀವು ಸಾಲ ಹೇಗೆ ತೀರಿಸುತ್ತೀರಿ ಅನ್ನುವ ಆಧಾರದ ಮೇಲೆ ನಿಮಗೆ ಬ್ಯಾಂಕುಗಳು ಸಾಲ ನೀಡುತ್ತದೆ. ಈ ನಡುವೆ ಸಾಕಷ್ಟು ಜನರು ಎಷ್ಟು ಸಾಲ ಮಾಡಿದರೆ ಎಷ್ಟು EMI ಬರುತ್ತದೆ ಅನ್ನುವ ಮಾಹಿತಿ ಕೂಡ ತಿಳಿದಿಲ್ಲ. ಹಾಗಾದರೆ ನಿಮಗೆ ಮನೆ ಕಟ್ಟಲು 30 ಲಕ್ಷ ರೂ ಸಾಲ ಬೇಕಾದರೆ ನಿಮಗೆ ತಿಂಗಳ ಆದಾಯ ಎಷ್ಟಿರಬೇಕು ಮತ್ತು ನಿಮಗೆ ಪ್ರತಿ ತಿಂಗಳು ಎಷ್ಟು EMI ಬರುತ್ತದೆ ಅನ್ನುವುದರ ಬಗ್ಗೆ ಮಾಹಿತಿ ಇಲ್ಲಿದೆ.
30 ಲಕ್ಷ ರೂ ಸಾಲ ಮಾಡಿದರೆ ಎಷ್ಟು EMI ಬರುತ್ತದೆ
ಸಾಮಾನ್ಯವಾಗಿ ಮನೆ ಸಾಲಗಳನ್ನು (Home Loan) ಅಧಿಕ ವರ್ಷಕ್ಕೆ ಕೊಡಲಾಗುತ್ತದೆ. ಹೌದು, ಸಾಕಷ್ಟು ಜನರು ಮನೆ ಸಾಲವನ್ನು ಮಾಡಲು ದೊಡ್ಡ ಮೊತ್ತದ ಲೋನ್ ಮಾಡುತ್ತಾರೆ. ಮನೆ ಸಾಲ ಮಾಡಲು ಕೆಲವರು 30 ಲಕ್ಷ ರೂಪಾಯಿಯ ತನಕ ಸಾಲ ಪಡೆದುಕೊಳ್ಳುತ್ತಾರೆ. ಹೋಂ ಲೋನ್ ಅವಧಿಗಳು ಹೆಚ್ಚಿರುವ ಕಾರಣ ನಮಗೆ ತಿಂಗಳ EMI ಕೂಡ ಕಡಿಮೆ ಬರುತ್ತದೆ. ಇನ್ನು 30 ಲಕ್ಷ ರೂ ಸಾಲ ಪಡೆದುಕೊಂಡರೆ ನೀವು ಅದನ್ನು 24 ಅವಧಿಯಲ್ಲಿ ತೀರಿಸುವುದಾದರೆ ನಿಮಗೆ 8.5% ಬಡ್ಡಿದರದಲ್ಲಿ ಹೋಂ ಲೋನ್ ನೀಡಲಾಗುತ್ತದೆ. ಇನ್ನು ಮಾಸಿಕ EMI ಬಗ್ಗೆ ಮಾತನಾಡುವುದಾದರೆ, ನೀವು 24 ವರ್ಷಗಳ EMI ಮಾಡಿದರೆ ನೀವು ಮಾಸಿಕವಾಗಿ 23,000 ರೂ EMI ಪಾವತಿ ಮಾಡಬೇಕಾಗುತ್ತದೆ.
