Indian Railways: ರೈಲು ಪ್ರಯಾಣ ಮಾಡುವ ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್, ಇನ್ಮುಂದೆ 5 ಸೇವೆ ಉಚಿತ

Indian Railways Facilities: ಭಾರತೀಯ ರೈಲ್ವೆ (Indian Railway) ಈಗಾಗಲೇ ರೈಲಿನಲ್ಲಿ ಪ್ರಯಾಣ ಮಾಡುವವರಿಗೆ ಹಲವು ಹೊಸ ನಿಯಮ ಮತ್ತು ಹೊಸ ಸೇವೆಗಳನ್ನು ಜಾರಿಗೆ ತರುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಬಹುದು. ಹೌದು, ರೈಲಿನಲ್ಲಿ ಪ್ರಯಾಣ ಸುಖಕರವಾಗಿ ಇರಬೇಕು ಮತ್ತು ರೈಲು ಪ್ರಯಾಣ ಮಾಡುವವರಿಗೆ ಯಾವುದೇ ಕುಂದುಕೊರತೆ ಉಂಟಾಗಬಾರದು ಅನ್ನುವ ಉದ್ದೇಶದಿಂದ ಭಾರತೀಯ ರೈಲ್ವೆ ಈಗಾಗಲೇ ಹಲವು ಯೋಜನೆಯನ್ನು ಜಾರಿಗೆ ತಂದಿದೆ. ಇದರ ನಡುವೆ ಈಗ ಭಾರತೀಯ ರೈಲ್ವೆ ರೈಲು ಪ್ರಯಾಣ ಮಾಡುವ ಹಿರಿಯ ನಾಗರಿಕರಿಗೆ 5 ಹೊಸ ಸೇವೆಯನ್ನು ಜಾರಿಗೆ ತರುವುದರ ಮೂಲಕ ಎಲ್ಲಾ ರೈಲು ಪ್ರಯಾಣಿಕರಿಗೆ ಮತ್ತು ವಿಶೇಷವಾಗಿ ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್ ನೀಡಿದೆ ಎಂದು ಹೇಳಬಹುದು.

WhatsApp Group Join Now
Telegram Group Join Now

ರೈಲು ಪ್ರಯಾಣ ಮಾಡುವ ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್
ದೇಶದಲ್ಲಿ ಕರೋನ ಮಹಾಮಾರಿ ಕಾಣಿಸಿಕೊಂಡ ಸಮಯದಲ್ಲಿ ಭಾರತೀಯ ರೈಲ್ವೆ ರೈಲು ಪ್ರಯಾಣ ಮಾಡುವ ಹಿರಿಯ ನಾಗರಿಕರಿಗೆ ಟಿಕೆಟ್ ದರದಲ್ಲಿ ರಿಯಾಯಿತಿ ಘೋಷಣೆ ಮಾಡುವುದರ ಮೂಲಕ ಗುಡ್ ನ್ಯೂಸ್ ನೀಡಿತ್ತು. ಕೆಲವು ಸಮಯ ಹಿರಿಯ ನಾಗರಿಕರಿಗೆ ಟಿಕೆಟ್ ದರದಲ್ಲಿ ರಿಯಾಯಿತಿ ಘೋಷಣೆ ಮಾಡಿದ ರೈಲ್ವೆ ಇಲಾಖೆ ನಂತರ ಅದನ್ನು ಸ್ಥಗಿತ ಮಾಡಿತ್ತು. ಟಿಕೆಟ್ ದರದಲ್ಲಿ ರಿಯಾಯಿತಿ ಹೊರತುಪಡಿಸಿ ಹಿರಿಯ ನಾಗರಿಕರು ಈ 5 ಸೇವೆಯನ್ನು ರೈಲಿನಲ್ಲಿ ಪಡೆದುಕೊಳ್ಳಬಹುದು.

