New Rules In April 1st: ಏಪ್ರಿಲ್ 1 ನೇ ತಾರೀಕಿನಿಂದ ದೇಶದಲ್ಲಿ ಜಾರಿಗೆ ಬರಲಿದೆ 6 ಹೊಸ ನಿಯಮ, ಕೇಂದ್ರದ ಘೋಷಣೆ

New Rules In April 1st: ದಿನಗಳು ಉರುಳಿದಂತೆ ಹೊಸ ಹೊಸ ನಿಯಮಗಳು ದೇಶದಲ್ಲಿ ಜಾರಿಗೆ ಬರುತ್ತಲೇ ಇರುತ್ತದೆ. ಹೌದು, ತಂತ್ರಜ್ಞಾನ ಮತ್ತು ಹಣಕಾಸು ಕ್ಷೇತ್ರ ಮುಂದುವರೆದಂತೆ ಕೆಲವು ಬದಲಾವಣೆ ಮಾಡುವುದು ಕೂಡ ಅನಿವಾರ್ಯ ಆಗುತ್ತದೆ. ಪ್ರತಿ ತಿಂಗಳ ಆರಂಭದಲ್ಲಿ ಕೆಲವು ಬದಲಾವಣೆ ಆಗುವುದನ್ನು ನೋಡಬಹುದು, ಅದೇ ರೀತಿಯಲ್ಲಿ ಏಪ್ರಿಲ್ ತಿಂಗಳ ಆರಂಭದಲ್ಲಿ ಹಣಕಾಸು ಕ್ಷೇತ್ರದಲ್ಲಿ ಮತ್ತು ಕೆಲವು ಕ್ಷೇತ್ರದಲ್ಲಿ ಬದಲಾವಣೆ ಆಗಲಿದ್ದು ಈ ಬದಲಾವಣೆ ಜನರ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ಹೇಳಬಹುದು. ಹೌದು, ಏಪ್ರಿಲ್ 1 ನೇ ತಾರೀಕಿನಿಂದ 6 ಹೊಸ ನಿಯಮಗಳು ಜಾರಿಗೆ ಬರುತ್ತಿದೆ. ಹಾಗಾದರೆ ಏಪ್ರಿಲ್ 1 ನೇ ತಾರೀಕಿನಿಂದ ದೇಶದಲ್ಲಿ ಜಾರಿಗೆ ಬರುತ್ತಿರುವ ಆ 6 ಹೊಸ ನಿಯಮಗಳು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

WhatsApp Group Join Now
Telegram Group Join Now
  • ಏಪ್ರಿಲ್ 1 ನೇ ತಾರೀಕಿನಿಂದ ದೇಶಾದ್ಯಂತ 6 ಹೊಸ ನಿಯಮ ಏಪ್ರಿಲ್ 1 ನೇ ತಾರೀಕಿನಿಂದ ತೆರಿಗೆ ನಿಯಮದಲ್ಲಿ ಬಹುದೊಡ್ಡ ಬದಲಾವಣೆ ಆಗಲಿದೆ. ಇನ್ನು ತೆರಿಗೆ ನಿಯಮದಲ್ಲಿ ಆಗುವ ಬದಲಾವಣೆ ಹಿರಿಯ ನಾಗರಿಕರಿಗೆ ಬಹಳ ಸಹಕಾರಿ ಕೂಡ ಆಗಲಿದೆ. FD ಮತ್ತು RD ಹೂಡಿಕೆ ಮಾಡಿದ ಹಿರಿಯ ನಾಗರಿಕರ TDS ಕಡಿತದ ಬಡ್ಡಿ ದರದಲ್ಲಿ ಈಗ ದುಪ್ಪಟು ಮಾಡಲಾಗಿದೆ. ಹೊಸ ನಿಯಮದ ಪ್ರಕಾರ, ಇನ್ನುಮುಂದೆ ಹಿರಿಯ ನಾಗರಿಕರು FD ಮತ್ತು RD ಮೇಲೆ ಪಡೆದುಕೊಳ್ಳುವ TDS ಕಡಿತದ ಮಿತಿಯನ್ನು 50 ಸಾವಿರದಿಂದ 1 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ.
  • ಏಪ್ರಿಲ್ 1 ನೇ ತಾರೀಕಿನಿಂದ TCS ಮೀರಿ ಕೂಡ ಹೆಚ್ಚಳ ಆಗಲಿದೆ. ಹೆಚ್ಚು ಹೆಚ್ಚು ವಿದೇಶಿ ವಹಿವಾಟು ಮಾಡುವವರಿಗೆ ಗುಡ್ ನ್ಯೂಸ್ ನೀಡಿರುವ ಕೇಂದ್ರ ಸರ್ಕಾರ ವಿದೇಶಿ ವಹಿವಾಟಿನ ಮೇಲೆ TCS ಮಿತಿಯನ್ನು ಈಗ ಏರಿಕೆ ಮಾಡಿದೆ. ಈ ಹಿಂದೆ 7 ಲಕ್ಷ ರೂ ವರೆಗಿನ ವಿದೇಶಿ ವಹಿವಾಟಿನ ಮೇಲೆ TCS ಕಡಿತ ಮಾಡಲಾಗುತ್ತಿತ್ತು, ಆದರೆ ಈಗ 10 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ.

