ದೇಶದಲ್ಲಿ ಚಾಲ್ತಿಯಲ್ಲಿ ಇಲ್ಲ 10 ರೂಪಾಯಿ ನಾಣ್ಯಗಳು
ಹೌದು, ದೇಶದಲ್ಲಿ 10 ರೂಪಾಯಿ ನಾಣ್ಯಗಳು ಚಾಲ್ತಿಯಲ್ಲಿ ಇಲ್ಲ ಅನ್ನುವ ಮಾತುಗಳು ಕೇಳಿಬರುತ್ತಿದೆ. ಈ ಕಾರಣಗಳಿಂದ ಸಾಕಷ್ಟು ಅಂಗಡಿಯವರು ಮತ್ತು ವ್ಯಾಪಾರಸ್ಥರು 10 ರೂಪಾಯಿ ನಾಣ್ಯಗಳು ಸ್ವೀಕಾರ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ದೇಶದಲ್ಲಿ 10 ರೂಪಾಯಿ ನಾಣ್ಯಗಳಿಗೆ ಸಂಬಂಧಿಸಿದಂತೆ ಈ ವಂದತಿಗಳು ಕೇಳಿಬಂದ ಬೆನ್ನಲ್ಲೇ ಈಗ ಭಾರತೀತ ರಿಸರ್ವ್ ಬ್ಯಾಂಕ್ 10 ರೂಪಾಯಿ ನಾಣ್ಯಗಳಿಗೆ ಸಂಬಂಧಿಸಿದಂತೆ ಬಹುದೊಡ್ಡ ಆದೇಶ ಹೊರಡಿಸಿದೆ.
10 ರೂಪಾಯಿ ಚಾಲ್ತಿಯಲ್ಲಿ ಇದೆ ಎಂದು ಹೇಳಿದ RBI
10 ರೂಪಾಯಿ ನಾಣ್ಯಗಳ ಬಗ್ಗೆ ಆದೇಶ ಹೊರಡಿಸಿರುವ RBI ಈಗ 10 ರೂಪಾಯಿ ನಾಣ್ಯಗಳು ಚಾಲ್ತಿಯಲ್ಲಿ ಇದೆ ಮತ್ತು ಎಲ್ಲರೂ ಅದನ್ನು ಸ್ವೀಕಾರ ಮಾಡಬೇಕು ಎಂದು ಹೇಳಿದೆ. ದೇಶದಲ್ಲಿ ನಕಲಿ 10 ರೂಪಾಯಿ ನಾಣ್ಯಗಳು ಬಂದಿದೆ ಎಂದು ವರದಿಗಳು ಹರಿದಾಡಿದ ಬೆನ್ನಲ್ಲೇ ಅಂಗಡಿಯವರು 10 ರೂಪಾಯಿ ನಾಣ್ಯಗಳನ್ನು ಪಡೆದುಕೊಳ್ಳಲು ಹಿಂದೇಟು ಹಾಕುತ್ತಾರೆ. ಇನ್ನು ನಡುವೆ RBI 10 ರೂಪಾಯಿ ನಾಣ್ಯಗಳ 14 ಹತ್ತು ಮಾದರಿಗಳಲ್ಲಿ ತನ್ನ ವೆಬ್ಸೈಟ್ ನಲ್ಲಿ ಕೂಡ ಬಿಡುಗಡೆ ಮಾಡಿದೆ.
10 ರೂಪಾಯಿ ನಾಣ್ಯ ಸ್ವೀಕಾರ ಮಾಡುವದರ ಮೇಲೆ ಕ್ರಮ
ಎಲ್ಲಾ ಅಂಗಡಿಯವರಿಗೆ ಎಚ್ಚರಿಕೆ ನೀಡಿರುವ RBI ಎಲ್ಲಾ ಅಂಗಡಿಯವರು ಕೂಡ 10 ರೂಪಾಯಿ ನಾಣ್ಯಗಳನ್ನು ತಗೆದುಕೊಳ್ಳಬೇಕು ಮತ್ತು ಯಾರು 10 ರೂಪಾಯಿ ನಾಣ್ಯ ತಗೆದುಕೊಳ್ಳಲು ನಿರಾಕರಣೆ ಮಾಡುತ್ತಾರೋ ಅವರ ಮೇಲೆ ಕ್ರಮ ತಗೆದುಕೊಳ್ಳಲಾಗುತ್ತದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಎಚ್ಚರಿಕೆ ನೀಡಿದೆ. ನಿಮಗೆ 10 ರೂಪಾಯಿ ನಾಣ್ಯಗಳು ನಕಲಿ ಅನ್ನುವ ಅನುಮಾನ ಬಂದರೆ ನೀವು RBI ವೆಬ್ಸೈಟ್ ಗೆ ಹೋಗಿ 10 ರೂಪಾಯಿ ನಾಣ್ಯಗಳ ಮಾದರಿಯನ್ನು ಚೆಕ್ ಮಾಡಬಹುದು ಮತ್ತು ಅದರಲ್ಲಿ 10 ರೂಪಾಯಿ ನಾಣ್ಯಗಳ 14 ಮಾದರಿಗಳನ್ನು ಬಿಡುಗಡೆ ಮಾಡಲಾಗಿದೆ.
ಇನ್ನು 10 ರೂಪಾಯಿ ನಾಣ್ಯಗಳು ಎರಡು ಲೋಹಗಳಿಂದ ಮಾಡಲ್ಪಟ್ಟಿದೆ. ನಕಲಿ ನಾಣ್ಯಗಳು ಕಡಿಮೆ ತೂಕ ಇದ್ದು ಅದರ ಗಾತ್ರದಲ್ಲಿ ಕೂಡ ವ್ಯತ್ಯಾಸ ಇರುತ್ತದೆ, ಆದರೆ ಅಸಲಿ ನಾಣ್ಯಗಳು ಹೆಚ್ಚಿನ ತೂಕ ಇದ್ದು ಗಾತ್ರ ಕೂಡ ದೊಡ್ಡದಾಗಿದೆ ಅನ್ನುವುದನ್ನು ಗಮನಿಸಬಹುದು. ಹೊರಗಿನ ಭಾಗ ಅಲ್ಯೂಮಿನಿಯಂ ಮತ್ತು ಕಂಚು ಹಾಗು ಒಳಗಿನ ಭಾಗ ನಿಕಲ್ ಮತ್ತು ಕಂಚಿನಿಂದ ಮಾಡಲಾಗಿದೆ ಮತ್ತು ಅಸಲಿ ನಾಣ್ಯಗಳ ಬಣ್ಣ ಕೂಡ ಪ್ರಕಾಶಮಾನವಾಗಿದೆ. ಇನ್ನು 10 ರೂಪಾಯಿ ನಾಣ್ಯದ ಒಂದು ಭಾಗದಲ್ಲಿ ಅಶೋಕ ಸ್ತಂಭವಿದ್ದು ಇನ್ನೊಂದು ಭಾಗದಲ್ಲಿ India ಎಂದು ಬರೆಯಲಾಗಿದೆ. ಹೀಗೆ 10 ರೂ ನಾಣ್ಯಗಳು ಹಲವು ಚಿಹ್ನೆ ಹೊಂದಿದ್ದು ಜನರು ಸುಲಭವಾಗಿ ಗುರುತಿಸಬಹುದು.