Kodi Mutt Latest Predition: ರಾಜ್ಯದ ಮುಖ್ಯ ಮಂತ್ರಿ ಬದಲಾವಣೆ ಮತ್ತೆ ಕೊಡಿ ಮಠದ ಶಿವಯೋಗಿ ಶಿವಾನಂದ ರಾಜೇಂದ್ರ ಸ್ವಾಮಿಗಳು (Kodi mUtt Shivayogi Shivananda Rajendra Swamiji) ಭವಿಷ್ಯ ನುಡಿದಿದ್ದಾರೆ. ಹೌದು, ಶಿವಯೋಗಿ ಶಿವಾನಂದ ರಾಜೇಂದ್ರ ಸ್ವಾಮಿಗಳು ಭವಿಷ್ಯ ನುಡಿಯುವುದರಲ್ಲಿ ಬಹಳ ಹೆಸರುವಾಸಿ, ಕರೋನ ಮಹಾಮಾರಿ ಸಮಯದಲ್ಲಿ ಹಲವು ಭವಿಷ್ಯ ನುಡಿಯುವುದರ ಮೂಲಕ ಜನಪ್ರಿಯತೆ ಗಳಿಸಿಕೊಂಡ ಶಿವಯೋಗಿ ಶಿವಾನಂದ ರಾಜೇಂದ್ರ ಸ್ವಾಮಿಗಳು ಅವರು ನಂತರ ಹಲವು ಭವಿಷ್ಯ ನುಡಿಯುವುದರ ಮೂಲಕ ಇನ್ನಷ್ಟು ಫೇಮಸ್ ಆಗಿದ್ದರು.
ರಾಜ್ಯ ರಾಜಕೀಯದಲ್ಲಿ ಹಲವು ಬದಲಾವಣೆ
ಶಿವಯೋಗಿ ಶಿವಾನಂದ ರಾಜೇಂದ್ರ ಸ್ವಾಮಿಗಳು ಸದ್ಯ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಹೌದು, ರಾಜ್ಯದ ರಾಜಕೀಯದಲ್ಲಿ ಕೆಲವು ಬದಲಾವಣೆ ಆಗುತ್ತಿದೆ ಮತ್ತು ಉಪಮುಖ್ಯಮಂತ್ರಿ ಮಗಳು ಐಶ್ವರ್ಯ ಅವರು ಮುಂದಿನ ಮುಖ್ಯಮಂತ್ರಿ ನನ್ನ ತಂದೆ ಹೇಳುತ್ತಿದ್ದಾರೆ. ಈ ಕಾರಣಗಳಿಂದ ರಾಜ್ಯದ ಜನರಿಗೆ ರಾಜ್ಯದಲ್ಲಿ CM ಬದಲಾಗುತ್ತಾರಾ ಅನ್ನುವ ಪ್ರಶ್ನೆ ಮೂಡಿದೆ. ರಾಜ್ಯ ರಾಜಕೀಯದಲ್ಲಿ ಹಲವು ಬದಲಾವಣೆ ಆಗುತ್ತಿರುವ ಬೆನ್ನಲ್ಲೇ ಈಗ ರಾಜ್ಯದಲ್ಲಿ CM ಬದಲಾವಣೆ ಬಗ್ಗೆ ಶಿವಯೋಗಿ ಶಿವಾನಂದ ರಾಜೇಂದ್ರ ಸ್ವಾಮಿಗಳು ಭವಿಷ್ಯ ನುಡಿದಿದ್ದಾರೆ.
ರಾಜ್ಯದಲ್ಲಿ ಬದಲಾಗುತ್ತಾರಾ ಮುಖ್ಯಮಂತ್ರಿ
ಹೌದು, ಸಂದರ್ಶನದಲ್ಲಿ ಮಾತನಾಡಿದ ಶಿವಯೋಗಿ ಶಿವಾನಂದ ರಾಜೇಂದ್ರ ಸ್ವಾಮಿಗಳು ಅವರು ಕ್ರೋಢಿನಾಮ ಸಂವತ್ಸರದಲ್ಲಿ ಒಳ್ಳೆಯದಕ್ಕಿಂತ ಕೆಟ್ಟದ್ದೇ ಹೆಚ್ಚಾಗಿ ಆಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಅದೇ ರೀತಿಯಲ್ಲಿ ರಾಜ್ಯದ ಜನತೆಗೆ ಜಲಕಂಟಕ ಕೂಡ ಇದೆ ಎಂದು ಹೇಳಿದ್ದಾರೆ ಸ್ವಾಮಿಗಳು. ಇನ್ನು ರಾಜ್ಯ ಮತ್ತು ರಾಷ್ಟ್ರ ರಾಜಕಾರಣದ ಬಗ್ಗೆ ಭವಿಷ್ಯ ಹೇಳಿದ ಶಿವಯೋಗಿ ಶಿವಾನಂದ ರಾಜೇಂದ್ರ ಸ್ವಾಮಿಗಳು ಅವರು, ಮಹಾಭಾರತದಲ್ಲಿ ಕೃಷ್ಣ ಇದ್ದ ಕಾರಣಕ್ಕೆ ಭೀಮ ಗೆದ್ದಿದ್ದು ಮತ್ತು ದುರ್ಯೋದನ ಸೋತಿದ್ದು, ಆದರೆ ಇಲ್ಲಿ ಕೃಷ್ಣ ಇಲ್ಲ ಈ ಕಾರಣಕ್ಕೆ ದುರ್ಯೋಧನ ಗೆಲ್ಲುತ್ತಾನೆ ಎಂದು ಶಿವಯೋಗಿ ಶಿವಾನಂದ ರಾಜೇಂದ್ರ ಸ್ವಾಮಿಗಳು ಭವಿಷ್ಯ ನುಡಿದಿದ್ದಾರೆ.