New Rules In India: ಏಪ್ರಿಲ್ 1 ರಿಂದ ದೇಶದಲ್ಲಿ ಜಾರಿಗೆ ಬರಲಿದೆ 7 ಹೊಸ ನಿಮಯ, ಕೇಂದ್ರದ ನಿರ್ಧಾರ

7 New Rules In April 1st: ಏಪ್ರಿಲ್ 1 ನೇ ತಾರೀಕಿನಿಂದ ಹೊಸ ಹಣಕಾಸು ವರ್ಷ (New Financial Year) ಆರಂಭ ಆಗಲಿದೆ. ಹೊಸ ಹಣಕಾಸು ವರ್ಷ ಆರಂಭದ ಆದ ಬೆನ್ನಲ್ಲೇ ಹಣಕಾಸು ಕ್ಷೇತ್ರದಲ್ಲಿ ಹಲವು ಬದಲಾವಣೆ ಆಗಲಿದೆ ಎಂದು ಹೇಳಬಹುದು. ಹೌದು, ಏಪ್ರಿಲ್ 1 ನೇ ತಾರೀಕಿನಿಂದ ಬ್ಯಾಂಕಿಂಗ್ ಕ್ಷೇತ್ರದಲ್ಲಿ 7 ಬದಲಾವಣೆ ಆಗಲಿದ್ದು ಇದು ಜನರ ಮೇಲೆ ನೇರ ಪರಿಣಾಮ ಬೀರಲಿದೆ ಎಂದು ಹೇಳಬಹುದು. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಆಗುತ್ತಿರುವ ಕೆಲವು ಬದಲಾವಣೆಗಳು ಜನರ ಕೆಟ್ಟ ಮತ್ತು ಒಳ್ಳೆಯ ರೀತಿಯ ಪರಿಣಾಮ ಬೀರಲಿದ್ದು ಸದ್ಯ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರ 7 ಹೊಸ ಬದಲಾವಣೆ ಜಾರಿಗೆ ತಂದಿದೆ. ಹಾಗಾದರೆ ಏಪ್ರಿಲ್ 1 ನೇ ತಾರೀಕಿನಿಂದ ಹಣಕಾಸು ಕ್ಷೇತ್ರದಲ್ಲಿ ಆಗಲಿರುವ ಪ್ರಮುಖ ಬದಲಾವಣೆಗಳು ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

WhatsApp Group Join Now
Telegram Group Join Now

ಏಪ್ರಿಲ್ 1 ನೇ ತಾರೀಕಿನಿಂದ ಆಗಲಿದೆ 7 ಹೊಸ ಬದಲಾವಣೆ
* ಏಪ್ರಿಲ್ 1 ನೇ ತಾರೀಕಿನಿಂದ UPI ನಿಯಮದಲ್ಲಿ ದೊಡ್ಡ ಬದಲಾವಣೆ ಆಗಲಿದೆ ಎಂದು ಹೇಳಬಹುದು. ಹೌದು, ಕೋಟ್ಯಾಂತರ ಸಂಖ್ಯೆಯ ಮೊಬೈಲ್ ನಂಬರ್ ಗಳನ್ನೂ ಡಿಲೀಟ್ ಮಾಡಲು NPCI ನಿರ್ಧಾರ ಮಾಡಿದೆ. UPI ಬಳಸುವವರು ತಕ್ಷಣ ತಮ್ಮ ಮೊಬೈಲ್ ನಂಬರ್ ನವೀಕರಣ ಮಾಡಿಕೊಳ್ಳಬೇಕು, UPI ಬಳಸುವವರು ತಮ್ಮ ಮೊಬೈಲ್ ಸಂಖ್ಯೆ ನವೀಕರಣ ಮಾಡದೆ ಇದ್ದರೆ ಅಂತಹ ಮೊಬೈಲ್ ಸಂಖ್ಯೆಯನ್ನು UPI ನಿಂದ ಶಾಶ್ವತವಾಗಿ ಡಿಲೀಟ್ ಮಾಡಲು ಈಗ NPCI ನಿರ್ಧಾರ ಮಾಡಿದೆ. UPI ಬಳಸುವವರಿಗೆ ಬ್ಯಾಂಕುಗಳು ನಂಬರ್ ನವೀಕರಣದ ಬಗ್ಗೆ ಸಂದೇಶ ಕಳುಹಿಸಲಿದ್ದು ಜನರು ನಂಬರ್ ನವೀಕರಣ ಮಾಡಬೇಕು ಮತ್ತು ಮಾಡದೆ ಇದ್ದರೆ ಅಂತಹ ಮೊಬೈಲ್ ಸಂಖ್ಯೆ UPI ನಿಂದ ಶಾಶ್ವತವಾಗಿ ಡಿಲೀಟ್ ಆಗಲಿದೆ.

