Bajaj Avenger 400cc Bike: ಇತ್ತೀಚಿನ ಕಲಾದ ಯುವಕರು ಹೆಚ್ಚು ಹೆಚ್ಚು Royal Enfield ಬೈಕ್ ಖರೀದಿ ಮಾಡುತ್ತಿದ್ದಾರೆ. ಹೌದು, Royal Enfield ಹಲವು ವರ್ಷಗಳಿಂದ ಜನರ ವಿಶ್ವಾಸವನ್ನು ಗಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದರ ನಡುವೆ Royal Enfield ಬೈಕಿಗೆ ಪೈಪೋಟಿ ಕೊಡಲು ಹಲವು ಬೈಕ್ ತಯಾರಕ ಕಂಪನಿಗಳು ಹಲವು ಮಾದರಿಯ ಬೈಕ್ ಗಳನ್ನೂ ಮಾರುಕಟ್ಟೆಗೆ ಪರಿಚಯ ಮಾಡಿದೆ ಎಂದು ಹೇಳಬಹುದು. ಇದರ ನಡುವೆ ಪ್ರತಿಷ್ಠಿತ ದ್ವಿಚಕ್ರ ವಾಹನ ತಯಾರಕ ಕಂಪನಿ ಆಗಿರುವ ಬಜಾಜ್ ಈಗ Royal Enfield ಗೆ ಠಕ್ಕರ್ ಕೊಡಲು ಹೊಸ ಮಾದರಿಯ ಬೈಕ್ ಅನ್ನು ಮಾರುಕಟ್ಟೆಗೆ ಲಾಂಚ್ ಮಾಡಿದೆ. Bajaj ಲಾಂಚ್ ಮಾಡಿರುವ ಈ ಹೊಸ ಮಾದರಿಯ ಜನರ ಮೆಚ್ಚುಗೆ ಗಳಿಸಿಕೊಂಡಿರುವುದು ಮಾತ್ರವಲ್ಲದೆ ದಾಖಲೆ ಬುಕಿಂಗ್ ಕೂಡ ಕಾಣುತ್ತಿದೆ. ಹಾಗಾದರೆ ಬಜಾಜ್ ಲಾಂಚ್ ಮಾಡಿರುವ ಈ ಹೊಸ ಬೈಕ್ ಯಾವುದು ಮತ್ತು ಇದರ ಬೆಲೆ ಹಾಗು ಮೈಲೇಜ್ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಮಾರುಕಟ್ಟೆಗೆ ಬಂತು ಹೊಸ ಬಜಾಜ್ ಅವೆಂಜರ್
ಪ್ರತಿಷ್ಠಿತ ವಾಹನ ತಯಾರಕ ಕಂಪನಿ ಅನಿಸಿಕೊಂಡಿರುವ ಬಜಾಜ್ ಈಗ ಹೊಸ ಮಾದರಿಯ ಅವೆಂಜರ್ ಬೈಕ್ ಅನ್ನು ಮಾರುಕಟ್ಟೆಯೇ ಲಾಂಚ್ ಮಾಡಿದೆ. 2025 ರ ಅವೆಂಜರ್ ಬೈಕ್ ಯುವಕರ ನಿದ್ದೆ ಕೆಡಿಸಿದೆ ಎಂದು ಹೇಳಬಹುದು. 2025 ರ ಅವೆಂಜರ್ ಬೈಕ್ ಬೆಲೆ ಮತ್ತು ಫೀಚರ್ ಕಂಡು ಯುವಕರು ಈ ಬೈಕ್ ಖರೀದಿಗೆ ಆಸಕ್ತಿ ತೋರುತ್ತಿದ್ದಾರೆ. ಹೊಸ ಬಜಾಜ್ ಅವೆಂಜರ್ ಬೈಕ್ ಈಗ Royal Enfield ಬೈಕ್ ಗಳಿಗೆ ನೇರವಾಗಿ ಪೈಪೋಟಿ ಕೊಡುತ್ತಿದೆ.
