Income Tax Rules On Saving Accounts: ದೇಶದಲ್ಲಿ ಆದಾಯ ತೆರಿಗೆ ನಿಯಮ ದಿನಗಳು ಉರುಳುತ್ತಿದ್ದಂತೆ ಬದಲಾಗುತ್ತಿದೆ. ಹೌದು, ಹಣಕಾಸಿಗೆ ವ್ಯವಹಾರಕ್ಕೆ ಸಂಬಂಧಿಸಿದಂತೆ ಭಾರತೀಯ ತೆರಿಗೆ ಇಲಾಖೆ ಈಗಾಗಲೇ ಹಲವು ಹೊಸ ನಿಯಮ ಜಾರಿಗೆ ತಂದಿದೆ. ಇದರ ನಡುವೆ ಈಗ ಬ್ಯಾಂಕುಗಳಲ್ಲಿ ಹಣ ಇಡುವುದಕ್ಕೆ ಸಂಬಂಧಿಸಿದಂತೆ ಕೂಡ ಭಾರತೀಯ ತೆರಿಗೆ ನಿಯಮಗಳಲ್ಲಿ ಹೊರಡಿಸಿದೆ. ಹೌದು, ಸೇವಿಂಗ್ ಬ್ಯಾಂಕ್ ಖಾತೆಯಲ್ಲಿ ಹಣ ಇಡುವುದಕ್ಕೂ ಈಗ ತೆರಿಗೆ ಇಲಾಖೆ ಮಿತಿ ನಿಗದಿ ಮಾಡಿದೆ.
ತೆರಿಗೆ ಇಲಾಖೆಯ ನಿಯಮದ ಪ್ರಕಾರ ಮಿತಿಗಿಂತ ಅಧಿಕ ಹಣವನ್ನು ಬ್ಯಾಂಕ್ ಖಾತೆಯಲ್ಲಿ ಇಟ್ಟರೆ ಆ ವ್ಯಕ್ತಿ ಆ ಹಣಕ್ಕೆ ಮೂಲ ತೋರಿಸಬೇಕು ಮತ್ತು ಆದಾಯ ತೆರಿಗೆ ಕೂಡ ಪಾವತಿ ಮಾಡಬೇಕಾಗುತ್ತದೆ. ಹಾಗಾದರೆ ತೆರಿಗೆ ಇಲಾಖೆಯ ನಿಯಮದ ಪ್ರಕಾರ ಒಂದು ಬ್ಯಾಂಕ್ ಖಾತೆಯಲ್ಲಿ ಎಷ್ಟು ಹಣ ಇಡಬಹುದು ಮತ್ತು ಅಗತ್ಯಕ್ಕಿಂತ ಹೆಚ್ಚಿನ ಹಣ ಇಟ್ಟರೆ ಎಷ್ಟು ತೆರಿಗೆ ಪಾವತಿ ಮಾಡಬೇಕು ಅನ್ನುವುದರ ಬಗ್ಗೆ ತಿಳಿಯೋಣ.
ಬ್ಯಾಂಕ್ ಖಾತೆಯಲ್ಲಿ ಹಣ ಇಡುವವರಿಗೆ ಹೊಸ ರೂಲ್ಸ್
ಹೌದು, ಭಾರತೀಯ ತೆರಿಗೆ ಇಲಾಖೆ ಈಗ ಬ್ಯಾಂಕ್ ಖಾತೆಗಳಲ್ಲಿ ಹಣ ಇಡುವುದಕ್ಕೆ ಸಂಬಂಧಿಸಿದಂತೆ ಹೊಸ ನಿಯಮ ಜಾರಿಗೆ ತಂದಿದೆ. ಬ್ಯಾಂಕ್ ನಿಯಮದ ಪ್ರಕಾರ ಒಬ್ಬ ವ್ಯಕ್ತಿ ಎಷ್ಟು ಬೇಕಾದರೂ ಉಳಿತಾಯ ಖಾತೆ ತೆರೆಯಬಹುದು ಮತ್ತು ಅದಕ್ಕೆ ಮಿತಿ ಇಲ್ಲ, ಆದರೆ ಉಳಿತಾಯ ಖಾತೆಯಲ್ಲಿ ಹಣ ಇಡುವುದಕ್ಕೆ ಮಿತಿ ಇದೆ. ಅದೇ ರೀತಿಯಲ್ಲಿ ಶೂನ್ಯ ಬ್ಯಾಲೆನ್ಸ್ ಖಾತೆ ಹೊರತುಪಡಿಸಿ ಇತರೆ ಎಲ್ಲಾ ಬ್ಯಾಂಕ್ ಖಾತೆಗಳಲ್ಲಿ ಮಿನಿಮಮ್ ಬ್ಯಾಲೆನ್ಸ್ ಇಡುವುದು ಕಡ್ಡಾಯವಾಗಿದೆ.
