Gruha Lakshmi Scheme Latest Update: ಕರ್ನಾಟಕ ರಾಜ್ಯ ಸರ್ಕಾರದ ಬಹುದೊಡ್ಡ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಯ (Gruha Lakshmi Scheme) ಹಣ ಜಮಾ ಆಗದ ಕಾರಣ ಸಾಕಷ್ಟು ಮಹಿಳೆಯರು ಬೇಸರವನ್ನು ಹೊರಹಾಕಿದ್ದರು. ಹೌದು, ಕಳೆದ ಎರಡು ತಿಂಗಳಿಂದ ರಾಜ್ಯದ ಯಾವುದೇ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಿಲ್ಲ. DBT ಕರ್ನಾಟಕ (DBT Karnataka) ಮೂಲಕ ಪ್ರತಿ ತಿಂಗಳು ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಮಾಡುವ ಕೆಲಸ ಮಾಡಲಾಗುತ್ತಿತ್ತು, ಆದರೆ ಕೆಲವು ತಾಂತ್ರಿಕ ದೋಷಗಳು ಕಂಡುಬಂದ ಕಾರಣ ಕಳೆದ ಎರಡು ತಿಂಗಳಿಂದ ಯಾವುದೇ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಮಾಡಲು ರಾಜ್ಯ ಸರ್ಕಾರದ ಬಳಿ ಸಾಧ್ಯವಾಗಿಲ್ಲ.
ಎರಡು ತಿಂಗಳಿಂದ ಬಾಕಿ ಉಳಿದುಕೊಂಡ ಗೃಹಲಕ್ಷ್ಮಿ ಹಣ
ಹೌದು, ಕಳೆದ ಎರಡು ತಿಂಗಳಿಂದ ಗೃಹಲಕ್ಷ್ಮಿ ಯೋಜನೆಯ ಹಣ ಮಹಿಳೆಯರ ಖಾತೆಗೆ ಜಮಾ ಆಗದೆ ಬಾಕಿ ಉಳಿದುಕೊಂಡಿದೆ. ಇನ್ನು ಈಗ ಬಾಕಿ ಉಳಿದುಕೊಂಡಿರುವ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಮಾಡುವುದಕ್ಕೆ ಸಂಬಂಧಿಸಿದಂತೆ ರಾಜ್ಯದ ಸಚಿವೆಯಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಧ್ಯಮದ ಮುಂದೆ ಮಾತನಾಡಿ ರಾಜ್ಯದ ಎಲ್ಲ ಮಹಿಳೆಯರಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಮಾಧ್ಯಮದ ಮುಂದೆ ಮಾತನಾಡಿದ ಲಕ್ಷ್ಮಿ ಹೆಬ್ಬಾಳ್ಕರ್ ಗೃಹಲಕ್ಷ್ಮಿ (Lakshmi Hebbalkar) ಯೋಜನೆಯ ಬಾಕಿ ಇರುವ ಹಣ ಯಾವ ಮಹಿಳೆಯರ ಖಾತೆಗೆ ಜಮಾ ಆಗಲಿದೆ ಎಂದು ತಿಳಿಸಿದ್ದಾರೆ.
ಈ ದಿನದಂದು ಮಹಿಳೆಯರ ಖಾತೆಗೆ ಬಾಕಿ ಇರುವ ಹಣ ಜಮಾ
ಮಾಧ್ಯಮದ ಮುಂದೆ ಮಾತನಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾರ್ಚ್ 31 ನೇ ತಾರೀಕಿಗೆ ಮಹಿಳೆಯರ ಬಾಕಿ ಇರುವ ಗೃಹ ಲಕ್ಷ್ಮಿ ಯೋಜನೆಯ ಹಣ ಜಮಾ ಆಗಲಿದೆ ಎಂದು ಹೇಳಿದ್ದಾರೆ. DBT ಕರ್ನಾಟಕ ಮೂಲಕ ಗೃಹಲಕ್ಷ್ಮಿ ಯೋಜನೆಯ ಬಾಕಿ ಇರುವ ಹಣವನ್ನು ಜಮಾ ಮಾಡುವ ಕೆಲಸ ಮಾಡಲಾಗುತ್ತಿದೆ. ಸದ್ಯ ಹಣ ಬಿಡುಗಡೆ ಆಗಿದ್ದು ಇದೆ ಮಾರ್ಚ್ 31 ನೇ ತಾರೀಕಿಗೆ ರಾಜ್ಯದ ಎಲ್ಲಾ ಮಹಿಳೆಯರ ಖಾತೆಗೆ ಹಣ ಜಮಾ ಆಗಲಿದೆ ಎಂದು ಹೇಳಿದ್ದಾರೆ.
