Karnataka Bandh Update: ನಾಳೆ ಕರ್ನಾಟಕ ಬಂದ್ (Karnataka Bandh), ಹೌದು ಮರಾಠರ ಅಟ್ಟಹಾಸದ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಹಲವು ಬೇಡಿಕೆ ಈಡೇರುವ ಸಲುವಾಗಿ ನಾಳೆ ಅಖಂಡ ಕರ್ನಾಟಕ ಬಂದ್ ಕರೆ ನೀಡಲಾಗಿದೆ. ನಾಳೆ ಬಹುತೇಕ ಕರ್ನಾಟಕ ಬಂದ್ ಇರಲಿದ್ದು ಜನರಿಗೆ ಕೆಲವು ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಬೇರೆ ಸೇವೆಗಳು ಸಿಗುವುದಿಲ್ಲ. ವಾಟಾಳ್ ನಾಗರಾಜ್ ಅವರ ನೇತೃತ್ವದಲ್ಲಿ ಈ ಮೂಷಕರ ನಡೆಯುತ್ತಿದ್ದು ಬೆಳಿಗ್ಗೆ 6 ಘಂಟೆಯಿಂದ ಸಂಜೆ 6 ಘಂಟೆ ತನಕ ಸಂಪೂರ್ಣ ಕರ್ನಾಟಕ ಬಂದ್ ಆಗಿರಲಿದೆ. ಹಾಗಾದರೆ ನಾಳಿನ ಕರ್ನಾಟಕ ಬಂದ್ ಹೇಗಿರುತ್ತೆ, ನಾಳೆ ರಾಜ್ಯದಲ್ಲಿ ಏನಿರುತ್ತೆ ಮತ್ತು ಏನಿರಲ್ಲ, ನಾಳೆ ಮನೆಯಿಂದ ಹೊರಬರುವ ಮುನ್ನ ನಾವು ತಿಳಿದಿಕೊಳ್ಳಬೇಕಾದ ಅಂಶ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ನಾಳೆ ಅಖಂಡ ಕರ್ನಾಟಕ ಬಂದ್
ಬೆಳಗಾವಿಯಲ್ಲಿ ಮಾರಾಟ ಅಟ್ಟಹಾಸ ಮತ್ತು ಬಸ್ ಕಂಡಕ್ಟರ್ ಮೇಲೆ ಆದ ಹಲ್ಲೆ, ಇವೆಲ್ಲವನ್ನೂ ಗಮನದಲ್ಲಿ ಇರಿಸಿಕೊಂಡು ನಾಳೆ ಅಖಂಡ ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ. ನಾಳೆ ಕರ್ನಾಟಕದಲ್ಲಿ ಬಹುತೇಕ ಎಲ್ಲಾ ಕಚೇರಿಗಳು ಬಂದ್ ಆಗಿರಬೇಕು ಮತ್ತು ಬಸ್, ಟ್ಯಾಕ್ಸಿ, ಉಬೆರ್ ಮತ್ತು ಆಟೋ ಕೂಡ ಸಿಗುವುದಿಲ್ಲ. KSRTC ನೌಕರರು, BMTC ನೌಕರರು, ಉಬೆರ್ ಮತ್ತು ಟ್ಯಾಕ್ಸಿ ಹಾಗಿ ಆಟೋ ರಿಕ್ಷಾ ಚಾಲಕರು ಕೂಡ ಬಂದ್ ಗೆ ಬೆಂಬಲ ಸೂಚಿಸಿದ್ದಾರೆ. ನಾಳೆ 12 ಘಂಟೆಗಳ ಕಾಲ ಬಂದ್ ಇರಲಿದ್ದು ಜನರು ಮನೆಯಿಂದ ಹೊರಬರುವ ಮುನ್ನ ಕೆಲವು ಅಂಶಗಳನ್ನು ತಿಳಿದುಕೊಳ್ಳಬೇಕು.
