Hero Splendor Bike: ಬೈಕ್ ಖರೀದಿ ಮಾಡುವ ಅಸೆ ಇದ್ದವರಿಗೆ ಇದೊಂದು ಗುಡ್ ನ್ಯೂಸ್ ಅಂತ ಹೇಳಬಹುದು. ಹೌದು, ಈಗಿನ ಕಾಲದ ಜನರು ಹೆಚ್ಚು ಮೈಲೇಜ್ ಕೊಡುವ ಬೈಕ್ ಖರೀದಿ ಮಾಡಲು ಇಷ್ಟಪಡುತ್ತಾರೆ. ಎಲೆಕ್ಟ್ರಿಕ್ ಸ್ಕೂಟರ್ ಗಳಿಗೆ ಬೇಡಿಕೆ ಹೆಚ್ಚಾದ ಕಾರಣ ಬೈಕ್ ತಯಾಕರ ಕಂಪನಿಗಳು ಹೆಚ್ಚು ಮೈಲೇಜ್ ಕೊಡುವ ಬೈಕ್ ಅನ್ನು ಮಾರುಕಟ್ಟೆಗೆ ಲಾಂಚ್ ಮಾಡುತ್ತಿದೆ.
ಇನ್ನು ದೇಶದಲ್ಲಿ ಹೆಚ್ಚು ಮಾರಾಟವಾಗುವ ಬೈಕ್ ಗಳಲ್ಲಿ ಹೀರೋ ಸ್ಪ್ಲೆಂಡರ್ ಬೈಕ್ (Hero Splendor Bike) ಕೂಡ ಎಂದು ಹೇಳಬಹುದು. ಹೌದು, ಹೀರೋ ಸ್ಪ್ಲೆಂಡರ್ ಬೈಕ್ ದೇಶದಲ್ಲಿ ದಾಖಲೆಯ ಮಾರಾಟ ಕಂಡುಕೊಂಡಿದೆ. ಬೆಲೆ ಕಡಿಮೆ ಹೆಚ್ಚು ಮೈಲೇಜ್ ಕೊಡುವ ಕಾರಣ ಹೆಚ್ಚು ಹೆಚ್ಚು ಜನರು ಈ ಬೈಕ್ ಖರೀದಿ ಮಾಡುತ್ತಿದ್ದಾರೆ ಎಂದು ಹೇಳಬಹುದು.
ಜನರ ಮೆಚ್ಚುಗೆ ಪಡೆದುಕೊಂಡ ಹೀರೋ ಸ್ಪ್ಲೆಂಡರ್
ಹೌದು, ಹೀರೋ ಸ್ಪ್ಲೆಂಡರ್ ಬೈಕ್ ಜನರ ಮೆಚ್ಚುಗೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಸಾಕಷ್ಟು ವರ್ಷಗಳಿಂದ ಹೀರೋ ಸ್ಪ್ಲೆಂಡರ್ ಬೈಕ್ ದೇಶದಲ್ಲಿ ಅತೀ ಹೆಚ್ಚು ಮಾರಾಟವಾಗುವ ಬೈಕ್ ಗಳಲ್ಲಿ ಅಗ್ರ ಸ್ಥಾನದಲ್ಲಿ ಇದೆ ಎಂದು ಹೇಳಬಹುದು. ಇದರ ನಡುವೆ 2025 ರ ವರ್ಷದಲ್ಲಿ ಕೂಡ ಹೀರೋ ಸ್ಪ್ಲೆಂಡರ್ ದಾಖಲೆಯ ಮಾರಾಟ ಕಂಡುಕೊಂಡಿದೆ. BS6 ಮಾದರಿಯ ಹೀರೋ ಸ್ಪ್ಲೆಂಡರ್ ದೇಶದಲ್ಲಿ ದಾಖಲೆಯ ಮಾರಾಟ ಕಾಣುತ್ತಿದ್ದು 2025 ರಲ್ಲಿ ದಾಖಲೆಯ ಮಾರಾಟ ಪಡೆದುಕೊಂಡಿದೆ.
