Dhootha: ಧರ್ಮಸ್ಥಳದ ಬಗ್ಗೆ ವಿಡಿಯೋ ಮಾಡಿದ್ದ ಸಮೀರ್ ಗೆ ಇನ್ನೊಂದು ಸಂಕಷ್ಟ, ಬಂತು ಕೋರ್ಟ್ ನೋಟೀಸ್

Dhootha Sameer MD Videos: ಸದ್ಯ Youtube ನಲ್ಲಿ ಸಕತ್ ಟ್ರೆಂಡ್ ಸ್ಥಾನದಲ್ಲಿ ಇರುವ ವ್ಯಕ್ತಿ ಅಂದರೆ ಅದು Dhootha Sameer MD ಎಂದು ಹೇಳಬಹುದು. ಹೌದು, ಧರ್ಮಸ್ಥಳ ಸೌಜನ್ಯ (Dharmasthala Soujanya) ಕೇಸ್ ಗೆ ಸಂಬಂಧಿಸಿದಂತೆ Dhootha Sameer MD ಅವರು ಒಂದು ವಿಡಿಯೋ ತಮ್ಮ Youtube ಚಾನೆಲ್ ಶೇರ್ ಮಾಡಿದ್ದು ಸದ್ಯ ಆ ವಿಡಿಯೋವನ್ನು ಸುಮಾರು 2 ಕೋಟಿ ಜನರು ವೀಕ್ಷಣೆ ಮಾಡಿದ್ದಾರೆ. ಹೌದು, ಧರ್ಮಸ್ಥಳ ದೇವಸ್ಥಾನದ (Dharmasthala Temple History) ಇತಿಹಾಸ ಮತ್ತು ಸೌಜನ್ಯ ಪ್ರಕರಣ ಹಾಗು ಇತರೆ ಪ್ರಕರಣಕ್ಕೆ ಸಂಬಂಧಿಸಿದಂತೆ Dhootha Sameer MD ಅವರು ಒಂದು ವಿಡಿಯೋ ಮಾಡಿ ಅದನ್ನು ತಮ್ಮ Youtube ಚಾನೆಲ್ ನಲ್ಲಿ ಶೇರ್ ಮಾಡುವುದರ ಮೂಲಕ ಕರ್ನಾಟಕದಲ್ಲಿ ದೊಡ್ಡ ಸಂಚಲನ ಮೂಡಿಸಿದ್ದರು.

WhatsApp Group Join Now
Telegram Group Join Now

Dhootha Sameer MD ಅವರಿಗೆ ಬಂತು ಸಾಕಷ್ಟು ಬೆದರಿಕೆ
Dhootha Sameer MD ಅವರು Youtube ನಲ್ಲಿ ಸೌಜನ್ಯ ವಿಡಿಯೋ ಶೇರ್ ಮಾಡಿದ ನಂತರ ಅವರಿಗೆ ಸಾಕಷ್ಟು ಬೆದರಿಕೆ ಕರೆಗಳು ಬಂದವು ಎಂದು ಸ್ವತಃ ಸಮೀರ್ ಅವರೇ ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ. ಇದರ ನಡುವೆ Dhootha Sameer MD ಅವರು ಇನ್ನೊಂದು ವಿಡಿಯೋ ತಮ್ಮ Youtube ಚಾನೆಲ್ ನಲ್ಲಿ ಶೇರ್ ಮಾಡಿದ್ದಾರೆ. ಹೌದು, ಸೌಜನ್ಯ ಪ್ರಕರಣದ ತನಿಖೆ ಹೇಗಾಯಿತು, ಪೊಲೀಸರು ಏಕೆ ತನಿಖೆ ಸರಿಯಾಗಿ ಮಾಡಲಿಲ್ಲ, ಸಾಕ್ಷಿ ನಾಶ ಹೇಗೆ ಮಾಡಿದರು ಮತ್ತು ಧರ್ಮಸ್ಥಳದಲ್ಲಿ ಏನೇನು ಆಗಿದೆ ಅನ್ನುವುದರ ಬಗ್ಗೆ ಸಾಕ್ಷಿ ತೋರಿಸುವ ಇನ್ನೊಂದು ವಿಡಿಯೋ ಶೇರ್ ಮಾಡುವುದರ ಮೂಲಕ ಮತ್ತೆ ಸಮೀರ್ ಅವರು Youtube ನಲ್ಲಿ ದೊಡ್ಡ ಸಂಚಲನ ಮೂಡಿಸಿದ್ದಾರೆ.

