Karnataka Bandh Update: ಕನ್ನಡಿಗರ ಮೇಲೆ ಆಗುತ್ತಿರುವ ದುರ್ಜನ್ಯ ಮತ್ತು ಮರಾಠಿಗರ ಅಟ್ಟಹಾಸ ಕಡಿಮೆ ಮಾಡುವ ಉದ್ದೇಶದಿಂದ ಕರ್ನಾಕಟದಲ್ಲಿ ಶನಿವಾರ ಕರ್ನಾಟಕ ಬಂದ್ ಗೆ (Karnataka Bandh) ಕರೆ ನೀಡಲಾಗಿದೆ. ಹೌದು ಹಲವು ಕನ್ನಡಪರ ಸಂಘಟನೆಗಳು ಮತ್ತು ವಾಟಾಳ್ ನಾಗರಾಜ್ (Vatal Nagaraj) ಅವರು ಸಂಪೂರ್ಣ ಕರ್ನಾಟಕ ಬಂದ್ ಗೆ ಕರೆ ನೀಡಿದ್ದಾರೆ. KSRTC ಬಸ್ ಕಂಡಕ್ಟರ್ ಮೇಲೆ ಆದ ಹಲ್ಲೆ ಮತ್ತು ಬೆಳಗಾವಿಯಲ್ಲಿ ಆದ ಘಟನೆಗೆ ಸಂಬಂಧಿಸಿದಂತೆ ಸರ್ಕಾರ ಏನು ಕೂಡ ಕ್ರಮ ಕೈಗೊಂಡಿಲ್ಲದ ಕಾರಣ ಶನಿವಾರ ಅಖಂಡ ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ. ಹಾಗಾದರೆ ಶನಿವಾರ ಏನಿರಲಿದೆ ಮತ್ತು ಏನೇನು ರಾಜ್ಯದಲ್ಲಿ ಲಭ್ಯ ಇರುವುದಿಲ್ಲ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಶನಿವಾರ ಅಖಂಡ ಕರ್ನಾಟಕ ಬಂದ್
ಮಾರ್ಚ್ 22, ಅಂದರೆ ಶನಿವಾರ ಅಖಂಡ ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ. ಬೆಳಿಗ್ಗೆ 6 ಘಂಟೆಯಿಂದ ಸಂಜೆ 6 ಘಂಟೆಯ ತನಕ ಸಂಪೂರ್ಣ ಕರ್ನಾಟಕ ಬಂದ್ ಆಗಿರಲಿದೆ ಎಂದು ಹೇಳಬಹುದು. ಬೆಳಿಗ್ಗೆ 10:30 ಕ್ಕೆ ಟೌನ್ ಹಾಲ್ ನಿಂದ ಪ್ರತಿಭಟನೆ ಆರಂಭ ಆಗಲಿದೆ ಮತ್ತು ಯಾರು ಕೂಡ ವಾಹನ ಹತ್ತಬಾರದು ಎಂದು ಮನವಿ ಕೂಡ ಸಂಘಟನೆಗಳು ಮಾಡಿಕೊಂಡಿದೆ. ಹೌದು, ಕನ್ನಡಿಗರಿಗೆ ಅವಮಾನ ಮಾಡಲಾಗುತ್ತಿದೆ ಮತ್ತು ನಮ್ಮ ರಾಜ್ಯದ ಬೆಳಗಾವಿಯಲ್ಲಿ ಮರಾಠಿಗರ ಅಟ್ಟಹಾಸ ಜಾಸ್ತಿ ಮತ್ತು ಅವರಿಗೆ ಬುದ್ದಿ ಕಲಿಸಬೇಕು ಅನ್ನುವುದ ಉದ್ದೇಶದಿಂದ ಕನ್ನಡಪರ ಸಂಘಟನೆಗಳು ಅಖಂಡ ಕರ್ನಾಟಕ ಬಂದ್ ಗೆ ಕರೆ ನೀಡಿದ್ದಾರೆ.
