Mumbai Indians Vighnesh Puthur: ಸದ್ಯ ದೇಶದಲ್ಲಿ IPL ಕಾವು ಬಹಳ ಹೆಚ್ಚಾಗಿದೆ ಎಂದು ಹೇಳಬಹುದು. ಹೌದು, ರಾತ್ರಿಯಾದರೆ ಸಾಕು ಜನರು TV ಮುಂದೆ ಕುಳಿತುಕೊಂಡು ಐಪಿಎಲ್ ನೋಡಲು ಆರಂಭ ಮಾಡಿದ್ದಾರೆ. ಇದರ ನಡುವೆ ಮುಂಬೈ ಇಂಡಿಯನ್ಸ್ (Mumbai Indians) ತಂಡದ ಯುವ ಆಟಗಾರ ವಿಘ್ನೇಶ್ ಪುತ್ತೂರು ಸಾಕಷ್ಟು ಸುದ್ದಿಯಲ್ಲಿದ್ದಾರೆ ಎಂದು ಹೇಳಬಹುದು. ತಮ್ಮ ಮೊದಲ ಐಪಿಎಲ್ ಪಂದ್ಯದಲ್ಲೇ 3 ವಿಕೆಟ್ ಪಡೆದುಕೊಂಡು ಧೋನಿ ಅವರ ಮೆಚ್ಚುಗೆಗೆ ಕಾರಣವಾದ ಯುವ ಆಟಗಾರ ವಿಘ್ನೇಶ್ ಪುತ್ತೂರು (Vighnesh Puthu) ಅವರು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಮತ್ತು ಐಪಿಎಲ್ ನಲ್ಲಿ ಸಾಕಷ್ಟು ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಈನಡುವೆ ಈ ವಿಘ್ನೇಶ್ ಪುತ್ತೂರು ಯಾರು ಮತ್ತು ಇವರು ನಿಜವಾಗಲೂ ಕರ್ನಾಟಕದವರ ಅಥವಾ ಕೇರಳದಾರವ ಅನ್ನುವ ಪ್ರಶ್ನೆ ಸಾಕಷ್ಟು ಜನರ ತಲೆಯಲ್ಲಿ ಮೂಡಿದೆ ಮತ್ತು ಈ ಪ್ರಶ್ನೆ ಮೊದಲು ಕಾರಣ ಅವರ ಹೆಸರಿನ ಮುಂದೆ ಪುತ್ತೂರು ಅನ್ನುವ ಊರು ಆಗಿದೆ. ಸಾಕಷ್ಟು ಜನರು ವಿಘ್ನೇಶ್ ಪುತ್ತೂರು ಅವರು ಕರ್ನಾಟಕದ ದಕ್ಷಿಣಕನ್ನಡ ಜಿಲ್ಲೆಯವರು ಎಂದು ಭಾವಿಸಿಕೊಂಡಿದ್ದಾರೆ. ಹಾಗಾದರೆ ಈ ವಿಘ್ನೇಶ್ ಪುತ್ತೂರು ಯಾರು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವೀಗ ತಿಳಿಯೋಣ.
ಯಾರು ಈ ಯುವ ಕ್ರಿಕೆಟ್ ಆಟಗಾರ ವಿಘ್ನೇಶ್ ಪುತ್ತೂರು
ಹೌದು, ಮೊನ್ನೆ ನಡೆದ ಚನೈ (Chennai Super Kings) ಮತ್ತು ಮುಂಬೈ ಇಂಡಿಯನ್ಸ್ ಪಂದ್ಯದಲ್ಲಿ ಸಾಕಷ್ಟು ಮೆಚ್ಚುಗೆ ಪಡೆದುಕೊಂಡ ಯುವ ಸ್ಪಿನ್ನರ್ ಅಂದರೆ ಅದೂ ವಿಘ್ನೇಶ್ ಪುತ್ತೂರು ಎಂದು ಹೇಳಬಹುದು. ಮೊದಲ ಪಂದ್ಯದಲ್ಲೇ 3 ವಿಕೆಟ್ ಪಡೆದುಕೊಳ್ಳುವುದರ ಮೂಲಕ ವಿಘ್ನೇಶ್ ಪುತ್ತೂರು ಅವರು ದೊಡ್ಡ ಸಾಧನೆ ಮಾಡುವುದು ಮಾತ್ರವಲ್ಲದೆ ಮಹೇಂದ್ರ ಸಿಂಗ್ ಧೋನಿಯವರಿಂದ (mahendra Singh Dhoni) ಕೂಡ ಮೆಚ್ಚುಗೆ ಗಳಿಸಿಕೊಂಡಿದ್ದಾರೆ.
