John Doe Acts: ಏನಿದು “ಜಾನ್ ಡೋ” ಖಾಯಿದೆ, ಫೋಟೋ ಅಥವಾ ವಿಡಿಯೋ ಶೇರ್ ಮಾಡಿದರೆ ಬೀಳುತ್ತೆ ಕೇಸ್

John Doe Acts Mens Kannada: Dhootha Sameer MD ಅನ್ನುವ Youtuber ಧರ್ಮಸ್ಥಳ ಸೌಜನ್ಯ (Dharmasthala Soujanya) ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋ ತಮ್ಮದೇ Youtube ಚಾನೆಲ್ ಶೇರ್ ಮಾಡಿದ ನಂತರ ಧರ್ಮಸ್ಥಳದ ಬಗ್ಗೆ ಸಾಕಷ್ಟು ಜನರು ಅಪಪ್ರಚಾರ ಮಾಡುತ್ತಿದ್ದಾರೆ. ಹೌದು, Dhootha ಅನ್ನುವ Youtube ನಲ್ಲಿ ಸಮೀರ್ MD (Sameer MD) ಅನ್ನುವವರು ಒಂದು ವಿಡಿಯೋ ಶೇರ್ ಮಾಡಿದ್ದರು ಮತ್ತು ಆ ವಿಡಿಯೋದಲ್ಲಿ ಧರ್ಮಸ್ಥಳದಲ್ಲಿ ಸೌಜನ್ಯ ಸಾವು ಹೇಗಾಯಿತು ಮತ್ತು ಅದರ ಹಿಂದೆ ಯಾರು ಯಾರು ಇದ್ದಿದ್ದರು ಅನ್ನುವ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದರು. ಇನ್ನು ಆ ವಿಡಿಯೋದಲ್ಲಿ ಯಾರೊಬ್ಬರೂ ಹೆಸರು ಕೂಡ ಹೇಳದೆ ಪರೋಕ್ಷವಾಗಿ ಅವರು ಯಾರು ಅನ್ನುವ ಅರ್ಥವನ್ನು ಕೊಟ್ಟು ವಿಡಿಯೋ ಶೇರ್ ಮಾಡಿದ್ದರು.

WhatsApp Group Join Now
Telegram Group Join Now

ವೈರಲ್ ಆಗಿತ್ತು Dhootha Sameer MD ವಿಡಿಯೋ
ಹೌದು, ಸಮೀರ್ ಅವರು ಸೌಜನ್ಯ ಪ್ರಕರಣದ ವಿಷಯವಾಗಿ ಶೇರ್ ಮಾಡಿದ್ದ ಆ ವಿಡಿಯೋ ಯೌಟ್ಯೂಬ್ ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು ಮತ್ತು ಸಮೀರ್ ಅವರ ಪರ ವಿರೋಧ ಮಾತುಗಳು ಕೂಡ ಕೇಳಿಬಂದಿದ್ದವು. ಇನ್ನು ಸಾಕಷ್ಟು ಜನರು ಸಮೀರ್ ಅವರಿಗೆ ಸಪೋರ್ಟ್ ಕೂಡ ಮಾಡಿದ್ದಾರೆ. ಇದರ ನಡುವೆ ಸಮೀರ್ ಅವರ ಪೊಲೀಸ್ ಕೇಸ್ ಕೂಡ ದಾಖಲು ಮಾಡಲಾಗಿತ್ತು. ಸದ್ಯ ಸಮೀರ್ MD ಅವರು ಶೇರ್ ಮಾಡಿರುವ ಯೌಟ್ಯೂಬ್ ನಿಂದ ಡಿಲೀಟ್ ಕೂಡ ಆಗಿದೆ. ಸುಮಾರು 2 ಕೋಟಿ ಜನರು ವೀಕ್ಷಣೆ ಮಾಡಿದ್ದ ಸೌಜನ್ಯ ಧರ್ಮಸ್ಥಳದ ವಿಡಿಯೋ ಈಗ ಸಮೀರ್ MD ಅವರ Dhootha ಯೌಟ್ಯೂಬ್ ಚಾನೆಲ್ ನಿಂದ ಡಿಲೀಟ್ ಮಾಡಲಾಗಿದೆ.