ನಾಳೆ ಮನೆಯಿಂದ ಹೊರಬರುವ ಮುನ್ನ ಎಚ್ಚರ
ಹೌದು, ನಾಳೆ ಅಖಂಡ ಕರ್ನಾಟಕ ಬಂದ್ ಗೆ ಕರೆ ನೀಡಲಾಗಿತ್ತು ನಾಳೆ ಸಂಪೂರ್ಣ ಕರ್ನಾಟಕ ಬಂದ್ ಆಗಿರಲಿದೆ. ಸಂಪೂರ್ಣ ಕರ್ನಾಟಕ ಬಂದ್ ಇರುವ ಕಾರಣ ನಾಳೆ ಬಸ್ KSRTC ಮತ್ತು BMTC ಬಸ್ ಸೇವೆ ಕೂಡ ಇರುವುದಿಲ್ಲ. ನಾಳೆ ಬಸ್ ಸೇವೆ ಇಲ್ಲದ ಕಾರಣ ದೂರ ಊರಿಗೆ ಹೋಗುವವರು ನಾಳೆ ಹೋಗದೆ ಇರುವುದು ಒಳ್ಳೆಯದು ಮತ್ತು ದೂರ ಪ್ರಯಾಣ ನಾಳೆ ಮಾಡಬೇಕು ಅಂದರೆ ನೀವು ಬಸ್ ಸಮಸ್ಯೆ ಖಂಡಿತವಾಗಿ ಎದುರಿಸಬೇಕಾಗುತ್ತದೆ. ಅದೇ ರೀತಿಯಲ್ಲಿ ನಾಳೆ ಹೋಟೆಲ್ ಕೂಡ ಬಂದ್ ಆಗಿರಲಿದೆ. ಹೋಟೆಲ್ ಮಾಲೀಕರು ಈ ಬಂದ್ ಬೆಂಬಲ ಸೂಚಿಸಿದ್ದು ಎಲ್ಲಾ ಹೋಟೆಲ್ ಬಂದ್ ಆಗಿರುವ ಕಾರಣ ನಾಳೆ ನಿಮಗೆ ಹೋಟೆಲ್ ಆಹಾರ ಸಿಗುವುದಿಲ್ಲ. ಟ್ಯಾಕ್ಸಿ, ಉಬೆರ್ ಮತ್ತು ಆಟೋ ರಿಕ್ಷಾ ಚಾಲಕರು ಕೂಡ ಬಂದ್ ಗೆ ಬೆಂಬಲ ಸೂಚಿಸಿದ್ದು ನಾಳೆ ನೀವು ಈ ಸೇವೆ ಕೂಡ ಸಿಗುವುದಿಲ್ಲ. ಮೆಡಿಕಲ್. ಅಂಬುಲೆನ್ಸ್, ಹಾಲು ಮತ್ತು ಕೆಲವು ಅಗತ್ಯ ಸೇವೆ ಹೊರತುಪಡಿಸಿ ಬಹುತೇಕ ಕರ್ನಾಟಕ ನಾಳೆ ಬಂದ್ ಆಗಿರಲಿದೆ.
ನಾಳೆ ಶಾಲೆ ಮತ್ತು ಕಾಲೇಜಿಗೆ ರಜೆ ಇದೆಯಾ
ನಾಳೆ ಅಖಂಡ ಕರ್ನಾಟಕ ಬಂದ್ ಆಗಿರುವ ಕಾರಣ ಶಾಲೆ ಮತ್ತು ಕಾಲೇಜಿಗೆ ರಜೆ ಇದೆಯಾ ಅಥವಾ ಇಲ್ಲವಾ ಅನ್ನುವ ಪ್ರಶ್ನೆ ಈಗ ಉಂಟಾಗಿದೆ. ಇನ್ನು ಇದರ ಬಗ್ಗೆ ಮಾತನಾಡಿದ ಮಧು ಬಂಗಾರಪ್ಪ ಅವರು ನಾಳಿನ ಪರಿಸ್ಥಿತಿ ಕಂಡು ನಿರ್ಧಾರ ತಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ನಾಳೆ ಅಖಂಡ ಕರ್ನಾಟಕ ಬಂದ್ ಯಶಸ್ವಿಯಾದರೆ ಖಂಡಿತವಾಗಿ ಶಾಲೆ ಮತ್ತು ಕಾಲೇಜಿಗೂ ಕೂಡ ರಜೆ ಇರಲಿದೆ.