 

  • ಏಪ್ರಿಲ್ 1 ನೇ ತಾರೀಕಿನಿಂದ ಶಿಕ್ಷಣ ಸಾಲದ ಮೇಲಿನ TCS ರಾಡು ಮಾಡಲು ಈಗ ಕೇಂದ್ರ ಸರ್ಕಾರ ಮುಂದಾಗಿದೆ. ಈ ಹಿಂದೆ 7 ಲಕ್ಷದ ವರೆಗಿನ ಶಿಕ್ಷಣ ಸಾಲಕ್ಕೆ 0.5% TCS ಕಡಿತ ಮಾಡಲಾಗುತ್ತಿತ್ತು. ಇನ್ನು 7 ಲಕ್ಷದ ಮೇಲಿನ ಶಿಕ್ಷಣ ಸಾಲಕ್ಕೆ 5% TCS ನಿಗದಿ ಮಾಡಲಾಗಿತ್ತು, ಸದ್ಯ ಈಗ TCS ರದ್ದು ಮಾಡಲು ಈಗ ಕೇಂದ್ರ ಮುಂದಾಗಿದೆ.
  • ಏಪ್ರಿಲ್ 1 ರಿಂದ ಮ್ಯೂಚುಯಲ್ ಫಂಡ್ ಲಾಭಂಶದ ಮೇಲಿನ TDS ಮಿತಿಯನ್ನು ಕೂಡ ಈಗ ಏರಿಕೆ ಮಾಡಲಾಗಿದೆ. ಹೌದು, ಮ್ಯೂಚುಯಲ್ ಫಂಡ್ ಮೇಲೆ ಪಡೆಯುವ ಲಾಭಾಂಶದ TDS ಅನ್ನು ಈಗ 5000 ರೂ ನಿಂದ 10000 ಕ್ಕೆ ಏರಿಕೆ ಮಾಡಲಾಗಿದೆ.
  • ಏಪ್ರಿಲ್ 1 ನೇ ತಾರೀಕಿನಿಂದ LPG ಬೆಲೆಯಲ್ಲಿ ಕೂಡ ಹೊಸ ದರ ನಿಗದಿ ಆಗುತ್ತಿದೆ. ಹೌದು, ಏಪ್ರಿಲ್ 1 ನೇ ತಾರೀಕಿನಿಂದ LPG ಬೆಲೆ ಏರಿಕೆ ಅಥವಾ ಇಳಿಕೆ ಆಗಲಿದೆ.
  • ಏಪ್ರಿಲ್ 1 ನೇ ತಾರೀಕಿನಿಂದ PNG ಮತ್ತು CNG ಬೆಲೆಯಲ್ಲಿ ಕೂಡ ಬಹುದೊಡ್ಡ ಬದಲಾವಣೆ ಆಗಲಿದೆ. ಏಪ್ರಿಲ್ 1 ನೇ ತಾರೀಕಿನಿಂದ CNG ಬೆಲೆಯಲ್ಲಿ ಏರಿಕೆ ಆಗಲಿದೆ ಎಂದು ಹೇಳಲಾಗುತ್ತಿದೆ. CNG ಬೆಲೆಯಲ್ಲಿ ಮಾತ್ರವಲ್ಲದೆ PNG ಬೆಲೆಯಲ್ಲಿ ಕೂಡ ಏರಿಕೆ ಆಗಲಿದೆ.

Leave a Comment