Revenue Department Land Records: ರಾಜ್ಯ ಕಂದಾಯ ಇಲಾಖೆ (Revenue Department) ಮತ್ತು ರಾಜ್ಯ ಸರ್ಕಾರ ರೈತರಿಗೆ ನೆರವಾಗುವ ಉದ್ದೇಶದಿಂದ ರಾಜ್ಯದಲ್ಲಿ ಈಗಾಗಲೇ ಹಲವು ಯೋಜನೆಯನ್ನು ಜಾರಿಗೆ ತಂದಿದೆ. ಹೌದು, ರೈತರು ತಮ್ಮ ಜಮೀನಿನ ವಿಷಯವಾಗಿ ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದಾರೆ. ಜಮೀನಿಗೆ ಹೋಗುವ ದಾರಿ ವಿಷಯವಾಗಿ ರೈತರ ನಡುವೆಯೇ ಜಗಳಗಳು ನಡೆಯುತ್ತಿದ್ದು ಅನೇಕ ವ್ಯಾಜ್ಯಗಳು ಸರ್ಕಾರದ ಮುಂದೆ ಕೂಡ ಬಂದಿದೆ ಎಂದು ಹೇಳಬಹುದು. ಇದರ ನಡುವೆ ರಾಜ್ಯ ಸರ್ಕಾರ ಮತ್ತು ರಾಜ್ಯ ಕಂದಾಯ ಇಲಾಖೆ ಈಗ ರೈತರಿಗಾಗಿ ಹೊಸ ನಿರ್ಧಾರ ಮಾಡಿದ್ದು, ಇನ್ನುಮುಂದೆ ರೈತರು ತಮ್ಮ ಜಮೀನಿಗೆ ಹೋಗಲು ದಾರಿ ಎಲ್ಲಿದೆ ಅನ್ನುವುದನ್ನು ತಮ್ಮ ಮೊಬೈಲ್ ಮೂಲಕವೇ ತಿಳಿದುಕೊಳ್ಳಬಹುದು.
ಇನ್ಮುಂದೆ ಮೊಬೈಲ್ ನಲ್ಲಿಗೆ ತೋರಲಿದೆ ನಿಮ್ಮ ಜಮೀನಿನ ದಾರಿ
ಸಾಕಷ್ಟು ರೈತರು ಮತ್ತು ತೋಟಗಳನ್ನು ಹೊಂದಿರುವವರು, ತಮ್ಮ ಹೊಲಕ್ಕೆ ಮತ್ತು ಜಮೀನಿಗೆ ಹೋಗಲು ದಾರಿ ಇಲ್ಲದೆ ದಾರಿಗಾಗಿ ಕಷ್ಟಪಡುತ್ತಿದ್ದಾರೆ. ಇನ್ನು ಸಾಕಷ್ಟು ದಾರಿಗಳು ಅತಿಕ್ರಮಣದ ಕಾರಣ ಬಂದ್ ಆಗಿದೆ. ಸದ್ಯ ರಾಜ್ಯ ಸರ್ಕಾರ ಮತ್ತು ಕಂದಾಯ ಇಲಾಖೆ ಈಗ ಹೊಸ ನಕ್ಷೆ ಬಿಡುಗಡೆ ಮಾಡಿದ್ದು ರೈತರು ಮತ್ತು ಜನರು ಈ ನಕ್ಷೆಯ ಮೂಲಕ ತಮ್ಮ ಜಮೀನಿಗೆ ಇರುವ ದಾರಿಯನ್ನು ಕಂಡುಕೊಳ್ಳಬಹುದು.
ಮೊಬೈಲ್ ನಲ್ಲಿ ಜಮೀನಿನ ದಾರಿ ನೋಡುವುದು ಹೇಗೆ
ರೈತರು ಇನ್ನುಮುಂದೆ ಮೊಬೈಲ್ ತಮ್ಮ ಜಮೀನಿನ ದಾರಿ ನೋಡಿಕೊಳ್ಳಬಹುದು. ರಾಜ್ಯ ಕಂದಾಯ ಈಗ ಹಳ್ಳಿ ಮತ್ತು ಗ್ರಾಮಗಳ ವ್ಯಕ್ತಿಯ ನಕ್ಷೆಯನ್ನು ಆನ್ಲೈನ್ ನಲ್ಲಿ ಬಿಡುಗಡೆ ಮಾಡಿದ್ದು ಜನರು ಅದನ್ನು ನೋಡಿಕೊಳ್ಳಬಹುದು. ಅದೇ ರೀತಿಯಲ್ಲಿ ರೈತರು ಅವರ ಊರಿನ ಕಂದಾಯ ನಕ್ಷೆಯನ್ನು ತಮ್ಮ ಮೊಬೈಲ್ ಮೂಲಕ ಡೌನ್ಲೋಡ್ ಮಾಡಿಕೊಂಡು ಮನೆಯಲ್ಲೇ ಕುಳಿತುಕೊಂಡು ಜಮೀನಿನ ದಾರಿ ಕೂಡ ನೋಡಿಕೊಳ್ಳಬಹುದು.
