Mutual Funds Investment Plans: ಈಗಿನ ಕಾಲದ ಜನರು ತಮ್ಮ ಭವಿಷ್ಯದ ಉದ್ದೇಶದಿಂದ ಹೂಡಿಕೆ ಮಾಡಲು ಹೆಚ್ಚು ಹೆಚ್ಚು ಇಷ್ಟಪಡುತ್ತಿದ್ದಾರೆ ಎಂದು ಹೇಳಬಹುದು. ತಮ್ಮ ಭವಿಷ್ಯಕ್ಕೆ ನಾವೇ ಹೂಡಿಕೆ ಮಾಡಿಕೊಂಡರೆ ಉತ್ತಮ ಎಂದು ಈಗಿನ ಕಾಲದ ಜನರು ಹೆಚ್ಚು ಹೆಚ್ಚು ಹಣಕಾಸು ಯೋಜನೆಯಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಸದ್ಯ ಹೂಡಿಕೆ ಮಾಡಲು ಬ್ಯಾಂಕ್ ಮತ್ತು ಪೋಸ್ಟ್ ಆಫೀಸ್ ನಲ್ಲಿ ಉತ್ತಮ ಆಯ್ಕೆ ಕೂಡ ಇದೆ, ಆದರೆ ನಾವು ಈಗ ನಿಮಗೆ ಹೂಡಿಕೆ ಮಾಡಲು ಇರುವ ಇನ್ನೊಂದು ಉತ್ತಮವಾದ ಮಾರ್ಗದ ಬಗ್ಗೆ ಮಾಹಿತಿ ತಿಳಿಸಿಕೊಡುತ್ತೇವೆ. ಹೌದು ನಾವು ಹೇಳುವ ಈ ಯೋಜನೆಯಲ್ಲಿ ನೀವು ಹೂಡಿಮೆ ಮಾಡಿದರೆ ಪ್ರತಿ ತಿಂಗಳು 1.22 ಲಕ್ಷ ರೂ ಆದಾಯ ಗಳಿಸಿಕೊಳ್ಳಬಹುದು. ಹಾಗಾದರೆ ಪ್ರತಿ ತಿಂಗಳು 1.22 ಲಾಭ ತಂದುಕೊಡುವ ಈ ಯೋಜನೆಯ ಯಾವುದು ಮತ್ತು ಈ ಯೋಜನೆಯಲ್ಲಿ ಹೂಡಿಕೆ ಮಾಡುವುದು ಹೇಗೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಮ್ಯೂಚುಯಲ್ ಫಂಡ್ ನಲ್ಲಿ ಹೂಡಿಕೆ ಮಾಡಿದರೆ ಅಧಿಕ ಲಾಭ
ಹೂಡಿಕೆ ಮಾಡಲು ಇರುವ ಒಂದು ಉತ್ತಮ ಆಯ್ಕೆಗಳಲ್ಲಿ ಮ್ಯೂಚುಯಲ್ ಫಂಡ್ ಕೂಡ ಒಂದು ಎಂದು ಹೇಳಬಹುದು. ದೇಶದಲ್ಲಿ ಸಾಕಷ್ಟು ಜನರು ಮ್ಯೂಚುಯಲ್ ಫಂಡ್ ನಲ್ಲಿ ಹೆಚ್ಚು ಹೆಚ್ಚು ಹೂಡಿಕೆ ಕೂಡ ಮಾಡುತ್ತಿದ್ದಾರೆ. ಮ್ಯೂಚುಯಲ್ ಫಂಡ್ ನಲ್ಲಿ ಹೂಡಿಕೆ ಮಾಡುವುದು ಅಪಾಯ ಕೂಡ ಆಗಿದ್ದರೂ ಜನರು ಹೆಚ್ಚು ಹೆಚ್ಚು ಮ್ಯೂಚುಯಲ್ ಫಂಡ್ ಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ ಮತ್ತು ಇದಕ್ಕೆ ಕಾರಣ ಮ್ಯೂಚುಯಲ್ ಫಂಡ್ ನಲ್ಲಿ ಸಿಗುವ ಅಧಿಕ ಲಾಭ ಆಗಿದೆ.
