ATM Fee: ATM ಬಳಸುವವರಿಗೆ ಮೇ 1 ರಿಂದ ಹೊಸ ರೂಲ್ಸ್, ಬಡವ ಮತ್ತು ಶ್ರೀಮಂತ ಎಲ್ಲರಿಗೂ ಒಂದೇ ರೂಲ್ಸ್

ATM Interchange Fee Hike: ಈಗಿನ ಕಾಲದಲ್ಲಿ ಬ್ಯಾಂಕ್ ಖಾತೆ ಇಲ್ಲದ ವ್ಯಕ್ತಿ ಎಂದು ಹೇಳಬಹುದು. ಇನ್ನು ಬ್ಯಾಂಕ್ ಖಾತೆ ಇದ್ದವರು ATM ಬಳಸೆ ಬಳಸುತ್ತಾರೆ ಮತ್ತು ATM ಮೂಲಕ ಸಾಕಷ್ಟು ಹಣವನ್ನು ಕೂಡ ಹಿಂಪಡೆಯುವುದನ್ನು ನಾವು ನೀವೆಲ್ಲ ನೋಡಿರುತ್ತೇವೆ. ಸದ್ಯ ಡಿಜಿಟಲ್ ವಹಿವಾಟು ಎಷ್ಟೇ ಮುಂದುವರೆದಿರೂ ಕೂಡ ATM ಬಳಸುವವರ ಸಂಖ್ಯೆ ಕಡಿಮೆ ಆಗಿಲ್ಲ. ಇನ್ನು ಈಗ ಭಾರತೀಯ ರಿಸರ್ವ್ ಬ್ಯಾಂಕ್ (reserve Bank Of India) ATM ಬಳಸುವವರಿಗೆ ಒಂದು ಬೇಸರದ ಸುದ್ದಿ ನೀಡಿದೆ.

WhatsApp Group Join Now
Telegram Group Join Now

ಹೌದು, ATM ನಿಯಮದಲ್ಲಿ ಈಗ ಬದಲಾವಣೆ ಮಾಡಲಾಗಿದೆ ಮತ್ತು ಬದಲಾದ ಈ ನಿಯಮ ಮೇ 1 ತಾರೀಕಿನಿಂದ ದೇಶಾದ್ಯಂತ ಜಾರಿಗೆ ಬರಲಿದೆ ಎಂದು RBI ಈ ಮೂಲಕ ತಿಳಿಸಿದೆ. ಹಾಗಾದರೆ ATM ಕಾರ್ಡ್ ವಹಿವಾಟಿಗೆ (ATM Card Transactions) ಸಂಬಂಧಿಸಿದಂತೆ ಮೇ 1 ನೇ ತಾರೀಕಿನಿಂದ ದೇಶದಲ್ಲಿ ಜಾರಿಗೆ ಬರುತ್ತಿರುವ ಹೊಸ ನಿಯಮಗಳು ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಮೇ 1 ರಿಂದ ATM ಬಳಸುವವರಿಗೆ ಹೊಸ ರೂಲ್ಸ್
ಹೌದು, ಭಾರತೀಯ ರಿಸರ್ವ್ ಬ್ಯಾಂಕ್ ಈಗ ATM ಕಾರ್ಡ್ ಬಳಸುವವರಿಗೆ ಹೊಸ ನಿಯಮ ಜಾರಿಗೆ ತಂದಿದೆ ಮತ್ತು ಹೊಸ ನಿಯಮದ ಅಡಿಯಲ್ಲಿ ATM ಕಾರ್ಡ್ ಶುಲ್ಕವನ್ನು ಹೆಚ್ಚಳ ಮಾಡಲು ಈಗ RBI ಅನುಮೋದನೆ ನೀಡಿದೆ. ಇನ್ನುಮುಂದೆ ನಿಗದಿತ ಸಮಯಕ್ಕಿಂತ ಹೆಚ್ಚು ATM ಕಾರ್ಡ್ ಬಳಸಿದರೆ ಅವರು ಹೆಚ್ಚು ಶುಲ್ಕ ಪಾವತಿ ಮಾಡಬೇಕು ಎಂದು RBI ಈ ಮೂಲಕ ತಿಳಿಸಿದೆ. ಇನ್ನು ಹೊಸ ಶುಲ್ಕ ಮೇ 1 ನೇ ತಾರೀಕಿನಿಂದ ದೇಶಾದ್ಯಂತ ಜಾರಿಗೆ ಬರಲಿದೆ.

