Post Office Monthly Income Scheme For Senior Citizens: ಹಣ ಹೂಡಿಕೆ ಮಾಡಲು ಪೋಸ್ಟ್ ಆಫೀಸ್ (Post Office) ಒಂದು ಉತ್ತಮ ವೇದಿಕೆ ಅನ್ನುವುದು ನಿಮಗೆಲ್ಲ ತಿಳಿದಿರುವ ವಿಚಾರ ಆಗಿದೆ. ಇದರ ನಡುವೆ ಪೋಸ್ಟ್ ಆಫೀಸ್ ಜನರಿಗಾಗಿ ಹಲವು ಯೋಜನೆಯನ್ನು ಜಾರಿಗೆ ತರುವಲ್ಲಿ ಕೂಡ ಯಶಸ್ವಿಯಾಗಿದೆ. ಪೋಸ್ಟ್ ಆಫೀಸ್ ನಲ್ಲಿ FD ಯೋಜನೆ ಆಗಿರಬಹುದು, RD ಯೋಜನೆ ಆಗಿರಬಹುದು ಅಥವಾ MIS ಯೋಜನೆ ಆಗಿರಬಹುದು ಜನರು ಉತ್ತಮ ಆದಾಯ ತಂದುಕೊಡುವ ಯೋಜನೆಯಾಗಿದೆ.
ಇದರ ನಡುವೆ ಪೋಸ್ಟ್ ಆಫೀಸ್ ಇನ್ನೊಂದು ಯೋಜನೆಯಲ್ಲಿ ಪರಿಚಯ ಮಾಡಿದ್ದು ಇದು ಹೂಡಿಕೆ ಮಾಡಿದವರಿಗೆ ದೊಡ್ಡ ಮೊತ್ತದ ಲಾಭ ತಂದುಕೊಡುತ್ತದೆ. ಇನ್ನು ಪೋಸ್ಟ್ ಆಫೀಸ್ ನ ಈ ಯೋಜನೆಯ ಅಡಿಯಲ್ಲಿ ಹೂಡಿಕೆ ಮಾಡುವುದರ ಮೂಲಕ ಪ್ರತಿ ತಿಂಗಳು 20500 ರೂ ಆದಾಯ ಗಳಿಸಿಕೊಳ್ಳಬಹುದು. ಹಾಗಾದರೆ ಪೋಸ್ಟ್ ಆಫೀಸ್ ನಲ್ಲಿ ಜಾರಿಯಲ್ಲಿ ಇರುವ ಈ ಯೋಜನೆ ಯಾವುದು ಮತ್ತು ಈ ಯೋಜನೆಯ ಲಾಭ ಪಡೆಯುವುದು ಹೇಗೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಹಿರಿಯ ನಾಗರೀಕರಿಗಾಗಿ ಉಳಿಯುವ ಯೋಜನೆ ಜಾರಿ
ನಿಮ್ಮ ವೃದ್ದಾಪ್ಯ ಚನ್ನಾಗಿ ಇರಬೇಕು ಮತ್ತು ಮಕ್ಕಳಿಗೆ ನೀವು ಹೊರೆಯಬಾರದು ಅಂದರೆ ನೀವು ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ (senior Citizens Saving Schemes) ಹೂಡಿಕೆ ಮಾಡುವುದರ ಮೂಲಕ ನಿಮ್ಮ ವೃದ್ದಾಪ್ಯದಲ್ಲಿ ದೊಡ್ಡ ಮೊತ್ತದ ಹಣ ಪಡೆದುಕೊಳ್ಳಬಹುದು. ಹಿರಿಯ ನಾಗರಿಕರು ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡುವುದರ ಮೂಲಕ ಮಾಸಿಕವಾಗಿ ಆದಾಯ ಗಳಿಸಿಕೊಳ್ಳಬಹುದು. ಹಿರಿಯ ನಾಗರೀಕ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ನೀವು ಹೂಡಿಕೆ ಮಾಡಿದ ಹಣಕ್ಕೆ ಭದ್ರತೆಯ ಜೊತೆಗೆ ಸುರಕ್ಷಿತ ಆದಾಯ ಕೂಡ ಬರುತ್ತದೆ.
