Income Tax Notice: 2025 ರ ವರ್ಷದಲ್ಲಿ ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದಂತೆ ಹಲವು ಹೊಸ ನಿಯಮಗಳನ್ನು ದೇಶದಲ್ಲಿ ಜಾರಿಗೆ ತರಲಾಗಿದೆ. ಹೌದು, ಈಗಿನ ಕಾಲದಲ್ಲಿ ಬ್ಯಾಂಕ್ ಖಾತೆ ಇಲ್ಲದೆ ಇರುವವರನ್ನು ಹುಡುಕುವುದು ಬಹಳ ಕಷ್ಟ, ದೇಶದಲ್ಲಿ ಪ್ರತಿಯೊಬ್ಬ ವ್ಯಕ್ತಿ ಕೂಡ ಯಾವುದಾದರೂ ಒಂದು ಬ್ಯಾಂಕಿನಲ್ಲಿ ಖಾತೆ ಹೊಂದಿರುತ್ತಾನೆ. ಇದರ ನಡುವೆ ಆದಾಯ ತೆರಿಗೆ ಬ್ಯಾಂಕ್ ಖಾತೆ ಇದ್ದವರಿಗೆ ಕೆಲವು ನಿಯಮಗಳನ್ನು ಕೂಡ ದೇಶದಲ್ಲಿ ಜಾರಿಗೆ ತಂದಿದೆ.
ಬ್ಯಾಂಕ್ ಖಾತೆ ಹೊಂದಿರುವವರು ಈ ತಪ್ಪುಗಳನ್ನು ಮಾಡಿದರೆ ಆದಾಯ ತೆರಿಗೆ ಇಲಾಖೆಯಿಂದ (Income Tax Department) ಕೆಲವು ಸಮಸ್ಯೆ ಎದುರಿಸಬೇಕಾಗುತ್ತದೆ ಮತ್ತು ಬ್ಯಾಂಕ್ ಖಾತೆ ಇದ್ದವರು ಈ ತಪ್ಪುಗಳನ್ನು ಮಾಡಿದರೆ ಆದಾಯ ತೆರಿಗೆ ಇಲಾಖೆಯಿಂದ ನೋಟೀಸ್ ಕೂಡ ಪಡೆದುಕೊಳ್ಳಬೇಕಾಗುತ್ತದೆ. ಹಾಗಾದರೆ ಆದಾಯ ತೆರಿಗೆ ಇಲಾಖೆಯಿಂದ ಬ್ಯಾಂಕ್ ಖಾತೆ ಇದ್ದವರಿಗೆ ಯಾವಾಗ ನೋಟೀಸ್ ಬರುತ್ತಾರೆ ಮತ್ತು ಯಾವ ತಪ್ಪು ಮಾಡಿದರೆ ನೋಟೀಸ್ ಬರುತ್ತದೆ ಅನ್ನುವುದರ ಬಗ್ಗೆ ಮಾಹಿತಿ ಇಲ್ಲಿದೆ.
ಬ್ಯಾಂಕ್ ಖಾತೆಯಲ್ಲಿ ಈ ತಪ್ಪು ಮಾಡಿದರೆ ಬರಲಿದೆ ತೆರಿಗೆ ನೋಟೀಸ್
ಸಾಮಾನ್ಯವಾಗಿ ಬ್ಯಾಂಕ್ ಖಾತೆಯಲ್ಲಿ ಒಂದು ನಿಯಮಿತ ಹಣಕಾಸಿನ ವ್ಯವಹಾರ ಮಾಡಬಹುದು. ಸೇವಿಂಗ್ ಖಾತೆಯಲ್ಲಿ ಹಣದ ವಹಿವಾಟು ಮಾಡುವುದಕ್ಕೆ ಕೆಲವು ನಿಯಮಗಳನ್ನು ಜಾರಿಗೊಳಿಸಲಾಗಿದೆ ಮತ್ತು ಆ ನಿಯಮದ ಅಡಿಯಲ್ಲಿ ಹಣದ ವಹಿವಾಟು ಮಾಡಬೇಕಾಗುತ್ತದೆ. ಅದೇ ರೀತಿಯಲ್ಲಿ ಬ್ಯಾಂಕ್ ಖಾತೆಯಲ್ಲಿ ಕಡಿಮೆ ಸಮಯದಲ್ಲಿ ಅನಿಯಮಿತ ಹಣದ ವಹಿವಾಟು ಮಾಡಿದರೆ ತೆರಿಗೆ ಇಲಾಖೆಯಿಂದ ನಿಮಗೆ ನೋಟೀಸ್ ಬರುವುದರಲ್ಲಿ ಯಾವುದೇ ಸಂದೇಹ ಇಲ್ಲ. ಸಾಮಾನ್ಯವಾಗಿ ತೆರಿಗೆ ಇಲಾಖೆ ನಿಮ್ಮ ಬ್ಯಾಂಕ್ ಖಾತೆಯ ವಹಿವಾಟಿನ ಮೇಲೆ ಹದ್ದಿನ ಕಣ್ಣು ಇಟ್ಟಿರುತ್ತದೆ ಮತ್ತು ಅನುನು ಬಾಹಿರವಾಗಿ ಹಣಕಾಸಿನ ವಹಿವಾಟು ಮಾಡಿದರೆ ನಿಮಗೆ ತೆರಿಗೆ ಇಲಾಖೆಯಿಂದ ನೋಟೀಸ್ ಕಳುಹಿಸಲಾಗುತ್ತದೆ.