  • ಸದ್ಯ ಭಾರತೀಯ ರೈಲ್ವೆ ಹಿರಿಯ ನಾಗರಿಕರಿಗೆ ಲೋವರ್ ಬರ್ತ್ ಫೆಸಿಲಿಟಿ ಕೊಟ್ಟಿದೆ. ಹೌದು, ಹಿರಿಯ ನಾಗರಿಕರು ಟಿಕೆಟ್ ಮಾಡುವ ಸಮಯದಲ್ಲಿ ಅವರಿಗೆ IRTC ಲೋವರ್ ಬರ್ತ್ ಟಿಕೆಟ್ ನಿಗದಿ ಮಾಡುತ್ತದೆ. ಸ್ಲೀಪರ್ ಕೋಚ್, AC ಕೋಚ್ ಮತ್ತು ಯಾವುದೇ ಭೋಗಿಯನ್ನು ಪ್ರಯಾಣ ಮಾಡುವ ಸಮಯದಲ್ಲಿ ಅವರು ಲೋವರ್ ಬರ್ತ್ ಟಿಕೆಟ್ ಪಡೆಯಬಹುದು.
  • ಇನ್ನು ಭಾರತೀಯ ರೈಲ್ವೆಯಲ್ಲಿ ಪ್ರಯಾಣ ಮಾಡುವ ಹಿರಿಯ ನಾಗರಿಕರಿಗೆ ವೀಲ್ ಚೇರ್ ವ್ಯವಸ್ಥೆ ಕೂಡ ಎಲ್ಲಾ ರೈಲು ನಿಲ್ದಾಣಗಳಲ್ಲಿ ಮಾಡಲಾಗಿದೆ. ಕೆಲವು ಹಿರಿಯ ನಾಗರಿಕರಿಗೆ ನಡೆದಳು ಮತ್ತು ಒಂದು ಫ್ಲಾಟ್ ಫಾರ್ಮ್ ನಿಂದ ಇನ್ನೊಂದು ಫ್ಲಾಟ್ ಫಾರ್ಮ್ ಗೆ ಹೋಗಲು ಕಷ್ಟವಾಗುತ್ತದೆ, ಅಂತಹ ಸಮಯದಲ್ಲಿ ಹಿರಿಯ ನಾಗರಿಕರು ಈ ವೀಲ್ ಚೇರ್ ಸೇವೆಯನ್ನು ಪಡೆದುಕೊಳ್ಳಬಹುದು.

 

  • ರೈಲು ಪ್ರಯಾಣ ಮಾಡುವ ಹಿರಿಯ ನಾಗರಿಕರಿಗೆ ಮತ್ತು ಅಂಗವಿಕಲರಿಗೆ ಪ್ರತ್ಯೇಕ ಟಿಕೆಟ್ ಕೌಂಟರ್ ಕೂಡ ನಿಗದಿ ಮಾಡಲಾಗಿದೆ. ಹಿರಿಯ ನಾಗರಿಕರು ಮತ್ತು ಅಂಗವೀಕಲರು ಯಾವುದೇ ಸರದಿ ಸಾಲಿನಲ್ಲಿ ನಿಲ್ಲದೆ ಈ ಕೌಂಟರ್ ಮೂಲಕ ಟಿಕೆಟ್ ಪಡೆದುಕೊಳ್ಳಬಹುದು.
  • ರೈಲ್ವೆ ನಿಲ್ದಾಣಗಳಲ್ಲಿ ಹಿರಿಯ ನಾಗರೀಕರಿಗಾಗಿ ಮತ್ತು ಅಂಗವಿಕಲರಿಗಾಗಿ ಬ್ಯಾಟರಿ ಜಿಹಾದಿಗಳನ್ನು ಕೂಡ ಇಡಲಾಗಿದೆ. ಹಿರಿಯ ನಾಗರಿಕರು ಮತ್ತು ಅಂಗವಿಕಲರು ಈ ಬ್ಯಾಟರಿ ಗಾಡಿ ಮೂಲಕ ಪ್ರಯಾಣ ಮಾಡಬಹುದು ಮತ್ತು ಲಗೇಜ್ ಕೂಡ ತಗೆದುಕೊಂಡು ಹೋಗಬಹುದು
  • ಲೋಕಲ್ ರೈಲಿನಲ್ಲಿ ಪ್ರಯಾಣ ಮಾಡುವ ಹಿರಿಯ ನಾಗರಿಕರಿಗೆ ಸ್ಪೆಷಲ್ ಟಿಕೆಟ್ ಗಳನ್ನೂ ಕೊಡಲಾಗುತ್ತದೆ. ಲಾಕರ್ ರೈಲುಗಳಲ್ಲಿ ಪ್ರಯಾಣ ಮಾಡುವ ಸಮಯದಲ್ಲಿ ಹಿರಿಯ ನಾಗರಿಕರು ಈ ಸೇವೆಯನ್ನು ಪಡೆದುಕೊಳ್ಳಬಹುದು.

 

Leave a Comment