SSLC Exam 2025: SSLC ಪರೀಕ್ಷೆ ಬರೆಯುವ ಮಕ್ಕಳಿಗೆ ಹೊಸ ರೂಲ್ಸ್, ಈ ದಾಖಲೆ ಇಲ್ಲದಿದ್ದರೆ ಪ್ರವೇಶ ಬಂದ್

SSLC Exam Rules: ರಾಜ್ಯಾದ್ಯಂತ ಎಲ್ಲಾ ಮಕ್ಕಳು ಈಗ SSLC ಪರೀಕ್ಷೆಯ (SSLC Examinations 2025) ಸಿದ್ದತೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಎಂದು ಹೇಳಬಹುದು. ಹೌದು, ಮಾರ್ಚ್ 21 ನೇ ತಾರೀಕಿನಿಂದ SSLC ಪರೀಕ್ಷೆ ಆರಂಭ ಆಗಲಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಪ್ರಸ್ತುತ ವರ್ಷದಲ್ಲಿ SSLC ಪರೀಕ್ಷೆ ಬರೆಯುವ ಮಕ್ಕಳ ಸಂಖ್ಯೆ ಅಧಿಕವಾಗಿದೆ. ರಾಜ್ಯದಲ್ಲಿ SSLC ಪರೀಕ್ಷೆಗೆ ಪೂರ್ವಸಿದ್ಧತೆ ಕೂಡ ಮಾಡಿಕೊಳ್ಳಲಾಗುತ್ತಿದೆ.

WhatsApp Group Join Now
Telegram Group Join Now

ಇದರ ನಡುವೆ ರಾಜ್ಯ ಶಿಕ್ಷಣ ಇಲಾಖೆ SSLC ಪರೀಕ್ಷೆ ಬರೆಯುವ ಎಲ್ಲಾ ಮಕ್ಕಳಿಗೆ ಕೆಲವು ನಿಯಮಗಳನ್ನು ಕೂಡ ಬಿಡುಗಡೆ ಮಾಡಿದೆ. ಬರಿ ಮಕ್ಕಳಿಗೆ ಮಾತ್ರವಲ್ಲದೆ ಅಧ್ಯಾಪಕರಿಗೂ ಕೂಡ ನಿಯಮ ಬಿಡುಗಡೆ ಮಾಡಲಾಗಿದೆ. ಹಾಗಾದರೆ SSLC ಪರೀಕ್ಷೆಗೆ ಸಂಬಂಧಿಸಿದಂತೆ ರಾಜ್ಯ ಶಿಕ್ಷಣ ಇಲಾಖೆ ನಿಗದಿ ಪಡಿಸಲಾಗಿರುವ ನಿಯಮಗಳು ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಮಾರ್ಚ್ 21 ರಿಂದ ಏಪ್ರಿಲ್ 4 ರ ತನಕ SSLC ಪರೀಕ್ಷೆ
ಹೌದು, ಮಾರ್ಚ್ 21 ನೇ ತಾರೀಕಿನಿಂದ ಏಪ್ರಿಲ್ 4 ರಿಂದ SSLC ಪರೀಕ್ಷೆ ಆರಂಭ ಅಗಲಿದ್ದು ಮಕ್ಕಳು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇನ್ನು SSLC ಪರೀಕ್ಷೆ ನಡೆಯುವ ಪರೀಕ್ಷಾ ಕೇಂದ್ರದ 200 ಮೀಟರ್ ತನಕ ಕೆಲವು ಸುರಕ್ಷತಾ ಕ್ರಮ ಕೂಡ ಕೈಗೊಳ್ಳಲಾಗಿದೆ. ಹಾಗಾದರೆ SSLC ಪರೀಕ್ಷಾ ಕೇಂದ್ರದಲ್ಲಿ ಜಾರಿಗೆ ತರಲಾಗಿರುವ ನಿಯಮಗಳು ಏನೇನು ಅನ್ನುವ ಪಟ್ಟಿ ಇಲ್ಲಿದೆ.

* SSLC ಪರೀಕ್ಷಾ ಕೇಂದ್ರದ 200 ಮೀಟರ್ ದೂರ ತನಕ ಸುರಕ್ಷತಾ ಕ್ರಮ ಕೈಗೊಳ್ಳಬೇಕು.

