Sunita Williams Returns: ಸುನೀತಾ ವಿಲಿಯಮ್ಸ್ (Sunita Williams) ಜೊತೆ ಇನ್ನೊಬ್ಬರು ಗಗನಯಾತ್ರಿ ಕೇವಲ 8 ದಿನಗಳ ಕಾರ್ಯಾಚರಣೆಗಾಗಿ ಬಾಹ್ಯಾಕಾಶಕ್ಕೆ ಹೋಗಿದ್ದು ನಿಮಗೆಲ್ಲ ತಿಳಿದೇ ಇದೆ. ಹೌದು ಸುನೀತಾ ವಿಲಿಯಮ್ಸ್ ಅವರು ತಮ್ಮ ಸಹಪಾಠಿ ಗಗನಯಾತ್ರಿಯಾದ ಬುಕ್ ವಿಲ್ಮೊರ್ (butch wilmore) ಅವರ ಜೊತೆ ಗಗನಯಾನ ಕೈಗೊಂಡಿದ್ದರು. ಗಗನಯಾನ ಕೈಗೊಂಡು ಮೊದಲ ಎರಡು ದಿನ ಸರಿಯಾಗಿ ಇತ್ತು, ಆದರೆ ನಂತರದ ದಿನಗಳಲ್ಲಿ ಅವರಿಗೆ ಭೂಮಿಗೆ ಬರಲು ಸಾಧ್ಯವಾಗಲೇ ಇಲ್ಲ, 8 ದಿನಕ್ಕೆಂದು ಗಗನಯಾನ ಕೈಗೊಂಡವರು 9 ತಿಂಗಳ ನಂತರ ಈಗ ಭೂಮಿಗೆ ಬರುತ್ತಿದ್ದಾರೆ ಎಂದು ಹೇಳಬಹುದು.
ಹೌದು 8 ದಿನಗಳ ಕೆಲಸಕ್ಕೆ ಹೋದ ಸುನೀತಾ ವಿಲಿಯಮ್ಸ್ ಅವರು 9 ತಿಂಗಳುಗಳ ಕಾಲ ಬಾಹ್ಯಾಕಾಶದಲ್ಲೇ ಜೀವನ ಮಾಡಿದ್ದಾರೆ. ಇದರ ನಡುವೆ ಸುನೀತಾ ವಿಲಿಯಮ್ಸ್ ಅವರು 9 ತಿಂಗಳ ಕೆಲಸ ಮಾಡಿದ್ದಕ್ಕೆ ಎಷ್ಟು ಸಂಬಳ ಪಡೆದಿರಬಹುದು ಎಂದು ಸಾಕಷ್ಟು ಪ್ರಶ್ನೆಯನ್ನು ಕೂಡ ಕೇಳುತ್ತಿದ್ದಾರೆ. ಹಾಗಾದರೆ 9 ತಿಂಗಳುಗಳ ಕಾಲ ಕೆಲಸ ಮಾಡಿರುವ ಸುನೀತಾ ವಿಲಿಯಮ್ಸ್ ಅವರು ಪಡೆಯುವ ಸಂಭಾವನೆ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಕಳೆದ ವರ್ಷ ಬಾಹ್ಯಾಕಾಶಕ್ಕೆ ಹೋಗಿದ್ದ ಸುನೀತಾ ವಿಲಿಯಮ್ಸ್
ಸುನೀತಾ ವಿಲಿಯಮ್ಸ್ ಅವರು ತಮ್ಮ ಸಹಪಾಠಿ ಗಗನಯಾತ್ರಿ ಜೊತೆ ಕಳೆದ ವರ್ಷ ಬಾಹ್ಯಾಕಾಶ ಯಾನ ಕೈಗೊಂಡಿದ್ದರು. ಕೇವಲ 8 ದಿನಗಳ ಗಗನಯಾನ ಕೈಗೊಂಡಿದ್ದ ಸುನೀತಾ ವಿಲಿಯಮ್ಸ್ ಮತ್ತು ಇನ್ನೊಬ್ಬರು ಗಗನಯಾತ್ರಿ ನಂತರ ದಿನಗಳಲ್ಲಿ ಭೂಮಿಗೆ ಬರುವುದು ಸಾಧ್ಯವಾಗುವುದಿಲ್ಲ. ಸದ್ಯ ಸತತ ಪ್ರಯತ್ನದ ನಂತರ ಸುನೀತಾ ವಿಲಿಯಮ್ಸ್ ಅವರು ಮತ್ತೆ ಭೂಮಿಗೆ ಬರುತ್ತಿದ್ದಾರೆ. ಮಾರ್ಚ್ 19 ನೇ ತಾರೀಕಿನಂದು ಸುನೀತಾ ವಿಲಿಯಮ್ಸ್ ಅವರು ಭೂಮಿಗೆ ಬರಬಹುದು ಎಂದು ಹೇಳಲಾಗುತ್ತಿದೆ.