ಶನಿವಾರ ಏನಿರುತ್ತೆ ಮತ್ತು ಏನಿರಲ್ಲ
ಶನಿವಾರ ಅಖಂಡ ಕರ್ನಾಟಕ ಬಂದ್ ಇರುವುದರ ಕಾರಣ ಅಗತ್ಯ ವಸ್ತು ಮತ್ತು ಸೇವೆ ಹೊರತುಪಡಿಸಿ ಬೇರೆ ಯಾವುದುಈ ಜನರಿಗೆ ಸಿಗುವುದಿಲ್ಲ ಎಂದು ಹೇಳಬಹುದು. ಇನ್ನು ಸ್ವಾಭಿಮಾನ ಇರುವ ಯಾವುದೇ ಚಾಲಕರು ತಮ್ಮ ವಾಹನ ಹತ್ತಬಾರದು ಎಂದು ಕೂಡ ಮನವಿ ಮಾಡಿಕೊಳ್ಳಲಾಗಿದೆ. ಸಿಎಂ ಕಾರ್ ಚಾಲಕ ಆಗಿರಬಹುದು ಅಥವಾ ಬೇರೆ ಯಾವುದೇ ವಾಹನಗಳ ಚಾಲಕರು ಸ್ವಾಭಿಮಾನ ಇದ್ದರೆ ನಾಳೆ ಒಂದು ದಿನ ವಾಹನ ಹತ್ತಬೇಡಿ ಎಂದು ಹೇಳಲಾಗಿದೆ. ಅದೇ ರೀತಿಯಲ್ಲಿ BMTC ಮತ್ತು KSRTC ಯವರು ಕೂಡ ಅಖಂಡ ಕರ್ನಾಟಕ ಬಂದ್ ಗೆ ಬೆಂಬಲ ಸೂಚಿಸಿದ್ದಾರೆ.
ಟ್ಯಾಕ್ಸಿ ಉಬೆರ್, ಇಲ ಮತ್ತು ಆಟೋ ಚಾಲಕರು ಕೂಡ ಅಖಂಡ ಕರ್ನಾಟಕ ಬಂದ್ ಕರೆ ಕೊಟ್ಟಿದ್ದಾರೆ. ಇನ್ನು ಕರ್ನಾಟಕದಲ್ಲಿ ಹೋಟೆಲ್ ಕೂಡ ಬಂದ್ ಆಗಬೇಕು ಎಂದು ಕಾರ್ಮಿಕ ಸಂಘಟನೆಯ ರವಿ ಬೈಂದೂರು ಅವರು ಕೂಡ ಮನವಿ ಮಾಡಿಕೊಂಡಿದ್ದಾರೆ. ಇನ್ನು ಹೋಟೆಲ್ ಮಾಲೀಕರು ಈ ಹೋರಾಟಕ್ಕೆ ಬೆಂಬಲ ಕೊಡದೆ ಇದ್ದರೆ ನಿಮ್ಮಜೊತೆ ನಾವು ಯಾವತ್ತೂ ಕೈಜೋಡಿಸುವುದಿಲ್ಲ ಎಂದು ಹೇಳಲಾಗಿದೆ.
ರಾಜ್ಯದಲ್ಲಿ ಶನಿವಾರ ಏನಿರುತ್ತೆ…?
ಹಾಲು, ಮೆಡಿಕಲ್, ಅಗತ್ಯ ವಸ್ತುಗಳು, ಆಸ್ಪತ್ರೆ, ಮೆಟ್ರೋ ಮಾತ್ರ ಶನಿವಾರ ಸೇವೆಯಲ್ಲಿ ಇರಲಿದೆ. ಈ ಅಗತ್ಯ ಸೇವೆ ಹೊರತುಪಡಿಸಿ ಶನಿವಾರ ಬಹುತೇಕ ಕರ್ನಾಟಕ ಬಂದ್ ಆಗಿರಲಿದೆ ಎಂದು ಹೇಳಬಹುದು. ಇದರ ನಡುವೆ ಕರ್ನಾಟಕದ ಕಾರ್ಮಿಕ ಸಂಘ, ಉಬೆರ್ ಸಂಘ, ಬಿಎಂಟಿಸಿ, KSRTC, ಕನ್ನಡ ಚಿತ್ರರಂಗ, ಬೇಕರಿ ಮತ್ತು ಮಾಲ್, ಬೀದಿ ಬೀದಿ ವ್ಯಾಪಾರಿಗಳು, ಬಾರ್ ಮತ್ತು ರೆಸ್ಟೋರೆಂಟ್ ಮತ್ತು ಅಂಗಡಿ ಮುಂಗಟ್ಟುಗಳು ಕೂಡ ಬಂದ್ ಆಗಿರಲಿದೆ.