ಆರ್ಥಿಕವಾಗಿ ಬಡ ಕುಟುಂಬದದಲ್ಲಿ ಜನಿಸಿರುವ ವಿಘ್ನೇಶ್ ಪುತ್ತೂರು ಅವರ ತಂದೆ ಒಬ್ಬ ಆಟೋ ಡ್ರೈವರ್ ಅನ್ನುವುದು ಇನ್ನೂ ಕೂಡ ಸಾಕಷ್ಟು ಜನರಿಗೆ ತಿಳಿದಿಲ್ಲ. ಕುಟುಂಬದ ಜವಾಬ್ದಾರಿ ಮತ್ತು ಮಗನ ಕ್ರಿಕೆಟ್ ಕನಸು ಈಡೇರಿಸುವ ಉದ್ದೇಶದಿಂದ ವಿಘ್ನೇಶ್ ಪುತ್ತೂರು ಅವರ ತಂದೆ ಈಗಲೂ ಆಟೋ ಓಡಿಸಿಕೊಂಡು ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ. ತಂದೆಯ ತಾಯಿ ಆಶೀರ್ವಾದ ಮತ್ತು ಕಠಿಣ ಪರಿಶ್ರಮದ ಕಾರಣ ವಿಘ್ನೇಶ್ ಪುತ್ತೂರು ಅವರು ಈಗ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ಇನ್ನು ವಿಘ್ನೇಶ್ ಪುತ್ತೂರು ಅವರ ಹೆಸರಿನಲ್ಲಿ ಪುತ್ತೂರು ಎಂದು ಇರುವ ಕಾರಣ ಸಾಕಷ್ಟು ಜನರು ವಿಘ್ನೇಶ್ ಪುತ್ತೂರು ಅವರು ನನ್ನ ಕರ್ನಾಟಕದವರು ಎಂದು ಭಾವಿಸಿಕೊಂಡಿದ್ದಾರೆ, ಆದರೆ ನಿಜವಾಗಲೂ ಅವರು ಕರ್ನಾಟಕದವರು ಅಲ್ಲ. ಹೌದು, ವಿಘ್ನೇಶ್ ಪುತ್ತೂರು ಅವರು ಕೇರಳದ ರಾಜ್ಯದ ಮಲ್ಲಪುರಂನವರು ಆಗಿದ್ದಾರೆ. ಕೇರಳದ ಮಲ್ಲಪುರಂ ನಲ್ಲಿ ಪುತ್ತೂರು ಅನ್ನುವ ಊರು ಇದೆ ಮತ್ತು ಆ ಪುತ್ತೂರಿಗೆ ಸೇರಿದವರೇ ಈ ವಿಘ್ನೇಶ್ ಪುತ್ತೂರು. ಸುಮಾರು 24 ವಿಘ್ನೇಶ್ ಪುತ್ತೂರು ಅವರು ಸಾಕಷ್ಟು ಸಮಯದಲ್ಲಿ ಕ್ರಿಕೆಟ್ ನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಸಾಕಷ್ಟು ಸ್ಥಳೀಯ ಪಂದ್ಯಗಳನ್ನು ಆಡಿ ಅನುಭವ ಪಡೆದುಕೊಂಡಿರುವ ವಿಘ್ನೇಶ್ ಪುತ್ತೂರು ಅವರು ಸದ್ಯ ಮುಂಬೈ ಇಂಡಿಯನ್ಸ್ ತಂಡದಲ್ಲಿ ಐಪಿಎಲ್ ಆಡುತ್ತಿದ್ದಾರೆ.