EPFO Money Withdrawal Method Online: ಸದ್ಯ ಕೇಂದ್ರ ಸರ್ಕಾರ ಹಣಕಾಸು ಕ್ಷೇತ್ರದಲ್ಲಿ ಹಲವು ಬದಲಾವಣೆ ಮಾಡಿದೆ ಎಂದು ಹೇಳಬಹುದು. ಜನರಿಗೆ ಹಣಕಾಸು ಕ್ಷೇತ್ರದಲ್ಲಿ ಕಷ್ಟವಾಗಬಾರದು ಮತ್ತು ಸುಲಭ ಹಣಕಾಸು ವ್ಯವಹಾರ ಮಾಡಬೇಕು ಅನ್ನುವ ಉದ್ದೇಶದಿಂದ ಕೇಂದ್ರ ಸರ್ಕಾರ ಕೆಲವು ಹಣಕಾಸು ನಿಯಮದಲ್ಲಿ ಬದಲಾವಣೆ ಮಾಡಿರುವುದನ್ನು ನಾವು ಗಮನಿಸಬಹುದು. ಇದರ ನಡುವೆ ಈಗ ಕೇಂದ್ರ ಸರ್ಕಾರ EPFO ಹಣ ಹಿಂಪಡೆಯುವ ವಿಧಾನದಲ್ಲಿ ಕೂಡ ಬಹುದೊಡ್ಡ ಬದಲಾವಣೆ ಮಾಡಿದೆ. ಇನ್ನುಮುಂದೆ PF ಖಾತೆ ಇರುವವರಿಗೆ ತಮ್ಮ PF ಖಾತೆಯಿಂದ ಸುಲಭವಾಗಿ ಹಣ ಹಿಂಪಡೆಯಬಹುದಾಗಿದೆ. PF ಖಾತೆಯಿಂದ ಹಣ ಹಿಂಪಡೆಯುವ ನಿಯಮದಲ್ಲಿ ಈಗ ಬಹುದೊಡ್ಡ ಬದಲಾವಣೆ ಮಾಡಲಾಗಿದೆ.
PF ಖಾತೆಯಿಂದ ಈಗ ಸುಲಭವಾಗಿ ಹಣ ಹಿಂಪಡೆಯಬಹುದು
ಹೌದು, ಈ ಹಿಂದೆ PF ಖಾತೆಯಿಂದ ಹಣ ಹಿಂಪಡೆಯಲು ಹಲವು ಬಾರಿ ಕಚೇರಿಗಳಿಗೆ ಅಲೆದಾಡಬೇಕಾಗಿತ್ತು, ಆದರೆ ಇನ್ನುಮುಂದೆ ಆ ಸಮಸ್ಯೆ ಇಲ್ಲ ಮತ್ತು ಸುಲಭವಾಗಿ ATM ಮೂಲಕ ಹಣ ಹಿಂಪಡೆಯಬಹುದು. ಹೌದು, PF ಖಾತೆ ಇರುವವರು ಮೊಬೈಲ್ ಮೂಲಕ UAN ವೆಬ್ಸೈಟ್ ಭೇಟಿನೀಡಿ ಇನ್ನುಮುಂದೆ ಸುಲಭವಾಗಿ ಹಣ ಹಿಂಪಡೆಯಬಹುದಾಗಿದೆ. ನಿಯಮದ ಪ್ರಕಾರ ನೌಕರರು ತಮ್ಮ PF ಭವಿಷ್ಯ ನಿಧಿಯಲ್ಲಿ ಒಮ್ಮೆಲೇ ಅಷ್ಟು ಹಿಂಪಡೆಯಬಹುದು, ಆದರೆ ಕೆಲವು ಸಮಯದಲ್ಲಿ ಒಂದು ನಿರ್ಧಿಷ್ಟ ಮೊತ್ತವನ್ನು ಮಾತ್ರ ಹಿಂಪಡೆಯಬಹುದಾಗಿದೆ.
ಆನ್ಲೈನ್ ಮೂಲಕ PF ಹಣ ಹಿಂಪಡೆಯುವುದು ಹೇಗೆ…?
ಆನ್ಲೈನ್ ಮೂಲಕ PF ಹಣ ಹಿಂಪಡೆಯುವವರು ಮೊಬೈಲ್ EPFO ಯುನೈಟೆಡ್ ಪೋರ್ಟಲ್ ಅಧಿಕೃತ ವೆಬ್ಸೈಟ್ ಆಗಿರುವ mem.epfindia.gov.in ವೆಬ್ಸೈಟ್ ಭೇಟಿನೀಡಿ ಅರ್ಜಿ ಸಲ್ಲಿಸಬೇಕು. ನೀವು ಅರ್ಜಿ ಸಲ್ಲಿಸಿದ ಕೆಲವು ದಿನಗಳ ಬಳಿಕ ನೀವು ಸಲ್ಲಿಸಿದ ಅರ್ಜಿ ಅನುಮೋಧನೆ ಆಗಿರುವ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಒಮ್ಮೆ ಅನುಮೋಧನೆ ದೊರೆತ ನಂತರ ನಿಮ್ಮ PF ಹಣವನ್ನು 10 ದಿನಗಳ ಒಳಗೆ ನಿಮ್ಮ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ.
ನೀವು ವೆಬ್ಸೈಟ್ ಭೇಟಿನೀಡಿದ ನಂತರ ಅಲ್ಲಿ ಪಾನ್ ಸಂಖ್ಯೆ, ಮೊಬೈಲ್ ಸಂಖ್ಯೆ, ಆಧಾರ್ ಸಂಖ್ಯೆ ಸೇರಿದಂತೆ ಹಲವು ಮಾಹಿತಿಯನ್ನು ಹಂಚಿಕೊಳ್ಳಬೇಕು. ಇನ್ನು ಈ ಸಮಯದಲ್ಲಿ ನೀವು ಫಾರ್ಮ್ 19, ಫಾರ್ಮ್ 10C ಮತ್ತು ಫಾರ್ಮ್ 31 ಕೂಡ ಭರ್ತಿ ಮಾಡಬೇಕು. ಇನ್ನು ಅಪ್ಲಿಕೇಶನ್ ಹಾಕುವ ಸಮಯದಲ್ಲಿ ನಿಮ್ಮ ಬ್ಯಾಂಕ್ ದಾಖಲೆ ಸರಿಯಾಗಿದೆಯಾ ಎಂದು ಖಚಿತಪಡಿಸಿಕೊಳ್ಳಬೇಕು, ಇಲ್ಲವಾದರೆ ನಿಮ್ಮ ಅಪ್ಲಿಕೇಶನ್ ರಿಜೆಕ್ಟ್ ಆಗುತ್ತದೆ. ಎಲ್ಲಾ ಪ್ರಕ್ರಿಯೆ ಪೂರ್ಣಮಾಡಿದ ನಂತರ ನೀವು OTP ಕೂಡ ನಮೂದಿಸಬೇಕಾಗುತ್ತದೆ. ಇದು ಆನ್ಲೈನ್ PF ಹಣವನ್ನು ಹಿಂಪಡೆಯುವ ಸುಲಭ ವಿಧಾನ ಆಗಿರುತ್ತದೆ. ಎಲ್ಲಾ ಹಂತವನ್ನು ಅನುಸರಿಸಿ ಅರ್ಜಿ ಸಲ್ಲಿಸಿದ ನಂತರ 10 ದಿನಗಳ ಒಳ್ಗಗೈ ಹಣ ನಿಮ್ಮ ಬ್ಯಾಂಕ್ ಖಾತೆಗೆ ಬರುತ್ತದೆ.