Dhootha Sameer MD ಗೆ ಬಂತು ಕೋರ್ಟ್ ನೋಟೀಸ್
ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರು ಕೂಡ ಧರ್ಮಸ್ಥಳದ ಬಗ್ಗೆ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಬಾರದು. ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬದವರ ಮತ್ತು ಧರ್ಮಸ್ಥಳದ ಸಂಸ್ಥೆಯ ವಿರುದ್ಧ ಯಾರು ಕೂಡ ಮಾನಹಾನಿ ಹೇಳಿಕೆ ನೀಡಬಾರದು ಎಂದು ಕೋರ್ಟ್ ಈ ಹಿಂದೆ ಆದೇಶವನ್ನು ಹೊರಡಿಸಿತ್ತು. ಕೋರ್ಟ್ ಆದೇಶ ಇದ್ದರೂ ಕೂಡ ಸಮೀರ್ MD ಅವರು ವಿಡಿಯೋ ಹಾಕಿ ಧರ್ಮಸ್ಥಳದ ಮತ್ತು ವೀರೇಂದ್ರ ಹಗ್ಗಡೆ ಅವರ ಕುಟುಂಬದ ಮಾನಹಾನಿ ಮಾಡಿದ್ದಾರೆ ಎಂದು ಕೋರ್ಟ್ ತಕ್ಷಣ ಆ ವಿಡಿಯೋ ಡಿಲೀಟ್ ಮಾಡುವಂತೆ ಸಮೀರ್ MD ಅವರಿಗೆ ನೋಟೀಸ್ ಜಾರಿ ಮಾಡಿದೆ.

ಇನ್ನು Youtuber ಆಗಿರುವ ಸಮೀರ್ MD ಅವರ ಮೇಲೆ ಪ್ರಧಾನ ಸಿಟಿ ಸಿವಿಲ್ ಕೋರ್ಟ್ ನಲ್ಲಿ ಈಗಾಗಲೇ ತಡೆಯಾಜ್ಞೆ ಇದೆ. ಧರ್ಮಸ್ಥಳ, ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬದವರ ಮೇಲೆ ಮಾನಹಾನಿ ವಿಡಿಯೋ ಮಾಡದಂತೆ ಕೋರ್ಟ್ ತಡೆಯಾಜ್ಞೆ ನೀಡಿದ್ದು ತಕ್ಷಣ Dhootha Sameer MD ಅವರು ತಮ್ಮ Youtube ಚಾನೆಲ್ ವಿಡಿಯೋ ಡಿಲೀಟ್ ಮಾಡಬೇಕು ಎಂದು ಆದೇಶ ಹೊರಡಿಸಿದೆ.

ಇನ್ನು ಅಷ್ಟೇ ಮಾತ್ರವಲ್ಲದೆ Facebook , Youtube , Instagram ಸೇರಿದಂತೆ ಯಾವುದೇ ಸಾಮಾಜಿಕ ಜಾಲತಾಣದಲ್ಲಿ ಧರ್ಮಸ್ಥಳ ದೇವಸ್ಥಾನ, ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬದ ಮೇಲೆ ಮಾನಹಾನಿಯಾಗುವ ವಿಡಿಯೋ ಅಥವಾ ಫೋಟೋ ಶೇರ್ ಮಾಡಬಾರದು ಎಂದು ಕೋರ್ಟ್ ತಡೆಯಾಜ್ಞೆ ಹೊರಡಿಸಿದೆ. ಸದ್ಯ ಕೋರ್ಟ್ ತಡೆಯಾಜ್ಞೆ ಇರುವ ಕಾರಣ Dhootha Sameer MD ಅವರು ತಮ್ಮ ವಿಡಿಯೋ ಈಗ ಡಿಲೀಟ್ ಮಾಡಬೇಕಾಗಿದೆ.

Leave a Comment