Sameer MD New Video: ಒಂದು ವಿಡಿಯೋದಿಂದ ಸಮೀರ್ ಗೆ ಬಂದ ಹಣ ಎಷ್ಟು ಲಕ್ಷ…? ವೈರಲ್ ಆಯಿತು ಇನ್ನೊಂದು ವಿಡಿಯೋ

Dhootha Sameer MD New Video: ಸದ್ಯ ಕರ್ನಾಟಕದಲ್ಲಿ Youtuber ಆಗಿರುವ Dhootha : Sameer MD ಅವರು ಬಹಳ ಸುದ್ದಿಯಲ್ಲಿ ಇದ್ದಾರೆ ಎಂದು ಹೇಳಬಹುದು. ಹೌದು ಎರಡು ವಾರಗಳ ಹಿಂದೆ Dhootha : Sameer MD ಅನ್ನುವ Youtuber ಧರ್ಮಸ್ಥಳ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ವಿಡಿಯೋ ಮಾಡು ಅದನ್ನು ತಮ್ಮ Youtube ಚಾನೆಲ್ ನಲ್ಲಿ ಶೇರ್ ಮಾಡಿದ್ದರು. Dhootha : Sameer MD ಅವರು ಶೇರ್ ಮಾಡಿದ ಆ ವಿಡಿಯೋವನ್ನು ಸುಮಾರು 19 ಮಿಲಿಯನ್ ಜನರು ವೀಕ್ಷಣೆ ಮಾಡಿದ್ದಾರೆ.

WhatsApp Group Join Now
Telegram Group Join Now

ಇನ್ನು ಈ ವಿಡಿಯೋ ಮಾಡಿದ ನಂತರ Youtuber ಸಮೀರ್ ಅವರಿಗೆ ಸಾಕಷ್ಟು ಬೆದರಿಕೆಯ ಕರೆಗಳು ಕೂಡ ಬಂದಿದೆ ಮತ್ತು ಸಮೀರ್ ಅವರ ಮೇಲೆ ಪೊಲೀಸರು ದೂರು ಕೂಡ ದಾಖಲಿಸಿಕೊಂಡಿದ್ದಾರೆ. ಇದರ ನಡುವೆ ಕೆಲವು ಸಮೀರ್ ಅವರ ಪರವಾಗಿ ಮಾತನಾಡಿದರೆ ಇನ್ನೂ ಕೆಲವರು ಸಮೀರ್ ಅವರ ವಿರುದ್ಧವಾಗಿ ಮಾತನಾಡಿದರು ಎಂದು ಹೇಳಬಹುದು. ಇದರ ನಡುವೆ ಈಗ ಸಮೀರ್ ಅವರು ತಮ್ಮ Dhootha : Sameer MD Youtube ಚಾನೆಲ್ ನಲ್ಲಿ ಇನ್ನೊಂದು ವಿಡಿಯೋ ಶೇರ್ ಮಾಡಿದ್ದಾರೆ. ಸದ್ಯ ಈ ವಿಡಿಯೋ ಕೂಡ Youtube ಸಾಕಷ್ಟು ವೀಕ್ಷಣೆ ಕಾಣುತ್ತಿದೆ.

ಇನ್ನೊಂದು ವಿಡಿಯೋ ಶೇರ್ ಮಾಡಿದ ಸಮೀರ್
ಹೌದು, ಸಮೀರ್ ಅವರು ತಮ್ಮ Dhootha : Sameer MD ಅನ್ನುವ Youtube Channel ನಲ್ಲಿ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೊಂದು ವಿಡಿಯೋ ಶೇರ್ ಮಾಡಿದ್ದಾರೆ. ಇನ್ನು ಸಮೀರ್ ಶೇರ್ ಮಾಡಿರುವ ಈ ವಿಡಿಯೋದಲ್ಲಿ ಸೌಜನ್ಯ ಸಾವಿಗೆ ಸಂಬಂಧಿಸಿದಂತೆ ಹೇಗೆ ಸಾಕ್ಷಿಗಳನ್ನು ನಾಶ ಮಾಡಲಾಯಿತು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ಇನ್ನು ವಿಡಿಯೋವನ್ನು ನೀವು Dhootha : Sameer MD ಅವರ youtube ಚಾನೆಲ್ ನಲ್ಲಿ ವೀಕ್ಷಣೆ ಕೂಡ ಮಾಡಬಹುದು. ಸುಮಾರು 16 ನಿಮಿಷಗಳ ಕಾಲ ಇರುವ ಈ ವಿಡಿಯೋವನ್ನು ಸುಮಾರು 25 ಲಕ್ಷ ಜನರು ವೀಕ್ಷಣೆ ಮಾಡಿದ್ದಾರೆ.