7 ಲಕ್ಷ ರೂ ಹೂಡಿಕೆ ಮಾಡಿದರೆ ಸಿಗಲಿದೆ ಪ್ರತಿ ತಿಂಗಳು 1.22 ಲಕ್ಷ
ಹೌದು, ಮ್ಯೂಚುಯಲ್ ಫಂಡ್ ನಲ್ಲಿ 7 ಲಕ್ಷ ರೂಪಾಯಿಯನ್ನು ಹೂಡಿಕೆ ಮಾಡಿದರೆ 30 ವರ್ಷಗಳ ಕಾಲ ಪ್ರತಿ ತಿಂಗಳು 1.22 ಲಕ್ಷ ರೂಪಾಯಿ ಆದಾಯ ತಾಳಿಸಿಕೊಳ್ಳಬಹುದು. ಹೌದು, ನೀವು ನಿವೃತ್ತಿ ನಂತರ ಹೂಡಿಕೆ ಮಾಡಲು ಇಚ್ಚಿಸಿದರೆ ಮ್ಯೂಚುಯಲ್ ಫಂಡ್ ನಲ್ಲಿ ನಿಯಮಿತ ಹೂಡಿಕೆ ಮಾಡುವುದು ಅತೀ ಅಗತ್ಯವಾಗಲಿದೆ.
ಇನ್ನು ನೀವು ಮಾಸಿಕವಾಗಿ ಮ್ಯೂಚುಯಲ್ ಫಂಡ್ ನಲ್ಲಿ 1.22 ಲಕ್ಷ ರೂಪಾಯಿ ಆದಾಯ ಗಳಿಸಲು ಇಚ್ಚಿಸಿದರೆ ನೀವು ಮೊದಲು 7 ಲಕ್ಷ ರೂ ಹೂಡಿಕೆ ಮಾಡಿ ಮುಂದಿನ 30 ವರ್ಷಗಳ ಕಾಲ ಕಾಯಬೇಕು. ಹೌದು SWP ಅನಿಸರಿಸಿದರೆ ನೀವು ಮಾಸಿಕವಾಗಿ 1.22 ಲಕ್ಷ ರೂ ಆದಾಯ ಗಳಿಸಿಕೊಳ್ಳಬಹುದು, ಮ್ಯೂಚುಯಲ್ ಫಂಡ್ ಹೂಡಿಕೆ ಮಾರುಕಟ್ಟೆ ಅಪಾಯಗಳಿಗೆ ಬದ್ಧವಾಗಿದೆ ಅನ್ನುವುದನ್ನು ತಿಳಿದುಕೊಂಡು ಹೂಡಿಕೆ ಮಾಡಬೇಕು.
ನಿಯಮಿತ ಪ್ರಮಾಣದಲ್ಲಿ ಹೂಡಿಕೆ ಮಾಡಿ ನಂತರ SWP ಅನುಸರಿಸಬೇಕು. ನೀವು ಹೂಡಿಮೆ ಮಾಡಿದ ಹಣಕ್ಕೆ ಮ್ಯೂಚುಯಲ್ ಫಂಡ್ ನಲ್ಲಿ ಸರಿಸುಮಾರು 7% ಬಡ್ಡಿ ಪಡೆಯಬಹುದು. ಇನ್ನು ನೀವು ಪ್ರತಿ ತಿಂಗಳು ಸುಮಾರು 16,000 ಸಾವಿರ ರೂ ಹೂಡಿಕೆ ಮಾಡುವುದರ ಮೂಲಕ ನಿಮ್ಮ ನಿವೃತ್ತಿ ಸಮಯದಲ್ಲಿ ಪ್ರತಿ ತಿಂಗಳು 1.22 ಲಕ್ಷ ರೂ ಆದಾಯ ಗಳಿಸಿಕೊಳ್ಳಬಹುದು. ನೀವು ಹೂಡಿಕೆ ಮಾಡುವ ನಿಮ್ಮ ಮುನ್ನ ನಿಮ್ಮ ವಯಸ್ಸು ಮತ್ತು ನೀವು ಹೂಡಿಕೆ ಮಾಡುವ ಹಣವನ್ನು ನಿರ್ಧಾರ ಮಾಡಿದರೆ ಮಾತ್ರ ದೊಡ್ಡ ಮೊತ್ತ ಲಾಭ ಗಳಿಸಿಕೊಳ್ಳಬಹುದು.