Students Aadhaar Card Update: ದೇಶದ ಎಲ್ಲಾ ಶಾಲಾ ಮಕ್ಕಳಿಗೆ ಹೊಸ ಶಿಕ್ಷಣ ವರ್ಷದಿಂದ (Educational Year) ಕೆಲವು ಹೊಸ ನಿಯಮಗಳು ಜಾರಿಗೆ ಬರುತ್ತಿದೆ. ಮಕ್ಕಳ ಪ್ರಗತಿ ಮತ್ತು ಅವರ ಉನ್ನತ ಶಿಕ್ಷಣದ ಉದ್ದೇಶದಿಂದ ಈಗ ಕೇಂದ್ರ ಸರ್ಕಾರ ಕೆಲವು ಹೊಸ ನಿಯಮ ಜಾರಿಗೆ ತರಲು ತೀರ್ಮಾನವನ್ನು ಮಾಡಿದೆ ಎಂದು ಹೇಳಬಹುದು. ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ಈ ಹೊಸ ನಿಯಮ ಆದೆಷ್ಟೋ ಮಕ್ಕಳಿಗೆ ಸಹಕಾರಿ ಕೂಡ ಆಗಲಿದೆ. ಶಾಲಾ ಮಕ್ಕಳ ಗುರುತಿನ ಮಾಹಿತಿಯನ್ನು ನಿಖರಪಡಿಸಿಕೊಳ್ಳಲು ಈಗ ಕೇಂದ್ರ ಸರ್ಕಾರ ಹೊಸ ವಿಧಾನವನ್ನು ಅನುಸರಿಸಲು ಮುಂದಾಗಿದೆ. ಹಾಗಾದರೆ ಹೊಸ ಶೈಕ್ಷಣಿಕ ವರ್ಷದಿಂದ ದೇಶದಲ್ಲಿ ಜಾರಿಗೆ ಬರುತ್ತಿರುವ ಹೊಸ ನಿಯಮ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ವಿದ್ಯಾರ್ಥಿಗಳ ಗುರುತಿನ ನಿಖರತೆಗಾಗಿ ಹೊಸ ನಿಯಮ
ಹೌದು, ಕೇಂದ್ರ ಸರ್ಕಾರ ಈಗ ದೇಶದಲ್ಲಿ ವಿದ್ಯಾರ್ಥಿಗಳ ಗುರುತನ್ನು ನಿಕರಪಡಿಸಿಕೊಳ್ಳಲು ಹೊಸ ರೀತಿಯ ದಾಖಲಾತಿ ನಿಯಮವನ್ನು ಜಾರಿಗೆ ತಂದಿದೆ. ಇನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ನಿಯಮಗಳ ಪ್ರಕಾರ ಎಲ್ಲಾ ಶಾಲಾ ವಿದ್ಯಾರ್ಥಿಗಳು ತಮ್ಮ ಆಧಾರ್ ಕಾರ್ಡ್ ನವೀಕರಣ (Aadhaar Card Update) ಮಾಡಿಕೊಳ್ಳುವುದು ಅತೀ ಕಡ್ಡಾಯ ಆಗಿದೆ. ವಿದ್ಯಾರ್ಥಿಗಳ ಗುರುತಿನ ಮಾಹಿತಿಯನ್ನು ಖಚಿತಪಡಿಸಿಕೊಳ್ಳುವ ಉದ್ದೇಶದನ್ನು ಆಧಾರ್ ಕಾರ್ಡ್ ನವೀಕರಣ ನಿಮಯವನ್ನು ದೇಶದಲ್ಲಿ ಜಾರಿಗೆ ತರಲಾಗಿದೆ.
