Chinese Garlic Indentification: ಸಾಮಾನ್ಯವಾಗಿ ಬಹುತೇಕ ಯಾವುದೇ ಆಹಾರ ತಯಾರಿಸಲು ಬೆಳ್ಳುಳ್ಳಿ ಬಹಳ ಅವಶ್ಯಕ ಎಂದು ಹೇಳಬಹುದು. ಹೌದು, ಬೆಳ್ಳುಳ್ಳಿ ಇಲ್ಲದೆ ಬಹುತೇಕ ಯಾವುದೇ ಆಹಾರ ತಯಾರಿಸಲು ಸಾಧ್ಯವಿಲ್ಲ. ಇನ್ನು ಬೆಳ್ಳುಳ್ಳಿ ಆಹಾರ ತಯಾರಿಸಲು ಮಾತ್ರವಲ್ಲದೆ ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಬೆಳ್ಳುಳ್ಳಿ ಕೂಡ ಒಂದು ರೀತಿಯಲ್ಲಿ ಸಹಕಾರಿ ಆಗಿದೆ. ಮಾನವನ ಹೃದಯ ಆರೋಗ್ಯ ಕಾಪಾಡುವಲ್ಲಿ ಬೆಳ್ಳುಳ್ಳಿ ಪ್ರಮುಖವಾದ ಪಾತ್ರ ವಹಿಸುತ್ತದೆ. ಇದರ ನಡುವೆ ದೇಶದಲ್ಲಿ ಚೈನೀಸ್ ಬೆಳ್ಳುಳ್ಳಿ ಬಂದಿದ್ದು ಇದು ಮಾನವನ ಆರೋಗ್ಯದ ಮೇಲೆ ತುಂಬಾ ಪರಿಣಾಮ ಬೀರುತ್ತಿದೆ.
ಮಾರುಕಟ್ಟೆ ಬಂತು ಚೈನೀಸ್ ಬೆಳ್ಳುಳ್ಳಿ
ಮಾರುಕಟ್ಟೆಯಲ್ಲಿ ಚೈನೀಸ್ ವಸ್ತುಗಳು ಸಾಕಷ್ಟು ಇದೆ. ಮೊಬೈಲ್, ಆಟಿಕೆ, ಬಟ್ಟೆ ಹೀಗೆ ಹಲವು ಚೈನೀಸ್ ವಸ್ತುಗಳನ್ನು ನಾವು ನೋಡಬಹುದು. ಹೌದು, ಮಾರುಕಟ್ಟೆಯಲ್ಲಿ ಚೈನೀಸ್ ವಸ್ತುಗಳ ಹಾವಳಿ ಬಹಳ ಹೆಚ್ಚಾಗಿದೆ. ಇದರ ನಡುವೆ ಈಗ ಮಾರುಕಟ್ಟೆಗೆ ಚೈನೀಸ್ ಬೆಳ್ಳುಳ್ಳಿ ಬಂದಿದ್ದು ಇದು ಮಾನವನ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತಿದೆ. ಈ ಚೈನೀಸ್ ಬೆಳ್ಳುಳ್ಳಿ ನೋಡಲು ನಮ್ಮ ದೇಶದಕೆಲ್ಲಿ ಬೆಳೆಯುವ ಬೆಳ್ಳುಳ್ಳಿಯ ಹಾಗೆ ಇದ್ದು ಇದನ್ನು ಗುರುತಿಸುವುದು ಬಹಳ ಕಷ್ಟ ಎಂದು ಹೇಳಬಹುದು. ಹಾಗಾದರೆ ಚೈನೀಸ್ ಬೆಳ್ಳುಳ್ಳಿ ಹೇಗಿದೆ ಮತ್ತು ಅದನ್ನು ಗುರುತಿಸುವುದು ಹೇಗೆ ಅನ್ನುವುದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.
ಚೈನೀಸ್ ಬೆಳ್ಳುಳ್ಳಿ ಗುರುತಿಸುವುದು ಹೇಗೆ ನೋಡಿ
ಬೆಳ್ಳುಳ್ಳಿಯಲ್ಲಿ ವಿಟಮಿನ್ ಸಿ, ವಿಟಮಿನ್ ಬಿ 6, ಮ್ಯಾಂಗನೀಸ್ ಮತ್ತು ಸೆಲೆನಿಯಮ್ ಸೇರಿದಂತೆ ಹಲವು ರೋಗ ನಿರೋಧಕ ಅಂಶ ಇದೆ. ಸದ್ಯ ಮಾರುಕಟ್ಟೆಯಲ್ಲಿ ವಿಷಕಾರಿ ಅಂಶವಿರುವ ಚೈನೀಸ್ ಬೆಳ್ಳುಳ್ಳಿ ಕಾಲಿಟ್ಟಿದೆ. ಹೌದು, 2014 ರಲ್ಲಿ ಭಾರತದಲ್ಲಿ ನಿಷೇಧವಾದ ಚೈನೀಸ್ ಬೆಳ್ಳುಳ್ಳಿಯನ್ನು ಈಗ ಮತ್ತೆ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ.