ಈ ಕೆಲಸ ಮಾಡಿದರೆ ಮಾತ್ರ ಖಾತೆಗೆ ಹಣ ಜಮಾ
ಇನ್ನು ಮಹಿಳೆಯರಿಗೆ ಒಂದು ಸೂಚನೆ ನೀಡಿರುವ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ಮಹಿಳೆಯರು ತಮ್ಮ ಖಾತೆಗೆ ಆಧಾರ್ ಸಂಖ್ಯೆ ಲಿಂಕ್, ಪಾನ್ ಸಂಖ್ಯೆ ಲಿಂಕ್, KYC ಅಪ್ಡೇಟ್, NPCI ಮ್ಯಾಪಿಂಗ್ ಮಾಡಿಸಿಕೊಂಡರೆ ಮಾತ್ರ ಮಹಿಳೆಯರ ಖಾತೆಗೆ ಹಮ್ ಜಮಾ ಆಗಲಿದೆ. ಇನ್ನು ಯಾವ ಮಹಿಳೆಯರು ಇನ್ನೂ ಕೂಡ ತಮ್ಮ ಖಾತೆಗೆ ಈ ಕೆಲಸವನ್ನು ಮಾಡಿಸಿಕೊಂಡಿಲ್ಲವೋ ಅಂತಹ ಮಹಿಳೆಯರು ಮುಂದಿನ ದಿನಗಳಲ್ಲಿ ಗೃಹಲಕ್ಷ್ಮಿ ಯೋಜನೆಯ ಬಾಕಿ ಇರುವ ಹಣ ಪಡೆದುಕೊಳ್ಳಲು ಸಾಧ್ಯವಿಲ್ಲ ಎಂದು ಲಕ್ಷ್ಮಿ ಹೆಬ್ಬಾಳ್ಕರ್.
ಈ ರೀತಿಯಲ್ಲಿ ಗೃಹ ಲಕ್ಷ್ಮಿ ಸ್ಕೀಮ್ ಸ್ಟೇಟಸ್ ಚೆಕ್ ಮಾಡಿ
ಮಹಿಳೆಯರು DBT ಕರ್ನಾಟಕ ಅಪ್ಲಿಕೇಶನ್ ಇನ್ಸ್ಟಾಲ್ ಮಾಡಿಕೊಂಡು ಗೃಹಲಕ್ಷ್ಮಿ ಯೋಜನೆಯ ಸ್ಟೇಟಸ್ ಚೆಕ್ ಮಾಡಬಹುದು. DBT ಕರ್ನಾಟಕ ಅಪ್ಲಿಕೇಶನ್ ಇನ್ಸ್ಟಾಲ್ ಮಾಡಿಕೊಂಡು ನಿಮ್ಮ ಆಧಾರ್ ಸಂಖ್ಯೆ ಹಾಕಿ ಲಾಗಿನ್ ಮಾಡಬೇಕು. ಅಪ್ಲಿಕೇಶನ್ ಲಾಗಿನ್ ಮಾಡಿದ ನಂತರ ನೀವು ಅಪ್ಲಿಕೇಶನ್ ಗೃಹಲಕ್ಷ್ಮಿ ಯೋಜನೆಯ ಸ್ಟೇಟಸ್ ಅನ್ನು ಸಂಪೂರ್ಣವಾಗಿ ಚೆಕ್ ಮಾಡಿಕೊಳ್ಳಬಹುದು. ಮಾರ್ಚ್ 31 ನೇ ತಾರೀಕಿಗೆ ಮಹಿಳೆಯರ ಖಾತೆಗೆ ಬಾಕಿ ಇರುವ ಎಲ್ಲಾ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಲಿದ್ದು ಮಹಿಳೆಯರು ತಿಂಗಳ ಕೊನೆಯ ಗೃಹಲಕ್ಷ್ಮಿ ಹಣ ಪಡೆದುಕೊಳ್ಳಬಹುದು.