Tyre Details: ಟ್ಯೂಬ್ ಟೈಯರ್ ಮತ್ತು ಟ್ಯೂಬ್ ಲೆಸ್ ಟೈಯರ್ ನಲ್ಲಿ ಯಾವುದು ಬೆಸ್ಟ್, ಇಲ್ಲಿದೆ ತಜ್ಞರ ಅಭಿಪ್ರಾಯ

Tube Tyre And Tubeless Tyre Details: ಬೈಕ್ ಅಥವಾ ಕಾರ್ ಖರೀದಿ ಮಾಡುವ ಆಸೆ ಸಾಮಾನ್ಯವಾಗಿ ಎಲ್ಲರಿಗೂ ಕೂಡ ಇದ್ದೆ ಇರುತ್ತದೆ. ಜೀವನದಲ್ಲಿ ಒಮ್ಮೆಯಾದರೂ ತಾವು ಇಷ್ಟಪಟ್ಟ ಕಾರ್ ಅಥವಾ ಬೈಕ್ ಖರೀದಿ ಮಾಡಬೇಕು ಅಂದಕೊಂಡವರು ಕೆಲವು ನಿರ್ಧಿಷ್ಟ ವಿಷಯ ತಿಳಿದುಕೊಂಡಿರುವುದು ಬಹಳ ಉತ್ತಮ. ಇತ್ತೀಚಿನ ದಿನಗಳಲ್ಲಿ ಎಲ್ಲಾ ವಾಹನಗಳು ಕೂಡ ಟ್ಯೂಬ್ ಲೆಸ್ ವಾಹನಗಳು ಆಗಿದೆ ಮತ್ತು ಟ್ಯೂಬ್ ಟೈಯರ್ ಇರುವ ವಾಹನಗಳು ಬಹಳ ವಿರಳ ಎಂದು ಹೇಳಬಹುದು. ಸಾಕಷ್ಟು ಜನರಿಗೆ ಟ್ಯೂಬ್ ಲೆಸ್ ಟೈಯರ್ ಮತ್ತು ಟ್ಯೂಬ್ ಟೈಯರ್ ನಡುವಿನ ವ್ಯತ್ಯಾಸ ಏನು ಮತ್ತು ಯಾವ ಟೈಯರ್ ಉತ್ತಮ ಅನ್ನುವುದರ ಬಗ್ಗೆ ಸರಿಯಾದ ಮಾಹಿತಿ ಕೂಡ ಇಲ್ಲ ಎಂದು ಹೇಳಬಹುದು.

WhatsApp Group Join Now
Telegram Group Join Now

ವಾಹನ ಖರೀದಿ ಮಾಡುವಾಗ ಟೈಯರ್ ಮಾಹಿತಿ ತಿಳಿದುಕೊಳ್ಳಿ
ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಮನೆಯಲ್ಲಿ ಕೂಡ ಬೈಕ್ ಅಥವಾ ಕಾರ್ ಇದ್ದೆ ಇದೆ ಎಂದು ಹೇಳಬಹುದು. ಸಾಮಾನ್ಯವಾಗಿ ಈಗ ಬರುವ ಎಲ್ಲಾ ಕಾರ್ ಮತ್ತು ಬೈಕ್ ಗಳು ಟ್ಯೂಬ್ ಲೆಸ್ ಟೈಯರ್ ಹೊಂದಿರುತ್ತದೆ. ಹಾಗಾದರೆ ಕಾರ್ ಅಥವಾ ಅಥವಾ ಬೈಕ್ ಖರೀದಿಸುವ ಸಮಯದಲ್ಲಿ ಟ್ಯೂಬ್ ಲೆಸ್ ಟೈಯರ್ ಅಥವಾ ಟ್ಯೂಬ್ ಇರುವ ವಾಹನದಲ್ಲಿ ಯಾವುದು ಬೆಸ್ಟ್ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಟ್ಯೂಬ್ ಲೆಸ್ ಅಥವಾ ಟ್ಯೂಬ್ ಟೈಯರ್ ನಲ್ಲಿ ಯಾವುದು ಬೆಸ್ಟ್
ಹೌದು, ಸಾಮಾನ್ಯವಾಗಿ ಈಗಿನ ಕಾಲದ ಜನರು ಟ್ಯೂಬ್ ಲೆಸ್ ಟೈಯರ್ ಇರುವ ವಾಹನ ಖರೀದಿ ಮಾಡುತ್ತಾರೆ. ಇನ್ನು ಟ್ಯೂಬ್ ಲೆಸ್ ಟೈಯರ್ ವಾಹನ ಖರೀದಿ ಮಾಡಿದರೆ ಆ ಟೈಯರ್ ಪಂಕ್ಚರ್ ಆಗುವ ಸಾಧ್ಯತೆ ಕಡಿಮೆ ಎಂದು ಹೇಳಬಹುದು ಮತ್ತು ಪಂಕ್ಚರ್ ಆದರಲು ಟೈಯರ್ ಸಿಲಾಂಟ್ ಗಳಿಂದ ಸುಲಭವಾಗಿ ಪಂಕ್ಚರ್ ತಗೆಯಬಹುದು. ಆದರೆ ಟ್ಯೂಬ್ ಇರುವ ಟೈಯರ್ ಪಂಕ್ಚರ್ ಆದರೆ ಟೈಯರ್ ತೆಗೆದು ನಂತರ ಪಂಕ್ಚರ್ ಮಾಡಬೇಕಾಗುತ್ತದೆ. ಇನ್ನು ಟ್ಯೂಬ್ ಇರುವ ಟೈಯರ್ ಗಳಿಗೆ ಹೋಲಿಕೆ ಮಾಡಿದರೆ ಟ್ಯೂಬ್ ಲೆಸ್ ಟೈಯರ್ ಗಳು ಅತೀ ಹೆಚ್ಚು ಬಾಳಿಕೆ ಕೂಡ ಬರುತ್ತದೆ.