ಹೀರೋ ಸ್ಪ್ಲೆಂಡರ್ ಬೈಕ್ ಬೆಲೆ ಮತ್ತು ಮೈಲೇಜ್
ಹೀರೋ ಕಂಪನಿಯ ಜನಪ್ರಿಯ ಬೈಕ್ ಅನಿಸಿಕೊಂಡಿರುವ ಹೀರೋ ಸ್ಪ್ಲೆಂಡರ್ ಬಡವರ ಬಂಧು ಅಂತ ಕೂಡ ಹೇಳಬಹುದು. ಹೆಚ್ಚು ಮೈಲೇಜ್ ಕೊಡುವ ಬೈಕ್ ಹುಡುಕುವ ಜನರಿಗೆ ಈ ಬೈಕ್ ಉತ್ತಮವಾದ ಬೈಕ್ ಆಗಿದೆ. ಹೀರೋ ಸ್ಪ್ಲೆಂಡರ್ ಬೈಕ್ ಬೆಲೆಯ ಬಗ್ಗೆ ಮಾತನಾಡುವುದಾದರೆ, ಹೀರೋ ಸ್ಪ್ಲೆಂಡರ್ ಬೈಕ್ ನ ಆರಂಭಿಕ ಬೆಲೆ 81 ಸಾವಿರದಿಂದ 85 ಸಾವಿರ ರೂಪಾಯಿ ಆಗಿದೆ. ಬೆಲೆ ಕಡಿಮೆ ಆಗಿರುವ ಕಾರಣ ದೇಶದಲ್ಲಿ ಅತೀ ಹೆಚ್ಚು ಮಾರಾಟ ಪಡೆದುಕೊಂಡಿದೆ ಹೀರೋ ಸ್ಪ್ಲೆಂಡರ್. ಇನ್ನು ಮೈಲೇಜ್ ಬಗ್ಗೆ ಮಾತನಾಡುವುದಾದರೆ, ಹೀರೋ ಸ್ಪ್ಲೆಂಡರ್ ಬೈಕ್ ಒಂದು ಲೀಟರ್ ಪೆಟ್ರೋಲ್ ನಲ್ಲಿ ಸುಮಾರು 60 ರಿಂದ 65 Km ಮೈಲೇಜ್ ಕೊಡುತ್ತದೆ ಎಂದು ಹೇಳಬಹುದು.
ರೈತರಿಗೆ ಇದು ಬೆಸ್ಟ್ ಬೈಕ್
ಇತರೆ ಬೈಕ್ ಗಳಿಗೆ ಹೋಲಿಕೆ ಮಾಡಿದರೆ ಹೀರೋ ಸ್ಪ್ಲೆಂಡರ್ ಬಡವರಿಗೆ ಮತ್ತು ರೈತರಿಗೆ ಬಹಳ ಉತ್ತಮವಾದ ಬೈಕ್ ಆಗಿದೆ ಎಂದು ಹೇಳಬಹುದು. ಕಡಿಮೆ ಬೆಲೆಗೆ ಹೆಚ್ಚು ಮೈಲೇಜ್ ಕೊಡುವ ಕಾರಣ ಈ ಬೈಕ್ ಬಡವರ ಮತ್ತು ರೈತರ ಬಂಧುವಾಗಿದೆ ಎಂದು ಹೇಳಬಹುದು. 2024 ರ ವರ್ಷದಲ್ಲಿ ಹೀರೋ ಕಂಪನಿ ಸುಮಾರು 2.5 ಬೈಕ್ ಮಾರಾಟ ಮಾಡಿದೆ. 2025 ರ ವರ್ಷದಲ್ಲಿ 3 ಲಕ್ಷ ಬೈಕ್ ಗಳನ್ನೂ ಮಾರಾಟ ಮಾಡುವ ಯೋಜನೆಯನ್ನು ಕಂಪನಿ ಹಾಕಿಕೊಂಡಿದೆ.