RTI Online: ನಿಮ್ಮ ಆಸ್ತಿ ನಿಮ್ಮ ಹೆಸರಿನಲ್ಲೇ ಇದೆಯಾ…? ಒಂದೇ ನಿಮಿಷದಲ್ಲಿ ಮೊಬೈಲ್ ಮೂಲಕ ಈ ರೀತಿ ಚೆಕ್ ಮಾಡಿ

Property Registration Check: ಆಸ್ತಿ ಖರೀದಿ (Property Purchase) ಮತ್ತು ಮಾರಾಟದ ವಿಷಯವಾಗಿ ಆಗಾಗ ಸಾಕಷ್ಟು ವ್ಯಾಜ್ಯಗಳು ನಡೆಯುತ್ತಲೇ ಇರುತ್ತದೆ. ಹೌದು, ಇತ್ತೀಚಿನ ಕಾಲದಲ್ಲಿ ಆಸ್ತಿ ವಿಚಾರವಾಗಿ ಸಾಕಷ್ಟು ಜನರು ವಂಚನೆಗೆ ಒಳಗಾಗುತ್ತಿದ್ದಾರೆ. ಇದರ ನಡುವೆ ಸರ್ಕಾರ ಆಸ್ತಿ ನೋಂದಣಿ ನಿಯಮದಲ್ಲಿ ಕೂಡ ಕೆಲವು ಬದಲಾವಣೆ ಜಾರಿಗೆ ತಂದಿದೆ. ಹೌದು, ಆಸ್ತಿ ಮಾರಾಟ, ಆಸ್ತಿ ಖರೀದಿ ಅಥವಾ ಅಥವಾ ಆಸ್ತಿ ಕಾನೂನುಬದ್ಧವಾಗಿ ನೊಂದಣಿ ಆಗಿದೆಯೇ ಎಂದು ತಿಳಿದುಕೊಳ್ಳುವುದು ಅತೀ ಅವಶ್ಯಕವಾಗಿದೆ. ಇನ್ನುಮುಂದೆ ಆಸ್ತಿ ಕಾನೂನುಬದ್ಧವಾಗಿ ನೋಂದಣಿ ಆಗಿದೆಯೇ ಅಥವಾ ಆಗಿಲ್ವಾ ಅನ್ನುವುದನ್ನು ನಾವು ಮೊಬೈಲ್ ಮೂಲಕವೇ ಸುಲಭವಾಗಿ ಚೆಕ್ ಮಾಡಿಕೊಳ್ಳಬಹುದು. ಹಾಗಾದರೆ ಆಸ್ತಿ ನೋಂದಣಿ ಚೆಕ್ ಮಾಡುವುದು ಹೇಗೆ ಅನ್ನುವುದರ ಬಗ್ಗೆ ನಾವೀಗ ತಿಳಿಯೋಣ.

WhatsApp Group Join Now
Telegram Group Join Now

ನಿಮ್ಮ ಆಸ್ತಿ ಕಾನೂನುಬದ್ಧವಾಗಿ ನೋಂದಣಿ ಆಗಿದ್ಯಾ…?
ನೀವು ಯಾವುದೇ ಆಸ್ತಿ ಖರೀದಿ ಮಾಡಿದ ಸಮಯದಲ್ಲಿ ಅದನ್ನು ಸರ್ಕಾರೀ ನಿಯಮಗಳ ಪ್ರಕಾರ ನೋಂದಣಿ ಮಾಡಿಕೊಳ್ಳುವುದು ಅತೀ ಕಡ್ಡಾಯವಾಗಿದೆ. ಕೆಲವು ಬಾರಿ ನಾವು ಆಸ್ತಿ ನಮ್ಮ ಹೆಸರಿಗೆ ನೋಂದಣಿ ಆಗಿದೆ ಎಂದು ಭಾವಿಸುತ್ತೇವೆ, ಆದರೆ ಕಾನೂನುಬದ್ಧವಾಗಿ ನೋಂದಣಿ ಆಗಿಲ್ಲ ಎಂದು ನಮಗೆ ಹಲವು ಸಮಯದ ನಂತರ ತಿಳಿಯುತ್ತದೆ. ಆದರೆ ಇನ್ನುಮುಂದೆ ಭಯಪಡುವ ಅಗತ್ಯ ಇಲ್ಲ ಮತ್ತು ಕೆಲವೇ ನಿಮಿಷದಲ್ಲಿ ನಿಮ್ಮ ಆಸ್ತಿ ಕಾನೂನುಬದ್ಧವಾಗಿ ನೋಂದಣಿ ಆಗಿದೆಯಾ ಅಥವಾ ಇಲ್ಲವಾ ಎಂದು ಚೆಕ್ ಮಾಡಿಕೊಳ್ಳಬಹುದು.