ವಿದ್ಯಾರ್ಥಿಗಳು ಎರಡು ಆಧಾರ್ ಕಾರ್ಡ್ ನವೀಕರಣ ಮಾಡಬೇಕು
ಕೇಂದ್ರ ನೀಡಿರುವ ಮಾಹಿತಿಯ ಪ್ರಕಾರ, ದೇಶದ ಎಲ್ಲಾ ವಿದ್ಯಾರ್ಥಿಗಳು ಎರಡು ಬಾರಿ ತಮ್ಮ ಆಧಾರ್ ಕಾರ್ಡ್ ನವೀಕರಣ ಮಾಡಬೇಕು. ಹೌದು, 5 ವರ್ಷಕ್ಕೆ ಒಂದು ಬಾರಿ ಮತ್ತು 15 ವರ್ಷಕ್ಕೆ ಒಂದು ಬಾರಿ ಅನ್ನುವಂತೆ ಎಲ್ಲಾ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಸಮಯದಲ್ಲಿ ಎರಡು ಬಾರಿ ಆಧಾರ್ ಕಾರ್ಡ್ ನವೀಕರಣ ಮಾಡಬೇಕಾಗಿದೆ. ಇನ್ನು ಮಕ್ಕಳ ಆಧಾರ್ ಕಾರ್ಡ್ ನವೀಕರಣ ಮಾಡುವ ಜವಾಬ್ದಾರಿ ಆಯಾ ಶಾಲಾ ಶಿಕ್ಷಕರದ್ದು ಆಗಿದೆ ಮತ್ತು ಮಕ್ಕಳ ಆಧಾರ್ ಕಾರ್ಡ್ ನವೀಕರಣ ಉಚಿತವಾಗಿ ಮಾಡಬೇಕು.
ಸರ್ಕಾರಕ್ಕೆ ಈ ದಿಟ್ಟ ನಿರ್ಧಾರಕ್ಕೆ ಕಾರಣಗಳು ಏನು…?
ಶಾಲಾ ಮತ್ತು ಕಾಲೇಜು ಮಕ್ಕಳು ವಿವಿಧ ರೀತಿಯ ವಿದ್ಯಾರ್ಥಿವೇತನವನ್ನು ಪಡೆದುಕೊಳ್ಳುತ್ತಾರೆ ಮತ್ತು ವಿದ್ಯಾರ್ಥಿವೇತನವನ್ನು ಮಕ್ಕಳು ಸರಿಯಾಗಿ ಪಡೆದುಕೊಂಡಿದ್ದಾರೆ ಅನ್ನುವುದನ್ನು ಖಚಿತಪಡಿಸಿಕೊಳ್ಳಲು ಈ ನಿಯಮ ಜಾರಿಗೆ ತರಲಾಗಿದೆ. ಯಾವುದೇ ವಿದ್ಯಾರ್ಥಿಗಳು ಕೂಡ ವಿದ್ಯಾರ್ಥಿವೇತನದಿಂದ ವಂಚಿತರಾಗಬಾರದು ಅನ್ನುವ ಉದ್ದೇಶದಿಂದ ಆಧಾರ್ ಕಾರ್ಡ್ ನವೀಕರಣ ನಿಯಮವನ್ನು ದೇಶದಲ್ಲಿ ಜಾರಿಗೆ ತರಲಾಗಿದೆ.
ಇನ್ನು ಈ ಆಧಾರ್ ಕಾರ್ಡ್ ನವೀಕರಣ ಮಕ್ಕಳ ಉನ್ನತ ಶಿಕ್ಷಣಕ್ಕೂ ಕೂಡ ಬಹಳ ಸಹಕಾರಿ ಆಗಲಿದೆ. NEET ಆಗಿರಬಹುದು ಅಥವಾ ಯಾವುದೇ ಉನ್ನತ ಶಿಕ್ಷಣ ಪಡೆದುಕೊಳ್ಳುವ ಸಮಯದಲ್ಲಿ ವಿದ್ಯಾರ್ಥಿಗಳ ಆಧಾರ್ ಕಾರ್ಡ್ ನವೀಕರಣ ಬಹಳ ಅಗತ್ಯವಾಗಿದೆ. ಎಲ್ಲಾ ಶಾಲಾ ವಿದ್ಯಾರ್ಥಿಗಳು ಅಗತ್ಯ ದಾಖಲೆ ನೀಡುವುದರ ಮೂಲಕ ತಮ್ಮ ಆಧಾರ್ ಕಾರ್ಡ್ ಅನ್ನು ಯಾವುದೇ ಶುಲ್ಕವಿಲ್ಲದೆ ಉಚಿತವಾಗಿ ನವೀಕರಣ ಮಾಡಿಕೊಳ್ಳಬಹುದು. ಈ ಪ್ರಕ್ರಿಯೆ ಉಚಿತವಾಗಿದ್ದು ಯಾವುದೇ ಮಕ್ಕಳು ಶುಲ್ಕ ಪಾವತಿ ಮಾಡುವ ಅಗತ್ಯ ಇರುವುದಿಲ್ಲ.