Madhu Bangarappa: ರಾಜ್ಯಾದ್ಯಂತ ಶಾಲಾ ಮಕ್ಕಳಿಗೆ ಫೇಸ್ ರೆಕಗ್ನಿಷನ್ ಹಾಜರಾತಿ ನಿಯಮ ಜಾರಿ, ಮುಖ ಸ್ಕ್ಯಾನ್ ಮಾಡಿ ಹಾಜರಾತಿ

Face Recognition Attendance System: ರಾಜ್ಯದಲ್ಲಿ ಸದ್ಯ SSLC ಪರೀಕ್ಷೆ ಆರಂಭ ಆಗಿದೆ. SSLC ಮತ್ತು ಪರೀಕ್ಷೆ ಬರೆಯುವುದರಲ್ಲಿ ಬಹಳ ಬ್ಯುಸಿ ಆಗಿದ್ದಾರೆ ಎಂದು ಹೇಳಬಹುದು. ಇನ್ನು ಇದರ ನಡುವೆ ರಾಜ್ಯ ಸರ್ಕಾರ ಮಕ್ಕಳಿಗೆ ಏಪ್ರಿಲ್ 1 ನೇ ತಾರೀಕಿನಿಂದ ಬೇಸಿಗೆ ರಜೆ ಕೂಡ ಘೋಷಣೆ ಮಾಡಿದೆ. ಶಾಲಾ ಮಕ್ಕಳು ಬೇಸಿಗೆ ರಜೆಯ ಖುಷಿಯಲ್ಲಿ ಇದ್ದರೆ ಇತ್ತಕಡೆ ಖಾಸಗಿ ಮತ್ತು ಸರ್ಕಾರೀ ಶಾಲೆಗಳು ಮಕ್ಕಳ ದಾಖಲಾತಿಯಲ್ಲಿ ಬ್ಯುಸಿ ಆಗಿದ್ದಾರೆ. 

WhatsApp Group Join Now
Telegram Group Join Now
ಈ ನಡುವೆ ರಾಜ್ಯದ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರು ರಾಜ್ಯದಲ್ಲಿ ಹೊಸ ನಿಯಮ ಜಾರಿಗೆ ತಂದಿದ್ದಾರೆ. ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದ ಎಲ್ಲಾ ಶಾಲಾ ಮಕ್ಕಳಿಗೆ ಹೊಸ ರೀತಿಯ ಹಾಜರಾತಿ ಸಿಸ್ಟಮ್ ಜಾರಿಗೆ ತರುವುದರ ಮೂಲಕ ಮಧು ಬಂಗಾರಪ್ಪ ಅವರು ಮಕ್ಕಳ ಹಾಜರಾತಿ ನಿಯಮದಲ್ಲಿ ಬಹುದೊಡ್ಡ ಬದಲಾವಣೆ ಮಾಡಿದ್ದಾರೆ ಎಂದು ಹೇಳಬಹುದು.

ರಾಜ್ಯದ ಶಾಲಾ ಮಕ್ಕಳಿಗೆ ಫೇಸ್ ರೆಕಗ್ನಿಷನ್ ಹಾಜರಾತಿ ವ್ಯವಸ್ಥೆ
ರಾಜ್ಯದ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರು, ರಾಜ್ಯದ ಮಕ್ಕಳಿಗೆ ಹೊಸ ರೀತಿಯ ಹಾಜರಾತಿ ವ್ಯವಸ್ಥೆ ಜಾರಿಗೆ ತಂದಿದ್ದಾರೆ. ಶಾಲಾ ಮಕ್ಕಳಿಗೆ ಫೇಸ್ ರೆಕಗ್ನಿಷನ್ ಹಾಜರಾತಿ ಸಿಸ್ಟಮ್ (Face Recognition Attendance System) ಜಾರಿಗೆ ತರುವುದರ ಮೂಲಕ ಹಾಜರಾತಿ ನಿಯಮದಲ್ಲಿ ಬಹುದೊಡ್ಡ ಬದಲಾವಣೆ ಮಾಡಿದ್ದಾರೆ. ಈ ಹಿಂದೆ ಪುಸ್ತಕದಲ್ಲಿ ಮಕ್ಕಳ ಹಾಜರಾತಿ ತಗೆದುಕೊಳ್ಳಲಾಗುತ್ತಿತ್ತು, ಆದರೆ ಈಗ ಆ ನಿಯಮದಲ್ಲಿ ಬದಲಾವಣೆ ಮಾಡಲಾಗಿದೆ ಮತ್ತು ಮುಂದಿನ ದಿನಗಳಲ್ಲಿ ಫೇಸ್ ರೆಕಗ್ನಿಷನ್ ಮೂಲಕ ಮಕ್ಕಳ ಹಾಜರಾತಿ ಮಾಡಲಾಗುತ್ತಿದೆ.

