Saturday Karnataka Bandh: ಶನಿವಾರ ಅಖಂಡ ಕರ್ನಾಟಕ ಬಂದ್ ಗೆ (Karnataka Bandh) ಕರೆ ನೀಡಲಾಗಿದೆ. ಹೌದು, ಮರಾಠಿಗರಿಂದ ಕನ್ನಡದವರ ಮೇಲೆ ಆಗುತ್ತಿರುವ ದುರ್ಜನ್ಯ ಮತ್ತು ಬೆಳಗಾವಿಯಲ್ಲಿ ಮರಾಠರ ಅಬ್ಬರ ಹೆಚ್ಚಾಗಿರುವ ಕಾರಣ ಅದರ ವಿರುದ್ಧ ಸರ್ಕಾರ ಕ್ರಮ ತಗೆದುಕೊಳ್ಳಬೇಕು ಎಂದು ಅಖಂಡ ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ. ವಾಟಾಳ್ ನಾಗರಾಜ್ ಅವರ ನೇತೃತ್ವದಲ್ಲಿ ನಿರ್ಧಾರ ತಗೆದುಕೊಳ್ಳಲಾಗಿದೆ ಮತ್ತು ಮಾರ್ಚ್ 22 ಶನಿವಾರ ಸಂಪೂರ್ಣ ಕರ್ನಾಟಕ ಬಂದ್ ಆಗಿರಲಿದೆ ಎಂದು ಹೇಳಬಹುದು. ಜನರಿಗೆ ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಬೇರೆ ಯಾವುದೇ ಸೇವೆಗಳ್ಯ್ ಅಥವಾ ಅಥವಾ ವಸ್ತುಗಳು ಸಿಗುವುದಿಲ್ಲ. ಇನ್ನು ಶನಿವಾರ ಅಖಂಡ ಕರ್ನಾಟಕ ಬಂದ್ ಆಗಿರುವ ಕಾರಣ ಶಾಲಾ ಕಾಲೇಜುಗಳು ತೆರಯುತ್ತಾ ಅಥವಾ ಬಂದ್ ಇರುತ್ತಾ ಅನ್ನುವುದು ಸಾಕಷ್ಟು ವಿದ್ಯಾರ್ಥಿಗಳ ಪ್ರಶ್ನೆ ಕೂಡ ಆಗಿದೆ.
ಶನಿವಾರ ಅಖಂಡ ಕರ್ನಾಟಕ ಬಂದ್
ವಾಟಾಳ್ ನಾಗರಾಜ್ ನೇತೃತ್ವದ ತಂಡ ಮತ್ತು ಕನ್ನಡಪರ ಸಂಘಟನೆಗಳು ಶನಿವಾರ ಅಖಂಡ ಕರ್ನಾಟಕ ಬಂದ್ ಗೆ ಕರೆ ನೀಡಿದ್ದಾರೆ. ಶನಿವಾರ ಚಿತ್ರಮಂದಿರಗಳು, ಮಾಲ್ ಗಳು, KSRTC ಬಡ್ಡುಗಳು, BMTC ಬಸ್ಸುಗಳು, ಹೋಟೆಲ್ ಗಳು, ಉಬೆರ್, ಟ್ಯಾಕ್ಸಿ ಮತ್ತು ಆಟೋ ಚಾಲಕರು ಕೂಡ ಕರ್ನಾಟಕ ಬಂದ್ ಗೆ ಬೆಂಬಲ ಸೂಚಿಸಿದ್ದಾರೆ. ಶನಿವಾರ ಬೆಳಿಗ್ಗೆ ಮುಷ್ಕರವನ್ನು ಕರೆಯಲಾಗಿದೆ ಮತ್ತು ಸ್ವಾಭಿಮಾನ ಇರುವ ಯಾರು ಕೂಡ ತಮ್ಮ ವಾಹನ ಹೊರಗೆ ತರಬೇಡಿ ಎಂದು ವಾಹನ ಚಾಲಕರಲ್ಲಿ ಮನವಿ ಕೂಡ ಮಾಡಲಾಗಿದೆ.