* SSLC ಕೇಂದ್ರದ 200 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಜೆರಾಕ್ಸ್ ಅಂಗಡಿ ತೆರೆಯದಂತೆ ಆದೇಶ ಹೊರಡಿಸಲಾಗಿದೆ.

* ಈ ಬಾರಿ 8,96,447 ಜನರು SSLC ಪರೀಕ್ಷೆ ಬರೆಯುತ್ತಿದ್ದು ಯಾರೂ ಕೂಡ ಪರೀಕ್ಷಾ ಕೊಠಡಿಗೆ ಸ್ಮಾರ್ಟ್ ವಾಚ್ ಧರಿಸಿಕೊಂಡು ಬರುವಂತಿಲ್ಲ.

* ಬರಿ ಪರೀಕ್ಷೆ ಬರೆಯುವವರು ಮಾತ್ರವಲ್ಲದೆ ಶಿಕ್ಷಕರು ಕೂಡ ಸ್ಮಾರ್ಟ್ ವಾಚ್ ಧರಿಸುವಂತಿಲ್ಲ.

* ಪರೀಕ್ಷಾ ಕೇಂದ್ರ ಬರುವ ಶಿಕ್ಷಕರು ಕ್ಯಾಮೆರಾ ಇರುವ ಮೊಬೈಲ್ ಅನ್ನು ಪರೀಕ್ಷಾ ಕೇಂದ್ರಕ್ಕೆ ತರುವಂತಿಲ್ಲ.

* ವಿದ್ಯಾರ್ಥಿಗಳು ಸರಳ ಕಾಲ್ಕುಲೇಟರ್ ಮಾತ್ರ ಬಳಕೆ ಮಾಡಬೇಕು ಮತ್ತು ಡಿಜಿಟಲ್ ಕಾಲ್ಕುಲೇಟರ್ ಉಪಯೋಗ ಮಾಡುವಂತಿಲ್ಲ.

* ಪರೀಕ್ಷಾ ಕೊಠಡಿಯಲ್ಲಿ ಎಲೆಕ್ಟ್ರಿಕ್ ಉಪಕರಣಗಳನ್ನು ನಿಷೇಧ ಮಾಡಲಾಗಿದೆ.

* ಪರೀಕ್ಷೆ ಆರಂಭವಾಗುವ ಅರ್ಧ ಗಂಟೆ ಮೊದಲೇ ಮಕ್ಕಳು ಕೊಠಡಿ ಪ್ರವೇಶ ಮಾಡಬೇಕು ಮತ್ತು ಕೊನೆಯ ಬೆಲ್ ಹೊಡೆದ ನಂತರವೇ ಹೊರಗೆ ಬಿಡಲಾಗುತ್ತದೆ. ಕೊನೆಯ ಬೆಲ್ ಹೊಡೆದ ನಂತರ ಮಕ್ಕಳು ಕಡ್ಡಾಯವಾಗಿ ಉತ್ತರ ಪತ್ರಿಕೆಯನ್ನು ನೀಡಬೇಕು ಮತ್ತು ಅಧಿಕ ಸಮಯ ನೀಡಲಾಗುವುದಿಲ್ಲ.

* ಎಲ್ಲಾ ವಿದ್ಯಾರ್ಥಿಗಳು ತಮ್ಮ ಗುರುತಿನ ಚೀಟಿ ಮತ್ತು ಹಾಲ್ ಟಿಕೆಟ್ ತರುವುದು ಕಡ್ಡಾಯ, ಹಾಲ್ ಟಿಕೆಟ್ ಮತ್ತು ಗುರುತಿನ ಚೀಟಿ ಇಲ್ಲದೆ ಇದ್ದರೆ ಪರೀಕ್ಷಾ ಕೊಠಡಿಗೆ ಪ್ರವೇಶವಿಲ್ಲ.

* ಪರೀಕ್ಷಾ ಕೇಂದ್ರದ 200 ಮೀಟರ್ ವ್ಯಾಪ್ತಿಯಲ್ಲಿ ಮದ್ಯಪಾನ ಮತ್ತು ಧೂಮಪಾನ ಅಂಗಡಿ ಕೂಡ ತೆರೆಯದಂತೆ ನಿಷೇಧ ಮಾಡಬೇಕು.

Leave a Comment