Dhoni Pension: BCCI ನಿಂದ ಪ್ರತಿ ತಿಂಗಳು ಧೋನಿಗೆ ಸಿಗುವ ಪಿಂಚಣಿ ಎಷ್ಟು ಗೊತ್ತಾ, ದುಬಾರಿ ಪಿಂಚಣಿ

M.S Dhoni Pension Money: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ಭಾರತ ಕ್ರಿಕೆಟ್ ತಂಡದ ಮಾಜಿ ವಿಕೆಟ್ ಕೀಪರ್ ಮತ್ತು ಮಾಜಿ ಬ್ಯಾಟ್ಸಮನ್ ಅನಿಸಿಕೊಂಡಿದ್ದ ಮಹೇಂದ್ರ ಸಿಂಗ್ ಧೋನಿ (Mahendra Singh Dhoni) ಎಲ್ಲರಿಗೂ ಇಷ್ಟ ಎಂದು ಹೇಳಬಹುದು. ಹೌದು ಭಾರತಕ್ಕೆ ಹಲವು ಪ್ರಶಸ್ತಿ ಗೆಲ್ಲಿಸಿಕೊಂಡ ಮಹೇಂದ್ರ ಸಿಂಗ್ ಧೋನಿ ಅವರು ದೇಶದಲ್ಲಿ ಮಾತ್ರವಲ್ಲದೆ ಬೇರೆ ಬೇರೆ ದೇಶದಲ್ಲಿ ಕೂಡ ಅಭಿಮಾನಿಗಳನ್ನು ಹೊಂದಿದ್ದಾರೆ. ಇದರ ನಡುವೆ ಮಹೇಂದ್ರ ಸಿಂಗ್ ಧೋನಿ ಅವರು ಸದ್ಯ ಚನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಐಪಿಎಲ್ ಕೂಡ ಆಡುತ್ತಿದ್ದು ಪ್ರಸ್ತುತ ವರ್ಷದಲ್ಲಿ ಕೂಡ ನಾವು ಅವರನ್ನು ಮೈದಾನದಲ್ಲಿ ನೋಡಬಹುದಾಗಿದೆ. ಭಾರತ ತಂಡದಿಂದ ನಿವೃತ್ತಿ ಪಡೆದುಕೊಂಡಿರುವ ಮಹೇಂದ್ರ ಸಿಂಗ್ ಧೋನಿ ಅವರಿಗೆ BCCI ಪ್ರತಿ ತಿಂಗಳು ಪಿಂಚಣಿ ಹಣ ನೀಡುತ್ತದೆ.

WhatsApp Group Join Now
Telegram Group Join Now

ಮಹೇಂದ್ರ ಸಿಂಗ್ ಧೋನಿಗೆ ಸಿಗುತ್ತೆ BCCI ನಿಂದ ಪಿಂಚಣಿ
ಹೌದು, ಭಾರತ ಕ್ರಿಕೆಟ್ ತಂಡದ ಮಾಜಿ ಸ್ಟಾರ್ ಆಟಗಾರನಾದ ಮಹೇಂದ್ರ ಸಿಂಗ್ ಧೋನಿ ಅವರಿಗೆ ಪ್ರತಿ ತಿಂಗಳು BCCI ಪಿಂಚಣಿ ಹಣ ನೀಡುತ್ತದೆ. ಬರಿ ಮಹೇಂದ್ರ ಸಿಂಗ್ ಧೋನಿ ಅವರಿಗೆ ಮಾತ್ರವಲ್ಲದೆ ಭಾರತ ತಂಡದಲ್ಲಿ ಆಡಿದ ನಂತರ ನಿವೃತ್ತಿ ಪಡೆದುಕೊಂಡ ಎಲ್ಲಾ ಆಟಗಾರರಿಗೆ BCCI ಪಿಂಚಣಿ ಹಣ ನೀಡುತ್ತದೆ. ಬೇರೆ ಆಟಗಾರರಿಗೆ ಹೋಲಿಕೆ ಮಾಡಿದರೆ ಮಹೇಂದ್ರ ಸಿಂಗ್ ಧೋನಿ ಅವರಿಗೆ ಕೊಂಚ ಜಾಸ್ತಿ ಪಿಂಚಣಿ ಹಣ ನೀಡಲಾಗುತ್ತೆ ಎಂದು ಹೇಳಬಹುದು. ಹೌದು, BCCI ಮಹೇಂದ್ರ ಸಿಂಗ್ ಧೋನಿ ಅವರಿಗೆ ಬಹುದೊಡ್ಡ ಮೊತ್ತದ ಪಿಂಚಣಿ ಹಣ ನೀಡುತ್ತದೆ. ಹಾಗಾದರೆ BCCI ಮಹೇಂದ್ರ ಸಿಂಗ್ ಧೋನಿ ಅವರಿಗೆ ನೀಡುವ ಪಿಂಚಣಿ ಹಣ ಎಷ್ಟು ಎಂದು ನಾವೀಗ ತಿಳಿಯೋಣ.