ಇನ್ನು ಈ ಚೈನೀಸ್ ಬೆಳ್ಳುಳ್ಳಿನಲ್ಲಿ ಹೆಚ್ಚಿನ ಪ್ರಮಾಣದ ಕೀಟನಾಶಕಗಳು ಇದ್ದು ಇದು ಮಾನವನ ಆರೋಗ್ಯದ ಮೇಲೆ ಬಹಳ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ. ಸಾಮಾನ್ಯ ಬೆಳ್ಳುಳ್ಳಿಗಿಂತ ಈ ಚೈನೀಸ್ ಬಹಳ ವಿಭಿನ್ನವಾಗಿ ಇರುತ್ತದೆ. ಇನ್ನು ಚೈನೀಸ್ ಬೆಳ್ಳುಳ್ಳಿನ ಎಸಳುಗಳು ಬಹಳ ದೊಡ್ಡದಾಗಿರುತ್ತದೆ ಮತ್ತು ಈ ಚೈನೀಸ್ ಬೆಳ್ಳುಳ್ಳಿ ಮೇಲೆ ನೀಲಿ ಮತ್ತು ನೇರಳೆ ಬಣ್ಣದ ಗೆರೆಗಳು ಇರುವುದನ್ನು ಕೂಡ ನಾವು ನೋಡಬಹುದು. ಈ ಬೆಳ್ಳುಳ್ಳಿ ಗಾತ್ರ ಮತ್ತು ಈ ರೀತಿಯ ಗೆರೆಗಳ ಆಧಾರದ ಮೇಲೆ ಸುಲಭವಾಗಿ ಚೈನೀಸ್ ಬೆಳ್ಳುಳ್ಳಿ ಗುರುತಿಸಬಹುದು.
ಚೈನೀಸ್ ಬೆಳ್ಳುಳ್ಳಿ ಮಾನವನ ಆರೋಗ್ಯದ ಮೇಲೆ ಯಾವ ಪರಿಣಾಮ ಬೀರುತ್ತೆ
ಈ ಚೈನೀಸ್ ಬೆಳ್ಳುಳ್ಳಿ ಮಾನವನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದು ಮಾನವನ ನರಮಂಡಲದ ಮೇಲೆ ಮತ್ತು ಶ್ವಾಸಕೋಶದ ಮೇಲೆ ಕೆಟ್ಟ ಪರಿಣಾಮ ಬಿರುದು ಮಾತ್ರವಲ್ಲದೆ ಇದು ಮಾನವನನ್ನು ಕೋಮಾಗೆ ಹೋಗುವಂತೆ ಮಾಡುತ್ತದೆ. ಈ ಚೈನೀಸ್ ಬೆಳ್ಳುಳ್ಳಿ ಮಾನವನ ಚರ್ಮ ಮತ್ತು ಕಣ್ಣಿನ ಮೇಲೆ ಕೆಟ್ಟ ಪರಿಣಾಮ ಬಿರುವುದು ಮಾತ್ರವಲ್ಲದೆ ಉಸಿರಾಟದ ಸಮಸ್ಯೆಗೂ ಕೂಡ ಕಾರಣವಾಗಬಹುದು. ಇನ್ನು ಈ ಬೆಳ್ಳುಳ್ಳಿ ಮಿಥೈಲ್ ಮತ್ತು ಬ್ರೋಮೈಡ್ ಒಳಗೊಂಡಿರುವುದರಿಂದ ಇದು ಮಾನವನ ನಾರಮಂಡಲದ ಮೇಲೆ ಬಹಳ ಕೆಟ್ಟ ಪರಿಣಾಮ ಬೀರಿ ಮಾನವನ ರಕ್ತದ ಒತ್ತಡ ಹೆಚ್ಚಾಗುವಂತೆ ಅಥವಾ ಒಮ್ಮೆಲೇ ಕಡಿಮೆ ಆಗುವಂತೆ ಮಾಡುತ್ತದೆ.