ಮಕ್ಕಳ ಪ್ರಗತಿಗಾಗಿ ಈ ಹೊಸ ಯೋಜನೆ

ರಾಜ್ಯದ ಮಕ್ಕಳ ಶಿಕ್ಷಣ ಪ್ರಗತಿ ಮತ್ತು ಮಕ್ಕಳ ಪೋಷಕರು ತಮ್ಮ ಶಿಕ್ಷಣದಿಂದ ವಂಚಿತರಾಗಬಾರದು ಮತ್ತು ಮಕ್ಕಳಿಗೆ ಸರಿಯಾದ ಶಿಕ್ಷಣ ದೊರಕುವಂತೆ ಮಾಡಬೇಕು ಎಂದು ಹೇಳಿದರೆ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರು ಫೇಸ್ ರೆಕಗ್ನಿಷನ್ ಹಾಜರಾತಿ ಜಾರಿಗೆ ತರುವುದರ ಬಗ್ಗೆ ಮಾತನಾಡಿದ್ದಾರೆ. ಮುಂದಿನ ವರ್ಷದಿಂದ ಹೊಸ ತಂತ್ರಜ್ಞಾನದ ಮೂಲಕ ಮಕ್ಕಳ ಹಾಜರಾತಿ ಮಾಡಲಾಗುತ್ತದೆ ಮತ್ತು ಮಕ್ಕಳಿಗೆ ತಂತ್ರಜ್ಞಾನದ ಅರಿವು ಮೂಡಿಸುವ ಕೆಲಸ ಕೂಡ ಮಾಡಲಾಗುತ್ತದೆ ಎಂದು ಮಧು ಬಂಗಾರಪ್ಪ ಅವರು ಹೇಳಿದ್ದಾರೆ.

ಈ ವರ್ಷ ಎರಡು ತಿಂಗಳು ಬೇಸಿಗೆ ರಜೆ
ಸದ್ಯ 1 ರಿಂದ 9 ನೇ ತರಗತಿ ಮಕ್ಕಳಿಗೂ ಕೂಡ ಪರೀಕ್ಷೆ ನಡೆಯುತ್ತಿದೆ. ಮಕ್ಕಳಿಗೆ ಪರೀಕ್ಷೆ ಮುಗಿದ ನಂತರ ಬೇಸಿಗೆ ರಜೆ ಆರಂಭ ಆಗಲಿದೆ. ಏಪ್ರಿಲ್ ತಿಂಗಳ ಮೊದಲ ದಿನದಿಂದಲೇ ಬೇಸಿಗೆ ರಜೆ ಆರಂಭ ಆಗಲಿದೆ ಮತ್ತು ಮೇ ತಿಂಗಳ ಅಂತ್ಯದ ತನಕ ಬೇಸಿಗೆ ರಜೆ ಇರಲಿದೆ. ಮಕ್ಕಳಿಗೆ ಈ ವರ್ಷ ಎರಡು ತಿಂಗಳು ಬೇಸಿಗೆ ರಜೆ ಘೋಷಣೆ ಮಾಡಲಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಬೇಸಿಗೆಯ ತಾಪ ಹೆಚ್ಚಾದ ಕಾರಣ ಪ್ರಸ್ತುತ ವರ್ಷದಲ್ಲಿ ಸಂಪೂರ್ಣ ಎರಡು ತಿಂಗಳು ಬೇಸಿಗೆ ರಜೆ ಘೋಷಣೆ ಮಾಡಲಾಗಿದೆ.

Leave a Comment