Dhootha : Sameer MD ಅವರು Youtube ಚಾನೆಲ್ ನಲ್ಲಿ ಧರ್ಮಸ್ಥಳ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಯಾವ ರೀತಿಯಲ್ಲಿ ಸಾಕ್ಷಿಗಳನ್ನು ನಾಶ ಮಾಡಿದರು ಮತ್ತು ಸಂತೋಷ್ ಅವರನ್ನು ಕೇಸ್ ನಲ್ಲಿ ಫಿಟ್ ಮಾಡಲು ಹೇಗೆ ಸುಳ್ಳು ಸಾಕ್ಷಿಗಳನ್ನು ಸೃಷ್ಟಿ ಮಾಡಿದರು ಅನ್ನುವುದರ ಬಗ್ಗೆ ಎಳೆಎಳೆಯಾಗಿ ಮಾಹಿತಿಯನ್ನು ಈ ವಿಡಿಯೋದಲ್ಲಿ ಸಮೀರ್ ಅವರು ಬಿಚ್ಚಿಟ್ಟಿದ್ದಾರೆ. ಅದರ ಜೊತೆಗೆ ಹಿಂದಿನ ವಿಡಿಯೋದಲ್ಲಿ ನನಗೆ ಆದ ಅನುಭವ ಮತ್ತು Youtube ನಿಂದ ನನಗೆ ಎಷ್ಟು ಹಣ ಬಂತು ಅನ್ನುವುದರ ಬಗ್ಗೆ ಕೂಡ ಈ ವಿಡಿಯೋದಲ್ಲಿ ಮಾಹಿತಿ ಶೇರ್ ಮಾಡಿದ್ದಾರೆ ಸಮೀರ್ ಅವರು.

ಹಿಂದಿನ ವಿಡಿಯೋದಿಂದ ಸಮೀರ್ ಖಾತೆಗೆ ಬಂದ ಹಣ ಎಷ್ಟು
ಹೌದು, ಸಮೀರ್ ಅವರು ಈ ಹಿಂದೆ ಶೇರ್ ಮಾಡಿದರೆ ವಿಡಿಯೋ ಸುಮಾರು 19 ಮಿಲಿಯನ್ ವೀಕ್ಷಣೆ ಕಂಡಿದೆ ಎಂದು ಹೇಳಿದ್ದಾರೆ. ಆದರೆ ಆ ವಿಡಿಯೋದಿಂದ ನನಗೆ ಯಾವುದೇ ರೀತಿಯ ಹಣ ಬಂದಿಲ್ಲ ಎಂದು ಹೇಳಿದ್ದಾರೆ. ಹೌದು, ಹಿಂದಿಂದ ವಿಡಿಯೋಗೆ ಸಾಕಷ್ಟು ನೆಗೆಟಿವ್ ಮತ್ತು ಸಾಕಷ್ಟು ಜನರು ರಿಪೋರ್ಟ್ ಮಾಡಿದ ಕಾರಣ Youtube ಸಂಸ್ಥೆಯವರು ಆ ವಿಡಿಯೋಗೆ ಯಾವುದೇ ಹಣ ನೀಡಿಲ್ಲ ಮತ್ತು ಆ ವಿಡಿಯೋ ಹಣ ಗಳಿಸಲು ಯೋಗ್ಯವಿಲ್ಲ ಎಂದು ಯೌಟ್ಯೂಬ್ ಕಳುಹಿಸಿದ ಸಂದೇಶವನ್ನು ತೋರಿಸಿದ್ದಾರೆ ಸಮೀರ್ ಅವರು. ಹೌದು ಸಮೀರ್ ಅವರು ಶೇರ್ ಮಾಡಿದ ಹಿಂದಿನ ವಿಡಿಯೋಗೆ ಯೌಟ್ಯೂಬ್ ನವರು ಜಾಹಿರಾತು ತಿರಸ್ಕಾರ ಮಾಡಿದ್ದಾರೆ, ಜಾಹಿರಾತು ತಿರಸ್ಕಾರ ಆದಕಾರಣ ಸಮೀರ್ ಅವರಿಗೆ ಆ ವಿಡಿಯೋದಿಂದ ಯಾವುದೇ ರೀತಿಯ ಹಣ ಬಂದಿಲ್ಲ.

Leave a Comment