iPhone 17 Air: ಇನ್ಮುಂದೆ ಐಫೋನ್ ಗಳಲ್ಲಿ ಇರಲ್ಲ ಯಾವುದೇ ಚಾರ್ಜಿಂಗ್ ಪೋರ್ಟ್, ಐಫೋನ್ 17 ಫೀಚರ್ ಲೀಕ್

iPhone 17 Air Charging Port: ಈಗಿನ ಕಾಲದಲ್ಲಿ ನಾವು ಪ್ರತಿಯೊಬ್ಬರ ಕೈಯಲ್ಲಿ ಕೂಡ ಐಫೋನ್ )iPhone) ನೋಡಬಹುದಾಗಿದೆ. ಹೌದು, ಹೆಚ್ಚು ಸುರಕ್ಷತೆ ಮತ್ತು ವಿಶೇಷ ಫೀಚರ್ ಕಾರಣ ಈಗಿನ ಕಾಲದಲ್ಲಿ ಹೆಚ್ಚಿನ ಜನರು IOS ಸಿಸ್ಟಮ್ (IOS System) ಇರುವ ಐಫೋನ್ ಬಳಕೆ ಮಾಡುತ್ತಿದ್ದಾರೆ. ಇತರೆ ಮೊಬೈಲ್ ಗಳಿಗೆ ಹೋಲಿಕೆ ಮಾಡಿದರೆ ಐಫೋನ್ ಬೆಲೆ ಕೊಂಚ ಅಧಿಕ ಎಂದು ಹೇಳಬಹುದು. ಸದ್ಯ ಐಫೋನ್ 16 ಮಾದರಿಯೂ ಚಾಲನೆಯಲ್ಲಿರುವ ಐಫೋನ್ ಲೇಟೆಸ್ಟ್ ವರ್ಷನ್ ಎಂದು ಹೇಳಬಹುದು. ಇನ್ನು ಈ ವರ್ಷದಲ್ಲಿ ಐಫೋನ್ 17 ಲಾಂಚ್ (iPhone 17 Launch) ಆಗಲಿದೆ. ಐಫೋನ್ 17 ಮಾದರಿಯಲ್ಲಿ ಕೆಲವು ಬದಲಾವಣೆ ಮಾಡಲು ಈಗ ಆಪಲ್ ಕಂಪನಿ ಮುಂದಾಗಿದೆ ಎಂದು ಹೇಳಬಹುದು. ಐಫೋನ್ 17 ಖರೀದಿ ಮಾಡುವವರಿಗೆ ಈಗ ಆಪಲ್ ಅತ್ಯಾಕರ್ಷಕ ಫೀಚರ್ ಬಿಡುಗಡೆ ಮಾಡಲು ಮುಂದಾಗಿದೆ.

WhatsApp Group Join Now
Telegram Group Join Now

ಐಫೋನ್ 17 ನಲ್ಲಿ ಇರಲ್ಲ ಚಾರ್ಜಿಂಗ್ ಪೋರ್ಟ್ (iPhone 17 Charging Posrt)
ಈ ಹಿಂದಿನ ಐಫೋನ್ ಗಳಲ್ಲಿ ವಿಭಿನ್ನ ಮಾದರಿಯ ಚಾರ್ಜಿಂಗ್ ಪೋರ್ಟ್ ಇರುತ್ತಿತ್ತು, ಆದರೆ ಐಫೋನ್ 15 ಮಾದರಿಯಿಂದ C ಟೈಪ್ ಚಾರ್ಜಿಂಗ್ ಪೋರ್ಟ್ ಇರುವುದನ್ನು ನಾವು ಗಮನಿಸಬಹುದು. ಸದ್ಯ ಐಫೋನ್ 17 ಇನ್ನೇನು ಕೆಲವೇ ತಿಂಗಳಲ್ಲಿ ಮಾರುಕಟ್ಟೆಗೆ ಬರಲಿದ್ದು ನಾವು ಐಫೋನ್ 17 ನಲ್ಲಿ ವಿದೇಶದ ಚಾರ್ಜಿಂಗ್ ಪೋರ್ಟ್ ನೋಡಬಹುದಾಗಿದೆ. ನಿಜ ಹೇಳಬೇಕು ಅಂದರೆ ಐಫೋನ್ 17 ನಲ್ಲಿ ಯಾವುದೇ ಚಾರ್ಜಿಂಗ್ ಪೋರ್ಟ್ ಇರುವುದಿಲ್ಲ.