ಶನಿವಾರ ಶಾಲಾ ಕಾಲೇಜು ರಜೆ ಇರುತ್ತಾ…?
ಅಖಂಡ ಕರ್ನಾಟಕ ಬಂದ್ ಆಗಿರುವ ಕಾರಣ ಶನಿವಾರ ಶಾಲಾ ಕಾಲೇಜುಗಳು ಇರುತ್ತಾ ಅಥವಾ ಇಲ್ಲವ ಅನ್ನುವ ಪ್ರಶ್ನೆ ಈಗ ಜನರಲ್ಲಿ ಮೂಡಿದೆ. ಇನ್ನು ಕರ್ನಾಟಕದಲ್ಲಿ ಶಿಕ್ಷಣ ಸಂಸ್ಥೆಗಳು ಬಂದ್ ಆಗುವುದರ ಬಗ್ಗೆ ಇನ್ನೂ ಕೂಡ ಅಧಿಕೃತ ಘೋಷಣೆ ಬಂದಿಲ್ಲ. ಶಾಲಾ ಮಕ್ಕಳಿಗೆ ಪರೀಕ್ಷೆ ನಡೆಯುತ್ತಿರುವುದರಿಂದ ಶಾಲೆಗಳು ರಜೆ ಘೋಷಣೆ ಮಾಡುವುದು ಅನುಮಾನ ಎಂದು ಕೂಡ ಹೇಳಲಾಗುತ್ತಿದೆ. ಇನ್ನೂ ಕೆಲವು ಮೂಲಗಳಿಂದ ತಿಳಿದುಬಂದಿರುವ ಮಾಹಿತಿಯ ಪ್ರಕಾರ, ದೂರ ಊರಿನಿಂದ ಶಾಲೆಗೆ ಬರುವ ಮಕ್ಕಳಿಗೆ ಬಸ್ ಇಲ್ಲದ ಕಾರಣ ಸಮಸ್ಯೆ ಉಂಟಾಬಹುದು ಎಂದು ರಜೆ ಘೋಷಣೆ ಮಾಡುವ ಸಂಭವ ಹೆಚ್ಚಿದೆ ಎಂದು ಕೂಡ ಹೇಳಲಾಗುತ್ತಿದೆ. 1 ರಿಂದ 8 ನೇ ತರಗತಿ ಮಕ್ಕಳಿಗೆ ಪರೀಕ್ಷೆ ನಡೆಯುತ್ತಿದ್ದು ಶಿಕ್ಷಣ ಇಲಾಖೆ ಯಾವ ರೀತಿಯ ಸುತ್ತೋಲೆ ಹೊರಡಿಸುತ್ತದೆ ಎಂದು ನಾವು ಕಾದು ನೋಡಬೇಕಾಗಿದೆ.
ಶನಿವಾರ ಏನೇನು ಇರುತ್ತೆ…?
ಮೆಡಿಕಲ್ ಶಾಪ್, ಹಾಲು, ಪೇಪರ್, ಆಸ್ಪತ್ರೆ, ಅಂಬುಲೆನ್ಸ್ ಸೇರಿದಂತೆ ಕೆಲವು ಅಗತ್ಯ ಸೇವೆಗಳು ಹೊರತುಪಡಿಸಿ ಬಹುತೇಕ ಕರ್ನಾಟಕ ಶನಿವಾರ ಬಂದ್ ಆಗಿರಲಿದೆ. ಶನಿವಾರ ಬಂದ್ ಗೆ ಬಹುತೇಕ ಎಲ್ಲಾ ಸಂಘಟನೆಗಳು ಕರೆ ಕೊಟ್ಟಿದ್ದು ಈ ಕರ್ನಾಟಕ ಬಂದ್ ಯಶಸ್ವಿಯಾಗವುದರಲ್ಲಿ ಎರಡು ಮಾತಿಲ್ಲ. ಸದ್ಯ ಕರ್ನಾಟಕ ಬಂದ್ ಗೆ ಸಂಬಂಧಿಸಿದಂತೆ ಇನ್ನಷ್ಟು ಮಾಹಿತಿಗಳು ನಾಳೆ ತಿಳಿದುಬರಲಿದೆ.