ಇನ್ನು ಒರಟಾದ ಅಥವಾ ರಸ್ತೆ ಚೆನ್ನಾಗಿಲ್ಲದ ಸಮಯದಲ್ಲಿ ಟ್ಯೂಬ್ ಲೆಸ್ ಟೈಯರ್ ಗಳಿಗೆ ಯಾವುದೇ ಹನಿ ಆಗುವುದಿಲ್ಲ, ಆದರೆ ಒರಟಾದ ರಸ್ತೆಗಳನ್ನು ಟ್ಯೂಬ್ ಟೈಯರ್ ಇರುವ ವಾಹನಗಳು ಹಾನಿಗೊಳಗುವ ಸಾಧ್ಯತೆ ಹೆಚ್ಚಿರುತ್ತದೆ. ಟ್ಯೂಬ್ ಲೆಸ್ ಟೈಯರ್ ಕಡಿಮೆ ಗಾಳಿ ಒತ್ತಡ ಇದ್ದರೂ ಕೂಡ ಚಲಿಸುತ್ತದೆ ಮತ್ತು ಸೆಳೆತವನ್ನು ಕೂಡ ಕಡಿಮೆ ಮಾಡುತ್ತದೆ, ಆದರೆ ಟ್ಯೂಬ್ ಇರುವ ಟೈಯರ್ ಇದಕ್ಕೆ ಸಂಪೂರ್ಣ ವಿರುದ್ಧವಾಗಿದೆ. ಇನ್ನು ಹಣಕಾಸಿನ ಸಮಸ್ಯೆ ಅನುಭವಿಸುತ್ತಿರುವವರು ಟ್ಯೂಬ್ ಇರುವ ಟೈಯರ್ ಖರೀದಿ ಮಾಡುವುದು ಉತ್ತಮ, ಏಕೆಂದರೆ ಟ್ಯೂಬ್ ಲೆಸ್ ಟೈಯರ್ ದರ ಹೆಚ್ಚು.

ರಸ್ತೆಯಲ್ಲಿ ನೀವು ಹೆಚ್ಚಿನ ವೇಗದಲ್ಲಿ ಚಲಿಸುವ ಸಮಯದಲ್ಲಿ ಟೈಯರ್ ಮತ್ತು ಟ್ಯೂಬ್ ನಡುವೆ ಒತ್ತಡ ಹೆಚ್ಚಾಗುತ್ತದೆ ಮತ್ತು ಈ ಸಮಯದಲ್ಲಿ ಟೈಯರ್ ಸ್ಪೋಟಗೊಳ್ಳುವ ಸಾಧ್ಯತೆ ಕೂಡ ಇರುತ್ತದೆ. ಆದರೆ ಟ್ಯೂಬ್ ಲೆಸ್ ಟೈಯರ್ ಗಳು ಕಡಿಮೆ ಶಾಖವನ್ನು ಉಂಟುಮಾಡುವ ಕಾರಣ ಸ್ಪೋಟಗೊಳ್ಳುವ ಸಾಧ್ಯತೆ ಬಹಳ ಕಡಿಮೆಯಾಗಿದೆ. ದಿನನಿತ್ಯ ಹೆಚ್ಚು ಹೆಚ್ಚು ರಸ್ತೆ ಸವಾರಿ ಮಾಡುವವರು, ಒರಟಾದ ರಸ್ತೆಯಲ್ಲಿ ಸವಾರಿ ಮಾಡುವವರು ಮತ್ತು ಪ್ರತಿನಿತ್ಯ ದೂರ ಪ್ರಯಾಣ ಮಾಡುವವರಿಗೆ ಟ್ಯೂಬ್ ಲೆಸ್ ಟೈಯರ್ ಒಂದು ಉತ್ತಮ ಆಯ್ಕೆ ಕೂಡ ಆಗಿದೆ.

Leave a Comment