Property Transfer: ಆಸ್ತಿ ಹಂಚಿಕೆಯ ವಿಚಾರವಾಗಿ ದೇಶದಲ್ಲಿ ಸಾಕಷ್ಟು ವ್ಯಾಜ್ಯಗಳು ನಡೆಯುತ್ತಿದೆ ಎಂದು ಹೇಳಬಹುದು. ಹೌದು, ಹೆತ್ತವರ ಆಸ್ತಿ ಮತ್ತು ಪೂರ್ವಜರ ಆಸ್ತಿ ಹಂಚಿಕೆಯ ವಿಚಾರವಾಗಿ ಸಾಕಷ್ಟು ಪ್ರಕಣಗಳು ನಡೆಯುತ್ತಿದೆ. ಇದರ ನಡುವೆ ಭಾರತ ಸರ್ಕಾರ ಈಗ ಆಸ್ತಿ ಹಂಚಿಕೆಗೆ ಸಂಬಂಧಿಸಿದಂತೆ ಮತ್ತು ಹೆತ್ತವರ ಆಸ್ತಿಯಲ್ಲಿ ಮಕ್ಕಳಿಗೆ ಸಿಗುವ ಆಸ್ತಿಗೆ ಸಂಬಂಧಿಸಿದಂತೆ ಹೊಸ ನಿಯಮ ಜಾರಿಗೆ ತಂದಿದೆ.
ಪೋಷಕರ ಸುರಕ್ಷಕೆಯ ಉದ್ದೇಶದಿಂದ ಭಾರತ ಸರ್ಕಾರ ಈಗ ಆಸ್ತಿ ಹಂಚಿಕೆಯ ನಿಯಮಗಳಲ್ಲಿ ಬಹುದೊಡ್ಡ ಬದಲಾವಣೆ ಮಾಡುವುದರ ಮೂಲಕ ಎಲ್ಲಾ ಪೋಷಕರಿಗೆ ಗುಡ್ ನ್ಯೂಸ್ ನೀಡಿದೆ ಎಂದು ಹೇಳಬಹುದು. ಹೌದು, ಇನ್ನುಮುಂದೆ ಇಂತಹ ಮಕ್ಕಳು ಹೆತ್ತವರ ಆಸ್ತಿಯಲ್ಲಿ ಯಾವುದೇ ಪಾಲು ತಗೆದುಕೊಳ್ಳಲು ಸಾಧ್ಯವಿಲ್ಲ ಮತ್ತು ಇಂತಹ ಮಕ್ಕಳಿಗೆ ಪೋಷಕರ ಆಸ್ತಿಯಲ್ಲಿ ಬಿಡಿಗಾಸು ಕೂಡ ಸಿಗಬಾರದು ಎಂದು ಭಾರತ ಸರ್ಕಾರ ಈ ಮೂಲಕ ಆದೇಶ ಹೊರಡಿಸಿದೆ.
ಹೆತ್ತವರ ಆಸ್ತಿಯಲ್ಲಿ ಈ ಮಕ್ಕಳಿಗೆ ಯಾವುದೇ ಪಾಲಿಲ್ಲ
ಹೌದು, ಸಾಕಷ್ಟು ಮಕ್ಕಳು ತಮ್ಮ ಹೆತ್ತವರ ಆಸ್ತಿಯಲ್ಲಿ ಸಮನಾದ ಪಾಲು ಪಡೆದುಕೊಂಡು ನಂತರ ಹೆತ್ತವರವನ್ನು ಅನಾಥ ಆಶ್ರಮ ಅಥವಾ ವೃದ್ಧಾಶ್ರಮಕ್ಕೆ ಸೇರಿಸಿ ತಮ್ಮ ಕೈತೊಳೆದುಕೊಳ್ಳುತ್ತಾರೆ. ಇನ್ನು ಸಾಕಷ್ಟು ಮಕ್ಕಳಿಗೆ ಹೆತ್ತವರ ಆಸ್ತಿಯಲ್ಲಿ ಪಾಲು ಬೇಕು, ಆದರೆ ಹೆತ್ತವರನ್ನು ನೋಡಿಕೊಳ್ಳುವುದು ಅವರಿಗೆ ಇಷ್ಟ ಇರುವುದಿಲ್ಲ. ಅದೇ ರೀತಿಯಲ್ಲಿ ಇನ್ನೂ ಕೆಲವು ಮಕ್ಕಳು ಹೆತ್ತವರ ಆಸ್ತಿಯಲ್ಲಿ ಪಾಲು ಪಡೆದುಕೊಂಡ ನಂತರ ಹೆತ್ತವರ ಯಾವುದೇ ಖರ್ಚು ಕೂಡ ನೋಡಿಕೊಳ್ಳುವುದಿಲ್ಲ ಮತ್ತು ಅವರ ಔಷಧಿಗೂ ಕೂಡ ಹಣ ಕೊಡುವುದಿಲ್ಲ.
