KKR And RCB IPL Match eden Garden: ವಿಶ್ವದಾದ್ಯಂತ IPL ಗೆ ಕ್ಷಣಗಣನೆ ಉಂಟಾಗಿದೆ ಎಂದು ಹೇಳಬಹುದು. ಹೌದು, ಇಂದಿನಿಂದ IPL ಆರಂಭ ಆಗಲಿದ್ದು ಕ್ರಿಕೆಟ್ ಪ್ರಿಯರಿಗೆ ಕ್ರಿಕೆಟ್ ಹಬ್ಬ ಶುರುವಾಗಿದೆ. ಇಂದಿನಿಂದ IPL ಆರಂಭ ಆಗಲಿದ್ದು ರಾತ್ರಿಯಾದರೆ ಸಾಕು ಜನರು ಕ್ರಿಕೆಟ್ ನೋಡುವುದರಲ್ಲಿ ಬ್ಯುಸಿ ಆಗುತ್ತಾರೆ. ಇಂದು KKR ಮತ್ತು RCB ನಡುವೆ ಮೊದಲ ಪಂದ್ಯ ನಡೆಯುತ್ತಿದೆ. IPL 18 ನೇ ಸೀಸನ್ ಇಂದಿನಿಂದ ಆರಂಭ ಆಗಲಿದೆ ಮತ್ತು RCB ತಂಡ ಮೊದಲ ಮೊದಲ ಪಂದ್ಯವನ್ನು ಆಡುತ್ತಿದ್ದು ಈ ಪಂದ್ಯದಲ್ಲಿ KKR ತಂಡದ ವಿರುದ್ಧ ಸೆಣೆಸಾಡಲಿದೆ. ಇದರ ನಡುವೆ ಕ್ರಿಕೆಟ್ ಅಭಿಮಾನಿಗಳಿಗೆ ಒಂದು ಬೇಸರದ ಸುದ್ದಿ, ಹೌದು IPL ಸೀಸನ್ 18 ರ ಮೊದಲ ಪಂದ್ಯ ರದ್ದಾಗಲಿದೆ ಎಂದು ಹೇಳಲಾಗುತ್ತಿದೆ. ಹಾಗಾದರೆ IPL ಸೀಸನ್ 12 ರ ಮೊದಲ ಪಂದ್ಯ ರದ್ದಾಗುವುದು ಹೇಗೆ ಮತ್ತು ಇದರ ಬಗ್ಗೆ ಕ್ರಿಕೆಟ್ ತಜ್ಞರು ಹೇಳಿದ್ದೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಇಂದು KKR ಮತ್ತು RCB ನಡುವೆ ಮೊದಲ IPL ಪಂದ್ಯ
IPL ಸೀಸನ್ 18 ರ ಮೊದಲ ಪಂದ್ಯ RCB ಮತ್ತು KKR ನಡುವೆ ಇಂದು ಕೋಲ್ಕತ್ತಾದಲ್ಲಿ ನಡೆಯುತ್ತಿದೆ. ಇದು IPL ಸೀಸನ್ 18 ರ ಮೊದಲ ಪಂದ್ಯ ಆಗಿದ್ದು ಇಂದು ರಾತ್ರಿ 7:30 ಕ್ಕೆ ಆರಂಭ ಆರಂಭ ಆಗಿದೆ. ಇನ್ನು ಕ್ರಿಕೆಟ್ ಪ್ರಿಯರು ಟಿವಿ ಮತ್ತು ಜಿಯೋ ಹಾಟ್ ಸ್ಟಾರ್ ನಲ್ಲಿ (Jio hotstar) ಪಂದ್ಯ ವೀಕ್ಷಣೆ ಮಾಡಬಹುದು. ಅತೀ ಹೆಚ್ಚು ಕ್ರಿಕೆಟ್ ಅಭಿಮಾನಿಗಳನ್ನು ಹೊಂದಿರುವ RCB ಮೊದಲ ಪಂದ್ಯದಲ್ಲೇ ಕಣಕ್ಕೆ ಇಳಿಯಲಿದ್ದು ಸದ್ಯ ಈ ಪಂದ್ಯ ನೋಡಲು ಇದು ದೇಶವೇ ಕಾದು ಕುಳಿತಿದೆ ಎಂದು ಹೇಳಬಹುದು.
RCB ಮತ್ತು KKR ನಡುವೆ ಮೊದಲ ಪಂದ್ಯ ರದ್ದಾಗಲಿದೆ
ಹೌದು, RCB ಮತ್ತು KKR ನಡುವಿನ ಮೊದಲ IPL ಪಂದ್ಯ ರದ್ದಾಗುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ. ಭಾರತ ಹವಾಮಾನ ಇಲಾಖೆಯ ವರದಿಯ ಪ್ರಕಾರ ಗುರುವಾರದಿಂದ ಭಾನುವಾರದ ತನಕ ದಕ್ಷಿಣ ಬಂಗಾಳದಲ್ಲಿ ಭಾರೀ ಪ್ರಮಾಣದ ಮಳೆಯಾಗಲಿದೆ. ಇನ್ನು ಹವಾಮಾನ ಇಲಾಖೆಯ ವರದಿಯ ಪ್ರಕಾರ ಇಂದ್ದು ಕೋಲ್ಕತ್ತಾದಲ್ಲಿ ಮಳೆಯಾಗುವ ಸಾಧ್ಯತೆ 74% ಇದೆ ಎಂದು ವರದಿ ಮಾಡಲಾಗಿದೆ. ಸದ್ಯ ಕೋಲ್ಕತ್ತಾದಲ್ಲಿ ಮೋದಕವಿತಾ ವಾತಾವರಣ ಇದ್ದು ಇಂದು IPL ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಬಹುತೇಕ ಸಾಧ್ಯತೆ ಇದೆ.
ಅದೇ ರೀತಿಯಲ್ಲಿ ಹವಾಮಾನ ಇಲಾಖೆಯ ವರದಿಯ ಪ್ರಕಾರ ಇಂದು IPL ಪಂದ್ಯ ನಡೆಯುವ ಈಡನ್ ಗಾರ್ಡನ್ ನಲ್ಲಿ 90% ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇಂದು ಕೋಲ್ಕತ್ತಾದಲ್ಲಿ ಮಳೆಯಾದರೆ IPL ನ ಮೊದಲ ಪಂದ್ಯವೇ ರದ್ದಾಗುವುದರಲ್ಲಿ ಯಾವುದೇ ಸಂದೇಹ ಇಲ್ಲ. ಇನ್ನು ಕೋಲ್ಕತ್ತಾದಲ್ಲಿ ಮಳೆಯಾಗುವ ಲಕ್ಷಣ ಹೆಚ್ಚಿರುವ ಕಾರಣ ಒಂದು ಪಂದ್ಯವನ್ನು ಸ್ಥಳಾಂತರ ಕೂಡ ಮಾಡಲಾಗಿದೆ. IPL ಆರಂಭದಲ್ಲೇ ಮಳೆ ಕಾಟ ಆರಂಭ ಆಗಿದ್ದು ಇದು ಕ್ರಿಕೆಟ್ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ ಎಂದು ಹೇಳಬಹುದು.