30 ಲಕ್ಷ ರೂ ಸಾಲ ಪಡೆಯಲು ನಿಮ್ಮ ಮಾಸಿಕ ಆದಾಯ ಎಷ್ಟಿರಬೇಕು
ಹೋಂ ಲೋನ್ ಮಾಡುವವರು ಮುಖ್ಯವಾಗಿ ತಿಳಿದುಕೊಂಡಿರಬೇಕು ವಿಷಯ ಏನು ಅಂದರೆ, ನೀವು CIBIL ಸ್ಕೋರ್ ಚೆನ್ನಾಗಿದ್ದರೆ ಮಾತ್ರ ನೀವು ದೊಡ್ಡ ಮೊತ್ತದ ಸಾಲ ಪಡೆದುಕೊಳ್ಳಬಹುದು. ಹಾಗೆ ನಿಮ್ಮ ಸಿಬಿಲ್ ಸ್ಕೋರ್ ಕಡಿಮೆ ಇದ್ದರೆ ನಿಮಗೆ ಹೆಚ್ಚಿನ ಬಡ್ಡಿದರದಲ್ಲಿ ಸಾಲ ನೀಡಲಾಗುತ್ತದೆ. ನೀವು ಮನೆ ಸಾಲಕ್ಕೆ 30 ಲಕ್ಷ ರೂ ಬೇಡಿಕೆ ಇಟ್ಟರೆ ಬ್ಯಾಂಕ್ ನಿಮ್ಮ ಮಾಸಿಕ ಆದಾಯದ ಲೆಕ್ಕಾಚಾರ ಮಾಡುತ್ತದೆ. ಹೌದು, ನಿಮ್ಮ ಮಾಸಿಕ ಆದಾಯ 46,000 ರೂ ಇದ್ದರೆ ನೀವು 30 ಲಕ್ಷ ರೂ ಸಾಲ ಪಡೆದುಕೊಳ್ಳಬಹುದು.
ಯಾವ ಬ್ಯಾಂಕುಗಳಲ್ಲಿ ಬಡ್ಡಿ ಕಡಿಮೆ ಸಿಗುತ್ತದೆ
ಹೊಂನೆ ಲೋನ್ ಮಾಡುವ ಮುನ್ನ ನೀವು ರೆಪೋ ದರ ತಿಳಿದುಕೊಳ್ಳುವುದು ಉತ್ತಮ. ಹೌದು, ರೆಪೋ ದರ ಅಧಿಕವಿದ್ದ ಸಮಯದಲ್ಲಿ ನೀವು ಸಾಲ ಪಡೆದುಕೊಂಡರೆ ನೀವು ಅಧಿಕ ಬಡ್ಡಿದರ ಪಾವತಿ ಮಾಡಬೇಕಾಗುತ್ತದೆ. ಕಳೆದ ಎರಡು ವರ್ಷಗಳಿಂದ ಹೋಲಿಕೆ ಮಾಡಿದರೆ RBI ರೆಪೋ ದರ ಏರಿಕೆ ಆಗಿದೆ ಮತ್ತು ಎರಡು ವರ್ಷದ ಹಿಂದೆ 7.5% ಇದ್ದ ಮನೆ ಸಾಲದ ಬಡ್ಡಿದರ ಈಗ 8.5% ಗೆ ಬಂದು ತುಲುಪಿದೆ. ಕೆಲವು ಖಾಸಗಿ ಬ್ಯಾಂಕುಗಳಿಗೆ ಹೋಲಿಕೆ ಮಾಡಿದರೆ ನೀವು ಸರ್ಕಾರೀ ಬ್ಯಾಂಕುಗಳಲ್ಲಿ ಹೋಂ ಲೋನ್ ಮಾಡಿದರೆ ಕಡಿಮೆ ಬಡ್ಡಿದರಕ್ಕೆ ಸಾಲ ಪಡೆದುಕೊಳ್ಳಬಹುದು. ಇನ್ನು ಸಕಾರಿ ಬ್ಯಾಂಕುಗಳಿಗೆ ಸಾಲ ಮಾಡಿದರೆ ನಿಮಗೆ ಸಾಲಕ್ಕೆ ಸುರಕ್ಷತೆ ಕೂಡ ಇರುತ್ತದೆ ಮತ್ತು ಪದೇಪದೇ ಬಡ್ಡಿದರ ಕೂಡ ಏರಿಕೆ ಆಗುವುದಿಲ್ಲ. ಖಾಸಗಿ ಬ್ಯಾಂಕುಗಳಲ್ಲಿ ನೀವು ಮನೆಸಾಲ ಮಾಡಲು ಬಯಸಿದರೆ ಹೆಚ್ಚಿನ ದಾಖಲೆ ಕೂಡ ನೀಡಲಾಗುತ್ತದೆ.