ಗ್ರಾಹಕರ ಕೈ ಸೇರಲಿದೆ ಐಫೋನ್ 17 ಏರ್
ಹೌದು, ಆಪಲ್ (Apple iPhone) ಈಗ ಐಫೋನ್ 17 ಏರ್ ಅನ್ನು ಮಾರುಕಟ್ಟೆಗೆ ಲಾಂಚ್ ಮಾಡಲು ಸಿದ್ಧತೆ ಮಾಡಿಕೊಂಡಿದೆ. ಆಪಲ್ ಐಫೋನ್ 17 ಏರ್ ನಲ್ಲಿ ಚಾರ್ಜಿಂಗ್ ಪೋರ್ಟ್ ಇಲ್ಲದೆ ಇರುವುದು ಒಂದು ವಿಶೇಷ ಆಕರ್ಷಣೆ ಕೂಡ ಆಗಿದೆ. ಇನ್ನು ಮೂಲಗಳಿಂದ ತಿಳಿದುಬಂದಿರುವ ಮಾಹಿತಿಯ ಪ್ರಾಕಾರ ಮುಂದಿನ ದಿನಗಳಲ್ಲಿ ಆಪಲ್ ಪೋರ್ಟ್ ಲೆಸ್ ಐಫೋನ್ ಗಳನ್ನೂ ಮಾರುಕಟ್ಟೆಗೆ ಲಾಂಚ್ ಮಾಡಲು ಸಿದ್ಧತೆ ಮಾಡಿಕೊಂಡಿದೆ. ಇನ್ನು ಆಪಲ್ ಈ ಪೋರ್ಟ್ ಲೆಸ್ ಐಫೋನ್ ಲಾಂಚ್ ಮಾಡಲು ಇಂದು ವಿಶೇಷ ಕಾರಣ ಕೂಡ ಇದೆ.

ಪೋರ್ಟ್ ಲೆಸ್ ಐಫೋನ್ ಬಿಡುಗಡೆ ಮಾಡಲು ಇದೆ ವಿಶೇಷ ಕಾರಣ
ಹೌದು, ಸಾಕಷ್ಟು ಐಫೋನ್ ಗಳಲ್ಲಿ ಲಿಕ್ವಿಡ್ ಡ್ಯಾಮೇಜ್ ಆಗುತ್ತಿರುವುದು ಈಗ ಆಪಲ್ ಗಮನಕ್ಕೆ ಬಂದಿದೆ. ಚಾರ್ಜಿಂಗ್ ಪೋರ್ಟ್ ಗಳಿಂದ ಐಫೋನ್ ಒಳಗೆ ನೀರು ಮತ್ತು ಧೂಳು ಪ್ರವೇಶ ಮಾಡುವ ಕಾರಣ ಮುಂದಿನ ದಿನಗಳಲ್ಲಿ ಐಫೋನ್ ನಲ್ಲಿ ಚಾರ್ಜಿಂಗ್ ಪೋರ್ಟ್ ತಗೆದುಹಾಕಲು ಈಗ ಆಪಲ್ ಮುಂದಾಗಿದೆ.

ವೈರ್ ಲೆಸ್ ಚಾರ್ಜಿಂಗ್ ಸಿಸ್ಟಮ್ ಇರುವ ಮೊಬೈಲ್ ಗಳನ್ನೂ ಮಾತ್ರ ಮುಂದಿನ ದಿನಗಳಲ್ಲಿ ಮಾರುಕಟ್ಟೆಗೆ ಲಾಂಚ್ ಮಾಡಲು ಆಪಲ್ ಮುಂದಾಗಿದೆ. ಮುಂದಿನ ದಿನಗಳಲ್ಲಿ ಬಿಡುಗಡೆಯಾಗುವ ಎಲ್ಲಾ ಮಾದರಿಯ ಐಫೋನ್ ಗಳಲ್ಲಿ ಚಾರ್ಜಿಂಗ್ ಪೋರ್ಟ್ ಇರುವುದಿಲ್ಲ. ಮುಂದಿನ ಸೆಪ್ಟೆಂಬರ್ ತಿಂಗಳಲ್ಲಿ ಐಫೋನ್ 17 ಏರ್ ಮೊಬೈಲ್ ಲಾಂಚ್ ಆಗಲಿದೆ ಮತ್ತು ಐಫೋನ್ 17 ಏರ್ ಆರಂಭಿಕ ಬೆಲೆ 80000 ರೂ ಆಗಿರಬಹುದು ಎಂದು ಅಂದಾಜು ಮಾಡಲಾಗಿದೆ.

Leave a Comment