Inherited Property Sale: ಆಸ್ತಿ ತಕರಾರುಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಈಗಾಗಲೇ ದೇಶದಲ್ಲಿ ಹಲವು ಹೊಸ ನಿಯಮ ಜಾರಿಗೆ ತಂದಿದೆ. ಹೌದು, ಆಸ್ತಿ ಮಾರಾಟ, ಆಸ್ತಿ ಮತ್ತು ಮತ್ತು ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಪಡೆದುಕೊಳ್ಳುವುದಕ್ಕೂ ಕೂಡ ಕೇಂದ್ರ ಸರ್ಕಾರ ಹಲವು ನಿಯಮಗಳನ್ನು ಜಾರಿಗೆ ತಂದಿದೆ. ಸಾಮಾನ್ಯವಾಗಿ ಪಿತ್ರಾರ್ಜಿತ ಆಸ್ತಿಯಲ್ಲಿ (Inherited Property) ಅಧಿಕಾರ ಎಲ್ಲರಿಗೂ ಇದ್ದೆ ಇರುತ್ತದೆ. ತಮ್ಮ ಪೂರ್ವಜರಿಂದ ಬರುವ ಆಸ್ತಿಯಲ್ಲಿ ಪಾಲು ಪಡೆಯುವ ಹಕ್ಕು ಕುಟುಂಬದ ಎಲ್ಲರೂ ಕೂಡ ಹೊಂದಿರುತ್ತಾರೆ. ಈ ನಡುವೆ ಸಾಕಷ್ಟು ಜನರು ಪಿತ್ರಾರ್ಜಿತ ಆಸ್ತಿಯಲ್ಲಿ ಮಾರಾಟ ಮಾಡಬಹುದಾ ಮತ್ತು ಪಿತ್ರಾರ್ಜಿತ ಆಸ್ತಿಯಲ್ಲಿ ವಾರಸುದಾರರ ಒಪ್ಪಿಗೆ ಇಲ್ಲದೆ ಮಾರಾಟ ಮಾಡಬಹುದಾ ಅನ್ನುವ ಪ್ರಶ್ನೆಯನ್ನು ಇಟ್ಟಿದ್ದಾರೆ.
ಪಿತ್ರಾರ್ಜಿತ ಆಸ್ತಿಯಲ್ಲಿ ವಾರಸುದಾರರ ಒಪ್ಪಿಗೆ ಇಲ್ಲದೆ ಮಾರಾಟ ಮಾಡಬಹುದಾ…?
ನಿಜ ಹೇಳಬೇಕು ಅಂದರೆ ಈಗಿನ ಕಾಲದಲ್ಲಿ ಪ್ರತಿಯೊಬ್ಬರ ಮನೆಯಲ್ಲಿ ಆಸ್ತಿ ವಿವಾದಗಳು ನಡೆಯುತ್ತಿದೆ ಎಂದು ಹೇಳಬಹುದು. ಇನ್ನು ಪೂರ್ವಜರ ಆಸ್ತಿ ವಿಚಾರವಾಗಿ ಆಗಾಗ ತಕರಾರುಗಳು ಬರುತ್ತಲೇ ಇರುತ್ತದೆ. ಕಾನೂನು ಪ್ರಕಾರ ಪಿತ್ರಾರ್ಜಿತ ಆಸ್ತಿಯನ್ನು ಮಾರಾಟ ಮಾಡುವಂತೆ ಇಲ್ಲ ಮತ್ತು ಮಾರಾಟ ಮಾಡುವ ಮುನ್ನ ಅದರ ವಾರಸುದಾರರ ಒಪ್ಪಿಗೆ ಪಡೆದುಕೊಳ್ಳಬೇಕು ಎಂದು ಹೇಳಲಾಗಿದೆ. ಇದರ ನಡುವೆ ಕೆಲವು ಪಿತ್ರಾರ್ಜಿತ ಆಸ್ತಿಯಲ್ಲಿ ವಾರಸುದಾರರ ಒಪ್ಪಿಗೆ ಇಲ್ಲದೆ ಮಾರಾಟ ಮಾಡಬಹುದಾ ಅನ್ನುವ ಪ್ರಶ್ನೆಯನ್ನು ಕೂಡ ಕಾನೂನಿನ ಮುಂದೆ ಇಟ್ಟಿದ್ದಾರೆ.
