Gold Storage Limits At Home: ಈಗಿನ ಕಾಲದಲ್ಲಿ ಜನರು ಹೆಚ್ಚು ಹೆಚ್ಚು ಚಿನ್ನ ಖರೀದಿ ಮಾಡುತ್ತಿರುವುದನ್ನು ನಾವು ನೀವೆಲ್ಲ ನೋಡಬಹುದು. ಹೌದು, ತಮ್ಮ ಭವಿಷ್ಯದ ಉದ್ದೇಶದಿಂದ ಮತ್ತು ದಿನದಿಂದ ದಿನಕ್ಕೆ ಚಿನ್ನದ ಬೆಲೆ ಏರಿಕೆ ಆಗುತ್ತಿರುವುದರ ಕಾರಣ ಜನರು ಹೆಚ್ಚು ಹೆಚ್ಚು ಚಿನ್ನ ಖರೀದಿ ಮಾಡುತ್ತಿದ್ದಾರೆ. ಇದರ ನಡುವೆ ಚಿನ್ನ ಖರೀದಿ ಮಾಡುವುದಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರ ಕೂಡ ಕೆಲವು ನಿಯಮಗಳನ್ನು ಜಾರಿಗೆ ತಂದಿದೆ. ಹೌದು, ಕೇಂದ್ರ ಸರ್ಕಾರ ಮನೆಯಲ್ಲಿ ಎಷ್ಟು ಚಿನ್ನ ಇಟ್ಟುಕೊಳ್ಳಬಹುದು ಮತ್ತು ಕಾನೂನಿನ ಪ್ರಕಾರ ಮನೆಯಲ್ಲಿ ಎಷ್ಟು ಚಿನ್ನ ಇಟ್ಟುಕೊಂಡರೆ ನೀವು ತೆರಿಗೆ ಇಲಾಖೆಯಿಂದ ಸಮಸ್ಯೆ ಎದುರಿಸಬೇಕಾಗುತ್ತದೆ ಅನ್ನುವುದಕ್ಕೂ ಕೂಡ ನಿಯಮ ಜಾರಿಯಲ್ಲಿ ಇದೆ. ಹಾಗಾದರೆ ಭಾರತದ ತೆರಿಗೆ ನಿಯಮದ ಪ್ರಕಾರ, ಮನೆಯಲ್ಲಿ ಎಷ್ಟು ಚಿನ್ನ ಇಟ್ಟುಕೊಳ್ಳಬಹುದು ಮತ್ತು ಅಗತ್ಯಕ್ಕಿಂತ ಅಧಿಕ ಚಿನ್ನ ಇಟ್ಟುಕೊಂಡರೆ ನೀವು ಎದುರಿಸಬೇಕಾದ ಸಮಸ್ಯೆ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ನಿಯಮದ ಪ್ರಕಾರ ಮನೆಯಲ್ಲಿ ಇದಕ್ಕಿಂತ ಹೆಚ್ಚು ಚಿನ್ನ ಇಟ್ಟುಕೊಳ್ಳುವಂತಿಲ್ಲ
ಹೌದು, ಚಿನ್ನದ ಉಳಿತಾಯಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರ ಕೆಲವು ನಿಯಮಗಳನ್ನು ದೇಶದಲ್ಲಿ ಜಾರಿಗೆ ತಂದಿದೆ ಮತ್ತು ಆ ನಿಯಮಗಳ ಅಡಿಯಲ್ಲೇ ಚಿನ್ನವನ್ನು ಉಳಿತಾಯ ಮಾಡಬೇಕು. ಇನ್ನು ಭಾರತದ ಕಾನೂನು ನಿಯಮಗಳ ಪ್ರಕಾರ, ಅವಿವಾಹಿತ ಮಹಿಳೆಯರು ಮನೆಯಲ್ಲಿ 250 ಗ್ರಾಂ ಕ್ಕಿಂತ ಹೆಚ್ಚು ಚಿನ್ನ ಇಟ್ಟುಕೊಳ್ಳುವಂತಿಲ್ಲ ಮತ್ತು ಅದೂ ಕಾನೂನು ಬಾಹಿರ ಆಗಿದೆ. ಅದೇ ರೀತಿಯಲ್ಲಿ ಮದುವೆಯಾದ ಮಹಿಳೆಯರು 500 ಗ್ರಾಂ ತನಕ ಚಿನ್ನವನ್ನು ಇಟ್ಟುಕೊಳ್ಳಬಹುದು.
