2025 First Solar Eclipse: ವರ್ಷದ ಮೊದಲ ಚಂದ್ರ ಗ್ರಹಣ (Moon Eclipse) ಹೋಳಿ ಹಬ್ಬದ ದಿನ ಘೋಚರ ಆಗಿದ್ದು ನಿಮಗೆಲ್ಲ ತಿಳಿದೇ ಇದೆ. ಸದ್ಯ ಈಗ ವರ್ಷದ ಎರಡನೆಯ ಗ್ರಹಣ ಮತ್ತು ವರ್ಷದ ಮೊದಲ ಸೂರ್ಯ ಗ್ರಹಣ ಘೋಚರ ಆಗಲಿದೆ. ಹೌದು, ನಾಡಿದ್ದು ಅಂದರೆ ಮಾರ್ಚ್ 29 ನೇ ತಾರೀಕಿನಂದು ವರ್ಷದ ಮೊದಲ ಸೂರ್ಯ ಗ್ರಹಣ (Solar eclipse) ಘೋಚರ ಆಗಲಿದೆ. ಇನ್ನು ಈ ಸೂರ್ಯ ಗ್ರಹಣ 2025 ರ ವರ್ಷದ ಮೊದಲ ಸೂರ್ಯ ಗ್ರಹಣ ಕೂಡ ಆಗಿದೆ. ಹಾಗಾದರೆ ವರ್ಷದ ಮೊದಲ ಸೂರ್ಯ ಗ್ರಹಣ ಎಲ್ಲೆಲ್ಲಿ ಘೋಚರ ಆಗಲಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ನಾವೀಗ ತಿಳಿಯೋಣ.
ಮಾರ್ಚ್ 29 ರಂದು ವರ್ಷದ ಮೊದಲ ಸೂರ್ಯ ಗ್ರಹಣ
ಚೈತ್ರಮಾಸ ಆರಂಭದ ಒಂದು ದಿನದ ಮೊದಲು ವರ್ಷದ ಮೊದಲ ಸೂರ್ಯ ಗ್ರಹಣ ಘೋಚರ ಆಗಲಿದೆ. ಮಾರ್ಚ್ 29 ನೇ ತಾರೀಕಿನಂದು ವರ್ಷದ ಮೊದಲ ಸೂರ್ಯ ಗ್ರಹಣ ಘೋಚರ ಆಗಲಿದೆ ಎಂದು ಹೇಳಬಹುದು. ಶನಿವಾರ ವರ್ಷದ ಮೊದಲ ಸೂರ್ಯಗ್ರಹಣ ಘೋಚರ ಆಗಲಿದ್ದು ಮದ್ಯಾಹ್ನ 2:20 ಕ್ಕೆ ಆರಂಭ ಆಗುವ ಈ ಸೂರ್ಯ ಗ್ರಹಣ ಸಂಖ್ಯೆ 6:16 ಕ್ಕೆ ಕೊನೆಗೊಳ್ಳಲಿದೆ. ಭಾಗಶಃ ಸಂಪೂರ್ಣ ಗ್ರಹಣ ಘೋಚರ ಆಗಲಿದೆ ಎಂದು ಹೇಳಬಹುದು.
ಎಲ್ಲೆಲ್ಲಿ ಘೋಚರ ಆಗಲಿದೆ ವರ್ಷದ ಸೂರ್ಯ ಗ್ರಹಣ
ಹೌದು, ವರ್ಷದ ಮೊದಲ ಸೂರ್ಯ ಗ್ರಹಣ ಬರ್ಮುಡಾ, ಆಸ್ಟ್ರಿಯಾ, ಉತ್ತರ ಬ್ರೆಜಿಲ್, ಡೆನ್ಮಾರ್ಕ್, ಜರ್ಮನಿ, ಫ್ರಾನ್ಸ್, ಹಂಗೇರಿ, ಐರ್ಲಾಂಡ್, ಮೊರಾಕೊ, ಗ್ರೀಲ್ಯಾಂಡ್, ಫಿನ್ ಲ್ಯಾಂಡ್, ಬಾರ್ಬಡೋಸ್, ಉತ್ತರ ರಷ್ಯಾ, ಸ್ಪೇನ್, ಸೂರಿನಾಮ್, ಪೂರ್ವ ಕೆನಡಾ, ಸ್ವೀಡನ್, ಪೋಲೆಂಡ್, ಪೋರ್ಚುಗಲ್, ಇಂಗ್ಲೆಂಡ್ ಮತ್ತು ಯುನೈಟೆಡ್ ಸ್ಟೇಟ್ ನ ಪುರ ಭಾಗಗಳಲ್ಲಿ ಘೋಚರ ಆಗಲಿದೆ. ಇನ್ನು ಸೂರ್ಯ ಗ್ರಹಣ ಭಾರತದಲ್ಲಿ ಘೋಚರ ಆಗದೆ ಇದ್ದರೂ ಇದರ ಪ್ರಭಾವ ಭಾರತದವರ ಮೇಲೆ ಕೂಡ ಇರಲಿದೆ.