ಹೊಸ ಬಜಾಜ್ ಅವೆಂಜರ್ ಬೆಲೆ ಮತ್ತು ಫೀಚರ್
ಹೌದು, ಬಜಾಜ್ ಕಂಪನಿ ಈಗ 400cc ಇರುವ ಹೊಸ ಮಾದರಿಯ ಅವೆಂಜರ್ ಬೈಕ್ ಅನ್ನು ಲಾಂಚ್ ಮಾಡುವುದರ ಮೂಲಕ Royal Enfield ಹಿಮಾಲಯನ್ ಬೈಕಿಗೆ ನೇರ ಪೈಪೋಟಿ ಕೊಟ್ಟಿದೆ. Royal Enfield ಹಿಮಾಲಯನ್ ಬೈಕಿಗೆ ಹೋಲಿಕೆ ಮಾಡಿದರೆ ಬಜಾಜ್ ಅವೆಂಜರ್ ಬೈಕಿಗೆ ಬೆಲೆ ಬಹಳ ಕಡಿಮೆ ಎಂದು ಹೇಳಬಹುದು. ನೀವು Royal Enfield ಹಿಮಾಲಯನ್ ಬೈಕ್ ಖರೀದಿ ಮಾಡಲು ಸುಮಾರು 4 ಲಕ್ಷ ರೂಪಾಯಿಗೂ ಅಧಿಕ ಹಣ ಪಾವತಿ ಮಾಡಬೇಕಾಗುತ್ತದೆ, ಆದರೆ ನೀವು ಬಜಾಜ್ ಅವೆಂಜರ್ ಬೈಕ್ ಅನ್ನು ಕೇವಲ 2.2 ಲಕ್ಷ ರೂಪಾಯಿಗೆ ಖರೀದಿ ಮಾಡಬಹುದು.
ಬಜಾಜ್ ಅವೆಂಜರ್ ಹೊಸ ಮಾದರಿಯ ಬೈಕ್ 400cc ಎಂಜಿನ್ ಹೊಂದಿರುವುದು ಮಾತ್ರವಲ್ಲದೆ ಲಿಕ್ವಿಡ್ ಕೂಲ್ ಸಿಸ್ಟಮ್ ಕೂಡ ಹೊಂದಿದೆ. ಬಜಾಜ್ ಅವೆಂಜರ್ ಬೈಕಿನ ಎಂಜಿನ್ ಬರೋಬ್ಬರಿ 35nm ಟಾರ್ಕ್ ಕೂಡ ಉತ್ಪಾದನೆ ಮಾಡುತ್ತದೆ. ಲಿಕ್ವಿಡ್ ಕೂಲ್ ಸಿಸ್ಟಮ್ (Lequid Cool Engine System) ಹೊಂದಿರುವ ಕಾರಣ ಸವಾರಿ ಮಾಡುವ ಪ್ರಯಾಣಿಕರಿಗೆ ಎಂಜಿನ್ ಬಿಸಿ ತಿಳಿಯುವುದಿಲ್ಲ ಮತ್ತು ನೀವು ಆರಾಮದಾಯಕವಾದ ಪ್ರಯಾಣದ ಅನುಭವ ಕೂಡ ಪಡೆಯಬಹುದು. ಹೊಸ ಬಜಾಜ್ ಅವೆಂಜರ್ ಬೈಕ್ ಉತ್ತಮ ಬ್ರೇಕ್ ಸಿಸ್ಟಮ್ ಕೂಡ ಹೊಂದಿದೆ, ಬಜಾಜ್ ಅವೆಂಜರ್ ಬೈಕಿನಲ್ಲಿ ನಾವು ಎರಡು ABS ಡಿಸ್ಕ್ ಬ್ರೇಕ್ ಕೂಡ ನೋಡಬಹುದು.
ಇನ್ನು ಬೆಲೆಯ ವಿಷಯಕ್ಕೆ ಬರುವುದಾದರೆ, ಬಜಾಜ್ ಅವೆಂಜರ್ 400cc ಬೈಕ್ ಬೆಲೆ ಸುಮಾರು 2.2 ಲಕ್ಷ ರೂಪಾಯಿ ಆಗಿದೆ. Royal Enfield ಬೈಕುಗಳಿಗೆ ಹೋಲಿಕೆ ಮಾಡಿದರೆ ಬಜಾಜ ಅವೆಂಜರ್ ಬೈಕ್ ಬೆಲೆ ಬಹಳ ಕಡಿಮೆ ಎಂದು ಹೇಳಬಹುದು. ಅದೇ ರೀತಿಯಲ್ಲಿ ಮೈಲೇಜ್ ಬಗ್ಗೆ ಮಾತನಾಡುವುದಾದರೆ, ಬಜಾಜ್ ಅವೆಂಜರ್ ಬೈಕ್ ಪ್ರತಿ ಲೀಟರ್ ಪೆಟ್ರೋಲ್ ಗೆ ಸುಮಾರು 30-35 ಕಿಲೋಮೀಟರ್ ಮೈಲೇಜ್ ಕೊಡಬಹುದು ಎಂದು ಅಂದಾಜು ಮಾಡಲಾಗಿದೆ. ಲೊಕೇಶನ್, ಇಂಧನದ ಗೇಜ್, ಓಡೋಮೀಟರ್, ಸ್ಪೀಡೋಮೀಟರ್ ನಲ್ಲಿ ನಾವು ಡಿಜಿಟಲ್ ನಲ್ಲಿ ನೋಡಬಹುದು.