ATM ಶುಲ್ಕದಲ್ಲಿ ಎಷ್ಟು ಹೆಚ್ಚಳ ಮಾಡಲಾಗಿದೆ ನೋಡಿ
RBI ನೀಡಿರುವ ಮಾಹಿತಿಯ ಪ್ರಕಾರ, ಹಣಕಾಸು ವಹಿವಾಟುಗಳಿಗೆ 2 ರೂಪಾಯಿ ಮತ್ತು ಹಣಕಾಸೇತರ ವಹಿವಾಟುಗಳಿಗೆ 1 ರೂ ಶುಲ್ಕವನ್ನು ಹೆಚ್ಚಳ ಮಾಡಲು ಈಗ RBI ಅನುಮೋಧನೆ ನೀಡಿದೆ. ಇನ್ನು ATM ಬಳಸುವವರಿಗೆ ಮೇ 1 ನೇ ತಾರೀಕಿನಿಂದ ಹಣಕಾಸು ವಹಿವಾಟುಗಳಿಗೆ ಹೆಚ್ಚುವರಿ 2 ರೂಪಾಯಿ ಮತ್ತು ಹಣಕಾಸೇತರ ವಹಿವಾಟುಗಳಿಗೆ 1 ರೂ ಹೆಚ್ಚುವರಿ ಶುಲ್ಕ ಪಾವತಿ ಮಾಡಬೇಕು.

ಬ್ಯಾಂಕುಗಳ ಇಂಟರ್ಚೇಂಜ್ ಶುಲ್ಕದಲ್ಲಿ ಕೂಡ ಹೆಚ್ಚಳ
ಮೇ 1 ನೇ ತಾರೀಕಿನಿಂದ ಬ್ಯಾಂಕುಗಳ ಇಂಟರ್ಚೇಂಜ್ ಶುಲ್ಕದಲ್ಲಿ (Bank Interchange Fee) ಕೂಡ ಹೆಚ್ಚಳ ಕಂಡುಬರಲಿದೆ. ಇನ್ನು ಈ ಇಂಟರ್ಚೇಂಜ್ ಶುಲ್ಕ ATM ವಹಿವಾಟು ಮತ್ತು ಬ್ಯಾಂಕ್ ಪಾವತಿ ಮಾಡುವ ಶುಲ್ಕದ ಮೇಲೆ ನಿರ್ಧಾರ ಆಗುತ್ತದೆ. ಇನ್ನು ಈ ಇಂಟರ್ಚೇಂಜ್ ಶುಲ್ಕವನ್ನು ಸಾಮಾನ್ಯ ವಹಿವಾಟಿನ ಶೇಕಡಾವಾರು ಶುಲ್ಕದ ಮೇಲೆ ಕೂಡ ಲೆಕ್ಕಾಚಾರ ಮಾಡಲಾಗುತ್ತದೆ. ಈ ಹಿಂದೆ 2021 ರಲ್ಲಿ RBI 17 ರೂಪಾಯಿ ಇದ್ದ ಇಂಟರ್ಚೇಂಜ್ ಶುಲ್ಕವನ್ನು 19 ರೂಪಾಯಿಗೆ ಏರಿಕೆ ಮಾಡಿತ್ತು, ಆದರೆ ಈಗ ಮತ್ತೆ 2 ಏರಿಕೆ ಮಾಡಲು ಮುಂದಾಗಿದೆ. ಇನ್ನು ಬ್ಯಾಲೆನ್ಸ್ ಚೆಕ್ ಗಳ ವಹಿವಾಟುಗಳಿಗೆ ಇಂಟರ್ಚೇಂಜ್ ಶುಲ್ಕವನ್ನು 7 ರೂಪಾಯಿಗೆ ನಿಗದಿ ಮಾಡಲಾಗಿದೆ. ಮಾರ್ಚ್ 13 ನೇ ತಾರೀಕಿಗೆ NPCI ಇಂಟರ್ಚೇಂಜ್ ಶುಲ್ಕವನ್ನು ಹೆಚ್ಚಳ ಮಾಡುವ ಕುರಿತಂತೆ RBI ಬಳಿ ಮನವಿ ಮಾಡಿಕೊಂಡಿತ್ತು, ಸದ್ಯ RBI ಈಗ NPCI ಮನವಿಗೆ ಅನುಮೋದನೆ ನೀಡಲು ಮುಂದಾಗಿದೆ.

Leave a Comment