ಹಲವಾರು ವರ್ಷಗಳಿಂದ ಸರ್ಕಾರ, ಚಕ್ರಾಧಿಪತ್ಯದ ಭೂಮಿ ಆಗಿರಬಹುದು, ರಾಜಪ್ರಭುತ್ವದ ಭೂಮಿ ಆಗಿರಬಹುದು ಅಥವಾ ಪ್ರಜಾಪ್ರಭುತ್ವ ಕಾಲದಿಂದಲೂ ಕೂಡ ನಕ್ಷೆಯನ್ನು ಮಾಡಿಕೊಂಡು ಅದನ್ನು ನಿರ್ವಹಣೆ ಮಾಡಿಕೊಂಡು ಬಂದಿದೆ. ಆರಂಭದಲ್ಲಿ ಸರ್ಕಾರದ ಬಹುತೇಕ ಎಲ್ಲಾ ಇಲಾಖೆ ಕಂದಾಯ ಇಲಖೆಯ ಅಡಿಯಲ್ಲಿ ಕೆಲಸ ಮಾಡುತ್ತಿದ್ದವು, ನಂತರ ಕೆಲಸ ವೈಕರ್ಯದ ಮೇಲೆ ಹಲವು ಇಲಾಖೆಗಳು ಕಂದಾಯ ಇಲಾಖೆಯಿಂದ ಹೊರಬಂದಿದೆ. ಸದ್ಯ ಕಂದಾಯ ಇಲಾಖೆ ಕರ್ನಾಟಕದ ಎಲ್ಲಾ ಜನರಿಗೆ ತಮ್ಮ ಮೊಬೈಲ್ ಮೂಲಕವೇ ನಕ್ಷೆಯನ್ನು ಈಗ ಡೌನ್ಲೋಡ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಿಕೊಟ್ಟಿದೆ. ಇನ್ನು ಜನರು https://landrecords.karnataka.gov.in/ ವೆಬ್ಸೈಟ್ ಗೆ ಭೇಟಿನೀಡುವುದರ ಮೂಲಕ ನಕ್ಷೆ ಡೌನ್ಲೋಡ್ ಮಾಡಿಕೊಳ್ಳಬಹುದು.
ಇನ್ನು ಜನರು ಡೌನ್ಲೋಡ್ ಮಾಡಿಕೊಂಡ ನಕ್ಷೆಯಲ್ಲಿ, ಕಾಲುದಾರಿ, ಬಂಡಾಯ ದಾರಿ, ಸರ್ಕಾರೀ ದಾರಿ, ತೆರೆದ ಬಾವಿ, ಗುಡ್ಡ, ಮನೆ ಕಾಲುವೆ ಸೇರಿದಂತೆ ಅವರವರ ಜಮೀನಿಗೆ ಎಲ್ಲಿಂದ ದಾರಿಗಾಳು ಇದೆ ಅನ್ನುವುದನ್ನು ಕೂಡ ತಿಳಿದುಕೊಳ್ಳಬಹುದು. ಕಂದಾಯ ಇಲಾಖೆಯ ವೆಬ್ಸೈಟ್ ನಲ್ಲಿ ಕರ್ನಾಟಕ ಸಂಪೂರ್ಣ ನಕ್ಷೆ ಬಿಡುಗಡೆ ಮಾಡಲಾಗಿದೆ ಮತ್ತು PDF ಮೂಲಕ ನಕ್ಷೆ ನಗೆದುಕೊಂಡು ನೀವು ನಿಮ್ಮ ಜಮೀನಿನ ದಾರಿ ನೋಡಿಕೊಳ್ಳಬಹುದು. ಸದ್ಯ ಕಂದಾಯ ಇಲಾಖೆಯ ಈ ನಿರ್ಧಾರ ಸಾಕಷ್ಟು ರೈತರ ಸಂತಸಕ್ಕೆ ಕಾರಣವಾಗಿದೆ ಎಂದು ಹೇಳಬಹುದು.