* ಏಪ್ರಿಲ್ 1 ನೇ ತಾರೀಕಿನಿಂದ ಏಟಿಎಂ ನಿಯಮದಲ್ಲಿ ಕೂಡ ದೊಡ್ಡ ಮಟ್ಟದ ಬದಲಾವಣೆ ಆಗಲಿದೆ. ಏಪ್ರಿಲ್ 1 ನೇ ತಾರೀಕಿನಿಂದ ATM ಶುಲ್ಕ ಹೆಚ್ಚಳ ಆಗಲಿದೆ. ನಿಗದಿತ ಮಿತಿಗಿಂತ ಹೆಚ್ಚು ಬಾರಿ ATM ಬಳಕೆ ಮಾಡಿದರೆ ಏಪ್ರಿಲ್ 1 ನೇ ತಾರೀಕಿನಿಂದ 2 ರೂಪಾಯಿ ಹೆಚ್ಚುವರಿ ಶುಲ್ಕ ಪಾವತಿ ಮಾಡಬೇಕು.

* ಏಪ್ರಿಲ್ 1 ನೇ ತಾರೀಕಿನಿಂದ ಆಟೋಮೊಬೈಲ್ ಮತ್ತು ಕೆಲವು ಕಾರುಗಳ ಬೆಲೆಯಲ್ಲಿ ಸುಮಾರು 4% ಏರಿಕೆ ಆಗಲಿದೆ. ಏಪ್ರಿಲ್ ಮೊದಲ ವಾರದಲ್ಲಿ ಕಾರುಗಳ ಬೆಲೆ ಕೂಡ ಏರಿಕೆ ಆಗಲಿದ್ದು ಇದು ಕಾರ್ ಪ್ರಿಯರ ಬೇಸರಕ್ಕೆ ಕಾರಣವಾಗಿದೆ.

* ಏಪ್ರಿಲ್ 1 ತಾರೀಕಿನಿಂದ ಬ್ಯಾಂಕ್ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಇದರ ಮೇಲೆ ಕಠಿಣ ಕ್ರಮ ಕೈಕೊಳ್ಳಲು RBI ಆದೇಶ ನೀಡಿದೆ. ಬ್ಯಾಂಕ್ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಇಡದೆ ಇದ್ದರೆ ಅಂತವರ ಖಾತೆಗೆ ಬ್ಲಾಕ್ ಮಾಡುವುದು ಮಾತ್ರವಲ್ಲದೆ ಅವರ ಮೇಲೆ ಅವರ ದಂಡ ವಿಧಿಸಲು RBI ಆದೇಶ ಹೊರಡಿಸಿದೆ.

* ಏಪ್ರಿಲ್ 1 ನೇ ತಾರೀಕಿನಿಂದ ದೇಶದಲ್ಲಿ ಧನಾತ್ಮಕ ಹಣಕಾಸು ನಿಯಮ ಜಾರಿಗೆ ಬರಲಿದೆ, ಏಪ್ರಿಲ್ 1 ನೇ ತಾರೀಕಿನಿಂದ 50 ಸಾವಿರಕ್ಕಿಂತ ಅಧಿಕ ಹಣಕಾಸು ವಹಿವಾಟನ್ನು ಚೆಕ್ ಮೂಲಕ ಮಾತ್ರ ಮಾಡಬೇಕು, ಇಲ್ಲವಾದರೆ ದಂಡ ಕಟ್ಟಬೇಕು.

* ಏಪ್ರಿಲ್ 1 ನೇ ತಾರೀಕಿನಿಂದ ಆದಾಯ ತೆರಿಗೆ ನಿಯಮದ ಕೂಡ ಕೆಲವು ಬದಲಾವಣೆ ಆಗುವುದನ್ನು ನಾವು ಗಮನಿಸಬಹುದು. ಇನ್ನುಮುಂದೆ 12 ಲಕ್ಷ ರೂ ಆದಾಯದ ತನಕ ಯಾವುದೇ ತೆರಿಗೆ ಕಟ್ಟುವ ಅಗತ್ಯ ಇಲ್ಲ.

* ಏಪ್ರಿಲ್ 1 ನೇ ತಾರೀಕಿನಿಂದ TDS ಮತ್ತು GST ನಿಯಮದಲ್ಲಿ ಕೂಡ ಕೆಲವು ಬದಲಾವಣೆ ಆಗಲಿದೆ. TDS ಮತ್ತು GST ನಿಯಮದಲ್ಲಿ ದೊಡ್ಡ ಬದಲಾವಣೆ ಆಗಲಿದ್ದು ಇದು ಜನರ ಮೇಲೆ ನೇರ ಪರಿಣಾಮ ಬೀರಲಿದೆ.

Leave a Comment