Post Office Monthly Investment scheme: ಹೂಡಿಕೆ ಮಾಡಲು ಪೋಸ್ಟ್ ಆಫೀಸ್ (Post Office) ಒಂದು ಉತ್ತಮ ವೇದಿಕೆ ಎಂದು ಹೇಳಬಹುದು. ಹೌದು, ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡಿದರೆ ನಾವು ಮಾಡಿದ ಹೂಡಿಕೆಗೆ ನಿರೀಕ್ಷಿತ ಆದಾಯ ಬರುತ್ತದೆ ಎಂದು ಹೇಳಬಹುದು. ಇನ್ನು ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡಲು ಹಲವು ಆಯ್ಕೆಗಳು ಕೂಡ ಇದೆ, ಪೋಸ್ಟ್ ಆಫೀಸ್ ನಲ್ಲಿ ಈಗಾಗಲೇ ಹಲವು ಯೋಜನೆಗಳು ಜಾರಿಯಲ್ಲಿ ಇದ್ದು ಜನರು ಅದರ ಲಾಭ ಪಡೆದುಕೊಳ್ಳಬಹುದು. ಸದ್ಯ ಪೋಸ್ಟ್ ಆಫೀಸ್ ನ ಈ ಯೋಜನೆಯಲ್ಲಿ ಹೂಡಿಕೆ ಮಾಡುವುದರ ಮೂಲಕ ನಾವು ಪ್ರತಿ ತಿಂಗಳು 3000 ರೂ ಆದಾಯ ಗಳಿಸಿಕೊಳ್ಳಬಹುದು. ಹಾಗಾದರೆ ಪೋಸ್ಟ್ ಆಫೀಸ್ ನಲ್ಲಿ ಜಾರಿಯಲ್ಲಿ ಇರುವ ಈ ಯೋಜನೆ ಯಾವುದು ಮತ್ತು ಈ ಯೋಜನೆ ಲಾಭ ಪಡೆದುಕೊಳ್ಳುವುದು ಹೇಗೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಪೋಸ್ಟ್ ಆಫೀಸ್ ಯೋಜನೆಯಲ್ಲಿ ಪ್ರತಿ ತಿಂಗಳು ಸಿಗಲಿದೆ 3083 ರೂ
ಹೌದು, ಪೋಸ್ಟ್ ಆಫೀಸ್ ನ ಮಾಸಿಕ ಆದಾಯ ಯೋಜನೆಯ (Monthly Income Scheme) ಅಡಿಯಲ್ಲಿ ಹೂಡಿಕೆ ಮಾಡುವುದರ ಮೂಲಕ ನಾವು ಪ್ರತಿ ತಿಂಗಳು ನಿರೀಕ್ಷಿತ ಆದಾಯ ಗಳಿಸಿಕೊಳ್ಳಬಹುದು. ಹೂಡಿಕೆ ಮಾಡುವವರಿಗಾಗಿ ಪೋಸ್ಟ್ ಆಫೀಸ್ ನಲ್ಲಿ ಈ ಮಾಸಿಕ ಆದಾಯ ಯೋಜನೆ ಜಾರಿಯಲ್ಲಿ ಇದೆ. ಇನ್ನು ಪೋಸ್ಟ್ ಆಫೀಸ್ ನಲ್ಲಿ ಪ್ರತಿ ತಿಂಗಳು ಆದಾಯ ಗಳಿಸಲು ನಾವು ಹೂಡಿಕೆ ಮಾಡುವುದು ಕೂಡ ಅತೀ ಅಗತ್ಯವಾಗಿದೆ. ಪೋಸ್ಟ್ ಆಫೀಸ್ ಒಂದು ನಿರೀಕ್ಷಿತ ಹಣ ಹೂಡಿಕೆ ಮಾಡುವುದರ ಮೂಲಕ ಪ್ರತಿ ತಿಂಗಳು ಆದಾಯ ಗಳಿಸಿಕೊಳ್ಳಬಹುದು.
5 ಲಕ್ಷ ರೂ ಹೂಡಿಕೆ ಮಾಡಿದರೆ ಸಿಗಲಿದೆ 3083 ರೂ
ಪೋಸ್ಟ್ ಆಫೀಸ್ ನ ಮಾಸಿದ ಆದಾಯ ಯೋಜನೆಯ ಅಡಿಯಲ್ಲಿ 5 ಲಕ್ಷ ರೂ ಹೂಡಿಕೆ ಮಾಡಿದರೆ ಪ್ರತಿ ತಿಂಗಳು 3083 ರೂಪಾಯಿಗಳ ಮಾಸಿಕ ಆದಾಯ ಗಳಿಸಿಕೊಳ್ಳಬಹುದು. ಪೋಸ್ಟ್ ಆಫೀಸ್ ನ ಮಾಸಿಕ ಆದಾಯ ಯೋಜನೆಯ ಅಡಿಯಲ್ಲಿ ಹೂಡಿಕೆ ಮಾಡಿದರೆ ನೀವು ಹೂಡಿಕೆ ಮಾಡಿದ ಹಣಕ್ಕೆ 7.5% ಬಡ್ಡಿ ಪಡೆದುಕೊಳ್ಳಬಹುದು. ಪೋಸ್ಟ್ ಆಫೀಸ್ ಮಾಸಿಕ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ನೀವು ಹೂಡಿಕೆ ಮಾಡಿದ ಹಣಕ್ಕೆ ಭದ್ರತೆ ಮತ್ತು ಉತ್ತಮ ಲಾಭ ಕೂಡ ಸಿಗುತ್ತದೆ.