ಕೋರ್ಟ್ ನಿಂದ ಜಾರಿಗೆ ಬಂತು “ಜಾನ್ ಡೋ” ಆದೇಶ (John Doe)
ಸಮೀರ್ MD ಅವರು ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ (Veerendra Heggade) ಅವರ ಕುಟುಂಬದ ಮೇಲೆ ಪರೋಕ್ಷವಾಗಿ ಆರೋಪ ಮಾಡಿ ಅವರಿಗೆ ಅವಮಾನ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ಕೋರ್ಟ್ ಆದೇಶವನ್ನು ಹೊರಡಿಸಿದ್ದರು ಕೂಡ ಈ ವಿಡಿಯೋ ಮಾಡಲಾಗಿದೆ ಎಂದು ಈಗಾಗಲೇ ವಿಡಿಯೋ ಕೂಡ ಯೌಟ್ಯೂಬ್ ನಿಂದ ಡಿಲೀಟ್ ಮಾಡಲಾಗಿದೆ. ಇದರ ನಡುವೆ ಈಗ ಬೆಂಗಳೂರು ಸಿವಿಲ್ ಕೋರ್ಟ್ “ಜಾನ್ ಡೋ” (John Doe) ಅನ್ನುವ ಆದೇಶವನ್ನು ಹೊರಡಿಸಿದೆ. ಹಾಗಾದರೆ ಏನಿದು “ಜಾನ್ ಡೋ’ ಆದೇಶ ಮತ್ತು ಈ ಆದೇಶ ಏಕೆ ಹೊರಡಿಸಲಾಗುತ್ತದೆ ಅನ್ನುವುದರ ಬಗ್ಗೆ ನಾವೀಗ ತಿಳಿಯೋಣ.

ಬೆಂಗಳೂರೂರು ಸಿಬಿಲ್ ಕೋರ್ಟ್ ಹೊರಡಿಸಿರುವ ಈ “ಜಾನ್ ಡೋ’ ಆದೇಶದ ಪ್ರಕಾರ, ಯಾರು ಕೂಡ ಧರ್ಮಸ್ಥಳ ದೇವಸ್ಥಾನ, ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ವೀರೇಂದ್ರ ಹೆಗ್ಗಡೆ ಅವರ ಕುಟುಂಬ ಮತ್ತು ಕುಟುಂಬದ ಸದಸ್ಯರ ವಿರುದ್ಧ ಅವಹೇಳನಕಾರಿ ಮತ್ತು ಅಪಪ್ರಚಾರ ಮಾಡುವಂತೆ ಇಲ್ಲ ಎಂದು ಬೆಂಗಳೂರು ಸಿವಿಲ್ ಕೋರ್ಟ್ “ಜಾನ್ ಡೋ” ಆದೇಶ ಹೊರಡಿಸಿದೆ.

ಇನ್ನು ಭಾರತದ ಕಾನೂನಿನ ಪ್ರಕಾರ, “ಜಾನ್ ಡೋ” ಅಂದರೆ, ಯಾವುದೇ ಅಜ್ಞಾತ ಅಥವಾ ಪತ್ತೆಯಾಗದ ವ್ಯಕ್ತಿಯ ವಿರುದ್ಧ ಜಾರಿಯಾಗುವ ಆದೇಶ ಆಗಿರುತ್ತದೆ. ಸಾಮಾಜಿಕ ಜಾಲತಾಣ ಅಥವಾ ಇತರೆ ಯಾವುದೇ ಆನ್ಲೈನ್ ತಾಣಗಳಲ್ಲಿ ಅಪಪ್ರಚಾರ ಮತ್ತು ಅವಹೇಳಕಾರಿ ವಿಡಿಯೋ ಅಥವಾ ಫೋಟೋ ಹಂಚಿಕೊಳ್ಳಬಾರದು ಅನ್ನುವ ಕಾನೂನು ನಿಯವನ್ನು “ಜಾನ್ ಡೋ” ಆದೇಶ ಎಂದು ಕರೆಯಲಾಗುತ್ತದೆ.

ಇನ್ನು ಭಾರತದ ಕಾನೂನಿನ ಪ್ರಕಾರ, ಯಾರಾದರೂ ಈ ಆದೇಶವನ್ನು ಉಲ್ಲಂಘನೆ ಮಾಡಿದರೆ ಅವರ ಮೇಲೆ ಕಠಿಣ ಕ್ರಮ ತಗೆದುಕೊಳ್ಳಲಾಗುತ್ತದೆ. ಅದೇ ರೀತಿಯಲ್ಲಿ ಮುಂದಿನ ದಿನಗಳಲ್ಲಿ ಯಾರಾದರೂ ಧರ್ಮಸ್ಥಳ ಕ್ಷೇತ್ರ, ಧರ್ಮಸ್ಥಳ ಧರ್ಮಾಧಿಕಾರಿ ಅಥವಾ ಅವರ ಕುಟುಂಬದ ಮೇಲೆ ಅವಹೇಳನಕಾರಿ ಅಪಪ್ರಚಾರ ಮಾಡಿದರೆ ಅವರ ಮೇಲೆ ಈ “ಜಾನ್ ಡೋ’ ಆದೇಶದ ಮೇಲೆ ಕಠಿಣ ಕ್ರಮ ತಗೆದುಕೊಳ್ಳಲಾಗುತ್ತದೆ.

Leave a Comment