ಬ್ಯಾಂಕ್ ಖಾತೆಯಲ್ಲಿ ಇದಕ್ಕಿಂತ ಹೆಚ್ಚು ಹಣ ಇಟ್ಟರೆ ತೆರಿಗೆ ಕಟ್ಟಬೇಕು
ತೆರಿಗೆ ಇಲಾಖೆಯ ನಿಯಮದ ಪ್ರಕಾರ, ಬ್ಯಾಂಕ್ ಉಳಿತಾಯ ಖಾತೆಯಲ್ಲಿ ಹಣ ಇಡಲು ಯಾವುದೇ ಮಿತಿ ಇಲ್ಲ. ಆದರೆ ಒಂದೇ ಬಾರಿಯ ಬ್ಯಾಂಕಿನ ಉಳಿತಾಯ ಖಾತೆಯಲ್ಲಿ 10 ಲಕ್ಷ ರೂ ಗಿಂತ ಅಧಿಕ ಹಣವನ್ನು ಜಮೆ ಮಾಡಿದರೆ ನೀವು ಆದಾಯ ತೆರಿಗೆ ಇಲಾಖೆಯ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ನೀವು ಒಂದೇ ಬಾರಿಗೆ ಇಷ್ಟು ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಿದರೆ ನೀವು ಆದಾಯ ತೆರಿಗೆ ಇಲಾಖೆಗೆ ಅದರ ಮೂಲ ತಿಳಿಸಬೇಕು, ಇಲ್ಲವಾದರೆ ಕಡ್ಡಾಯವಾಗಿ ತೆರಿಗೆ ಪಾವತಿ ಮಾಡಬೇಕು. ಹೌದು ಬ್ಯಾಂಕ್ ಖಾತೆಯಲ್ಲಿ ಒಂದೇ ಬಾರಿಗೆ ಹತ್ತು ಲಕ್ಷಕ್ಕಿಂತ ಅಧಿಕ ಹಣ ಇಟ್ಟರೆ ಕಡ್ಡಾಯವಾಗಿ ಆದಾಯ ತೆರಿಗೆ ಪಾವತಿ ಮಾಡಬೇಕು.
10 ಲಕ್ಷ ಇಟ್ಟರೆ ಎಷ್ಟು ತೆರಿಗೆ ಕಟ್ಟಬೇಕು
ಆದಾಯ ತೆರಿಗೆ ನಿಯಮದ ಪ್ರಕಾರ, ಬ್ಯಾಂಕ್ ಖಾತೆಯಲ್ಲಿ ಒಂದೇ ಬಾರಿಗೆ ಹತ್ತು ಲಕ್ಶಕ್ಕ್ಕಿಂತ ಅಧಿಕ ಹಣ ಇಟ್ಟರೆ ನೀವು ಆ ಆದಾಯದ ಮೂಲವನ್ನು ಕಡ್ಡಾಯವಾಗಿ ತೆರಿಗೆ ಇಲಾಖೆಗೆ ನೀಡಬೇಕು. ನೀವು ಆದಾಯದ ಮೂಲವನ್ನು ಸರಿಯಾಗಿ ತೆರಿಗೆ ಇಲಾಖೆಗೆ ನೀಡದೆ ಇದ್ದರೆ ನೀವು ಆ ಆದಾಯಕ್ಕೆ ಶೇಕಡಾ 60 ರಷ್ಟು ತೆರಿಗೆ ಮತ್ತು ಶೇಕಡಾ 4 ರಷ್ಟು ಸೆಸ್ ಕೂಡ ಪಾವತಿ ಮಾಡಬೇಕಾಗುತ್ತದೆ. ನೀವು ನಿಮ್ಮ ಆದಾಯಕ್ಕೆ ಸರಿಯಾದ ಮೂಲ ತೋರಿಸದೆ ಇದ್ದರೆ ನೀವು ದೊಡ್ಡ ದೊಡ್ಡ ಸಮಸ್ಯೆ ಕೂಡ ಎದುರಿಸಬೇಕಾಗುತ್ತದೆ. ದೇಶದಲ್ಲಿ ಆದಾಯ ತೆರಿಗೆ ನಿಯಮವನ್ನು ಕಠಿಣ ಮಾಡಲಾಗಿದೆ ಮತ್ತು ಪ್ರತಿಯೊಬ್ಬರೂ ಕೂಡ ಆದಾಯ ತೆರಿಗೆ ನಿಯಮ ಪಾಲನೆ ಮಾಡುವುದು ಕೂಡ ಕಡ್ಡಾಯವಾಗಿದೆ.