ಮಹೇಂದ್ರ ಸಿಂಗ್ ಧೋನಿಗೆ ಸಿಗುತ್ತೆ ದುಬಾರಿ ಪಿಂಚಣಿ
ಸಾಮಾನ್ಯವಾಗಿ BCCI 75 ಏಕದಿನ ಪಂದ್ಯ ಮತ್ತು 50 ಟೆಸ್ಟ್ ಪಂದ್ಯ ಆಡಿದ ಎಲ್ಲಾ ಆಟಗಾರರಿಗೆ ತಿಂಗಳಿಗೆ 60000 ರೂ ಪಿಂಚಣಿ ಹಿಂದೆ ನೀಡಲಾಗುತ್ತಿತ್ತು, ಆದರೆ 2022 ಗಂಗೂಲಿ ಅವರು ಈ ಮೊತ್ತವನ್ನು ಏರಿಕೆ ಮಾಡಿದರು. ಗಂಗೂಲಿ ಅವರು ನಿವೃತ್ತಿ ಪಡೆದುಕೊಂಡ ಆಟಗಾರರ ಮಾಸಿಕ ಪಿಂಚಣಿ ಏರಿಕೆ ಮಾಡುವುದರ ಮೂಲಕ ಸಾಕಷ್ಟು ಆಟಗಾರರಿಗೆ ನೆರವಾದರು ಎಂದು ಹೇಳಬಹುದು.

ಇನ್ನು ಮಹೇಂದ್ರ ಸಿಂಗ್ ಧೋನಿ ಅವರು ಸುಮಾರು 350 ಏಕದಿನ ಪಂದ್ಯ, 90 ಟೆಸ್ಟ್ ಪಂದ್ಯ ಮತ್ತು 98 ಏಕದಿನ ಪಂದ್ಯ ಆಡಿದ್ದಾರೆ. ಇನ್ನು ಇಷ್ಟು ಪದ್ಯ ಆಡಿರುವ ಮಹೇಂದ್ರ ಸಿಂಗ್ ಧೋನಿ ಅವರಿಗೂ ಕೂಡ ತಿಂಗಳಿಗೆ 70 ಸಾವಿರ ರೂ ಪಿಂಚಣಿ ನೀಡಲಾಗುತ್ತಿದೆ. ಹೌದು ಧೋನಿಯವರು ಅಧಿಕ ಟೆಸ್ಟ್, ಏಕದಿನ ಮತ್ತು 98 T20 ಪಂದ್ಯಗಳನ್ನು ಆಡಿದ್ದಾರೆ. ಈ ಕಾರಣಗಳಿಂದ ಮಹೇಂದ್ರ ಸಿಂಗ್ ಧೋನಿ ಅವರಿಗೆ BCCI ನಿಂದ ಸುಮಾರು 70 ಸಾವಿರ ರೂ ಪಿಂಚಣಿ ಪ್ರತಿ ತಿಂಗಳು ಬರುತ್ತಿದೆ.

ತಮ್ಮ ಪಿಂಚಣಿ ಹಣ ದಾನ ಮಾಡುತ್ತಿರುವ ಮಹೇಂದ್ರ ಸಿಂಗ್ ಧೋನಿ
ಹೌದು, ಮಹೇಂದ್ರ ಸಿಂಗ್ ಧೋನಿ ಅವರು ತಮಗೆ ಬರುವ ಪ್ರತಿ ತಿಂಗಳ ಪಿಂಚಣಿ ಹಣವನ್ನು ದಾನ ಮಾಡುತ್ತಿದ್ದಾರೆ. ತಮ್ಮ ಪಿಂಚಣಿ ಹಣವನ್ನು ಮಹೇಂದ್ರ ಸಿಂಗ್ ಧೋನಿ ಅವರು ಬಡವರಿಗೆ ದಾನ ಮಾಡುವುದರ ಮೂಲಕ ಇನ್ನಷ್ಟು ಜನಮೆಚ್ಚುಗೆ ಗಳಿಸಿಕೊಂಡಿದ್ದಾರೆ ಎಂದು ಹೇಳಬಹುದು. ಮಹೇಂದ್ರ ಸಿಂಗ್ ಧೋನಿ ಅವರು ಸದ್ಯ ಚನೈ ಸೂಪರ್ ಕಿಂಗ್ಸ್ ತಂಡದಲ್ಲಿ ಐಪಿಎಲ್ ಟ್ರೋಫಿ ಗೆಲ್ಲಲು ಮತ್ತೆ ಪ್ಲ್ಯಾನ್ ಮಾಡುತ್ತಿದ್ದಾರೆ.

Leave a Comment