ಇನ್ನು ಪೋಸ್ಟ್ ಆಫೀಸ್ ನ ಈ ಮಾಸಿಕ ಉಳಿತಾಯ ಯೋಜನೆಯ ಅಡಿಯಲ್ಲಿ ನೀವು 5 ಲಕ್ಷ ರೂ ಹಣವನ್ನು ಐದು ವರ್ಷಗಳ ಅವಧಿಗೆ ಹೂಡಿಕೆ ಮಾಡಬೇಕು ಮತ್ತು ನೀವು ಹೂಡಿಕೆ ಮಾಡಿದ ಹಣಕ್ಕೆ 7.5% ಬಡ್ಡಿ ನೀಡಲಾಗುತ್ತದೆ. ಹೀಗೆ 5 ಲಕ್ಷ ರೂ ಹಣವನ್ನು ಪೋಸ್ಟ್ ಆಫೀಸ್ ನಲ್ಲಿ ಐದು ವರ್ಷಗಳ ಕಾಲ ಇಟ್ಟರೆ ನೀವು ಪ್ರತಿ ತಿಂಗಳು ಬಡ್ಡಿಯಲ್ಲಿ 3083 ರೂ ಪಡೆದುಕೊಳ್ಳಬಹುದು.
ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯ ಕನಿಷ್ಠ ಹೂಡಿಕೆ ಮೊತ್ತ 1000 ರೂ ಮತ್ತು ಗರಿಷ್ಟ ಹೂಡಿಕೆಯ ಮೊತ್ತ 5 ಲಕ್ಷ ರೂಪಾಯಿ ಆಗಿದೆ. ಒಂಟಿಯಾಗಿ ಅಥವಾ ಜಂಟಿಯಾಗಿ ಕೂಡ ಈ ಯೋಜನೆಯಲ್ಲಿ ಖಾತೆ ತೆರೆಯಬಹುದು. ಜಂಟಿಯಾಗಿ ಖಾತೆ ತೆರೆಯುವವರು 9 ಲಕ್ಷ ರೂ ತನಕ ಹೂಡಿಕೆ ಮಾಡಬಹುದು. ಹೌದು, ಗಂಡ ಒಂಟಿಯಾಗಿ ಅಥವಾ ಗಂಡ ಹೆಂಡತಿ ಜಂಟಿಯಾಗಿ ಈ ಯೋಜನೆಯ ಅಡಿಯಲ್ಲಿ ಖಾತೆ ತೆರೆಯಬಹುದು.
ಪೋಸ್ಟ್ ಆಫೀಸ್ ನಲ್ಲಿ ಮಾಸಿಕ ಉಳಿತಾಯ ಯೋಜನೆಯ ಅಡಿಯಲ್ಲಿ ಹೂಡಿಕೆ ಮಾಡಲು ಖಾತೆ ತೆರೆಯುವವರು ಪೋಸ್ಟ್ ಆಫೀಸ್ ನಲ್ಲಿ ಖಾತೆ ತೆರೆಯುವುದು ಅತೀ ಅಗತ್ಯ. ನಿಮ್ಮ ಗುರುತಿನ ಚೀಟಿ, ನಿಮ್ಮ ಫೋಟೋ, ವಸತಿ ಪುರಾವೆ ಮತ್ತು ನೀವು ಖಾತೆ ತೆರೆಯುವ ಸಮಯದಲ್ಲಿ ನಿಮ್ಮ ಖಾತೆಗೆ ನಾಮಿನಿ ನೀಡುವುದು ಕೂಡ ಕಡ್ಡಾಯವಾಗಿದೆ. ಹತ್ತಿರದ ಅಥವಾ ಯಾವುದೇ ಪೋಸ್ಟ್ ಆಫೀಸ್ ನಲ್ಲಿ ಮಾಸಿಕ ಉಳಿತಾಯ ಯೋಜನೆಯ ಅಡಿಯಲ್ಲಿ ಖಾತೆ ತೆರೆಯಬಹುದು.