ಹಿರಿಯ ನಾಗರಿಕರಿಗೆ ಸಿಗಲಿದೆ ಸಿಗಲಿದೆ ಪ್ರತಿ ತಿಂಗಳು 20,500 ರೂ
ಪೋಸ್ಟ್ ಆಫೀಸ್ ನ ಹಿರಿಯ ನಾಗರೀಕ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡಿದ ಹಣಕ್ಕೆ 8.2% ಬಡ್ಡಿ ನೀಡಲಾಗುತ್ತದೆ. ನಿಮಗೆ ಸಿಗುವ ಬಡ್ಡಿ ಮೊತ್ತ ನೀವು ಹೂಡಿಕೆ ಮಾಡಿದ ಹಣದ ಮೇಲೆ ನಿರ್ಧಾರ ಆಗಿರುತ್ತದೆ ಮತ್ತು ದೊಡ್ಡ ಮೊತ್ತದ ಹಣ ಹೂಡಿಕೆ ಮಾಡಿದರೆ ದೊಡ್ಡ ಮೊತ್ತದ ಬಡ್ಡಿ ಪಡೆದುಕೊಳ್ಳಬಹುದು. ಹಾಗಾದರೆ ಪ್ರತಿ ತಿಂಗಳು 20,500 ರೂ ಆದಾಯ ಬೇಕಾದರೆ ಎಷ್ಟು ಹೂಡಿಕೆ ಮಾಡಬೇಕೆಂದು ತಿಳಿಯೋಣ.
ಹೌದು, ಪ್ರತಿ ತಿಂಗಳು 20,500 ರೂ ಆದಾಯ ಪಡೆಯಲು ಒಂದು ನಿರ್ಧಿಷ್ಟ ಪ್ರಮಾಣದ ಹಣವನ್ನು ಹೂಡಿಕೆ ಮಾಡಬೇಕು.ಹಿರಿಯ ನಾಗರಿಕರು ಪ್ರತಿ ತಿಂಗಳೂ 20,500 ರೂ ಆದಾಯ ಗಳಿಸಿಕೊಳ್ಳಲು ದೊಡ್ಡ ಮೊತ್ತದ ಹೂಡಿಕೆ ಮಾಡುವುದು ಅತೀ ಅವಶ್ಯಕವಾಗಿದೆ. ಹೌದು, ಪ್ರತಿ ತಿಂಗಳು 20,500 ರೂ ಆದಾಯ ಗಳಿಸಿಕೊಳ್ಳಬೇಕು ಅಂದರೆ ಸುಮಾರು 30 ಲಕ್ಷ ರೂಪಾಯಿಯನ್ನು ಹೂಡಿಕೆ ಮಾಡಬೇಕಾಗುತ್ತದೆ. ಈ ಹಿಂದೆ ಗರಿಷ್ಟ ಹೂಡಿಕೆಯ ಮೊತ್ತ 15 ಲಕ್ಷ ರೂ ಆಗಿತ್ತು, ಆದರೆ ಈಗ ಅದನ್ನು 30 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ. ಹಿರಿಯ ನಾಗರಿಕರ ಉಳಿತಾಯ ಯೋಜನೆಯ ಅವಧಿ 5 ವರ್ಷಗಳು ಆಗಿದೆ ಮತ್ತು ಅವಧಿ ಮುಗಿದ ನಂತರ ಮತ್ತೆ 3 ವರ್ಷಕ್ಕೆ ಅದನ್ನು ಮುಂದೂಡಬಹುದು.
ಹಿರಿಯ ನಾಗರಿಕರ ಉಳಿತಾಯ ಯೋಜನೆಯ ಅರ್ಹತೆ ಏನು
* ಭಾರತೀಯ ನಾಗರಿಕರು ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು
* 60 ವರ್ಷ ಅಥವಾ ಅದಕ್ಕಿಂತ ಮೇಲಿನ ವರ್ಷದವರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ
* 55 ವರ್ಷದ ನಂತರ ತಮ್ಮ ಕೆಲಸದಿಂದ ನಿವೃತ್ತಿ ಪಡೆದುಕೊಂಡವರು ಕೂಡ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾಗಿದೆ.
* ಅಂಚೆ ಕಚೇರಿ ಅಥವಾ ಬ್ಯಾಂಕುಗಳಲ್ಲಿ ಮಾತ್ರ ಹಿರಿಯ ನಾಗರಿಕರ ಉಳಿತಾಯ ಖಾತೆ ತೆರೆಯಬಹುದು.
ಹಿರಿಯ ನಾಗರಿಕರ ಉಳಿತಾಯ ಯೋಜನೆಯೂ ತೆರಿಗೆ ಲಾಭ ಕೂಡ ಹೊಂದಿದೆ ಮತ್ತು ಈ ಯೋಜನೆಯಲ್ಲಿ ತೆರಿಗೆ ಕೂಡ ಉಳಿತಾಯ ಮಾಡಬಹುದು. ನಿವೃತ್ತಿಯ ನಂತರ ನಿಮ್ಮ ಜೀವನ ಸುರಕ್ಷಿತ ಮತ್ತು ನೀವು ಯಾರಿಗೂ ಹೊರೆಯಾಗಬಾರದು ಅನ್ನುವ ಹಾಗಿದ್ದರೆ ನೀವು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.