ಕೋಟಿ ಕೋಟಿ ಹಣ ಕೊಟ್ಟು ಆಸ್ತಿ ಖರೀದಿ ಮಾಡಿದ ನಂತರ ಆಸ್ತಿ ನಿಮ್ಮ ಹೆಸರಿಗೆ ವರ್ಗಾವಣೆ ಆಗದೆ ಇದ್ದರೆ ಅದರ ನೋಂದಣಿ ಪೂರ್ಣವಾಗಿಲ್ಲ ಎಂದು ಅರ್ಥ. ಈಗ ನಿನ್ನ ಆಸ್ತಿ ನೋಂದಣಿ ಆಗಿದೆಯಾ ಅಥವಾ ಇಲ್ಲವಾ ಎಂದು ಆನ್ಲೈನ್ ಮೂಲಕ ಪರಿಶೀಲನೆ ಮಾಡಿಕೊಳ್ಳಬಹುದು. ಮೊದಲು ನೀವು ಆಸ್ತಿ ನೋಂದಣಿ ಆಗಿದೆಯಾ ಅಥವಾ ಇಲ್ಲವಾ ಎಂದು ತಿಳಿಯಲು ನೋಂದಣಿ ಕಚೇರಿಗೆ ಭೇಟಿನೀಡಿ ನಂತರ ತಿಳಿಯಬಹುದು, ಅಥವಾ ಕರ್ನಾಟಕ ಸರ್ಕಾರದ ಸಬ್ ರಿಜಿಸ್ಟರ್ ವೆಬ್ಸೈಟ್ ಗೆ ಭೇಟಿನೀಡಿ ಚೆಕ್ ಕೂಡ ಮಾಡಬಹುದು. ಕರ್ನಾಟಕ ಸರ್ಕಾರದ ಅದಿಕ್ರಯ ವೆಬ್ಸೈಟ್ ಗೆ ಭೇಟಿನೀಡುವುದರ ಮೂಲಕ ನೀವು ಆಸ್ತಿ ರಿಜಿಸ್ಟರ್ ಬಗ್ಗೆ ಸಂಪೂರ್ಣವಾಗಿ ಚೆಕ್ ಮಾಡಿಕೊಳ್ಳಬಹುದು.

ಆನ್ಲೈನ್ ಮೂಲಕ ಆಸ್ತಿ ನೋಂದಣಿ ಚೆಕ್ ಮಾಡುವುದು ಹೇಗೆ…?
* ಕರ್ನಾಟಕ ಸರ್ಕಾರದ https://igr.karnataka.gov.in/english ವೆಬ್ಸೈಟ್ ಗೆ ಮೊದಲು ಭೇಟಿನೀಡಬೇಕು.

* ನಿಮ್ಮ ಎಡಭಾಗದಲ್ಲಿ RTI ಆಕ್ಟ್ಸ್ ನಲ್ಲಿ ನಿಮ್ಮ ಜಿಲ್ಲೆ ಆಯ್ಕೆ ಮಾಡಬೇಕು.

* ಜಿಲ್ಲೆ ಆಯ್ಕೆ ಮಾಡಿದ ನಂತರ ನೀವು ನಿಮ್ಮ ಆಸ್ತಿಯ ಸಂಪೂರ್ಣ ವಿವರವನ್ನು ಭರ್ತಿ ಮಾಡಬೇಕು.

* ಆಸ್ತಿ ವಿವರ ಭರ್ತಿ ಮಾಡಿದ ನಂತರ ನಿಮ್ಮ ಆಸ್ತಿ ಯಾರ ಹೆಸರಿನಲ್ಲಿ ಮತ್ತು ಹಿಂದೆ ಯಾರ ಹೆಸರಿನಲ್ಲಿ ಇತ್ತು ಅನ್ನುವುದರ ಬಗ್ಗೆ ಕೂಡ ನೀವು ತಿಳಿದುಕೊಳ್ಳಬಹುದು.

Leave a Comment