Post Office Scheme: 2 ಲಕ್ಷ ರೂ ಇಟ್ಟರೆ ಸಿಗಲಿದೆ 29 ಸಾವಿರ ರೂ ಬಡ್ಡಿ, ಪೋಸ್ಟ್ ಆಫೀಸ್ ನಲ್ಲಿ ಜಾರಿಗೆ ಬಂತು ಹೊಸ ಯೋಜನೆ

Post Office Time Deposit Scheme: ಪೋಸ್ಟ್ ಆಫೀಸ್ (Post Office) ನಲ್ಲಿ ಇತ್ತೀಚಿನ ಕಾಲದಲ್ಲಿ ಹೆಚ್ಚು ಹೆಚ್ಚು ಜನರು ಹೂಡಿಕೆ ಮಾಡುತ್ತಿದ್ದಾರೆ. ಹೌದು ಪೋಸ್ಟ್ ಆಫೀಸ್ ನಲ್ಲಿ ನಾವು ಹೂಡಿಕೆ ಮಾಡಿದ ಹಣಕ್ಕೆ ಭದ್ರತೆ ಮಾತ್ರವಲ್ಲದೆ ಉತ್ತಮ ಲಾಭ ಕೂಡ ಸಿಗುತ್ತದೆ. ಇನ್ನು ಪೋಸ್ಟ್ ಆಫೀಸ್ ಬಳ್ಳಿ ಫಿಕ್ಸೆಡ್ ಡೆಪಾಸಿಟ್ ಸ್ಕೀಮ್ ಆಗಿರಬಹುದು, RD ಸ್ಕೀಮ್ ಆಗಿರಬಹುದು ಅಥವಾ ಯಾವುದೇ ಯೋಜನೆ ಆಗಿರಬಹುದು ನಾವು ಹೂಡಿಕೆ ಮಾಡಿದರೆ ಉತ್ತಮ ಲಾಭ ಗಳಿಸಬಹುದು.

WhatsApp Group Join Now
Telegram Group Join Now

ಆದರೆ ಪೋಸ್ಟ್ ಆಫೀಸ್ ನ ಈ ಯೋಜನೆಯ ಬಗ್ಗೆ ಸಾಕಷ್ಟು ಜನರಿಗೆ ಇನ್ನೂ ಕೂಡ ತಿಳಿದಿಲ್ಲ ಎಂದು ಹೇಳಿದರೆ ತಪ್ಪಾಗಲ್ಲ. ಹೌದು, ನಾವು ಹೇಳುವ ಪೋಸ್ಟ್ ಆಫೀಸ್ ನ ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ 29 ಸಾವಿರ ರೂಪಾಯಿ ಬಡ್ಡಿ ಪಡೆದುಕೊಳ್ಳಬಹುದು. ಹಾಗಾದರೆ ಪೋಸ್ಟ್ ಆಫೀಸ್ ನ ಈ ಯೋಜನೆ ಯಾವುದು ಮತ್ತು ಈ ಯೋಜನೆಯ ಲಾಭ ಪಡೆದುಕೊಳ್ಳಲು ಎಷ್ಟು ಹೂಡಿಕೆ ಮಾಡಬೇಕು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಪೋಸ್ಟ್ ಆಫೀಸ್ ನಲ್ಲಿ ಜಾರಿಯಲ್ಲಿದೆ ಟೈಮ್ ಡೆಪಾಸಿಟ್ ಸ್ಕೀಮ್
ಪೋಸ್ಟ್ ಆಫೀಸ್ ನಲ್ಲಿ ಜಾರಿಯಲ್ಲಿ ಇರುವ ಟೈಮ್ ಡೆಪಾಸಿಟ್ ಸ್ಕೀಮ್ (Post Office Time Deposit) ನಲ್ಲಿ ಹೂಡಿಕೆ ಮಾಡುವುದರ ಮೂಲಕ ದೊಡ್ಡ ಮೊತ್ತದ ಲಾಭ ಗಳಿಸಿಕೊಳ್ಳಬಹುದು. ಹೌದು, ಕಡಿಮೆ ಅವಧಿಗೆ ಹೂಡಿಕೆ ಮಾಡುವುದರ ಮೂಲಕ ದೊಡ್ಡ ಮೊತ್ತದ ಲಾಭವನ್ನು ಈ ಈ ಟೈಮ್ ಡೆಪಾಸಿಟ್ ಸ್ಕೀಮ್ ನಲ್ಲಿ ನಲ್ಲಿ ಪಡೆದುಕೊಳ್ಳಬಹುದು. ಟೈಮ್ ಡೆಪಾಸಿಟ್ ಸ್ಕೀಮ್ ನಲ್ಲಿ ಕೇವಲ 2 ಲಕ್ಷ ರೂ ಹೂಡಿಕೆ ಮಾಡುವುದರ ಮೂಲಕ 29 ಸಾವಿರ ರೂಪಾಯಿ ಬಡ್ಡಿ ಪಡೆದುಕೊಳ್ಳಬಹುದು.

