Rain: ಮುಂದಿನ 4 ದಿನ ಕರ್ನಾಟಕದ ಈ ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ಭಾರೀ ಮಳೆ, ಎಚ್ಚರಿಕೆ

Rain Weather Karnaraka: ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯ ಆರ್ಭಟ ಬಹಳ ಹೆಚ್ಚಾಗಿದೆ ಎಂದು ಹೇಳಬಹುದು. ಹೌದು ರಾಜ್ಯದಲ್ಲಿ ಬೇಸಿಗೆ ಬಿಸಿ ಹೆಚ್ಚಾಗಿದೆ, ಬೇಸಿಗೆಯ ಬಿಸಿಯ ಕಾರಣ ರಾಜ್ಯದ ಹಲವು ಜಿಲ್ಲೆಗಳಲ್ಲಿ ನೀರಿನ ಸಮಸ್ಯೆ ಕೂಡ ಉಂಟಾಗಿದೆ. ಇದರ ನಡುವೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಗಾರು ಪೂರ್ವ ಮಳೆ (Mansoon Rain) ಆರಂಭ ಆಗಿದೆ. ರಾಜ್ಯದಲ್ಲಿ ಹಲವು ಜಿಲ್ಲೆಗಳಲ್ಲಿ ಕಳೆದ ಒಂದು ವಾರದಿಂದ ಮಳೆ ಕಾಣಿಸಿಕೊಳ್ಳುತ್ತಿದೆ. ಸದ್ಯ ಹವಾಮಾನ ಇಲಾಖೆ ಇನ್ನೊಂದು ಎಚ್ಚರಿಕೆ ನೀಡಿದೆ, ಇಂದು ಮತ್ತು ನಾಳೆ ಈ ಜಿಲ್ಲೆಗಳಲ್ಲಿ ಬಾರೀ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಹಾಗಾದರೆ ಇಂದು ಮತ್ತು ನಾಳೆ ಯಾವ ಯಾವ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ತಿಳಿಯೋಣ.

WhatsApp Group Join Now
Telegram Group Join Now

ರಾಜ್ಯದಲ್ಲಿ ಹೆಚ್ಚಾದ ಬೇಸಿಗೆಯ ಬಿಸಿ
ರಾಜ್ಯದಲ್ಲಿ ಬಿಸಿಲಿನ ತಾಪ ಹೆಚ್ಚಾಗಿದ್ದು ಬಿಸಿಲಿನ ತಾಪಕ್ಕೆ ಜನರು ಕಂಗಾಲಾಗಿದ್ದಾರೆ ಎಂದು ಹೇಳಬಹುದು. ಇದರ ನಡುವೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮೋಡದ ವಾತಾವರಣ ಕಂಡುಬಂದಿದೆ. ಕಳೆದ ವಾರ ಕರಾವಳಿ ಭಾಗಗಳಲ್ಲಿ ಮಳೆ ಆಗಿದ್ದು ಸದ್ಯ ಗ ಮತ್ತೆ ಹವಾಮಾನ ಇಲಾಖೆ ಮಳೆಯ ಎಚ್ಚರಿಕೆ ನೀಡಿದೆ. ಬಿಸಿಲಿನ ಬೇಗೆಗೆ ವಾತಾವರಣದಲ್ಲಿ ಶಾಖ ಹೆಚ್ಚಾಗಿದೆ ಮತ್ತು ಈ ಕಾರಣಗಳಿಂದ ಈ ಜಿಲ್ಲೆಗಳಲ್ಲಿ ಭಾರೀ ಪ್ರಮಾಣದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಈ ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಭರ್ಜರಿ ಮಳೆ
ಹವಾಮಾನ ಇಲಾಖೆಯ ವರದಿಯ ಪ್ರಕಾರ, ದಕ್ಷಿಣಕನ್ನಡ, ಉಡುಪಿ, ಕೊಡಗು, ಮೈಸೂರು, ಹಾಸನ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಇಂದು ಮತ್ತೆ ನಾಳೆ ಮಳೆಯಾಗಲಿದೆ. ಮಾರ್ಚ್ 22 ರಿಂದ 26 ರ ತನಕ ಈ ಜಿಲ್ಲೆಗಳಲ್ಲಿ ಮಳೆಯಾಗಲಿದ್ದು ಬೇಸಿಗೆಯ ಬಿಸಿ ಕೊಂಚ ಕಡಿಮೆ ಆಗಲಿದೆ. ಮುಂದಿನ ನಾಲ್ಕು ದಿನ ಕೊಡಗು, ಚಿಕ್ಕಮಗಳೂರು, ಹಾಸನ, ದಕ್ಷಿಣಕನ್ನಡ, ಚಾಮರಾಜನಗರ, ತುಮಕೂರು. ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಮದ್ಯ, ಬೀದರ್ ಕುಲಬುರಗಿ ಮತ್ತು ಯಾದಗಿರಿಯಲ್ಲಿ ಸಣ್ಣ ಪ್ರಮಾಣದ ಮಳೆಯಾಗಲಿದೆ.

ಮಾರ್ಚ್ 23 ರಂದು ಕರ್ನಾಟಕದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಮಳೆ
ಹವಾಮಾನ ಇಲಾಖೆಯ ವರದಿಯ ಪ್ರಕಾರ, ಮಾರ್ಚ್ 23 ನೇ ತಾರೀಕಿನಂದು ಕರ್ನಾಟಕದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಇನ್ನು ರಾಜ್ಯದ ಕರಾವಳಿ ಭಾಗವಾದ ದಕ್ಷಿಣಕನ್ನಡ, ಉಡುಪಿ, ಉತ್ತರಕನ್ನಡ, ಕಾರವಾರದಲ್ಲಿ ಮಾರ್ಚ್ 23 ರಂದು ಗುಡುಗು ಸಿಡಿಲು ಸಹಿತ ಭಾರೀ ಪ್ರಮಾಣದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇನ್ನು ಈ ಸಮಯದಲ್ಲಿ ಬಿರುಗಾಳಿ ಕೂಡ ಇರಲಿದ್ದು ಮೀನುಗಾರರಿಗೆ ಕೂಡ ಎಚ್ಚರಿಕೆ ನೀಡಲಾಗಿದೆ. ಗಾಳಿಯ ವೇಗ ಪ್ರತಿ ಘಂಟೆಗೆ 40 Km ಆಗಿರುತ್ತದೆ.

Leave a Comment