New Traffic Rules In Karnataka: ಸದ್ಯ ರಾಜ್ಯದಲ್ಲಿ ಟ್ರಾಫಿಕ್ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ, ಹೌದು ದೇಶದಲ್ಲಿ ವಾಹನಗಳ ಸಂಖ್ಯೆ ಹೆಚಾದ ಕಾರಣ ಟ್ರಾಫಿಕ್ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದು ಹೇಳಬಹುದು. ಇದರ ನಡುವೆ ಈಗ ರಾಜ್ಯ ಸಂಚಾರಿ ಪೊಲೀಸರು ಸಂಚಾರಿ ನಿಯಮದಲ್ಲಿ ಬಹುದೊಡ್ಡ ಬದಲಾವಣೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ವಾಹನ ಸವಾರರು ಈ ತಪ್ಪು ಮಾಡಿದರೆ ದೊಡ್ಡ ಮೊತ್ತದ ಬಂಡ ಪಾವತಿ ಮಾಡಬೇಕಾಗುತ್ತದೆ. ಹೌದು, ಸಂಚಾರಿ ಪೊಲೀಸರು ಟ್ರಾಫಿಕ್ ನಿಯಮದಲ್ಲಿ (Traffic Rules) ಈಗ ಬದಲಾವಣೆ ಮಾಡಿದ್ದು ಮುಂದಿನ ದಿನಗಳಲ್ಲಿ ಸಂಚಾರಿ ಪೊಲೀಸರು ವಾಹನ ಸವಾರರಿಗೆ ದೊಡ್ಡ ಮೊತ್ತದ ದಂಡ ಹಾಕಲು ಮುಂದಾಗಿದ್ದಾರೆ.
ವಾಹನ ಸವಾರರು ಈ ತಪ್ಪು ಮಾಡಿದರೆ ಕಟ್ಟಬೇಕು ದಂಡ
* ವಾಹನ ಚಲಾಯಿಸುವವರ ಬಳಿ ಇನ್ನುಮುಂದೆ ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ಇದ್ದರೆ 5000 ರೂ ದಂಡ ಪಾವತಿ ಮಾಡಬೇಕು. ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ವಾಹನ ಚಲಾಯಿಸುವವರ ದಂಡವನ್ನು ಎರಡು ಪಟ್ಟು ಏರಿಕೆ ಮಾಡಲಾಗಿದೆ. ಅದೇ ರೀತಿಯಲ್ಲಿ ವಾಹನ ಚಲಾಯಿಸುವಾಗ ಮೊಬೈಲ್ ಬಳಸಿದರೆ 2000 ರೂ ದಂಡ ಮತ್ತು ಸೀಟ್ ಬೆಲ್ಟ್ ಧರಿಸದೇ ಇದ್ದರೆ 1000 ರೂ ದಂಡ ಪಾವತಿ ಮಾಡಬೇಕು.
* ಇನ್ನುಮುಂದೆ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಹಾಕದೆ ವಾಹನ ಚಲಾಯಿಸಿದರೆ ಅವರು 500 ರೂ ದಂಡ ಕಡ್ಡಾಯವಾಗಿ ಪಾಲನೆ ಮಾಡಬೇಕು.
* ಇನ್ನುಮುಂದೆ ದ್ವಿಚಕ್ರ ವಾಹನದ ಹಿಂಬದಿಯಲ್ಲಿ ಪ್ರಯಾಣ ಮಾಡುವವರು ಹೆಲ್ಮೆಟ್ ಧರಿಸದೇ ಇದ್ದರೆ 500 ರೂ ದಂಡ ಪಾವತಿ ಮಾಡಬೇಕು.
* ಕಾರ್, ಬೈಕ್ ಅಥವಾ ಯಾವುದೇ ವಾಹನ ಸವಾರರು ಅಜಾಗೂರುಕತೆಯಿಂದ ವಾಹನ ಚಲಾಯಿಸಿದರೆ 500 ರೂ ದಂಡ ಪಾವತಿ ಮಾಡಬೇಕು.
* ಯಾವುದೇ ವಾಹನಗಳ ಚಾಲಕರು ಅಂಬುಲೆನ್ಸ್ ಗಲಿ ದಾರಿ ನೀಡದೆ ಇದ್ದರೆ 1000 ರೂ ದಂಡ ಕಡ್ಡಾಯವಾಗಿ ಪಾಲನೆ ಮಾಡಬೇಕು.
ಮಾರ್ಚ್ 1 ರಿಂದಲೇ ದೇಶಾದ್ಯಂತ ನಿಜವಾ ಜಾರಿಗೆ ಬಂದಿದೆ
ರಾಜ್ಯ ಸಂಚಾರಿ ಪೊಲೀಸರು ಈಗ ದಂಡದ ನಿಯಮದಲ್ಲಿ ಬದಲಾವಣೆ ಮಾಡಿದ್ದಾರೆ ಮತ್ತು ಕೆಲವು ದಂಡದ ಪ್ರಮಾಣದಲ್ಲಿ ಏರಿಕೆ ಕೂಡ ಮಾಡಿದ್ದಾರೆ. ಇನ್ನುಮುಂದೆ ವಾಹನ ಸವಾರರು ಸಂಚಾರಿ ನಿಯಮ ಪಾಲನೆ ಮಾಡದೆ ಇದ್ದರೆ ಅವರು ದುಪ್ಪಟ್ಟು ದಂಡ ಪಾವತಿ ಮಾಡಬೇಕು. ಇನ್ನು ಈ ಹೊಸ ಸಂಚಾರಿ ನಿಯಮ ಮಾರ್ಚ್ 1 ತಾರೀಕಿನಿಂದಲೇ ಜಾರಿಗೆ ಬಂದಿದೆ. ಸಂಚಾರಿ ಪೊಲೀಸರು ಜಾರಿಗೆ ತಂದಿರುವ ಈ ಹೊಸ ಸಂಚಾರಿ ನಿಯಮದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.