ಆದಾಯ ತೆರಿಗೆ ಇಲಾಖೆಯಿಂದ ಯಾವ ನೋಟೀಸ್ ಬರುತ್ತದೆ
* ನೀವು ಅಂತಾರಾಷ್ಟ್ರೀಯ ಪ್ರಯಾಣಕ್ಕೆ ಒಂದೇ ವರ್ಷಕ್ಕೆ ಎರಡು ಲಕ್ಷಕ್ಕಿಂತ ಅಧಿಕ ಹಣ ಖರ್ಚು ಮಾಡಿದರೆ ನೀವು ತೆರಿಗೆ ಇಲಾಖೆಯಿಂದ ಸಮಸ್ಯೆ ಅನುಭವಿಸಬೇಕಾಗುತ್ತದೆ.
* ನೀವು ನಿಮ್ಮ ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಕ್ಯಾಶ್ ಪೇಮೆಂಟ್ ಮೂಲಕ ಮಾಡಿದರೆ ತೆರಿಗೆ ಇಲಾಖೆಯಿಂದ ನೋಟೀಸ್ ಬರುವ ಸಾಧ್ಯತೆ ಹೆಚ್ಚಿದೆ.
* ತಿಂಗಳಿಗೆ 1 ಲಕ್ಷಕ್ಕಿಂತ ಅಧಿಕ ಕ್ರೆಡಿಟ್ ಕಾರ್ಡ್ ಬಿಲ್ ಪೇಮೆಂಟ್ ಮಾಡಿದರೆ ನೀವು ತೆರಿಗೆ ಇಲಾಖೆಯಿಂದ ನೋಟೀಸ್ ಪಡೆಯಬೇಕಾಗುತ್ತದೆ.
* ನೀವು ಪ್ರತಿ ತಿಂಗಳು ಲಕ್ಷ ಲಕ್ಷ ಬಿಲ್ ಗಳನ್ನೂ ಕ್ಯಾಶ್ ಪೇಮೆಂಟ್ ಮೂಲಕ ಮಾಡಿದರೆ ನೀವು ಕಪ್ಪು ಹಣ ಹೊಂದಿದ್ದೀರಿ ಎಂದು ತೆರಿಗೆ ಇಲಾಖೆ ನಿಮಗೆ ನೋಟೀಸ್ ಕಳುಹಿಸುವ ಸಾಧ್ಯತೆ ಹೆಚ್ಚಿದೆ.
* ಒಂದೇ ವರ್ಷದಲ್ಲಿ ಷೇರು ಮಾರುಕಟ್ಟೆ, ಮ್ಯೂಚುಯಲ್ ಫಂಡ್ ಅಥವಾ ಇತರೆ ಯಾವುದೇ ಹಣಕಾಸು ಕ್ಷೇತ್ರದಲ್ಲಿ 10 ಲಕ್ಷಕ್ಕಿಂತ ಅಧಿಕ ಹಣ ಹೂಡಿಕೆ ಮಾಡಿದರೆ ನಿಮಗೆ ತೆರಿಗೆ ಇಲಾಖೆಯಿಂದ ನೋಟೀಸ್ ಬರುವ ಸಾಧ್ಯತೆ ಹೆಚ್ಚಿದೆ.
* ಸೇವಿಂಗ್ ಬ್ಯಾಂಕ್ ಖಾತೆಯಲ್ಲಿ ಒಂದೇ ಬಾರಿಗೆ 10 ಲಕ್ಷಕ್ಕಿಂತ ಅಧಿಕ ಹಣವನ್ನು ಠೇವಣಿ ಮಾಡಿದರೆ ನೀವು ತೆರಿಗೆ ಇಲಾಖೆಯ ಕೆಂಗಣ್ಣಿಗೆ ಒಳಪಡಬೇಕಾಗುತ್ತದೆ.
* ಪದೇ ಪದೇ 50 ಸಾವಿರಕ್ಕಿಂತ ಅಧಿಕ ನಗದು ಪೇಮೆಂಟ್ ಮಾಡಿದರೂ ಕೂಡ ತೆರಿಗೆ ಇಲಾಖೆಯಿಂದ ನೋಟೀಸ್ ಬರುವ ಸಾಧ್ಯತೆ ಹೆಚ್ಚಿದೆ.