ಸುನೀತಾ ವಿಲಿಯಮ್ಸ್ ಪಡೆಯುವ ಒಟ್ಟು ಸಂಬಳ ಎಷ್ಟು
ನಾಸಾದ ಗಹನಯಾತ್ರಿಗಳು ಸರ್ಕಾರೀ ನೌಕರರು ಆಗಿದ್ದು ಅವರಿಗೆ ಯಾವುದೇ ಹೆಚ್ಚಿನ ವೇತನ ನೀಡಲಾಗುವುದಿಲ್ಲ. ಇನ್ನು ಗಗನಯಾತ್ರಿಗಳು ಸರ್ಕಾರೀ ನೌಕರರು ಆಗಿರುವ ಕಾರಣ ಅವರಿಗೆ ಹಿರಿಯ ಸರ್ಕಾರೀ ಅಧಿಕಾರಿಗಳಿಗೆ ನೀಡಲಾಗುವ GS -15 ವೇತನದ ಅಡಿಯಲ್ಲಿ ಅವರು ಬರುತ್ತಾರೆ.
ಇನ್ನು ಲೆಕ್ಕಾಚಾರದ ಪ್ರಕಾರ, ಸರ್ಕಾರೀ ನೌಕರರ ವಾರ್ಷಿಕ ವೇತನ 125133 -162672 ಡಾಲರ್ ಆಗಿದೆ, ಅಂದರೆ ಭಾರತದ ರೂಪಾಯಿಯಲ್ಲಿ 1.08 ಕೋಟಿ ಯಿಂದ 1.42 ಕೋಟಿ ರೂಪಾಯಿ ಆಗಿದೆ ಇನ್ನು ಸುನೀತಾ ವಿಲಿಯಮ್ಸ್ ಅವರು ಸುಮಾರು 9 ತಿಂಗಳುಗಳ ಕಾಲ ಗಗನಯಾತ್ರೆ ಮಾಡಿದ್ದಾರೆ ಮತ್ತು ಅವರು ಒಟ್ಟಾಗಿ ಸರಿಸುಮಾರು 81 ಲಕ್ಷ ರೂಪಾಯಿಯಿಂದ 1.05 ಕೋಟಿ ರೂಪಾಯಿ ಸಂಭಾವನೆ ಪಡೆದುಕೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆ.
ಸ್ಪೇಸ್ ಎಕ್ಸ್ ಫಾಲ್ಕನ್ ರಾಕೆಟ್ ಮೂಲಕ ಬರುತ್ತಾರೆ ಸುನೀತಾ ವಿಲಿಯಮ್ಸ್
ಹೌದು, ಸುನೀತಾ ವಿಲಿಯಮ್ಸ್ ಅವರು ನಾಸಾ ಕಳುಹಿಸಿದ ಸ್ಪೇಸ್ ಎಕ್ಸ್ ಫಾಲ್ಕನ್ ರಾಕೆಟ್ ಮೂಲಕ ಭೂಮಿಗೆ ಮರಳುತ್ತಿದ್ದಾರೆ. ಇನ್ನು ಈ ರಾಕೆಟ್ ಕೇವಲ 3 ಘಂಟೆಯಲ್ಲಿ 400 ಕಿಲೋಮೀಟರ್ ಚಲಸುತ್ತದೆ ಮತ್ತು ಈ ರಾಕೆಟ್ ಅಟ್ಲಾಂಟಿಕ್ ಸಾಗರ ಅಥವಾ ಮೆಕ್ಸಿಕೋ ಕೊಲ್ಲಿಯಲ್ಲಿ ಬೀಳಲಿದೆ. ಈ ರಾಕೆಟ್ ಭೂಮಿ ಮರಳುವುದು ಅಷ್ಟು ಸುಲಭ ಕೂಡ ಅಲ್ಲ ಮತ್ತು ಸ್ವಾಪ ಎಡವಟ್ಟಾದರೂ ದೊಡ್ಡ ದುರಂತ ಸಂಭವಿಸಬಹುದು.