Anna Bhagya Scheme Latest Update: ಕರ್ನಾಟಕ ರಾಜ್ಯ ಸರ್ಕಾರದ ಬಹುದೊಡ್ಡ ಯೋಜನೆಯಾದ ಅನ್ನಭಾಗ್ಯ ಯೋಜನೆಯ (Anna Bhagya Scheme) ಅಡಿಯಲ್ಲಿ ಫಲಾನುಭವಿಗಳಿಗೆ ಪ್ರತಿ ತಿಂಗಳು ಐದು ಕೆಜಿ ಅಕ್ಕಿ ಮತ್ತು ಐದು ಅಕ್ಕಿಯ ಬದಲಾಗಿ ಹಣ ನೀಡಲಾಗುತ್ತಿದೆ. ಇದರ ನಡುವೆ ರಾಜ್ಯ ಸರ್ಕಾರ ಕೇಳದ ಎರಡು ತಿಂಗಳಿಂದ ಫಲಾನುಭವಿಗಳ ಖಾತೆಗೆ ಜಮಾ ಆಗಿಲ್ಲ. ಹೌದು ರಾಜ್ಯ ಸರ್ಕಾರ ಫೆಬ್ರವರಿ ತಿಂಗಳ ಅನ್ನಭಾಗ್ಯ ಯೋಜನೆಯ ಹಣ ಇನ್ನೂ ಕೂಡ ಯಾವುದೇ ಫಲಾನುಭವಿಗಳ ಖಾತೆಗೆ ಜಮಾ ಆಗಿಲ್ಲ.
ಇನ್ನು ಮಾರ್ಚ್ ತಿಂಗಳ ಆರಂಭದಲ್ಲಿ ರಾಜ್ಯ ಸರ್ಕಾರ ಫ್ರಬ್ರವರಿ ತಿಂಗಳ ಹಣ ಮತ್ತು ಮಾರ್ಚ್ ತಿಂಗಳ ಹಣದ ಬದಲಾಗಿ ಫಲಾನುಭವಿಗಳಿಗೆ ಅಕ್ಕಿ ನೀಡುವುದಾಗಿ ಘೋಷಣೆ ಮಾಡಿತ್ತು. ಅದೇ ರೀತಿಯಲ್ಲಿ ಮಾರ್ಚ್ ತಿಂಗಳಲ್ಲಿ BPL ಮತ್ತು ಅಂತ್ಯೋದಯ ರೇಷನ್ ಕಾರ್ಡ್ ಹೊಂದಿರುವವರು 15 ಕೆಜಿ ಅಕ್ಕಿ ಪಡೆದುಕೊಳ್ಳಲಿದ್ದಾರೆ ಎಂದು ರಾಜ್ಯ ಘೋಷಣೆ ಕೊಡೋಲಾ ಮಾಡಿತ್ತು.
ಫಲಾನುಭವಿಗಳಿಗೆ ಅಕಿನೂ ಇಲ್ಲ ಹಣನೂ ಇಲ್ಲ
ಹೌದು, ಸರ್ಕಾರ ಘೋಷಣೆ ಮಾಡಿದಂತೆ BPL ಕಾರ್ಡ್ ಮತ್ತು ಅಂತ್ಯೋದಯ ಕಾರ್ಡ್ ಇದ್ದವರಿಗೆ 15 ಕೆಜಿ ಅಕ್ಕಿ ಕೊಡಬೇಕಾಗಿತ್ತು, ಆದರೆ ಇತ್ತ ಕಡೆಯಲ್ಲಿ ಕೆಲವು ಫಲಾನುಭವಿಗಳಿಗೆ ಅಕ್ಕಿ ಮತ್ತು ಹಣ ಎರಡು ಸಿಗುತ್ತಿಲ್ಲ. ಹೌದು, ರಾಜ್ಯ ಸರ್ಕಾರದ ಬಳಿ ಅಷ್ಟೊಂದು ಅಕ್ಕಿ ಇಲ್ಲದ ಕಾರಣ ಪ್ರತಿ ಫಲಾನುಭವಿಗಳಿಗೆ 15 ಕೆಜಿ ಅಕ್ಕಿ ಕೊಡಲು ಸರ್ಕಾರದ ಬಳಿ ಸಾಧ್ಯವಾಗುತ್ತಿಲ್ಲ. ಎಲ್ಲಾ ನ್ಯಾಯಬೆಲೆ ಅಂಗಡಿಯಲ್ಲಿ ಔಟ್ ಆಫ್ ಸ್ಟಾಕ್ ಅನ್ನುವ ಬೋರ್ಡ್ ಹಾಕಲಾಗಿದೆ.