ಕಾನೂನು ನಿಯಮದ ಪ್ರಕಾರ ಯಾವುದೇ ಒಬ್ಬ ವ್ಯಕ್ತಿ ತನ್ನ ಕುಟುಂಬದ ಆಸ್ತಿಯನ್ನು ಮಾರಾಟ ಮಾಡುವ ಹಕ್ಕು ಹೊಂದಿರುವುದಿಲ್ಲ. ಪಿತ್ರಾರ್ಜಿತ ಆಸ್ತಿಯಲ್ಲಿ ಕುಟುಂಬದ ಎಲ್ಲರಿಗೂ ಪಾಲು ಇರುತ್ತದೆ ಮತ್ತು ಆ ಆಸ್ತಿಯನ್ನು ಆತನಿಗೂ ಹಕ್ಕು ಇದೆ ಅನ್ನುವ ಕಾರಣಕ್ಕೆ ಆತನೊಬ್ಬನೇ ಆ ಆಸ್ತಿಯನ್ನು ಮಾರಾಟ ಮಾಡುವಂತೆ ಇಲ್ಲ. ಒಬ್ಬರ ಒಪ್ಪಿಗೆ ಅಥವಾ ಭಾಗಶಃ ವಾರಸುದಾರರ ಒಪ್ಪಿಗೆ ಇದ್ದ ಮಾತ್ರ ಪಿತ್ರಾರ್ಜಿತ ಆಸ್ತಿಯನ್ನು ಮಾರಾಟ ಮಾಡಲು ಸಾಧ್ಯವಿಲ್ಲ. ಒಂದು ಪಿತ್ರಾರ್ಜಿತ ಆಸ್ತಿಯನ್ನು ಮಾರಾಟ ಮಾಡಬೇಕು ಅಂದರೆ ಆ ಆಸ್ತಿಯಲ್ಲಿ ಪಾಲು ಪಡೆದುಕೊಂಡಿರುವ ಪ್ರತಿಯೊಬ್ಬ ಪುರುಷ ಮತ್ತು ಮಹಿಳೆಯರ ಒಪ್ಪಿಗೆ ಪಡೆದುಕೊಳ್ಳಬೇಕು. ಪಿತ್ರಾರ್ಜಿತ ಆಸ್ತಿ ಮಾರಾಟ ಮಾಡಲು ಯಾವುದೇ ಒಬ್ಬ ವಾರಸುದಾರ ಒಪ್ಪಿಗೆ ನೀಡದೆ ಇದ್ದರೆ ಪಿತ್ರಾರ್ಜಿತ ಆಸ್ತಿ ಮಾರಾಟ ಮಾಡಲು ಸಾಧ್ಯವಿಲ್ಲ.
ಇನ್ನು ಒಬ್ಬ ವ್ಯಕ್ತಿ ಉಳಿದ ವಾರಸುದಾರರಿಗೆ ತಿಳಿಸದೇ ಅಥವಾ ಭಾಗಶಃ ವಾರಸುದಾರರ ಒಪ್ಪಿಗೆ ಪಡೆದುಕೊಂಡು ಪಿತ್ರಾರ್ಜಿತ ಆಸ್ತಿ ಮಾರಾಟ ಮಾಡಿದರೆ ಉಳಿದವರು ಆತನ ಮೇಲೆ ದೂರು ದಾಖಲು ಮಾಡಬಹುದು ಮತ್ತು ಆತನಿಗೆ ನೋಟೀಸ್ ಕೂಡ ಕಳುಹಿಸಬಹುದಾಗಿದೆ. ಇನ್ನು ಭಾರತದ ಕಾನೂನಿನ ಪ್ರಕಾರ ಪಿತ್ರಾರ್ಜಿತ ಆಸ್ತಿಯನ್ನು ಮಾರಾಟ ಮಾಡಬೇಕು ಆ ಪಿತ್ರಾರ್ಜಿತ ಆಸ್ತಿಯ ಎಲ್ಲಾ ವಾರಸುದಾರರು ಒಪ್ಪಿಗೆ ನೀಡಿ ಒಟ್ಟಿಗೆ ಬಂದು ಸಹಿ ಹಾಕಿದರೆ ಮಾತ್ರ ಆ ಪಿತ್ರಾರ್ಜಿತ ಆಸ್ತಿ ಮಾರಾಟ ಮಾಡಬಹುದು.