ಸಾಮಾನ್ಯವಾಗಿ ಭಾರತದಲ್ಲಿ ಚಿನ್ನ ಖರೀದಿ ಮಾಡುವವರ ಸಂಖ್ಯೆ ಜಾಸ್ತಿ ಮತ್ತು ಅನೇಕ ಹಬ್ಬದ ಸಮಯದಲ್ಲಿ ಮಹಿಳೆಯರು ಮಾತ್ರವಲ್ಲದೆ ಪುರುಷರು ಕೂಡ ಸಾಕಷ್ಟು ಪ್ರಮಾಣದ ಚಿನ್ನ ಖರೀದಿ ಮಾಡುವುದನ್ನು ನಾವು ನೀವೆಲ್ಲ ನೋಡಬಹುದು. ಆದರೆ ನಿಯಮಗಳ ಪ್ರಕಾರ, ಮಹಿಳೆಯರು ಮತ್ತು ಪುರುಷರು ಅಗತ್ಯಕ್ಕೂ ಮೀರಿ ಚಿನ್ನ ಖರೀದಿ ಮಾಡಿ ಅದನ್ನು ಮನೆಯಲ್ಲಿ ಇಟ್ಟುಕೊಳ್ಳುವಂತಿಲ್ಲ ಮತ್ತು ನೀವು ಮನೆಯಲ್ಲಿ ಅಗತ್ಯಕ್ಕೂ ಚಿನ್ನ ಇಟ್ಟ್ಟುಕೊಂಡರೆ ತೆರಿಗೆ ಇಲಾಖೆಯ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ.
ಪುರುಷರು ಇದಕ್ಕಿಂತ ಹೆಚ್ಚು ಚಿನ್ನ ಇಟ್ಟುಕೊಳ್ಳುವಂತಿಲ್ಲ
ಭಾರತೀಯ ತೆರಿಗೆ ಇಲಾಖೆಯ ನಿಯಮಗಳ ಪ್ರಕಾರ, ವಿವಾಹಿತ ಪುರುಷರು ಮನೆಯಲ್ಲಿ 100 ಗ್ರಾಂ ಚಿನ್ನ ಮಾತ್ರ ಇಟ್ಟುಕೊಳ್ಳಲು ಅವಕಾಶ ನೀಡಲಾಗಿದೆ ಮತ್ತು ಅವಿವಾಹಿತ ಪುರುಷರು 100 ಗ್ರಾಂ ಚಿನ್ನಕ್ಕಿಂತ ಅಧಿಕ ಚಿನ್ನವನ್ನು ಇಟ್ಟುಕೊಳ್ಳುವಂತಿಲ್ಲ. ನೀವು ಹೆಚ್ಚಿನ ಚಿನ್ನ ಮನೆಯಲ್ಲಿ ಇಟ್ಟುಕೊಂಡರೆ ನಿಮ್ಮ ಮನೆಯ ಮೇಲೆ ತೆರಿಗೆ ಇಲಾಖೆಯವರು ದಾಳಿ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ.
ತೆರಿಗೆ ತಪ್ಪಿಸಿಕೊಳ್ಳಲು ಚಿನ್ನ ಖರೀದಿ ಮಾಡಿ ನಂತರ ಅದನ್ನು ಮಾರಾಟ ಮಾಡಿದರೆ ನೀವು ಆ ಸಮಯದಲ್ಲಿ ಕೂಡ ತೆರಿಗೆ ಪಾವತಿ ಮಾಡಬೇಕಾಗುತ್ತದೆ. ಭಾರತದ ಕಾನೂನಿನ ಪ್ರಕಾರ, ಮದುವೆಯಾದ ಮಹಿಳೆಯರು 500 ಗ್ರಾಂ ಚಿನ್ನ ಇಟ್ಟುಕೊಳ್ಳಬಹುದು ಮತ್ತು ಮದುವೆಯಾಗದ ಮಹಿಳೆಯರು 250 ಗ್ರಾಂ ಚಿನ್ನ ಇಟ್ಟುಕೊಳ್ಳಬಹುದು. ಅದೇ ರೀತಿಯಲ್ಲಿ ಮದುವೆಯಾದ ಪುರುಷರು 100 ಗ್ರಾಂ ಚಿನ್ನ ಇಟ್ಟುಕೊಳ್ಳಬಹುದು ಮತ್ತು ಮದುವೆಯಾಗದ ಮಹಿಳೆಯರು 100 ಗ್ರಾಂ ಚಿನ್ನಕ್ಕಿಂತ ಅಧಿಕ ಚಿನ್ನ ಇಟ್ಟುಕೊಳ್ಳುವಂತಿಲ್ಲ.