ಸದ್ಯ ಇಂತಹ ಹಲವು ಪ್ರಕರಣಗಳು ದೇಶದಲ್ಲಿ ನಡೆಯುತ್ತಿರುವ ಕಾರಣ ಭಾರತ ಸರ್ಕಾರ ಈಗ ಹೆತ್ತವರ ಆಸ್ತಿಯಲ್ಲಿ ಮಕ್ಕಳು ಪಾಲು ಪಡೆದುಕೊಳ್ಳುವ ವಿಚಾರವಾಗಿ ಹೊಸ ನಿಯಮ ಜಾರಿಗೆ ತಂದಿದೆ. ಇನ್ನುಮುಂದೆ ಮಕ್ಕಳು ಹೆತ್ತವರಿಂದ ಆಸ್ತಿಯಲ್ಲಿ ಪಾಲು ಪಡೆದುಕೊಂಡು ಅವರನ್ನು ಸರಿಯಾಗಿ ನೋಡಿಕೊಳ್ಳದೆ ಇದ್ದರೆ ಆ ಆಸ್ತಿಯನ್ನು ಮತ್ತೆ ವಾಪಾಸ್ ಹೆತ್ತವರಿಗೆ ವರ್ಗಾವಣೆ ಮಾಡಲಾಗುತ್ತದೆ. ಇನ್ನು ಹೊಸ ನಿಯಮಗಳ ಪ್ರಕಾರ, ಇನ್ನುಮುಂದೆ ಹೆತ್ತವರು ಆಸ್ತಿ ಮಕ್ಕಳಿಗೆ ಕೊಟ್ಟ ನಂತರ ಮಕ್ಕಳು ಹೆತ್ತವರನ್ನು ನೋಡಿಕೊಳ್ಳದೆ ಇದ್ದರೆ ಹೆತ್ತವರು ಮಕ್ಕಳಿಗೆ ಕೊಟ್ಟ ಆಸ್ತಿ ದಾನಪತ್ರವನ್ನು ರದ್ದು ಮಾಡುವ ಹಕ್ಕು ಹೊಂದಿರುತ್ತಾರೆ.
ಆಸ್ತಿ ದಾನಪತ್ರ ರದ್ದು ಮಾಡುವ ಹಕ್ಕು
ಹೌದು, ಭಾರತ ಸರ್ಕಾರದ ಹೊಸ ನಿಯಮದ ಪ್ರಕಾರ ಇನ್ನುಮುಂದೆ ಹೆತ್ತವರು ಅನಿವಾರ್ಯ ಪರಿಸ್ಥಿತಿಯಲ್ಲಿ ಮಕ್ಕಳಿಗೆ ದಾನಕೊಟ್ಟ ಆಸ್ತಿ ಪತ್ರವನ್ನು ರದ್ದುಮಾಡುವ ಸಂಪೂರ್ಣ ಅಧಿಕಾರ ಹೊಂದಿರುತ್ತಾರೆ. ಪೋಷಕರ ಮತ್ತು ತಂದೆ ತಾಯಿಯ ಸುರಕ್ಷತೆ ಮತ್ತು ಅವರ ಮುಂದಿನ ಭವಿಷ್ಯದ ಉದ್ದೇಶದಿಂದ ಭಾರತ ಸರ್ಕಾರ ಈ ನಿಯಮವನ್ನು ದೇಶದಲ್ಲಿ ಜಾರಿಗೆ ತಂದಿದೆ. ಹೆತ್ತವರ ಆಸ್ತಿ ಹಂಚಿಕೆಗೆ ಸಂಬಂಧಿಸಿದಂತೆ ಜಾರಿಗೆ ಬಂದಿರುವ ಈ ಹೊಸ ನಿಯಮ ಸಾಕಷ್ಟು ಜನರ ಸಂತಸಕ್ಕೆ ಕೂಡ ಕಾರಣವಾಗಿದೆ ಎಂದು ಹೇಳಬಹುದು.