ನ್ಯಾಯಬೆಲೆ ಅಂಗಡಿಯಲ್ಲಿ ಔಟ್ ಆಫ್ ಸ್ಟಾಕ್
ರಾಜ್ಯ ಸರ್ಕಾರ ಪ್ರತಿ ಫಲಾನುಭವಿಗೆ 15 ಕೆಜಿ ಅಕ್ಕಿ ಕೊಡುವುದಾಗಿ ಘೋಷಣೆ ಮಾಡಿತ್ತು, ಆದರೆ ಈಗ ರಾಜ್ಯ ಸರ್ಕಾರದ ಬಳಿ ಅಷ್ಟೊಂದು ಅಕ್ಕಿ ಇಲ್ಲದ ಕಾರಣ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಔಟ್ ಆಫ್ ಸ್ಟಾಕ್ ಅನ್ನುವ ಬೋರ್ಡ್ ಹಾಕಲಾಗಿದೆ. ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ಕಿ ಇಲ್ಲದ ಕಾರಣ BPL ಕಾರ್ಡ್ ಇದ್ದವರಿಗೆ 15 ಕೆಜಿ ಅಕ್ಕಿ ಅಲ್ಲ 5 ಕೆಜಿ ಅಕ್ಕಿ ಕೂಡ ಸಿಗುತ್ತಿಲ್ಲ. ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ಕಿ ಇಲ್ಲದ ಕಾರಣ ಜನರಿಗೆ ಅಕ್ಕಿನೂ ಸಿಗುತ್ತಿಲ್ಲ ಮತ್ತು ಇತ್ತ ಕಡೆ ಖಾತೆಗೆ ಹಣ ಕೂಡ ಬರುತ್ತಿಲ್ಲ.
ಸರ್ಕಾರದ ಬಳಿ ಬೇಸರ ಹೊರಹಾಕಿದ ಜನರು
ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ಕಿ ಇಲ್ಲದ ಕಾರಣ BPL ಕಾರ್ಡ್ ಮತ್ತು ಅಂತ್ಯೋದಯ ಕಾರ್ಡ್ ಇದ್ದವರು ಸರ್ಕಾರದ ಬಳಿ ಬೇಸರವನ್ನು ಹೊರಹಾಕಿದ್ದಾರೆ. ನಮಗೆ ಅಕ್ಕಿ ಕೊಡಿ ಮತ್ತು ಅಕ್ಕಿ ಇಲ್ಲದೆ ಇದ್ದರೆ ಅದರ ಬದಲು ಹಣ ಕೊಡಿ ಎಂದು ಸರ್ಕಾರದ ಬಳಿ ಮನವಿ ಮಾಡಿಕೊಳ್ಳುತ್ತಿದ್ದಾರೆ. ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಹಲವು ತಿಂಗಳಿಂದ ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡಲಾಗುತ್ತಿತ್ತು, ಆದರೆ ಈ ಮಾರ್ಚ್ ತಿಂಗಳಲ್ಲಿ ಹಣದ ಬದಲು ಅಕ್ಕಿ ಕೊಡುವಂತೆ ಆದೇಶ ಹೊರಡಿಸಿದ್ದ ಸರ್ಕಾರ ಈಗ ಆ ಕೆಲಸ ಕೂಡ ಸರಿಯಾಗಿ ಮಾಡುತ್ತಿಲ್ಲ.