Indian Railways Rules: ರೈಲಿ ಪ್ರಯಾಣ (Train Travel) ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ, ರೈಲು ಪ್ರಯಾಣ ಆರಾಮದಾಯಕ ಮತ್ತು ದೂರ ಊರಿಗೆ ಬಹಳ ಬೇಗ ತಲುಪಬಹುದು ಅನ್ನುವ ಕಾರಣಕ್ಕೆ ಸಾಮಾನ್ಯವಾಗಿ ಎಲ್ಲರೂ ಕೂಡ ರೈಲು ಪ್ರಯಾಣ ಇಷ್ಟಪಡುತ್ತಾರೆ ಎಂದು ಹೇಳಬಹುದು. ಇನ್ನು ದೇಶದಲ್ಲಿ ಪ್ರತಿನಿತ್ಯ ಕೋಟ್ಯಾಂತರ ಜನರು ಜೈಲು ಪ್ರಯಾಣ ಮಾಡುತ್ತಾರೆ ಮತ್ತು ದೇಶದ ಬಹುತೇಕ ಎಲ್ಲಾ ಊರುಗಳಿಗೆ ಈಗ ರೈಲು ಸೇವೆ ವಿಸ್ತರಣೆ ಆಗಿದೆ ಎಂದು ಹೇಳಬಹುದು. ರೈಲು ಪ್ರಯಾಣ ಎಷ್ಟು ಮುಂದುವರೆದಿದೆಯೋ ಅದೇ ರೀತಿಯಲ್ಲಿ ರೈಲಿನಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಕೆಲವು ಹೊಸ ನಿಯಮಗಳನ್ನು ಕೂಡ ಜಾರಿಗೆ ತರಲಾಗಿದೆ. ಹೌದು, ರೈಲಿನಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರು ಕೆಲವು ರೈಲ್ವೆ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು.
ರಾತ್ರಿ ಪ್ರಯಾಣ ಮಾಡುವವರಿಗೆ ಹೊಸ ರೂಲ್ಸ್
ರಾತ್ರಿ ಸಮಯದಲ್ಲಿ ರೈಲು ಪ್ರಯಾಣ ಮಾಡುವವರ ಸಂಖ್ಯೆ ಬಹಳ ಜಾಸ್ತಿ ಎಂದು ಹೇಳಬಹುದು. ಹೌದು, ದೂರ ದೂರ ಊರಿಗೆ ಹೋಗುವ ಜನರು ಹೆಚ್ಚು ಹೆಚ್ಚು ರಾತ್ರಿ ರೈಲು ಪ್ರಯಾಣ ಇಷ್ಟಪಡುತ್ತಾರೆ. ಇದರ ನಡುವೆ ರೈಲ್ವೆ ಇಲಾಖೆ ಕೂಡ ರಾತ್ರಿ ಸಮಯದಲ್ಲಿ ರೈಲು ಪ್ರಯಾಣ ಮಾಡುವ ಎಲ್ಲಾ ಪ್ರಯಾಣಿಕರು ಕೆಲವು ಹೊಸ ರೂಲ್ಸ್ ಜಾರಿಗೆ ತಂದಿದೆ. ಇನ್ನು ರಾತ್ರಿ ಸಮಯದಲ್ಲಿ ರೈಲು ಪ್ರಯಾಣ ಮಾಡುವವರು ಈ ನಿಯಮ ಪಾಲನೆ ಮಾಡದೆ ಇದ್ದರೆ ಸಮಸ್ಯೆ ಎದುರಿಸಬೇಕಾಗುತ್ತದೆ.
ರಾತ್ರಿ ರೈಲು ಪ್ರಯಾಣ ಮಾಡುವವರಿಗೆ 8 ಹೊಸ ನಿಯಮ
- ರೈಲ್ವೆ ನಿಯಮದ ಪ್ರಕಾರ, ರಾತ್ರಿ ರೈಲು ಪ್ರಯಾಣ ಮಾಡುವ ಪ್ರಯಾಣಿಕರು 10 ಘಂಟೆಯ ನಂತರ ನೈಟ್ ಲೈಟ್ ಹೊರತುಪಡಿಸಿ ಎಲ್ಲಾ ಲೈಟ್ಸ್ ಆಫ್ ಮಾಡಬೇಕು.
- ರಾತ್ರಿ ಮಲಗಿದ ನಂತರ ಬೆಳಿಗ್ಗೆ 6 ರ ತನಕ ಬೋಗಿಯಲ್ಲಿ ಅನಗತ್ಯ ಮಾತನಾಡುವುದು ಮತ್ತು ಗಲಾಟೆ ಮಾಡುವುದು ಮಾಡುವಂತಿಲ್ಲ.
- ರಾತ್ರಿ 10 ಘಂಟೆಯ ನಂತರ ಮೊಬೈಲ್ ಗಳಲ್ಲಿ ಜೋರಾಗಿ ಸೌಂಡ್ ಹಾಕಿಕೊಂಡು ವಿಡಿಯೋ ನೋಡುವುದು ಅಥವಾ ಹಾಡು ಕೇಳುವುದು ಮಾಡುವಂತಿಲ್ಲ.
- ಸುರಕ್ಷತೆಯ ಉದ್ದೇಶದಿಂದ ರಾತ್ರಿ 11 ಘಂಟೆಯಿಂದ ಬೆಳಿಗ್ಗೆ 5 ಘಂಟೆಯ ತನಕ ಚಾರ್ಜಿಂಗ್ ಪೋರ್ಟ್ ಆಫ್ ಮಾಡಲು ಈಗ ರೈಲ್ವೆ ಇಲಾಖೆ ನಿರ್ಧಾರ ಮಾಡಿದೆ.
- ರೈಲ್ವೆ ನಿಯಮದ ಪ್ರಕಾರ ಲೋವರ್ ಬರ್ತ್ ನಲ್ಲಿ ಮಲಗುವವರು ಪದೇಪದೇ ಎದ್ದು ಮೇಲಿನವರಿಗೆ ತೊಂದರೆ ಕೊಡುವಂತಿಲ್ಲ.
- ಅನುಮತಿ ಇಲ್ಲದೆ ಬೇರೆಯವರ ಲೋವರ್ ಬರ್ತ್ ನಲ್ಲಿ ಕುಳಿತುಕೊಳ್ಳುವುದು ಮತ್ತು ಸೀಟ್ ಬದಲಾವಣೆ ಪ್ರಯತ್ನ ಮಾಡಿದರೆ ಅವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ.
- ಇನ್ನು ಮಹಿಳೆಯರ ಕೋಚ್ ನಲ್ಲಿ ಪುರುಷರು ಪ್ರವೇಶ ಇಲ್ಲ ಮತ್ತು ವಿನಾಕಾರಣ ಪುರುಷರು ಮಹಿಳೆಯರ ಕೋಚ್ ಪ್ರವೇಶ ಮಾಡಿದರೆ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.
- ರೈಲು ಪ್ರಯಾಣದ ಸಮಯದಲ್ಲಿ ಯಾವುದೇ ಪ್ರಯಾಣಿಕ ಕೂಡ ಅನಧಿಕೃತ ವಸ್ತು ಮಾರಾಟ ಮಾಡುವಂತಿಲ್ಲ. ಒಂದುವೇಳೆ ಮಾರಾಟ ಮಾಡಿದರೆ ಆತನ ಮೇಲೆ ಕ್ರಮ ಜರುಗಿಸಲಾಗುತ್ತದೆ.