Sunita Williams Spacecraft Return: ಸತತ 9 ತಿಂಗಳುಗಳ ಕಾಲ ಬಾಹ್ಯಾಕಾಶದಲ್ಲಿ ಇದ್ದು ನಾಸಾ ಮಾಡಿದ ಸತತ ಪ್ರಯತ್ನದ ಕಾರಣ ಸುನೀತಾ ವಿಲಿಯಮ್ಸ್ ಮತ್ತು ಬ್ಯಾರಿ ಬುಕ್ ವಿಲ್ಮೊರ್ ಅವರು ಭೂಮಿಗೆ ಮರಳಿ ಬಂದಿದ್ದಾರೆ. ಹೌದು, 8 ದಿನಗಳ ಸಂಶೋಧನೆಯ ಕಾರಣ ಸುನೀತಾ ವಿಲಿಯಮ್ಸ್ ಮತ್ತು ಬ್ಯಾರಿ ಬುಕ್ ವಿಲ್ಮೊರ್ ಅವರು ಬಾಹ್ಯಾಕಾಶ ಪ್ರಯಾಣ ಮಾಡಿದ್ದರು, ಆದರೆ ತಾಂತ್ರಿಕ ದೋಷದ ಕಾರಣ ಸುನೀತಾ ವಿಲಿಯಮ್ಸ್ ಮತ್ತು ಬ್ಯಾರಿ ಬುಕ್ ವಿಲ್ಮೊರ್ ಅವರಿಗೆ ಮತ್ತೆ ಭೂಮಿಗೆ ಬರಲು ಸಾಧ್ಯವಾಗಲಿಲ್ಲ. ಇದರ ನಡುವೆ ಸತತ 9 ತಿಂಗಳುಗಳ ಸತತ ಪ್ರಯತ್ನದ ನಂತರ ಈಗ ಸುನೀತಾ ವಿಲಿಯಮ್ಸ್ ಮತ್ತು ಬ್ಯಾರಿ ಬುಕ್ ವಿಲ್ಮೊರ್ ಅವರು ಭೂಮಿಗೆ ಬಂದಿದ್ದಾರೆ.
ಕೋಟ್ಯಾಂತರ ಜನರ ಪ್ರಾರ್ಥನೆಯ ನಂತರ ಭೂಮಿಯ ಬಂದ ಸುನೀತಾ ವಿಲಿಯಮ್ಸ್
ಮೂಲತಃ ಭಾರತವರಾದ ಸುನೀತಾ ವಿಲಿಯಮ್ಸ್ (Sunita Williams) ಅವರು ಬಾಹ್ಯಾಕಾಶಕ್ಕೆ ಹೋಗಿ 9 ತಿಂಗಳ ನಂತರ ಈಗ ಭೂಮಿಗೆ ಬಂದಿದ್ದಾರೆ. ಸುನೀತಾ ವಿಲಿಯಮ್ಸ್ ಮತ್ತು ಬ್ಯಾರಿ ಬುಕ್ ವಿಲ್ಮೊರ್ (Barry Butch Wilmore) ಅವರು ಹೋದ ರಾಕೆಟ್ ಮರಳಿ ಭೂಮಿಗೆ ಬಾರದ ಕಾರಣ ಸಾಕಷ್ಟು ಜನರು ಆತಂಕವನ್ನು ಕೂಡ ವ್ಯಕ್ತಪಡಿಸಿದ್ದರು. ಇದರ ನಡುವೆ ಈಗ ನಾಸಾ ಮಾಡಿದ ಸತತ ಪ್ರಯತ್ನದ ಕಾರಣ ಸುನೀತಾ ವಿಲಿಯಮ್ಸ್ ಮತ್ತು ಬ್ಯಾರಿ ಬುಕ್ ವಿಲ್ಮೊರ್ ಅವರು ಭೂಮಿಗೆ ಬಂದಿದ್ದು ಇಡೀ ವಿಶ್ವದ ಜನರೇ ನಾಸಾದ ಈ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಭೂಮಿಯಲ್ಲಿ ಲ್ಯಾಂಡ್ ಆಗುವ ಬದಲು ಸಮುದ್ರದಲ್ಲಿ ಲ್ಯಾಂಡ್ ಆಗಿದ್ದು ಏಕೆ..?