2 ಲಕ್ಷ ರೂ ಹೂಡಿಕೆ ಮಾಡಿದ್ರೆ ಸಿಗಲಿದೆ 29 ಸಾವಿರ ರೂ ಬಡ್ಡಿ
ಹೌದು, ಪೋಸ್ಟ್ ಆಫೀಸ್ ನಲ್ಲಿ ಟೈಮ್ ಡೆಪಾಸಿಟ್ ಸ್ಕೀಮ್ ನಲ್ಲಿ 2 ಲಕ್ಷ ರೂಪಾಯಿಯನ್ನು ಎರಡು ವರ್ಷ ಅವಧಿಗೆ ಹೂಡಿಕೆ ಮಾಡುವುದರ ಮೂಲಕ 29 ಸಾವಿರ ರೂಪಾಯಿ ಬಡ್ಡಿ ಪಡೆದುಕೊಳ್ಳಬಹುದು. ಟೈಮ್ ಡೆಪಾಸಿಟ್ ಸ್ಕೀಮ್ ಅನ್ನುವುದು ಫಿಕ್ಸೆಡ್ ಡೆಪಾಸಿಟ್ ಸ್ಕೀಮ್ ರೀತಿಯಲ್ಲಿ ಕೆಲಸ ಮಾಡುತ್ತದೆ ಮತ್ತು ಟೈಮ್ ಡೆಪಾಸಿಟ್ ಸ್ಕೀಮ್ ನಲ್ಲಿ ಎರಡು ವರ್ಷಕ್ಕೆ ನೀವು ಹೂಡಿಕೆ ಮಾಡಿದ ಹಣಕ್ಕೆ 7.5% ಬಡ್ಡಿ ಪಡೆದುಕೊಳ್ಳಬಹುದು. ಬ್ಯಾಂಕುಗಳಿಗೆ ಹೋಲಿಕೆ ಮಾಡಿದರೆ ಪೋಸ್ಟ್ ಆಫೀಸ್ ಹೂಡಿಕೆ ಮಾಡಿದರೆ ನೀವು ಅಧಿಕ ಲಾಭ ಗಳಿಸಿಕೊಳ್ಳುವುದು ಮಾತ್ರವಲ್ಲದೆ ನಿಮ್ಮ ಹೂಡಿಕೆಯ ಹಣ ಸುರಕ್ಷಿತ ಆಗಿರುತ್ತದೆ.

ಪೋಸ್ಟ್ ಆಫೀಸ್ ನ ಟೈಮ್ ಡೆಪಾಸಿಟ್ ಸ್ಕೀಮ್ ನಲ್ಲಿ ಎರಡು ವರ್ಷಕ್ಕೆ ಮಾತ್ರವಲ್ಲದೆ 5 ವರ್ಷದ ತನಕ ಹೂಡಿಕೆ ಮಾಡಬಹುದು. ಇನ್ನು ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಸ್ಕೀಮ್ ನಲ್ಲಿ ಎರಡು ವರ್ಷಕ್ಕೆ 2 ಲಕ್ಷ ರೂಪಾಯಿ ಹಣವನ್ನು ಹೂಡಿಕೆ ಮಾಡಿದರೆ ನೀವು ಹೂಡಿಕೆ ಮಾಡಿದ ಹಣಕ್ಕೆ 7.5 % ಬಡ್ಡಿದರದಲ್ಲಿ 2,29,000 ರೂಪಾಯಿ ಪಡೆದುಕೊಳ್ಳಬಹುದು. ಟೈಮ್ ಡೆಪಾಸಿಟ್ ಸ್ಕೀಮ್ ಕನಿಷ್ಠ 1000 ರೂ ಹೂಡಿಕೆ ಮಾಡಬಹುದು ಮತ್ತು ಗರಿಷ್ಟ ಹೂಡಿಕೆಗೆ ಯಾವುದೇ ಮಿತಿ ಇಲ್ಲ. ನೀವು ಹೂಡಿಕೆ ಮಾಡಿದ ಹಣಕ್ಕೆ ತೆರಿಗೆ ವಿನಾಯಿತಿ ಕೂಡ ಈ ಯೋಜನೆಯಲ್ಲಿ ಪಡೆದುಕೊಳ್ಳಬಹುದು ಮತ್ತು ಅಕಾಲಿಕವಾಗಿ ಹಣವನ್ನು ಹಿಂಪಡೆಯಬೇಕು ಅಂದರೆ ನೀವು ಕೆಲವು ಷರತ್ತುಗಳನ್ನು ಅನುಸರಿಸಬೇಕಾಗುತ್ತದೆ.

Leave a Comment