ಈ ನಡುವೆ ಸುನೀತಾ ವಿಲಿಯಮ್ಸ್ ಮತ್ತು ಬ್ಯಾರಿ ಬುಕ್ ವಿಲ್ಮೊರ್ ಇದ್ದ ರಾಕೆಟ್ ನೇರವಾಗಿ ಭೂಮಿಯಲ್ಲಿ ಲ್ಯಾಂಡ್ ಆಗುವ ಬದಲು ಸಮುದ್ರದಲ್ಲಿ ಲ್ಯಾಂಡ್ ಆಗಿದೆ. ಇನ್ನು ಸಾಕಷ್ಟು ಜನರಿಗೆ ಏಕೆ ರಾಕೆಟ್ ಸಮುದ್ರದಲ್ಲಿ ಲ್ಯಾಂಡ್ ಆಯಿತು ಅನ್ನುವುದರ ಬಗ್ಗೆ ತಿಳಿದಿಲ್ಲ. ಈ ರೀತಿಯಲ್ಲಿ ನೀರಿನ ಮೇಲೆ ರಾಕೆಟ್ ಇಳಿಸುವ ವಿಧಾನವನ್ನು ಸ್ಪ್ಲಾಶ್ ಡೌನ್ ಎಂದು ಕರೆಯುತ್ತಾರೆ ಮತ್ತು ಸ್ಪ್ಲಾಶ್ ಡೌನ್ ಅಂದರೆ ಪ್ಯಾರಾಚೂಟ್ ಮೂಲಕ ಬಾಹ್ಯಾಕಾಶ ನೌಕೆಯನ್ನು ಭೂಮಿಗೆ ಇಳಿಸುವ ವಿಧಾನ ಆಗಿದೆ.
ಗಗನಯಾತ್ರಿಗಳನ್ನು ಸುರಕ್ಷಿತವಾಗಿ ಕರೆತರಲು ಈ ವಿಧಾನವನ್ನು ಬಳಸುತ್ತಾರೆ. ಭೂಮಿಗೆ ಈ ಬಾಹ್ಯಾಕಾಶ ನೌಕೆ ಬಹಳ ವೇಗವಾಗಿ ಬರುತ್ತದೆ ಮತ್ತು ಆ ವೇಗ ತಡೆಯಲು ಈ ವಿಧಾನ ಬಳಸಲಾಗುತ್ತದೆ. ಬಾಹ್ಯಾಕಾಶ ನೌಕೆ ಭೂಮಿಗೆ ಬರುವ ಸಮಯದಲ್ಲಿ ಭೂಮಿಯ ಗಾಳಿಯ ಕಣಗಳ ಜೊತೆ ಸೇರಿಕೊಂಡು ಘರ್ಷಣೆ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ. ಬಾಹ್ಯಾಕಾಶ ನೌಕೆಯ ವೇಗವನ್ನು ಕಡಿಮೆ ಮಾಡುವ ಉದ್ದೇಶದಿಂದ ಸಂಶೋಧಕರು ಈ ವಿಧಾನವನ್ನು ಅನುಸರಿಸುತ್ತಾರೆ.
ಇನ್ನು ಭೂಮಿಯ ಮೇಲೆ ಅತೀ ವೇಗವಾಗಿ ಬಿದ್ದರೆ ಬಾಹ್ಯಾಕಾಶ ನೌಕೆಗೆ ಆಪಾಯ ಅನ್ನುವ ಕಾರಣ ಈ ಪ್ಯಾರಾಚೂಟ್ ಸಹಾಯದ ಮೇಲೆ ಸಮುದ್ರದ ಮೇಲೆ ಈ ರೀತಿಯಲ್ಲಿ ಲ್ಯಾಂಡ್ ಮಾಡಲಾಗುತ್ತದೆ. ಸುಮಾರು 11 ಪ್ಯಾರಾಚೂಟ್ ಗಳನ್ನೂ ಬಾಹ್ಯಾಕಾಶ ನೌಕೆಯನ್ನು ಲ್ಯಾಂಡ್ ಮಾಡುವ ಸಮಯದಲ್ಲಿ ಬಳಸಲಾಗುತ್ತದೆ. ಇನ್ನು ಈ ಪ್ಯಾರಾಚೂಟ್ 130 mph ನಲ್ಲಿ ತೆರೆದುಕೊಳ್ಳುತ್ತದೆ.
ಬಾಹ್ಯಾಕಾಶ ನೌಕೆಯನ್ನು ಭೂಮಿಯ ಗಟ್ಟಿಯಾದ ಮೇಲ್ಮೈ ಮೇಲೆ ಇಳಿಸುವುದು ಬಹಳ ಅಪಾಯಕಾರಿ, ಈ ಸಮಯದಲ್ಲಿ ಬಾಹ್ಯಾಕಾಶ ನೌಕೆಗೆ ಅಪಾಯವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಈ ಕಾರಣಗಳಿಂದ ಬಾಹ್ಯಾಕಾಶ ನೌಕೆಯನ್ನು ಈ ರೀತಿಯಲ್ಲಿ ನೀರಿನ ಮೇಲೆ ಲ್ಯಾಂಡ್ ಮಾಡಲಾಗುತ್ತದೆ.